________________
೧೪
ಕ್ಷಿತಿಯೊಳ್ ಸಂಸ್ಕೃತದಿಂ ಪ್ರಾಕೃತದಿಂ ಕನ್ನಡದಿನಾದ್ಯರಾರ್ ಈ ಕೃತಿಯಂ ಕೃತಿಮಾಡಿದರವರ್ಗಳ ಸನ್
ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್
ಭಾವಕನತಿರಸಿಕಂ ಸಂ
ಭಾವಿತನಭಸ್ತಶಾಸ್ತ್ರನನ್ವಿತನೆನಿಪಾ ದೇವಂಗೆ ವಿಷಯಮಲ್ಲದೆ
ದೇವಾನಾಂಪ್ರಿಯರ್ಗೆ ವಿಷಯಮೇ ಸತ್ಯಾವಂ
ಕೇಳಲೊಡಂ ಶಬ್ದಾರ್ಥಗುಣಾಳಂಕೃತಿ ರೀತಿಭಾವರಸವೃತ್ತಿಗಳಂ ಮೇಳವಿಸ[] ಬಲ್ಲಂ ಬಲಾಳಂ ಸಾಹಿತ್ಯಕಮಳಮತ್ತಮರಾಳಂ
ಸಳನೆಂಬ ಯಾದವಂ ಹೊಯ್ ಸಳನಾದಂ ಶಶಕಪುರದ ವಾಸಂತಿಕೆಯೊಳ್ ಮುಳಿದು ಪುಲಿ ಪಾಳ್ವುದುಂ ಹೊಯ್ ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ
ಯಶೋಧರ ಚರಿತೆ
89
2.
ಆ
೫. ಸಂಸ್ಕೃತದಲ್ಲಿ ಪ್ರಾಕೃತದಲ್ಲಿ ಕನ್ನಡದಲ್ಲಿ ಈ ಕೃತಿಯನ್ನು ಈ ಲೋಕದಲ್ಲಿ ಯಾರು ಈ ಮೊದಲು ರಚಿಸಿದರೋ ಅವರ ಸನ್ಮತಿ ನಮಗೆ ಸರಸ ಪದಪ್ರಯೋಗ ಪದ್ಧತಿಯಲ್ಲಿ ನೆರವನ್ನೀಯಲಿ, ಅವರ ಸಮ್ಮತಿಗಳಿಂದ ರಸವತ್ಥಯೋಗ ಸಿದ್ಧಿಗೊಳ್ಳಲಿ. ೬. ನಾಂದಿಯಾಯಿತು. ಇನ್ನು ಮೇಲೆ ದೇವತಾ ಸ್ವರೂಪಿಗಳಾದ ಕವಿವೃಂದದಲ್ಲಿ ದೇವೇಂದ್ರನಂತಿರುವ ಹಾಗೂ ಕಲ್ಪಲತೆಗಳಂತಿರುವ ಕವಿಗಳಲ್ಲಿ ಮಂದಾರದಂತೆ ಮೇಲೆ ಪಡೆದ ನಾನು ಕೈಕೊಳ್ಳಬೇಕಾದ ಕಾರ್ಯವೆಂದರೆ ಬಲ್ಲಾಳದೇವನ ವಂಶವರ್ಣನೆ, ೭. ಕಲ್ಪನಾಶೀಲನೂ, ಅತಿರಸಿಕನೂ, ಸಂಭಾವಿತನೂ, ಶಾಸ್ತ್ರಗಳನ್ನು ಅಭ್ಯಾಸ ಮಾಡಿದವನೂ ಎಲ್ಲ ಗುಣಗಳುಳ್ಳವನೂ ಆದ ಆ ದೇವನಿಗೆ ಹೊರತು ಸತ್ಕಾವ್ಯವು 'ದೇವಾನಾಂ ಪ್ರಿಯ(ಬೆಪ್ಪನಿಗೆ ಗ್ರಾಹ್ಯವಾಗುವುದೆ ? ೮. ಕಾವ್ಯವನ್ನು ಕೇಳಿದ ಮಾತ್ರಕ್ಕೆ ಅವನು ಕಾವ್ಯದ ಶಬ್ದ, ಅರ್ಥ, ಗುಣ, ಅಲಂಕಾರ, ರೀತಿ, ರಸ, ಭಾವ, ವೃತ್ತಿ ಎಂಬ ಕಾವ್ಯಸಂಬಂಧಿ ವಿಷಯಗಳನ್ನೆಲ್ಲ ಒಂದಕ್ಕೊಂದು ಹೊಂದಿಸಬಲ್ಲವನಾಗಿದ್ದಾನೆ. ಈ ಕಾರಣದಿಂದ ಅವನು ಸಾಹಿತ್ಯಕಮಲ ಮತ್ತಮರಾಳ [ಸಾಹಿತ್ಯವೆಂಬ ತಾವರೆಗಳಿಂದ ಮದವೇರಿಸಿಕೊಳ್ಳುವ ರಾಜಹಂಸ) ಎಂಬ ಬಿರುದನ್ನು ಪಡೆದಿದ್ದಾನೆ. ೯. ಶಶಕಪುರದ ವಾಸಂತಿಕೆಯಲ್ಲಿ ಹುಲಿಯೊಂದು ರೋಷದಿಂದ ಒಳನುಗ್ಗುತ್ತಿತ್ತು. ಆಗ ಯದುವಂಶದ ಸಳನೆಂಬುವನನ್ನು ಉದ್ದೇಶಿಸಿ, ತನ್ನ ಕುಂಚದ ಬೆತ್ತವನ್ನಿತ್ತು ಗುರುಗಳು 'ಹೊಯ್ ಸಳ' ಎಂದರು. ಆದುದರಿಂದ ಹೊಯ್ಸಳನಾದನು.*