SearchBrowseAboutContactDonate
Page Preview
Page 197
Loading...
Download File
Download File
Page Text
________________ सप्तभाषी आत्मसिद्धि ಆತ್ಮಾ ಸದಾ ಅಸಂಗ್ ನೇ, ಕರೇ ಪ್ರಕೃತಿ ಬಂದ್ | ಅಥವಾ ಈಶ್ವರ್ ಪ್ರೇರಣಾ, ತೇಥೀ ಜೀವ್ ಅಬಂದ್ 117 211 ಹೀಗಲ್ಲದಿದ್ದರೆ ಆತ್ಮನು ಸದಾ ಅಸಂಗನಾಗಿದ್ದಾನೆ ಮತ್ತು ಸತ್ವಾದಿ ಗುಣಯುಕ್ತ ಪ್ರಕೃತಿಯು ಕರ್ಮದ ಬಂಧವನ್ನು ಮಾಡುತ್ತದೆ. ಹಾಗಲ್ಲದಿದ್ದರೆ ಜೀವನಿಗೆ ಕರ್ಮವನ್ನು ಮಾಡುವ ಪ್ರೇರಣೆಯನ್ನು ಈಶ್ವರ ಮಾಡುತ್ತಾನೆ. ಹೀಗೆ ಈಶ್ವರೇಚ್ಛಾಧೀನನಾದುದರಿಂದ ಜೀವನು ಆ ಕರ್ಮಗಳಿಂದ * ಅಬಂಧ' ನಾಗಿದ್ದಾನೆ. ಸಮಾಧಾನ : ಸದ್ಗುರು ಹೇಳಿದ್ದು : 155 ಮಾಟೇ ಮೋಕ್ಷ ಉಪಾಯ್‌ನೋ, ಕೋಈ ನ ಹೇತು ಜಣಾಯ್ | ಕರ್ಮತಣುಂ ಕರ್ತಾವಣುಂ, ಕಾಂ ನಹಿ ಕಾಂ, ನಹಿ ಜಾಯ್ 117 311 ಆದ್ದರಿಂದ ಜೀವನು ಯಾವ ಪ್ರಕಾರದಿಂದಲೂ ಕರ್ಮದ ಕರ್ತೃವಾಗಲು ಸಾಧ್ಯವಿಲ್ಲ ಮತ್ತು ಮೋಕ್ಷದ ಉಪಾಯವನ್ನು ಮಾಡಲು ಯಾವ ಕಾರಣವೂ ಕಂಡುಬರುವುದಿಲ್ಲ. ಆದ್ದರಿಂದ ಜೀವನಿಗೆ ಕರ್ಮದ ಕರ್ತೃತ್ವವಿದ್ದರೆ ಅದರ ಸ್ವಭಾವವನ್ನು ಯಾವ ರೀತಿಯಿಂದಲೂ ನಾಶ ಮಾಡಲು ಆಗುವುದಿಲ್ಲ. SAPTABHASHI ATMASIDDHI ಹೋಮ್ ನ ಚೇತನ್ ಪ್ರೇರಣಾ, ಕೋಣ್ ಗ್ರಹೇ ತೋ ಕರ್ಮ್ ಜಡ್ ಸ್ವಭಾವ್ ನಹಿ ಪ್ರೇ‌ಣಾ, ಜುಓ ವಿಚಾರೀ ಧರ್ಮ್ 117411 ಚೇತನದಲ್ಲಿ (ಆತ್ಮನಲ್ಲಿ) ಪ್ರೇರಣಾ ರೂಪ ಪ್ರವೃತ್ತಿಯು ಇಲ್ಲದಿದ್ದರೆ ಕರ್ಮವನ್ನು ಗ್ರಹಣ ಮಾಡುವವನು ಯಾರು ?ಯಾಕೆಂದರೆ ಜಡದ ಸ್ವಭಾವವಂತೂ ಪ್ರೇರಣೆ ಮಾಡುವುದಲ್ಲ. ಜಡ ಮತ್ತು ಚೇತನ ಇವೆರಡರ ಧರ್ಮವನ್ನು ವಿಚಾರಮಾಡು. ಜೋ ಚೇತನ್ ಕರುಂ ನಥೀ, ನಥೀ ಫತಾಂ ತೋ ಕರ್ಮ್ | ತೇಥೀ ಸಹಜ ಸ್ವಭಾವ್ ನಹಿ, ತೇಮ್ ಜ ನಹಿ ಜೀವಧರ್ಮ್ 117 511 ಆತ್ಮನು ಕರ್ಮವನ್ನು ಮಾಡದೆ ಇದ್ದರೆ ಆ ಕರ್ಮವೇ ಆಗುತ್ತಿರಲಿಲ್ಲ. ಹೀಗೆ ಹೇಳುವುದರಿಂದ ಕರ್ಮವು ತನ್ನಿಂದ ತಾನೇ ತನ್ನ ಸ್ವಭಾವದಿಂದಲೇ ಅನಾಯಾಸವಾಗಿ - ಆಗುತ್ತದೆಂದು ಹೇಳುವುದೂ ಯೋಗ್ಯವಲ್ಲ. ಹಾಗೆಯೇ ಅದು ಜೀವನಧರ್ಮವೂ ಅಲ್ಲ. ಯಾಕೆಂದರೆ ಸ್ವಭಾವದ ನಾಶವಂತೂ ಆಗುವುದಿಲ್ಲ. ಹಾಗೆಯೇ ಆತ್ಮನು ಕರ್ಮವನ್ನು ಮಾಡದಿದ್ದರೆ ಕರ್ಮವೇ ಆಗುತ್ತಿರಲಿಲ್ಲ. ಅಂದರೆ ಈ ಭಾವ ಬಿಡುವುದಕ್ಕೆ ಸಾಧ್ಯ. ಆದ್ದರಿಂದ ಅದು (ಕರ್ಮಕರ್ತೃತ್ವ) ಆತ್ಮನ ಸ್ವಾಭಾವಿಕ ಧರ್ಮವಲ್ಲ. ಕೇವಳ ಹೋತ್ ಅಸಂಗ್ ಜೋ, ಭಾಸತ್ ತನೇ ನ ಕೇಮ್ ? ಅಸಂಗ್ ಛೇ ಪರಮಾರ್ಥಥೀ, ಪಣ್ ನಿಜ್‌ ಭಾನೇ ತೇಮ್ 117611 ಆತ್ಮನು ಸರ್ವಥಾ ಅಸಂಗನಾಗಿದ್ದರೆ ಅರ್ಥಾತ್ ಅವನಿಗೆ ಎಂದೂ ಕರ್ಮದ ಕರ್ತೃತ್ವವು ಇಲ್ಲದಿದ್ದರೆ ನಿನಗೆ ಅವನು ಮೊದಲಿನಿಂದಲೂ ಯಾಕೆ ಭಾಸವಾಗದೆ ಇರುತ್ತಿದ್ದ ? ಅಂತೂ ಪರಮಾರ್ಥ ದೃಷ್ಟಿಯಿಂದ ಆತ್ಮನು ಅಸಂಗನೇ ಆದರೆ ತನ್ನ ಸ್ವರೂಪದ ಜ್ಞಾನವಾದಾಗ ಆ ಜ್ಞಾನ ಆಗುತ್ತೆ. Jain Education International 2010_04 ಕರ್ತಾ ಈಶ್ವರ್ ಕೋಈ ನಹಿ, ಈಶ್ವರ್ ಶುದ್ಧ ಸ್ವಭಾವ್ ಅಥವಾ ಪ್ರೇರಕ್ ತೇ ಗಣೇ, ಈಶ್ವರ್ ದೋಷ್ ಪ್ರಭಾವ್ 117 711 ಜಗತ್ತಿನ ಅಥವಾ ಜೀವಗಳ ಕರ್ಮದ ಕರ್ತೃವು ಯಾವ ಈಶ್ವರನೂ ಅಲ್ಲ, ಯಾರಲ್ಲಿ ಶುದ್ಧ ಆತ್ಮ ಸ್ವಭಾವವು ಪ್ರಕಟವಾಗಿದೆಯೋ ಅವನೇ ಈಶ್ವರನು. ಆದ್ದರಿಂದ ಅವನನ್ನು - ಈಶ್ವರನನ್ನು ಕರ್ಮದ ಪ್ರೇರಕ ಅಂದರೆ ಕರ್ಮದ ಕರ್ತೃವೆಂದು ಅವನಿಗೂ ದೋಷದ ಪ್ರಭಾವವನ್ನು ಅಂಟಿಸಿದಂತಾಗುತ್ತದೆ. ಆದುದರಿಂದ ಜೀವನ ಕರ್ಮದ ಕರ್ತೃತ್ವದಲ್ಲಿಯೂ ಈಶ್ವರನ ಪ್ರೇರಣೆಯನ್ನು ಹೇಳಲಾಗುವುದಿಲ್ಲ. जिनभारती JINA-BHARATI For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy