________________
ಒಂದನೆಯ ಅವತಾರ
ಮಾರಿ ಮಲಯಾಳಂ ನವ ನೀರಜವನವೆಂಬ ಕೆಂಡದೊಳ್ ದಂಡನಮ ಸ್ಮಾರದೆ ಬಂದಪನಿತ್ತವ ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್ ಅಂತು ದೊರೆವೆತ್ತು ಬಂದ ವ ಸಂತದೊಳಾ ಮಾರಿದತ್ತನುಂ ಪುರಜನಮುಂ ತಂತಮಗೆ ಚಂಡಮಾರಿಗೆ ಸಂತಸಮಂ ಮಾಡಲೆಂದು ಜಾತ್ರೆಗೆ ನೆರೆದರ್
೪೨
ಸುರಿಗಿಳೆದರ್ಚನೆಯಾಡುವ ಪರಕೆಯನೊಪ್ಪಿಸುವ ಲಕ್ಕಲೆಕ್ಕದ ಲೆಂಕ ರ್ವೆರಸು ಬಲವಂದು ದೇವಿಯ ಚರಣಂಗಳೆಲಗಿ ರಂಗಮಂಟಪದೆಡೆಯೊಳ್ ನಿಂದು ನರಪತಿ ತಳಾಟಿಂ ಗೆಂದಂ ನೀನ್ ಬರಿಸು ಮನುಜಯುಗಮಂ ಮುನ್ನಂ ಕೊಂದರ್ಚಿಸುವೆಂ ಪೂಜೆಯೋ ಛಂದಿನ ಪರಿ ತಪ್ಪ ದೇವಿ ತಪ್ಪದೆ ಮಾಣ ತಡವಾದಪುದು ಪೌರರ್ ಕುಡವೇಅದು ಪಲವು ಜೀವರಾಶಿಯ ಬಲಿಯಂ ನಡೆಯೆನೆ ಹಸಾದಮಾಗಳೆ
ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ ರಾಶಿಯೆಂಬಂತೆ ಆ ವನದಲ್ಲಿ ಉದುರಿಬಿದ್ದ ಮುತ್ತುಗದ ಮೊಗ್ಗೆಗಳು ಕೆಂಪಾಗಿ ತೋರುತ್ತಿದ್ದುವು.೧೬ ೩೮. ವನದಲ್ಲಿ ಅರಗಿಳಿಗಳು ಗಟ್ಟಿಯಾಗಿ ಉಲಿಯುತ್ತಿದ್ದುವು : “ಎಲೆ ಮಾರಿದೇವತೆಯೇ, ಮಲಯಮಾರುತನು ಹೊಸ ತಾವರೆಗಳ ಸಮೂಹವೆಂಬ ಕೆಂಡದಲ್ಲಿ ದೀರ್ಘದಂಡನಮಸ್ಕಾರ ಮಾಡುತ್ತಾ ಬರುತ್ತಿದ್ದಾನೆ. ಈ ಕಡೆ ಗಮನವಿಡು”೧೭, ೩೯, ಆ ರೀತಿಯಲ್ಲಿ ಒದಗಿಬಂದ ವಸಂತಕಾಲದಲ್ಲಿ ಮಾರಿದತ್ತ ರಾಜನೂ ನಗರದ ಜನರೂ ಎಲ್ಲರೂ ಒಂದಾಗಿ ಚಂಡಮಾರಿದೇವತೆಗೆ ಸಂತೋಷ ವಾಗುವಂತೆ ಜಾತ್ರೆಯನ್ನು ನೆರವೇರಿಸಲು ಅಲ್ಲಿ ಸೇರಿದರು. ೪೦. ಖಡ್ಗದಿಂದ ಇರಿದು ಕೊಂಡು ಅರ್ಚನೆಯನ್ನು ಸಲ್ಲಿಸುವ೧೮ ಹಾಗೂ ಬೇರೆ ರೀತಿಯಲ್ಲಿ ಹರಕೆಯನ್ನೊಪ್ಪಿ ಸುವ ಲಕ್ಕೋಪಲಕ್ಷ ದೇವೀ ಭಜಕರು ಅಲ್ಲಿ ಸಿದ್ಧರಾದರು. ಅವರನ್ನೆಲ್ಲ ಕೂಡಿಕೊಂಡು ಮಾರಿದತ್ತನು ದೇವಿಯ ಗುಡಿಗೆ ಪ್ರದಕ್ಷಿಣೆ ಬಂದನು, ನಮಸ್ಕರಿಸಿದನು. ಅನಂತರ ದೇವಾಲಯದ ರಂಗಮಂಟಪದಲ್ಲಿ ನಿಂತುಕೊಂಡನು. ೪೧. ತನ್ನ ತಳಾರನನ್ನು ಕರೆದು, “ನೀನು ಈಗಲೇ ಮನುಷ್ಯಯುಗ್ರವನ್ನು ಬರಿಸು. ಎಂದಿನಂತೆ ಮೊದಲು ನಾನೇ ಅವರನ್ನು ಬಲಿಕೊಟ್ಟು ಅರ್ಚಿಸಬೇಕಾಗಿದೆ. ಪದ್ಧತಿ ಪ್ರಕಾರ ನಡೆದುಕೊಳ್ಳದಿದ್ದರೆ ದೇವಿಗೆ ಸಿಟ್ಟಾದೀತು. ಪರಿಣಾಮವಾಗಿ ಅವಳೂ ನಮ್ಮವಿಷಯದಲ್ಲಿ ತಪ್ಪಿ ನಡೆಯದಿರ ಲಾರಳು. ಆದುದರಿಂದ ತ್ವರೆಮಾಡು. ೪೨. ಉಳಿದ ನಾಗರಿಕರೆಲ್ಲರೂ ಅನೇಕಾನೇಕ ಜೀವರಾಶಿಯ ಬಲಿಯನ್ನು ಕೊಡಲಿದ್ದಾರೆ, ತಡಮಾಡದಿರು ಎಂದು ಅಪ್ಪಣೆಯಿತ್ತನು.