________________
ಒಂದನೆಯ ಅವತಾರ
ಪುರದವಾದಿಗಳೆಲ್ಲಿಸಿದ ಪರಮವಧುವನೊಲಿಸಿ ಪರವನಿತಾ ನಿರಪೇಕ್ಷಕನೆನಿಸಿದ ದೇ... ಇವರ ದೇವಲ ಕುಡುಗಿ ಸುವ್ರತ ಸುಪಯು
ಶಿವಸಿದ್ಧ ಸೂರಿದೇಶಿಕ ಮುನಿಗಳ ಚರಣಂಗಳೆಂಬ ಸರಸಿಜವನಮೀ ಮನವೆಂಬ ತುಂಬಿಯೆಯಕಮನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
ಎನಗೆ ನಿಜಮಹಿಮೆಯಂ ನೆ೬ನೆ ಮಾಡುಗೆ ಕೂರ್ತು ವೀರಸೇನಾಚಾರ್ಯರ್ ಜಿನಸೇನಾಚಾರ್ಯರ್ ಸಿಂಹಣಂದಿಗಳ ಸಂದ ಕೊಂಡಕುಂದಾಚಾರ್ಯರ್
ಗಣಧರ ಸ್ವಾಮಿಗಳೋ ಗುಣದಿಂದಾಮಣಿಯೆಮೆಣಗಿ ಶುಭರೆಮೆಮ್ಮ ತಣಿಪುಗೆ ಸಮಂತಭದ್ರರ
ಗುಣಭದ್ರರ ಪೂಜ್ಯಪಾದರಾಖ್ಯಾನಂಗಳ್ ೧. ಪುರುದೇವ (ಆದಿತೀರ್ಥಂಕರ)ನೇ ಮುಂತಾದವರು ಒಲಿಸಿಕೊಂಡಿದ್ದ ಮುಕ್ತಿವಧುವನ್ನೇ ಸುವ್ರತನು ಕೂಡ ಒಲಿಸಿಕೊಂಡನು. ಆದರೂ ಈತನಿಗೆ 'ಪರವನಿತಾ ನಿರಪೇಕ್ಷಕ' ಎಂಬ ಒಳ್ಳೆಯ ಹೇಸರೇ ಬಂತು ! ಅವನು ದೇವರ ದೇವನೂ ಹೌದು. ಇಂತಹ ಸುವ್ರತನು ನಮಗೆ ಸುವ್ರತವನ್ನು ದಯಪಾಲಿಸಲಿ.” ೨. ಜಿನ, ಸಿದ್ದ, ಆಚಾರ್ಯ, ಉಪಾಧ್ಯಾಯ ಮತ್ತು ಸಾಧುಗಳೆಂಬ ಪಂಚ ಪರಮೇಷ್ಠಿಗಳ ಪಾದಗಳೇ ಕಮಲವನಗಳು. ಅವು ಭಕ್ತಿಯೆಂಬ ಪರಿಮಳವನ್ನು ಪಸರಿಸಿ ಈ ಮನಸ್ಸೆಂಬ ಭ್ರಮರವನ್ನು ತಮ್ಮ ಮೇಲೆ ಎರಗುವಂತೆ ಮಾಡಲಿ. ೩. ನನಗೆ ವೀರಸೇನಾಚಾರ್ಯರೂ ಜಿನಸೇನಾಚಾರ್ಯರೂ ಸಿಂಹಣಂದಿಗಳೂ, ಪ್ರಸಿದ್ದರಾದ ಕೊಂಡಕುಂದಾಚಾರ್ಯರೂ ಸ್ನೇಹಪೂರ್ವಕವಾಗಿ ತಮ್ಮ ಮಹಿಮೆಯನ್ನು ಸರಿಯಾಗಿ ಉಂಟುಮಾಡಲಿ. ೪. ಅವರು ಗಣಧರರಾಗಲಿ, ಸ್ವಾಮಿಗಳಾಗಲಿ, ಅವರ ಗುಣಗಳನ್ನು ನಾವು ತಿಳಿದುಕೊಂಡಿಲ್ಲ. ಆದರೆ ಅವರಿಗೆ ನಮಸ್ಕರಿಸಿ ನಾವು ಪುನೀತರಾಗುವುದಂತೂ ನಿಶ್ಚಯ. ಅಂತಹ ಸಮಂತಭದ್ರರ, ಗುಣಭದ್ರರ, ಪೂಜ್ಯಪಾದರ ಆಖ್ಯಾನ(ಕತೆ)ಗಳು ನಮ್ಮನ್ನು ತಣಿಸಲಿ.