SearchBrowseAboutContactDonate
Page Preview
Page 190
Loading...
Download File
Download File
Page Text
________________ (७) सप्तभाषी आत्मसिद्धि 148 SAPTABHASHI ATMASIDDHI ನಹಿ ಕಷಾಯ್ ಉಪ್ಶಾಂತತಾ, ನಹಿ ಅಂತರ್ ವೈರಾಗ್ಯ! ಸರಳ್ ಪಣುಂ ನ ಮಧ್ಯಸ್ಥತಾ, ಏ ಮತಾರ್ಥಿ ದುರ್ಭಾಗ್ಯ 113211 ಯಾರಲ್ಲಿ ಕೊಧ, ಮಾನ, ಮಾಯಾ ಮತ್ತು ಲೋಭ ಈ ಕಷಾಯಗಳು ಇನ್ನೂ ಕೃಶತೆಯನ್ನು ಹೊಂದಿರುವುದಿಲ್ಲವೋ ಮತ್ತು ಆಂತರಿಕ ವೈರಾಗ್ಯವೂ ಉತ್ಪನ್ನವಾಗಿಲ್ಲವೋ ಯಾರ ಆತ್ಮನಲ್ಲಿ ಗುಣಗ್ರಹಣೆ ಮಾಡುವ ಸರಳತೆಯೂ ಇರುವುದಿಲ್ಲವೋ ಅಂಥ ಮತಾರ್ಥಿಜೀವರು ಭಾಗ್ಯಹೀನರು. ಅಂದರೆ ಜನ್ಮ, ಜರಾ, ಮರಣಗಳನ್ನು ನಾಶ ಮಾಡುವ ಮೋಕ್ಷಮಾರ್ಗವನ್ನು ಸಂಪಾದನೆಯ ಯೋಗ್ಯತೆ ರೂಪ ಭಾಗ್ಯವು ಇವರಿಗಿಲ್ಲವೆಂದು ತಿಳಿಯಬೇಕು. ಲಕ್ಷಣ್ ಕಹ್ಯಾಂ ಮತಾರ್ಥಿನಾಂ, ಮತಾರ್ಥ್ ಜಾವಾ ಕಾಜ್ | ಹವೇ ಕಹುಂ ಅತ್ಯಾರ್ಥಿನಾಂ, ಆತ್ಮ-ಅರ್ಥ ಸುಖ್ ಸಾಜ್ 113311 ಈ ಪ್ರಕಾರ ಮತಾರ್ಥಿಜೀವನ ಲಕ್ಷಣವನ್ನು ಹೇಳಿದೆ. ಇದನ್ನು ತಿಳಿದುಕೊಂಡು ಜೀವರ ಮತಾರ್ಥವು ದೂರವಾಗಬೇಕೆಂದೇ ಇದನ್ನು ಇಲ್ಲಿ ವಿವರಿಸಿದೆ. ಇನ್ನು ಆತ್ಮಾರ್ಥಿಜೀವರಲಕ್ಷಣವು ಹೇಳಲಾಗುತ್ತದೆ. ಆಲಕ್ಷಣ ಹೇಗಿದೆ?ಅದು ಆತನನ್ನು ಅವ್ಯಾಬಾಧಸುಖದ ಸ್ಥಿತಿಯಲ್ಲಿ ನಿಲ್ಲಿಸುವುವಕ್ಕೆ ಸಾಧನವಾಗಿದೆ. ಆತ್ಮಾರ್ಥಿ ಲಕ್ಷಣ : ಆತ್ಮಜ್ಞಾನ್ ತ್ಯಾಂ ಮುನಿಪುಂ, ತೇ ಸಾಚಾ ಗುರು ಹೋಮ್ | ಬಾಕೀ ಕುಳ್ಗುರು ಕಲ್ಪನಾ, ಆತ್ಮಾರ್ಥಿ ನಹಿ ಜೋಯ್ II34|| ಆತ್ಮಜ್ಞಾನವಿದ್ದಲ್ಲಿಯೇ ಮುನಿಪದವು ಇರುತ್ತದೆ. ಆತ್ಮಜ್ಞಾನವಿಲ್ಲದಲ್ಲಿ ಮುನಿತ್ತವು ಸಂಭವಿಸುವುದಿಲ್ಲ, “ ಜಂ ಸಮಂತಿ ಪಾಸಹ ತಂಮೋ ಣಂತಿ ಪಾಸಹ ಎಲ್ಲಿ ಸಮಕಿತ ಅರ್ಥಾತ್ ಆತ್ಮಜ್ಞಾನವು ಇದೆಯೋ ಅದೇ ಮುನಿಪದವಾಗಿದೆ. ಹೀಗೆ ಆಚಾರಾಂಗ ಸೂತ್ರದಲ್ಲಿ ಹೇಳಿದೆ. ಆದ್ದರಿಂದ ಆತ್ಯಾರ್ಥಿ ಜೀವನು ಯಾರಲ್ಲಿ ಆತ್ಮಜ್ಞಾನವು ಇರುವುದೋ ಅವನನ್ನೇ ಸದ್ಗುರು ಎಂದು ತಿಳಿಯುವುದು ಕೇವಲ ಕಲ್ಪನೆ. ಇದರಿಂದೇನೂ ಸಂಸಾರದ ನಾಶವು ಆಗುವುದಿಲ್ಲ. ಪ್ರತ್ಯಕ್ಷ ಸದ್ಗುರು ಪ್ರಾಪ್ತಿನೋ, ಗಣೇ ಪರಮ್ ಉಪ್ಕಾರ್ | ತ್ರಣೇ ಯೋಗ್ ಏಕತ್ವಥೀ, ವರ್ತೆ ಆಜ್ಞಾಧಾರ್ 1135| ಅವನು ಪ್ರತ್ಯಕ್ಷ ಸದ್ದುರುವು ಲಭಿಸುವುದೆಂದರೆ ದೊಡ್ಡ ಉಪಕಾರವೆಂದು ತಿಳಿಯುತ್ತಾನೆ. ಯಾಕೆಂದರೆ ಶಾಸ್ತಾದಿಗಳಿಂದ ಸಮಾಧಾನವಾಗದಂಥ ವಿಷಯಗಳಿಗೆ ಸದ್ಗುರುವಿನಿಂದ ಸಮಾಧಾನವು ಲಭಿಸುತ್ತದೆ. ಅಲ್ಲದೆ ಕೆಲವೊಂದು ದೋಷಗಳು ಸದ್ಗುರುವಿನ ಆಜ್ಞೆಯನ್ನು ಧಾರಣೆ ಮಾಡದ ಹೊರತು ದೂರವಾಗುವುದಿಲ್ಲ. ಅಂಥವೂ ಸಹ ಸದ್ಗುರುವಿನಿಂದ ದೂರಗೊಳ್ಳುತ್ತವೆ. ಆದ್ದರಿಂದ ಪ್ರತ್ಯಕ್ಷ ಸದ್ಗುರು ಸಮಾಗಮವು ದೊಡ್ಡ ಉಪಕಾರವೆಂದು ಭಾವಿಸುತ್ತಾನೆ ಮತ್ತು ಅಂಥ ಸದ್ಗುರುವಿನ ಹತ್ತಿರ ಮನ, ವಚನ ಮತ್ತು ಕಾಯಗಳಲ್ಲಿ ಏಕರೂಪವಾಗಿ ಆಜ್ಞಾನುವರ್ತಿಯಾಗಿ ನಡೆಯುತ್ತಾನೆ. ಏಕ್ ಹೋಮ್ ತ್ರಣ್ ಕಾಳಮಾಂ, ಪರಮಾರ್‌ಥನೋ ಪಂಥ್ | ಪ್ರೇರೇ ತೇ ಪರಮಾರ್ಥನೇ, ತೇ ವ್ಯವಹಾರ್ ಸಮಂತ್ 3611 ಮೂರೂ ಕಾಲಗಳಲ್ಲಿಯೂ ಪರಮಾರ್ಥ ಪಂಥವು ಅಂದರೆ ಮೋಕ್ಷ ಮಾರ್ಗವು ಒಂದೇ ಆಗಿರಲೇ ಬೇಕು ಮತ್ತು ಯಾವುದರಿಂದ ಆ ಪರಮಾರ್ಥದ ಸಿದ್ಧಿ ಯಾಗುತ್ತದೋ ಆ ವ್ಯವಹಾರವನ್ನೇ ಜೀವರು ಮಾನ್ಯ ಮಾಡಬೇಕು. ಅನ್ಯವ್ಯವಹಾರವನ್ನು ಮಾನ್ಯ ಮಾಡಬಾರದು. • F A JINA-BHARATI Jain Education Intemational 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy