SearchBrowseAboutContactDonate
Page Preview
Page 189
Loading...
Download File
Download File
Page Text
________________ (७) सप्तभाषी आत्मसिद्धि 147 SAPTABHASHI ATMASIDDHI ಪ್ರತ್ಯಕ್ಷ ಸದ್ಗುರು ಯೋಗಮಾಂ, ವರ್ತೇ ದೃಷ್ಟಿ ವಿಮುಖೇ | ಅಸದ್ಗುರುನೇ ದೃಢ ಕರೇ, ನಿಜ್ಮಾನಾರ್ಥ ಮುಖ್ಯ 12611 ಪ್ರತ್ಯಕ್ಷ ಸದ್ಗುರುವಿನ ಯೋಗವು ಎಂದಾದರೊಮ್ಮೆ ಲಭಿಸಿದರೂ ತಮ್ಮ ದುರಾಗ್ರಹ ಮೊದಲಾದವುಗಳನ್ನು ನಾಶಗೊಳಿಸುವ ಅವರ ವಾಣಿಯನ್ನು ಕೇಳಿಯೂ ಸಹ ಅದಕ್ಕೆ ವಿರೋಧವಾಗಿಯೇ ಯಾರು ನಡೆಯುತ್ತಾನೋ ಅರ್ಥಾತ್ ಅವರ ಹಿತಕರವಾದ ವಾಣಿಯನ್ನು ಗ್ರಹಣ ಮಾಡದೆ" ನಾನು ಸ್ವತಃ ಶ್ರೇಷ್ಠ ಮುಮುಕ್ಷುವಾಗಿದ್ದೇನೆ' ಈ ಗೌರವವನ್ನು ಮುಖ್ಯವಾಗಿ ಸಂಪಾದಿಸುವುದಕ್ಕಾಗಿಯೇ ಅಸದ್ಗುರುವಿನ ಹತ್ತಿರ ಹೋಗಿ ಅವರಿಗೆ ತನ್ನ ವಿಶೇಷ ದೃಢತೆಯನ್ನು ಯಾರು ಹೇಳಿಕೊಳ್ಳುತ್ತಾನೋ ದೇವಾದಿ ಗತಿ ಭಂಗ್ ಮಾಂ, ಜೇ ಸಮ್ಜೇ ಶ್ರುತ್'ಪ್ಲಾನ್ | ಮಾನೇ ನಿಜ್ಮತ್‌ವೇಷನೋ, ಆಗ್ರಹ ಮುಕ್ತಿ ನಿದಾನ್ 12711 ದೇವ, ನರಕ ಮೊದಲಾದ ಗತಿಗಳ “ ಭಂಗ' ಮೊದಲಾದವುಗಳ ಸ್ವರೂಪವನ್ನು ಒಂದು ಪರಮಾರ್ಥದ ಹೇತುವನ್ನು ಸಾಧಿಸುವುದಕ್ಕಾಗಿ ವಿವರಿಸಿದೆ. ಆ ಹೇತುವನ್ನು ತಿಳಿದುಕೊಳ್ಳದೆ ಆ ಭಂಗಜಾಲವೇ ಶ್ರುತಜ್ಞಾನವೆಂದು ತಿಳಿದು ತನ್ನ ಮತದ - ವೇಷದ ಆಗ್ರಹವನ್ನು ಹಿಡಿಯುವುದೇ ಮುಕ್ತಿಗೆ ಕಾರಣವೆಂದೂ ಯಾವನು ಭಾವಿಸುತ್ತಾನೋ ಲಕ್ಕುಂ ಸ್ವರೂಪ್ ನ ವೃತ್ತಿನುಂ, ಗ್ರಹ್ಯುಂ ವ್ರತ್ ಅಭಿಮಾನ್ | ಗ್ರಹೇ ನಹೀಂ ಪರಮಾರ್ಥನೇ, ಲೇವಾ ಲೌಕಿಕ್ ಮಾನ್ 112811 ವೃತ್ತಿಯ ಸ್ವರೂಪವೇನು ಇದನ್ನು ಕೂಡ ತಿಳಿಯದೆ ನಾನು ವ್ರತಧಾರಿಯಾಗಿದ್ದೇನೆ' ಎಂಬ ಅಭಿಮಾನವುಳ್ಳವನಾಗಿದ್ದಾನೆ. ಆದರೆ ಒಮ್ಮೊಮ್ಮೆ ಪರಮಾರ್ಥದ ಉಪದೇಶವು ಸಿಗುವ ಸಂದರ್ಭ ಒದಗಿ ಬಂದರೂ ಲೋಕದಲ್ಲಿ ತಮ್ಮ ಮಾನ ಮತ್ತು ಪೂಜಾ ಸತ್ಕಾರಮೊದಲಾದುವುಗಳು ನಾಶವಾಗಬಹುದು. ಈ ಮಾನಾದಿಗಳು ಪುನಃ ಪ್ರಾಪ್ತವಾಗಲಾರವು ಎಂದು ತಿಳಿದು ಯಾರು ಪರಮಾರ್ಥವನ್ನು ಗ್ರಹಣ ಮಾಡುವುದಿಲ್ಲವೋ ಅಥವಾ ನಿಶ್ಚಯ್ ನಮ್ ಗ್ರಹೇ, ಮಾತ್ರ ಶಬ್ದ ಮಾಂಯ್ || ಲೋಪೇ ಸದ್ವ್ಯವಹಾರನೇ, ಸಾಧನ್ ರಹಿತ್ ಥಾಯ್ 12911 ಯಾರು ಸಮಯಸಾರ' ಅಥವಾ “ ಯೋಗವಾಸಿಷ್ಠ' ದಂಥ ಗ್ರಂಥಗಳನ್ನು ಓದಿ ಕೇವಲ ನಿಶ್ಚಯನಯವನ್ನು ಮಾತ್ರಗ್ರಹಿಸುತ್ತಾನೋ, ಅದೂ ಯಾವ ರೂಪದಲ್ಲಿ ಗ್ರಹಿಸುತ್ತಾನೆಂದು ಗೊತ್ತಿದೆಯೋ?ಕೇವಲ ಕಥನ ರೂಪದಲ್ಲಿ ಗ್ರಹಿಸುತ್ತಾನೆ ಅಲ್ಲದೆ ಯಾವನ ಅಂತರಂಗದಲ್ಲಿ ಆ ಗುಣಗಳ ಸ್ಪರ್ಶ ಕೂಡ ಆಗುವುದಿಲ್ಲವೋ ಅಲ್ಲದೆ ಸದ್ದುರು, ಸತ್‌ಶಾಸ್ತ್ರ ಹಾಗೂ ವೈರಾಗ್ಯ, ವಿವೇಕ ಮೊದಲಾದ ಸದ್ ವ್ಯವಹಾರಗಳ ಲೋಪವನ್ನು ಮಾಡುತ್ತಾನೋ, ಅಲ್ಲದೆ ತನ್ನಷ್ಟಕ್ಕೆ ತಾನು ಜ್ಞಾನಿಯೆಂದು ತಿಳಿದುಕೊಂಡು ಸಾಧನೆಯಿಲ್ಲದ ಆಚರಣೆಯನ್ನು ಇಟ್ಟುಕೊಂಡಿರುತ್ತಾನೋ ಜ್ಞಾನ್‌ದಶಾ ಪಾಮೇ ನಹೀಂ, ಸಾಧನ್ದಶಾ ನ ಕಾಂ | ಪಾಮೇ ತೇನೋ ಸಂಗ್ ಜೇ, ತೇ ಬುಡೇ ಭವ್ ಮಾಂಹಿ 113 OIL ಯಾರು ಜ್ಞಾನಾವಸ್ಥೆಯನ್ನು ಹೊಂದಿರುವುದಿಲ್ಲ ಮತ್ತು ವೈರಾಗ್ಯ ಮೊದಲಾದ ಸಾಧನಾವಸ್ಥೆಯನ್ನು ಹೊಂದಿರುವುದಿಲ್ಲವೋ ಅಂಥವರ ಸಂಯೋಗವು ಬೇರೆ ಜೀವಗಳಿಗಾದಲ್ಲಿ ಅವರೂ ಭವಸಾಗರದಲ್ಲಿ ಮುಳುಗುತ್ತಾರೆ. ಏ ಪಣ್ ಜೀವ್ ಮತಾರ್ಥಮಾಂ, ನಿಜ್ಮಾನಾದಿ ಕಾಜ್ | ಪಾಮೇ ನಹಿ ಪರಮಾರ್ಥನೇ, ಅನ್ ಅಧಿಕಾರೀಮಾಂ ಜ 13 111 ಇಂಥ ಜೀವನೂ ಕೂಡ ಮತಾರ್ಥದಲ್ಲಿಯೇ ಇರುತ್ತಾನೆ. ಯಾಕೆಂದರೆ ಮೇಲೆ ಹೇಳಿದಂತೆ ಯಾರಿಗೆ ಯಾವ ಪ್ರಕಾರ ಧರ್ಮಾದಿ ಮತಾರ್ಥಗಳು ಇರುವವೋ ಇದೇ ಪ್ರಕಾರ ಇವನಿಗೂ ಕೂಡ ತಾನು ಜ್ಞಾನಿ ಎಂಬ ಮಾನವನ್ನು ಹೊಂದಬೇಕೆಂಬ ಇಚ್ಛೆಯಿಂದ ತನ್ನ ಶುಷ್ಕಮತದ ಆಗ್ರಹವಿರುತ್ತದೆ. ಆದ್ದರಿಂದ ಇವನೂ ಪರಮಾರ್ಥವನ್ನು ಹೊಂದುವುದಿಲ್ಲ. ಈ ಕಾರಣದಿಂದ ಇಂಥವನೂ ಅನಧಿಕಾರಿ ಅಂದರೆ ಜ್ಞಾನವು ಪರಿಣಮಿಸಲು ಯೋಗ್ಯರಲ್ಲದ ಜೀವದಲ್ಲಿಯೇ ಸಮಾವೇಶವಾಗುತ್ತಾನೆ. • FHRA O JINA-BHARATIO Jain Education International 2010_04 For Private & Personal Use Only www.jainelibrary.org
SR No.002593
Book TitleSapta Bhashi Atmasiddhi
Original Sutra AuthorShrimad Rajchandra
AuthorPratapkumar J Toliiya, Sumitra Tolia
PublisherJina Bharati Bangalore
Publication Year2001
Total Pages226
LanguageSanskrit, Hindi, Gujarati,
ClassificationBook_Devnagari, Spiritual, & Rajchandra
File Size21 MB
Copyright © Jain Education International. All rights reserved. | Privacy Policy