________________
“ಹಂಪನಾ” - ನಾ ಕಂಡಂತೆ.
“ಹಂಪನಾ” ಎಂದೇ ಪ್ರಸಿದ್ಧರಾಗಿರುವ ಶ್ರೀ ಹಂಪ ನಾಗರಾಜಯ್ಯನವರನ್ನು ನಾನು ನನ್ನ ವಿದ್ಯಾರ್ಥಿ ದೆಸೆಯಲ್ಲೇ ಬಲ್ಲ. ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅವರು ನನ್ನ ವಿದ್ಯಾ ಗುರುಗಳಾಗಿದ್ದರು. ನಾನು ಅವರ ಪ್ರೀತಿಯ ಶಿಷ್ಯನಾಗಿದ್ದ. ತರಗತಿಯಲ್ಲಿ ಅವರು ಬೋಧನೆಗೆ ನಿಂತರೆ, ಅಸ್ಕಲಿತವಾಣಿ, ವಿವರಣೆ, ವಿಚಾರಗಳ ಶುಭ್ರತೆ, ಶಕ್ತಿಪೂರ್ಣ ನಿರೂಪಣೆ, ಸ್ಪಷ್ಟತೆ, ಹಾಸ್ಯದ ಹೊನಲು ಇವುಗಳಿಂದ ವಿದ್ಯಾರ್ಥಿಗಳಲ್ಲಿ ಹೊಸ ಜೀವಕಳೆಯನ್ನು ತುಂಬುತ್ತಿದ್ದರು. ಪಂಪ, ರನ್ನ, ರಾಘವಾಂಕ ಮತ್ತಿತರ ಕವಿ ಪುಂಗವರ ಸಾಹಿತ್ಯದ ಸನ್ನಿವೇಶಗಳನ್ನು ಅರ್ಥಪೂರ್ಣವಾಗಿ ಮನಮುಟ್ಟುವಂತೆ ವಿವರಿಸುತ್ತಿದ್ದರು. ಪಾಠದ ಪಾತ್ರಧಾರಿಗಳು ಇವರೇ ಆಗಿರುತ್ತಿದ್ದುದರಿಂದ ವಿದ್ಯಾರ್ಥಿಗಳ ಹೃನ್ಮನ ಸೆಳೆದಿದ್ದರು. ವಿದ್ಯಾರ್ಥಿಗಳ ಭಾವುಕ ಹೃದಯದಲ್ಲಿ ಆತ್ಮೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾದ ಮೇಷ್ಟು ಶ್ರೀ ಹಂಪನಾರವರು.. ಆದರ್ಶ ಪ್ರಾಧ್ಯಾಪಕರಾಗಿ ಬೆಳೆದು ಇಂದು ಜನಪ್ರಿಯ ವಿದ್ವಾಂಸರೆನಿಸಿಕೊಳ್ಳುವ ವರೆಗೆ ಅವರ ಬೆಳವಣಿಗೆಯನ್ನು ನಾನು ಕಂಡಿದ್ದೇನೆ.
ನನ್ನ ಪೂಜ್ಯ ತಂದೆಯವರ ಕಾಲದಿಂದಲೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ತಮ್ಮ ವಿದ್ವತ್ತೂರ್ಣ ಭಾಷಣಗಳಿಂದ ಗಮನ ಸೆಳೆಯುತ್ತಿದ್ದ ಅವರ ಪಾಂಡಿತ್ಯವನ್ನು ಗಮನಿಸಿದ್ದೇನೆ. ಅವರ ಉಪನ್ಯಾಸದ ಸರಣಿ ಮೃಧು ಮಧುರ. ಅವರ ನಾಲಗೆಯ ಮೇಲೆ ವಾಗ್ಗೇವಿ ನರ್ತಿಸುತ್ತಿದ್ದಾಳೆ. ಮಾತಾಡುವಾಗ ಹೊರಡುವ ಸ್ಪುಟವಾದ ವಾಕ್ಯಗಳು, ವ್ಯವಸ್ಥಿತವಾದ ವಿಷಯ ನಿರೂಪಣೆ, ಬರೆದಿಟ್ಟುಕೊಳ್ಳುವಂತೆ ಅತ್ಯಂತ ಬೆಲೆಯುಳ್ಳ ನುಡಿಮುತ್ತುಗಳಾಗುತ್ತಿದ್ದುವು. ಇವರ ಭಾಷಣವೆಂದರೆ ಕೇಳುವವರಿಗೆ ಬೇಸರವಾಗುವುದಿಲ್ಲ. ಹೃದಯಕ್ಕೆ ತಟ್ಟುವ, ಮನಮುಟ್ಟುವ ರೀತಿಯಲ್ಲಿ, ಕೇಳುವವರೂ ಧ್ವನಿಗೂಡಿಸುವಂತೆ, ತಲ್ಲೀನತೆ, ತನ್ಮಯತೆಯಲ್ಲಿ ಮಿಂದು ಮಡಿಯಾಗುವಂತೆ ತಮ್ಮ ವಾಕ್ಝರಿಯನ್ನು ಹರಿಸುವ ಮಾತಿನ ಮೋಡಿಗಾರ ನಮ್ಮ ಹಂಪನಾ, ಭಾಷೆಯ ಮೇಲಿನ ಪ್ರಭುತ್ವ, ಭಾಷೆಯ ಬಳಕೆಯಲ್ಲಿ ತೋರುವ ಎಚ್ಚರ, ವಿಷಯದ ಅಭಿವ್ಯಕ್ತಿ ಕಿವಿಗೆ ಹಿತಕಾರಿ. ಜಾಗತಿಕ ಸಾಹಿತ್ಯದ ಆಳವಾದ ಅಭ್ಯಾಸ. ಪಾಂಡಿತ್ಯಗಳೊಂದಿಗೆ ಯಾವ ವಿಷಯದ ಮೇಲಾಗಲೀ ಬಹು ಸ್ವಾರಸ್ಯವಾಗಿ