SearchBrowseAboutContactDonate
Page Preview
Page 9
Loading...
Download File
Download File
Page Text
________________ xiv ಬಿಗಗಳೂ ಬೇಡೀ ಸರಪಣಿಗಳೂ ಒಡೆದು ಚೂರುಚೂರಾದವು, ಬಾಗಿಲು ಗಳೆಲ್ಲಾ ಸ್ವಭಾವವಾಗಿ ತೆರೆದವು. ಮುನಿಶ್ರೇಷ್ಠರು ಕಾರಾಗೃಹದಿಂದ ಹೊರಕ್ಕೆ ಬಂದರು. ಇವರನ್ನು ನೋಡಿ ಪಹರೆದಾರರು ನಾವು ಬಂಧಿಸು ವುದರಲ್ಲಿ ಏನಾದರೂ ವ್ಯತ್ಯಾಸವಾಗಿರಬಹುದು. ರಾಜನು ತಿಳಿದರೆ ದಂಡಿಸ ಬಹುದು ಎಂದು ಇತರರಿಗೆ ತಿಳಿಸದೆ ಪುನಃ ಮೊದಲಿನಂತೆ ಬಂಧಿಸಿದರು. ಆದರೆ ಸ್ವಲ್ಪ ಹೊತ್ತಿನ ಮೇಲೆ ಯಥಾಪ್ರಕಾರವಾಗಿ ಬೀಗಗಳು ಒಡೆದು ಹೋಗಿ ಮುನಿಗಳು ಹೊರಕ್ಕೆ ಬಂದರು. - ಈ ಬಾರಿ ಸೇವಕರು ರಾಜನ ಬಳಿಗೆ ಹೋಗಿ ಬಂಧನವು ವಿಮೋಚನೆ | ಯಾದ ವಿಚಾರವನ್ನೆಲ್ಲಾ ಹೇಳಿದರು. ರಾಜನು ಬಹಳ ಆಶ್ಚರ್ಯಯುಕ್ತ ನಾಗಿ ಸೇವಕರು ಬಂಧಿಸುವುದರಲ್ಲಿ ವ್ಯತ್ಯಾಸವಾಗಿರಬಹುದೆಂದು ಪುನಃ ಮೊದಲಿನಂತೆ ಕಾರಾಗೃಹದಲ್ಲಿ ಇರಿಸಿದನು. ಆದರೆ ಸ್ವಲ್ಪ ಸಮಯದಲ್ಲಿಯೇ ಈ ಸ್ತೋತ್ರ ಮಹಾತ್ಮದಿಂದ ಪೂರ್ವದಂತೆ ಬಂಧನ ವಿಮೋಚನೆಯರಾಗಿ ಯತಿವರ್ಯರು ಹೊರಟು ಸೀದಾ ಸಭಾಸ್ಥಾನವನ್ನು ಹೊಂದಿದರು. ಈ ಮಹಾತ್ಮರ ದಿವ್ಯಶರೀರ ಮತ್ತು ತಪಃಪ್ರಭಾವದಿಂದ ರಾಜನ ಹೃದಯವು ಮತ್ತು ಆಸನವು ಕಂಪಿತವಾಯಿತು. ಮಹಾರಾಜನು ಕೂಡಲೇ ಕಾಳಿದಾಸನನ್ನು ಕರೆದು ಕವಿರಾಜನೆ ! ನನ್ನ ಆಸನವು ಕಂಪಾಯಮಾನವಾಗುತ್ತದೆ, ನಾನು ಒಂದು ಕ್ಷಣವೂ ಇದರಲ್ಲಿ ಕುಳಿತುಕೊಳ್ಳಲಾರೆನು, ಇದಕ್ಕೇನಾದರು ಪ್ರತೀಕಾರವನ್ನು ಮಾಡು, ಎಂದು ಹೇಳಿದನು. ಕಾಳಿದಾಸನು ರಾಜನಿಗೆ ಧೈರ್ಯವನ್ನು ಹೇಳಿ ಅದೇ ಸಮಯ ದಲ್ಲಿ ಯೋಗಾಸನದಲ್ಲಿ ಕುಳಿತು ಕಾಳಿಕಾ ಭಜನೆಯನ್ನು ಮಾಡಲಾರಂಭಿಸಿದನು. ಸ್ವಲ್ಪ ಸಮಯಲ್ಲಿ ಕಾಳಿಕಾದೇವಿಯು ಪ್ರತ್ಯಕ್ಷಳಾದಳು. ಶ್ರೀ ವರಾನತುಂಗ ಮುನಿಗಳ ತಪೋಮಹಿಮೆಯಿಂದ ಇವರ ಪಾರ್ಶ್ವದಲ್ಲಿ ಚಕ್ರೇಶ್ವರೀ ದೇವಿಯು ಪ್ರತ್ಯಕ್ಷಳಾದಳು. ರಾಜಸಭಿಕರು ಚಕ್ರೇಶ್ವರಿಯ ಸೌಮ್ಯವಾದ ದಿವ್ಯರೂಪ ವನ್ನೂ ಕಾಳಿಕಾದೇವಿಯ ಕರವಾದ ವಿಕಾರರೂಪವನ್ನೂ ನೋಡಿ ಆಶ್ಚರ್ಯ ಪರವಶರಾದರು. ಚಕ್ರೇಶ್ವರಿಯು ಉಚ್ಚಸ್ವರದಿಂದ ಕಾಳಿಕಾದೇವಿಯನ್ನು ಕುರಿತು, ಕಾಳಿಕೆಯ ! ನೀನು ಮಹಾತ್ಮರಾದ ಮುನಿಗಳಿಗೆ ಉಪಸರ್ಗವನ್ನು XV ಮಾಡುವುದಕ್ಕಾಗಿ ಬಂದಿರುವೆಯೋ ? ಒಳ್ಳೆಯದು, ನಿನಗೆ ತಕ್ಕ ದಂಡನೆ ಯನ್ನು ಮಾಡುವನು, ಎಂದು ಹೇಳಿದಳು. ಕಾಳಿಕಾದೇವಿಯು ಈ ಪ್ರಭಾವಶಾಲಿನಿಯಾದ ಚಕ್ರೇಶ್ವರಿಯನ್ನು ನೋಡಿದ ಕೂಡಲೇ ಭಯಪಟ್ಟು ಚಕ್ರೇಶ್ವರಿಯನ್ನು ನಾನಾ ಪ್ರಕಾರವಾಗಿ ಸ್ತುತಿಸಿ ಇನ್ನು ನಾನು ಇಂತಹ ಕಾರ್ಯವನ್ನು ಮಾಡುವುದಿಲ್ಲವೆಂದು ಹೇಳಿದಳು. ಚಕ್ರೇಶ್ವರಿಯು ಕಾಳಿಕಾ ದೇವಿಗೆ ಅನೇಕ ಉಪದೇಶಗಳನ್ನು ಮಾಡಿ ಅಹಿಂಸಾ ವ್ರತವನ್ನು ಪರಿಪಾಲಿಸು ವಂತೆ ಪ್ರತಿಜ್ಞೆ ಮಾಡಿಸಿದಳು. ಕಾಳಿಕಾದೇವಿಯು ಮುನಿಗಳಲ್ಲಿ ಕ್ಷಮಾಪಣೆ ಯನ್ನು ಕೇಳಿಕೊಂಡು ಅದೃಶ್ಯಳಾದಳು. ರಾಜನು ಮತ್ತು ಕಾಳಿದಾಸ ಮೊದಲಾದವರು ಮುನಿಗಳಲ್ಲಿ ಕ್ಷಮಾಪಣೆ ಯನ್ನು ಕೇಳಿಕೊಂಡರು. ರಾಜನಾದರೋ ಮುನಿಗಳಲ್ಲಿ ಶ್ರಾವಕ ವ್ರತವನ್ನು ತೆಗೆದುಕೊಂಡು ಅಂದಿನಿಂದ ಜೈನ ಧರ್ಮವನ್ನು ಲೋಕದಲ್ಲಿ ಪ್ರಚಾರ ಪಡಿಸಿದನು. ಇಷ್ಟಾದ ಮೇಲೆ ಚಕ್ರೇಶ್ವರಿಯು ಅಂತರ್ಧಾನಳಾದಳು. ಇತಿ. ಈ ಕಥೆಯಶ್ರೀ ಜಗಭೂಷಣ ಭಟ್ಟಾರಕರ ಶಿಷ್ಯರಾದ ವಿಶ್ವಭೂಷಣ ಕೃತವಾದ ಸಂಸ್ಕೃತ ಟೀಕೆಯ ಹಿಂದೀಭಾಷಾಂತರದಿಂದ ಸಂಗ್ರಹಿಸಲ್ಪಟ್ಟಿದ್ದಾ ಗಿರುತ್ತದೆ,
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy