SearchBrowseAboutContactDonate
Page Preview
Page 31
Loading...
Download File
Download File
Page Text
________________ ಮಾತಾಡಿ ಸಭಿಕರ ಹೃದಯ ಗೆಲ್ಲುತ್ತಿದ್ದರು. ಸಂಸ್ಕೃತ, ಪ್ರಾಕೃತ, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಅವರಿಗಿದ್ದ ಹಿಡಿತ ಈ ಬಗೆಯ ಭಾಷಣಗಳಲ್ಲಿ ಚೆನ್ನಾಗಿ ಪ್ರಕಟವಾಗುತ್ತದೆ. ಅವರೊಬ್ಬ ರಸಿಕ ಕವಿ. “ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ” ಎಂಬ ಸರ್ವಜ್ಞನ ಮಾತು ಇವರಿಗೆ ಒಪ್ಪುತ್ತದೆ. ಉತ್ತಮ ಬರಹಗಾರರೂ ಆದ ಹಂಪನಾರವರು ತನ್ನ ವಿಶಿಷ್ಟತೆಯನ್ನು ಆಳವಾದ ರಸಗ್ರಹಣ ಸಾಮರ್ಥ್ಯವನ್ನು, ಗಾಢವಾದ ಸಂಶೋಧನಾ ಶೀಲತೆಯನ್ನು, ನಿಶ್ಚಿತವಾದ ವಿಮರ್ಶಾಪ್ರಜ್ಞೆಯನ್ನು ಹಾಗೂ ಆಕರ್ಷಕವಾದ ಮತ್ತು ಸತ್ಯಶೀಲವಾದ ಸೃಜನ ಶಕ್ತಿಯನ್ನು ತಮ್ಮ ಸುಮಾರು 40 ಕ್ಕೂ ಮಿಕ್ಕಿದ ಕೃತಿಗಳ ಮೂಲಕ, ಸಾವಿರಾರು ಉಪನ್ಯಾಸಗಳ ಮೂಲಕ ಸಾದರ ಪಡಿಸಿದ್ದಾರೆ. ಗ್ರಂಥ ಸಂಪಾದನೆ, ಸಂಶೋಧನೆ, ಕಾದಂಬರಿ, ಪ್ರಬಂಧ ವಿಮರ್ಶ, ಜೀವನ ಚರಿತ್ರೆ, ಜಾನಪದ, ಅನುವಾದ, ಭಾಷಾ ವಿಜ್ಞಾನ- ಈ ಎಲ್ಲ ಕ್ಷೇತ್ರದಲ್ಲೂ ಪರಿಪಕ್ವ ಕೃತಿಗಳನ್ನು ಕೊಟ್ಟು ಕೃತ್ಯರಾಗಿರುವ "ನಾಡೋಜ" ಶ್ರೀ ಹಂಪನಾರವರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (1978-1986) ಮಹತ್ವಪೂರ್ಣ ಕೆಲಸವನ್ನು ಮಾಡಿದರು. ನಾಡಿನುದ್ದಗಲಕ್ಕೂ ಸಂಚರಿಸಿ ಕನ್ನಡವನ್ನು ಉಳಿಸಿದರು, ಬೆಳೆಸಿದರು. ಭಾಷಾ ಸಮಸ್ಯೆ, ಗಡಿ ಸಮಸ್ಯೆ, ನೆರೆಯ ರಾಜ್ಯಗಳ ಜನತೆಯಿಂದ ಕನ್ನಡಿಗರಿಗಾಗುವ ಅನ್ಯಾಯಗಳನ್ನು ಕುರಿತಂತೆ ತಮ್ಮ ಭಾಷಣಗಳ ಮೂಲಕ ಜಾಗೃತಿಯ ಗಂಟೆಯನ್ನು ಬಾರಿಸಿ ಕನ್ನಡಿಗರನ್ನು ಎಚ್ಚರಿಸಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ, ಎಲ್ಲ ಕನ್ನಡಿಗರನ್ನು ಒಂದುಗೂಡಿಸಿ ಜಾಗೃತಿ ಮೂಡಿಸಿದ್ದಾರೆ. 1978 ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 43 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಪ್ರಸಿದ್ಧ ಕವಿ-ಚಿಂತಕ ಗೋಪಾಲಕೃಷ್ಣ ಅಡಿಗರು. ಅತ್ಯಂತ ಯಶಸ್ವಿಯಾದ ಈ ಸಮ್ಮೇಳನ ಹಂಪನಾರವರ ಅವಧಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಹಂಪನಾರವರ ಕತೃತ್ವಶಕ್ತಿಯನ್ನು ನಾನು ಕಂಡಿದ್ದೇನೆ, ಮೆಚ್ಚಿದ್ದೇನೆ. ಸಾಕಷ್ಟು ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂಪನಾ ಅವರು ಅದನ್ನು ಬೆಳೆಸಿದ ರೀತಿ ಅನನ್ಯವಾದುದು. ಅಪೂರ್ವವಾದ ಕೆಲವು ಆಯಾಮಗಳನ್ನು ಅವರು ಪರಿಷತ್ತಿಗೆ ತಂದುಕೊಟ್ಟಿದ್ದಾರೆ. ಅದು ನಾಡಿನೆಲ್ಲೆಡೆ ಮನೆಮಾತಾಗುವಂತೆ ಮಾಡಿದರು. ನಾಡು-ನುಡಿಗಳಿಗೆ ಅದರಿಂದ ವಿಶೇಷ ಲಾಭವಾಗುವಂತೆ ನೋಡಿಕೊಂಡರು. ತನ್ನ ಅಧಿಕಾರವನ್ನು ಆ ದಿಶೆಯಲ್ಲಿ ನಿರ್ವಹಿಸಿದರು. ಸಾಹಿತ್ಯ
SR No.007006
Book TitleSvasti
Original Sutra AuthorN/A
AuthorNalini Balbir
PublisherK S Muddappa Smaraka Trust
Publication Year2010
Total Pages446
LanguageEnglish, Hindi
ClassificationBook_English
File Size16 MB
Copyright © Jain Education International. All rights reserved. | Privacy Policy