________________
ಯಶೋಧರ ಚರಿತೆ ಈ ವಿಷಯಗಳಾವುವನ್ನೂ ಲೆಕ್ಕಿಸದೆ ಕಾವ್ಯವನ್ನು ಓದುತ್ತಾ ಹೋಗುವುದಾದರೆ, ಅದು ನಮ್ಮನ್ನು ಸೆಳೆಯುತ್ತದೆ. ಜನ್ಮಾಂತರದ ಕಥೆಗಳಿದ್ದರೂ ಯಾವ ತೊಡಕೂ ಇಲ್ಲದೆ ಕಥೆ ಮುಂದೆ ಸಾಗುತ್ತದೆ. ಸಂದರ್ಭೋಚಿತವಾದ ವರ್ಣನೆ, ಸುಂದರವಾದ ಶೈಲಿ ಆಕರ್ಷಕವಾಗಿವೆ. ಕೃತಿ ಸರಳವಾಗಿ ನಿರರ್ಗಳವಾಗಿ ಚೇತೋಹಾರಿ ಯಾಗಿ ಮುಂದುವರಿಯುತ್ತದೆ. ಜನ್ನನಿಗೆ ಇದರಿಂದ ಒಂದು ಉನ್ನತಸ್ಥಾನ | ದೊರೆಯುತ್ತದೆ.
- ಕೆ. ವೆಂಕಟರಾಮಪ್ಪ