________________
xli
ಯಜ್ಞೆಶ್ವರದೀಕ್ಷಿತರು ಶ್ರೀರಾಮನ ಪರಮಭಕ್ತ, ಇವನು ಅಲಂಕಾರ ರಾಘವ ಗ್ರಂಥದಲ್ಲಿ ಉದಾಹರಣ ಪದ್ಯಗಳನ್ನು ಸ್ವತಂತ್ರವಾಗಿ ರಚಿಸಿದ್ದಾನೆ. ಜೊತೆಗೆ ಎಲ್ಲವನ್ನೂ ರಾಮಪರವಾಗೇ ವರ್ಣಿಸಿದ್ದಾನೆ. ಶ್ರೀರಾಮನು ತನ್ನ ಕನಸಿನಲ್ಲಿ ಬಂದು ತನಗೆ ಅನುಗ್ರಹಿಸಿದ ಕಾರಣ ಅವನ ಪರವಾಗಿಯೇ ಎಲ್ಲ ಪದ್ಯಗಳನ್ನು ರಚಿಸಿದ್ದೇನೆಂದು ಹೇಳಿಕೊಂಡಿದ್ದಾನೆ. ಇವನು ರಾಮಭಕ್ತನು ಮಾತ್ರವಲ್ಲ ಹನುಮಂತನ ಅನನ್ಯ ಭಕ್ತನೂ ಹೌದು. ಹೀಗಾಗಿ ಅಲಂಕರರಾಘವದ ಮಂಗಳ ಪದ್ಯನನ್ನು ಆಂಜನೇಯನ ಪರವಾಗೇ ರಚಿಸಿದ್ದಾನೆ.
ಯಜ್ಞಶ್ವರದೀಕ್ಷಿತನು ತನ್ನ ಅಲಂಕಾರ ರಾಘವದಲ್ಲಿ ದಂಡಿ-ರುದ್ರಟ, ವಾಮನ-ಮಮ್ಮಟ - ರುಯ್ಯಕ -ರಾಜಶೇಖರ-ವಿದ್ಯಾನಾಥ - ವಿದ್ಯಾಧರ ಮೊದ ಲಾದವರ ಹೆಸರುಗಳನ್ನು ಉಲ್ಲೇಖಿಸುತ್ತಾನೆ. ಮುಮ್ಮಟದಲಾದವರು ಹೇಳಿರುವ ಲಕ್ಷಣಗಳನ್ನು ಅನುವದಿಸಿ ಅವುಗಳ ಮೇಲೆ ದೋಷಗಳನ್ನು ಹೇಳಿ ಖಂಡಿಸಿ ತಾನು ಮತ್ತೆ ಸ್ವತಂತ್ರವಾಗಿ ಲಕ್ಷಣಗಳನ್ನು ಹೇಳುತ್ತಾನೆ. ಕೆಲವುಕಡೆ ರಸಾರ್ಣವ ಸುಧಾಕರಕಾರ ತಿ೦ಗ ಭೂ ಪಾಲನ ಮತ್ತು ಸಾಹಿತ್ಯ ಚಿಂತಾಮಣಿಕಾರನಾದ ವೀರನಾರಾಯಣನ ಮತಗಳನ್ನು ಖಂಡಿಸುತ್ತಾನೆ. ಕೆಲವೆಡೆ ಮಮ್ಮಟ-ವಿದ್ಯಾ ನಾಥಾದಿಗಳ ಲಕ್ಷಣಗಳನ್ನು ಅಂಗೀಕರಿಸುತ್ತಾನೆ. ವಿದ್ಯಾನಾಥನ ಪ್ರತಾಪ ರುದ್ರೀಯ ಗ್ರಂಥಕ್ಕೆ ಕುಮಾರಸ್ವಾಮಿಯು ರತ್ನಾ ಪಣವೆಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಯಳ್ಳೇಶ್ವರ ದೀಕ್ಷಿತನು ಬಹುಮಟ್ಟಿಗೆ ಈ ವ್ಯಾಖ್ಯಾನವನ್ನು ತನ್ನ ಅಲಂಕಾರರಾಘವಗ್ರಂಥದ ರಚನೆಯಲ್ಲಿ ಅನುಸರಿಸಿದ್ದಾನೆ. ಹೀಗಾಗಿ ಇವನು ಇವರೆಲ್ಲರ ನಂತರದಲ್ಲಿ ಇದ್ದಿರಬೇಕೆಂದು ಊಹಿಸಬಹುದು. ವಿಶೇಷವೆಂದರೆ ಸಾಹಿತ್ಯ ಚಿಂತಾಮಣಿಕಾರ ವೀರನಾರಾಯಣನ ನಂತರದ ಆಲಂಕಾರಿಕರ ಹೆಸರುಗಳನ್ನು ಇವನು ಹೇಳುವುದಿಲ್ಲ. ವೀರನಾರಾಯಣನು ಕ್ರಿ.ಶ 15ನೆಯ ಶತಮಾನದ ಆದಿ ಭಾಗದಲ್ಲಿ ಇದ್ದ ನಂದು ವಿಮರ್ಶಕರು ತಿಳಿಸಿದ್ದಾರೆ. ಹೀಗಾಗಿ ಯಜ್ಞಶ್ವರ ದೀಕ್ಷಿತನು 17 ನೆಯ ಶತಮಾನದ ಆರಂಭದಲ್ಲಿ ಇದ್ದನೆಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.
ಅಲಂಕಾರರಾಘವ-ಭಾಗ ೧ರಲ್ಲಿ ಅಲಂಕಾರಗಳ ವಿಷಯಗಳನ್ನು ಬಿಟ್ಟು ಉಳಿದ ವ್ಯಸಂಬಂಧಿ ವಿಷಯಗಳನ್ನು ನಿರೂಪಿಸಲಾಗಿದೆ. ಮಂಗಳವನ್ನು ಮಾಡುವುದರಿಂದ