SearchBrowseAboutContactDonate
Page Preview
Page 43
Loading...
Download File
Download File
Page Text
________________ xlii ಆಗುವ ಪ್ರಯೋಜನ, ಅಲಂಕಾರ ಶಾಸ್ತ್ರದಿಂದಾಗುವ ಪ್ರಯೋಜನ, ನಾಯಕನ ಸ್ವರೂಪ, ನಾಯಕನಲ್ಲಿರಬೇಕಾದ ಗುಣಗಳು, ನಾಯಕ-ನಾಯಿಕೆಯರ ಭೇದಗಳು, ಕಾವ್ಯಲಕ್ಷಣ, ಅಭಿಧಾಲಕ್ಷಣಾ ವ್ಯಂಜನಾ ವೃತ್ತಿಗಳ ವಿಚಾರ, ಕೈಶಿಕೀ ಮುಂತಾದ ವೃತ್ತಿಗಳ ವಿಚಾರ, ವೈದರ್ಭಿ ಗೌಡೀಪಾಂಚಾಲೀ ರೀತಿಗಳು, ಶಯ್ಯಾ-ಪಾಕಗಳ ವಿಚಾರ, ಧ್ವನಿಗುಣೀಭೂತಚಿತ್ರ ಕಾವ್ಯಗಳ ಲಕ್ಷಣಗಳು, ಧ್ವನಿಕಾವ್ಯಪ್ರಭೇದಗಳು, ಗುಣೀಭೂತವ್ಯಂಗ್ಯ ಕಾವ್ಯಪ್ರಭೇದಗಳು; ಮಹಾ ಕಾವ್ಯ, ಪದ್ಯಗದ್ಯ ಚಂಪೂ ಆಖ್ಯಾಯಿಕಾಲಕ್ಷಣಗಳು, ಕ್ಷುದ್ರ ಪ್ರಬಂಧಗಳ ನಿರೂ ಪಣೆ, ನಾಟ್ಯಪ್ರಕರಣ, ರಸಪ್ರಕರಣ, ದೋಷನಿರೂಪಣೆ, ಗುಣಪ್ರಕರಣಗಳು ಇಲ್ಲಿ ಚೆನ್ನಾಗಿ ನಿರೂಪಿತ ವಾಗಿವೆ. ವಿಚಾರಗಳನ್ನು ಸಂಕ್ಷಿಪ್ತವಾಗಿ ಸುಲಭ ಶೈಲಿಯಲ್ಲಿ ನಿರೂಪಿಸುತ್ತಾನೆ. ಇಲ್ಲಿನ ಉದಾಹರಣೆಗಳೆಲ್ಲವೂ ಯಕ್ಷೇಶ್ವರದೀಕ್ಷಿತನಿಂದಲೇ ರಚಿತವಾದವುಗಳು. ಎಲ್ಲದರಲ್ಲೂ ರಾಮಸೀತೆಯರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುತ್ತಾನೆ. ಕೆಲವು ಪದ್ಯಗಳು ಬಹು ರಮಣೀಯವಾಗಿವೆ. ಇವನ ಶೈಲಿ ಸರಳವೂ ಸುಂದರವೂ ಆದುದು. ಇವನು ಅಲಂಕಾರ-ನ್ಯಾಯವಿಮಾಂಸಾದಿಶಾಸ್ತ್ರಗಳಲ್ಲಿ ಉತ್ತಮ ಪಾಂಡಿತ್ಯವನ್ನು ಸಂಪಾದಿಸಿದ್ದನೆಂದು ತಿಳಿಯುವುದು. ಕಾವ್ಯಾದಿಲಕ್ಷಣಗಳನ್ನು ತಾರ್ಕಿಕ ಶೈಲಿಯಲ್ಲಿ ನಿರೂಪಿಸುತ್ತಾನೆ. ಇವನು ಮಮ್ಮುಟಾದಿ ಪ್ರಾಚೀನರ ಅಭಿಪ್ರಾಯಗಳ ಮೇಲೆ ದೋಷಗಳನ್ನು ಹೇಳಿದರೂ ಸಹ, ತನ್ನದೇ ಆದ ಶೈಲಿಯಲ್ಲಿ ಲಕ್ಷಣಗಳನ್ನು ಪ್ರತಿಪಾದಿಸಿದರೂ ಕೂಡ ಹೊಸ ವಿಚಾರಗಳನ್ನು ಇವನು ಹೇಳಿಲ್ಲ. ಹಿಂದಿನ ಲಕ್ಷಣಕಾರರು ಹೇಳಿರುವ ವಿಪಯಗಳನ್ನೇ ತನ್ನ ಶೈಲಿಯಲ್ಲಿ ಹೇಳುತ್ತಾನೆ ಅಷ್ಟೆ. ಒಟ್ಟಾರೆ ಸ್ವತಂತ್ರವಾಗಿ ಆಲೋಚಿಸುವ ಮನೋಭಾವ ಇವನಿಗೆ ಇದೆಯೆಂದು ಹೇಳಬಹುದು. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯ, ಮದರಾಸಿನ ಅಡಯಾರ್ ಗ್ರಂಥಾಲಯ ತಂಜಾವೂರು ಸರಸ್ವತಿ ಮಹಲ್ ಪುಸ್ತಕ ಭಾಂಡಾಗಾರಗಳಲ್ಲಿದ್ದ ತಾಳಪತ್ರಗಳನ್ನು ಅವಲೋಕಿಸಿ ಈ ಅಲಂಕಾರರಾಘವಗ್ರಂಥವನ್ನು ಸಂಪಾದಿಸಿ ಪ್ರಕಟಿಸಲಾಗಿದೆ. ಅಲಂಕಾರರಾಘವವನ್ನು ಎರಡು ಭಾಗಗಳನ್ನಾಗಿ ಪ್ರಕಟನೆಗೆ ಅನುಕೂಲಕ್ಕಾಗಿ ಮಾಡಲಾಗಿದ್ದು ಮೇಲೆ ಹೇಳಿದಂತೆ ಭಾಗ ೧ರಲ್ಲಿ ವಿಚಾರಗಳನ್ನು
SR No.023453
Book TitleAlankar Raghavam Part 01
Original Sutra AuthorN/A
AuthorYajneshwar Dikshit, T V Sathynarayana
PublisherOriental Research Institute
Publication Year1997
Total Pages354
LanguageSanskrit
ClassificationBook_Devnagari
File Size17 MB
Copyright © Jain Education International. All rights reserved. | Privacy Policy