________________
(७) सप्तभाषी आत्मसिद्धि
156
SAPTABHASHI ATMASIDDHI
ಚೇತನ್ ಜೋ ನಿಜ್ ಭಾನ್ಮಾಂ , ಕರ್ತಾ ಆಪ್ ಸ್ವಭಾವ್ |
ವರ್ತೆ ನಹಿ ನಿಜ್ಭಾನ್ಮಾಂ , ಕರ್ತಾ ಕರ್ಮ್ ಪ್ರಭಾವ್ 117811 ಆತನು ಯಾವಾಗ ತನ್ನ ಶುದ್ದ ಚೈತನ್ಯ ಮೊದಲಾದ ಸ್ವಭಾವದಲ್ಲಿ ಇರುವನೋ ಆಗ ಅವನು ತನ್ನ ಆ ಸ್ವಭಾವಗಳ ಕರ್ತೃಮಾತ್ರವಾಗಿದ್ದಾನೆ. ಅರ್ಥಾತ್ ಅವನು ಅದೇ ಸ್ವರೂಪದಲ್ಲಿ ಸ್ಥಿತನಾಗುತ್ತಾನೆ. ಯಾವಾಗ ಅವನ ಪರಿಶುದ್ಧ ಚೈತನ್ಯ ಮೊದಲಾದ ಸ್ವಭಾವಗಳು ಜಾಗ್ರತವಾಗಿರುವುದಿಲ್ಲವೋ ಆಗ ಅವನು ಕರ್ಮಭಾವದ ಕರ್ತೃವೆನಿಸುತ್ತಾನೆ. ಸಂದೇಹ : ಶಿಷ್ಯನು ಕೇಳಿದ್ದು :ಜೀವನು ಕರ್ಮದ ಭೋಕ್ತವಲ್ಲ ಎಂದು ಶಿಷ್ಯನು ಹೇಳುತ್ತಾನೆ.
ಜೀವ್ ಕರ್ಮ್ ಕರ್ತಾ ಕಹೋ, ಪಣ್ ಭೋಕ್ತಾ ನಹಿ ಸೋಮ್ |
ಶುಂ ಸಮ್ಜೇ ಜಡ್ ಕರ್ಮ್ ಕೇ, ಫಳ್ ಪರಿಣಾಮೀ ಹೋಮ್ I7911 ಒಂದು ವೇಳೆ ಜೀವನು ಕರ್ಮದ ಕರ್ತೃವೆಂದು ಮನ್ನಿಸಿದರೂ ಆ ಜೀವನು ಕರ್ಮದ ಭೋಕ್ಷ - ಆಗಲಾರನು. ಯಾಕೆಂದರೆ ಜಡರೂಪದಲ್ಲಿರುವ ಕರ್ಮವು ತನ್ನಲ್ಲಿ ಫಲಕೊಡುವ ಶಕ್ತಿ ಇದೆ ಎಂದು ಏನು ತಿಳಿಯುತ್ತದೆಯೋ ?ಅಂದರೆ ಫಲದಾತ ಆಗುತ್ತದೆಯೋ ?
ಫಳ್ ದಾತಾ ಈಶ್ವರ್ ಗಣೇ, ಭೋಕ್ತಾಪಣುಂ ಸಧಾಮ್ |
ಏಮ್ ಕಕ್ಕೇ ಈಶ್ವತಣು, ಈಶ್ವರ್ಪಣುಂ ಜ ಜಾಯ್ IIBoll ಹಾಂ; ಒಂದು ವೇಳೆ ಫಲವನ್ನು ಕೊಡುವ ಈಶ್ವರನನ್ನು ಸ್ವೀಕರಿಸಿದರೆ ಭೋಕ್ತತ್ವವನ್ನು ಸಿದ್ಧಮಾಡಬಹುದು. ಅರ್ಥಾತ್ ಜೀವನಿಗೆ ಈಶ್ವರನು ಕರ್ಮವನ್ನು ಭೋಗಿಸಲು ನಿಯಮಿಸುವನೆಂದು ಸ್ವೀಕರಿಸಿದರೆ ಕರ್ಮದ ಭೋಕ್ತತ್ವವು ಸಿದ್ದವಾಗುತ್ತದೆ. ಆದರೆ ಇದರಲ್ಲಿ ಇನ್ನೂ ಒಂದು ವಿರೋಧವು ಉಂಟಾಗುತ್ತದೆ. ಅದು ಯಾವುದೆಂದರೆ ಈಶ್ವರನಿಗೆ ಫಲ ಕೊಡುವುದೇ ಮೊದಲಾದ ಪ್ರವೃತ್ತಿಗಳಿವೆಯೆಂದರೆ ಅವನ ಈಶ್ವರತ್ವವೇ ನಷ್ಟವಾಗುತ್ತದೆ.
ಈಶ್ವರ್ ಸಿದ್ದ ಥಯಾ ವಿನಾ, ಜಗತ್ ನಿಯಮ್ ನಹಿ ಹೋಮ್ ||
ಪಛ ಶುಭಾಶುಭ ಕರ್ಮ್ನಾಂ , ಭೋಗ್ಯ ಸ್ಥಾನ್ ನಹಿ ಕೋಯ್ 118 111 ಇಂಥ ಫಲ ಕೊಡುವಂಥ ಈಶ್ವರನು ಇದ್ದಾನೆಂದು ಸಿದ್ದವಾಗುವುದಿಲ್ಲ, ಆದ್ದರಿಂದ ಜಗತ್ತಿನ ಯಾವ ನಿಯಮವೂ ಇಲ್ಲದಂತಾಗುತ್ತದೆ. ಅದೇ ರೀತಿ ಶುಭ ಅಶುಭ ಕರ್ಮಗಳನ್ನು ಭೋಗಿಸುವ ಸ್ಥಾನವೂ ಸಹ ಯಾವುದೂ ಉಳಿಯುವುದಿಲ್ಲ. ಅಂದ ಮೇಲೆ ಜೀವನಿಗೆ ಕರ್ಮದ ಭೋತೃತ್ವವಾದರೂ ಎಲ್ಲಿ ಉಳಿಯುವುದು ? ಸಮಾಧಾನ : ಸದ್ಗುರು ಹೇಳಿದ್ದು :
ಭಾವ್ಕರ್ಮ್ ನಿಜ್ ಕಲ್ಪನಾ, ಮಾಟೇ ಚೇತನ್ ರೂಪ್ |
ಜೀವ್ ವೀರ್ಯನೀ ಸ್ಟುರ್್ರಣಾ, ಗ್ರಹಣ್ ಕರೇ ಜಡ್ ಧೂಪ್ 1182|| ಜೀವನಿಗೆ ಭಾವ ಕರ್ಮವೆಂದು ತನ್ನದೆಂಬ ಭ್ರಾಂತಿ ಇದೆ. ಆದುದರಿಂದ ಅದನ್ನು ಚೈತನ್ಯರೂಪವೆಂದು ಮನ್ನಿಸುತ್ತಾ ಬರಲಾಗಿದೆ. ಅಲ್ಲದೆ ಆ ಭ್ರಾಂತಿಯನ್ನು ಅನುಸರಿಸಿಯೇ ಜೀವನ ವೀರ್ಯವು ಸುರಿಸುತ್ತದೆ. ಅದರಿಂದಾಗಿ ಅವನು ಜಡ ದ್ರವ್ಯ ಕರ್ಮದ ವರ್ಗಣೆಗಳನ್ನು ಗ್ರಹಣ ಮಾಡುತ್ತಾನೆ.
FURTHI
JINA-BHARATI
Jain Education Intemational 2010_04
For Private & Personal Use Only
www.jainelibrary.org