SearchBrowseAboutContactDonate
Page Preview
Page 32
Loading...
Download File
Download File
Page Text
________________ ಜನಸಾಮಾನ್ಯರನ್ನು ತಲುಪುವಂತೆ ಮಾಡಿದರು. ಪರಿಷತ್ತಿನ ಒಳಗೂ ಹೊರಗೂ ಸಾಹಿತ್ತಿಕ ಚಟುವಟಿಕೆಗಳು ರಭಸವಾಗಿ ನಡೆಯಲು ಪ್ರೇರಕರಾದರು. ಉಪನ್ಯಾಸ, ಸಂಶೋಧನೆ, ಗ್ರಂಥ ಪ್ರಕಟಣೆ ಇತ್ಯಾದಿಗಳಲ್ಲಿ ಮಹತ್ವಪೂರ್ಣ ದಾಖಲೆಗಳನ್ನು ಸ್ಥಾಪಿಸುವ ಮೂಲಕ ಉನ್ನತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದರು. ಜೊತೆಗೆ ಅನೇಕ ತರುಣ ಬರಹಗಾರರನ್ನು ಬೆಳಕಿಗೆ ತಂದು ಪ್ರೋತ್ಸಾಹಿಸಿದರು. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಸುವರ್ಣ ಆಧ್ಯಾಯವನ್ನು ಬರೆದ ಕನ್ನಡದ ಕಟ್ಟಾಳು ಹಂಪನಾರವರು. - “ದೇಶ ತಿರುಗಿ ನೋಡು, ಕೋಶ ಓದಿ ನೋಡು” ಎಂಬ ಮಾತುಗಳು ಹಂಪನಾರಿಗೆ ಹೇಳಿಸಿದಂತಿವೆ. ಕನ್ಯಾಕುಮಾರಿಯಿಂದ ಹಿಮಾಚಲದ ವರೆಗೆ, ಕೆನಡಾ, ಅಮೇರಿಕಾ, ಇಂಗ್ಲೆಂಡ್ ಮೊದಲಾದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, ಕೊಲ್ಲಿ ದೇಶಗಳಲ್ಲಿ ಸಂಚರಿಸಿ ವಿದ್ವತ್ತೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ನಾಡಿನ ಮೂಲೆ ಮೂಲೆಗಳಲ್ಲಿ ಸುತ್ತಿ ಉಪನ್ಯಾಸ ನೀಡಿ, ಹಿರಿಯ-ಕಿರಿಯ ಸಾಹಿತಿಗಳ, ಸಾರ್ವಜನಿಕರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ. ಪ್ರಾಚೀನ ಅರ್ವಾಚೀನ ಸಾಹಿತ್ಯವನ್ನು ಆಮೂಲಾಗ್ರವಾಗಿ ವ್ಯಾಸಂಗ ಮಾಡು ಜ್ಞಾನಕೋಶವನ್ನು ಸಮೃದ್ಧಿಗೊಳಿಸಿಕೊಂಡಿದ್ದಾರೆ. ಎಲ್ಲ ಮಠಾಧೀಶರ, ತ್ಯಾಗಿಗಳಂ ಮುನಿಗಳ ಆಶೀರ್ವಾದಕ್ಕೆ ಪಾತ್ರರಾದ ಶ್ರೀಯುತರು ಶ್ರವಣಬೆಳಗೊಳ, ಧರ್ಮಸ್ಥಳ, ಕಾರ್ಕಳ, ವೇಣೂರು ಇಲ್ಲಿ ನಡೆದ ಭಗವಾನ್ ಬಾಹುಬಲಿ ಮಸ್ತಕಾಭಿಷೇಕದ ವೀಕ್ಷಕ ವಿವರಣೆ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಡಾ. ಕಮಲಾ ಹಂಪನಾರವರು ಪತಿಗೆ ಸರಿಯಾದ ವಿದ್ವಾಂಸರು. ಇಬ್ಬರೂ ಉದ್ದಾಮ ಸಾಹಿತಿಗಳು, ಪರಸ್ಪರ ಅರಿವು, ಆತ್ಮೀಯತೆ, ಗೌರವ ಭಾವನೆಗಳು ಇರುವುದರಿಂದಲೇ ಜೀವನದ ವಿವಿಧ ಮಜಲುಗಳಲ್ಲಿ ನಾಮುಂದೆ ತಾಮುಂದೆ ಎಂದು ಆರೋಗ್ಯಕರ ಸ್ಪರ್ಧೆ ನಡೆಸುತ್ತಾ, ಪರಸ್ಪರ ಗೌರವಿಸುತ್ತಾ ಬಂದವರು ಈ ಆದರ್ಶ ದಂಪತಿಗಳು. ಜೀವನದ ನೋವು-ನಲಿವು, ಸೋಲು ಗೆಲುವುಗಳನ್ನು ಸಮನ್ವಯಗೊಳಿಸುವಲ್ಲಿ ಅವರ ಹಾಸ್ಯ ಪ್ರವೃತ್ತಿಯು ಮಹತ್ವದ ಪಾತ್ರವಹಿಸಿದೆ. ನಿಜದ ಅರ್ಥದಲ್ಲಿ ಇವರಿಬ್ಬರೂ ಇಂದಿನ ಮುದ್ದಣ ಮನೋರಮೆಯರು. ಕಮಲಾ ಹಂಪನಾರು ಮೂಡುಬಿದ್ರಿಯಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಯಶಸ್ವಿ ಕಾರ್ಯಭಾರವನ್ನು ನಿರ್ವಹಿಸಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.
SR No.007006
Book TitleSvasti
Original Sutra AuthorN/A
AuthorNalini Balbir
PublisherK S Muddappa Smaraka Trust
Publication Year2010
Total Pages446
LanguageEnglish, Hindi
ClassificationBook_English
File Size16 MB
Copyright © Jain Education International. All rights reserved. | Privacy Policy