________________ xili ಮಾಡಿಸಿದರೆ ಇವನ ಪಾಂಡಿತ್ಯವು ತವರಿಗೆ ಗೊತ್ತಾಗುವುದು, ಎಂದು ಹೇಳಿ ದನು. ತನ್ನ ಗುರುವಿಗೆ ತಿರಸ್ಕಾರವಾದ ಈ ಮಾತನ್ನು ಕೇಳಿ ಧನಂಜಯನು ಕೋಪಿಷ್ಠನಾಗಿ ವಿದ್ವಾಂಸರನ್ನು ಕುರಿತು, ನಮ್ಮ ಗುರುಪಾದದಲ್ಲಿ ವಾದ ವರಾಡುವ ವಿದ್ವಾಂಸನು ಯಾರಿದ್ದಾನೆ ?: ನಿಮ್ಮಲ್ಲಿ ಎಷ್ಟು ವಿದ್ವತ್ವವು ಇದೆ ಎಂಬುದನ್ನು ನಾನು ನೋಡುತ್ತೇನೆ, ನನ್ನಲ್ಲಿ ವಾದವನ್ನು ಮಾಡಿದನಂತರ ಗುರುಗಳ ಹೆಸರನ್ನು ಎತ್ತಬೇಕು, ಎಂದು ಹೇಳಿದನು. ಇಷ್ಟಾದಮೇಲೆ ಕಾಳಿದಾಸನಿಗೂ, ಧನಂಜಯನಿಗೂ, ವಿವಿಧ ವಿಷಯ ಗಳಲ್ಲಿ ಶಾಸ್ತ್ರಾರ್ಥವಾಯಿತು. ಧನಂಜಯನ ಸ್ಮಾದ್ವಾದಮಯವಾದ ವಾದ ದಿಂದ ಅನೇಕಾವರ್ತಿ ಕಾಳಿದಾಸನು ನಿರಂತರವಾಗಿ ರಾಜನನ್ನು ಕುರಿತು, ಮಹಾರಾಜನೆ ! ನಾನು ಇವನ ಗುರುವಾದ ವಾನತುಂಗನೊಡನೆ ವಾದಮಾಡು ತೇನೆಂದು ಹೇಳಿದನು. ಯದ್ಯಪಿ ಧನಂಜಯನ ಪಕ್ಷವು ಬಲವಾದದ್ದೆಂದು ರಾಜನು ತಿಳಿದರೂ ಕಾಳಿದಾಸನ ಸಂತೋಷಾರ್ಥವಾಗಿಯೂ, ಶಾಸ್ತ್ರಾರ್ಥವನ್ನು ನೋಡಬೇಕೆಂಬುದಾಗಿಯೂ, ಶ್ರೀ ವರಾನತುಂಗಾಚಾರ್ಯರನ್ನು ಕರೆದುಕೊಂಡು ಬರುವಂತೆ ತನ್ನ ದೂತರನ್ನು ಕಳುಹಿಸಿದನು. : ಆ ದೂತರು ರಾಜನ ಆಜ್ಞಾ ನುಸಾರವಾಗಿ ವರಾನತುಂಗಾಚಾರ್ಯರ ಸಮೀಪಕ್ಕೆ ಹೋಗಿ ಭಗವನ್ ! ಮಾಲವಾಧಿಪತಿಯಾದ ಭೋಜ ಮಹಾರಾಜನು ತಮ್ಮ ಪ್ರಖ್ಯಾತಿಯನ್ನು ಕೇಳಿ ತಮ್ಮ ದರ್ಶನವನ್ನು ಮಾಡಬೇಕೆಂಬ ಅಭಿಲಾಷೆಯುಳ್ಳವನಾಗಿ ಆಸ್ಥಾನಕ್ಕೆ ದಯವರಾಡಬೇಕೆಂದು ನಮ್ಮ ಮೂಲಕ ವಿಜ್ಞಾಪಿಸುತ್ತಾನೆ, ಆದುದರಿಂದ ದಯವಿಟ್ಟು ಬರಬೇಕೆಂದು ವಿಜ್ಞಾಪಿಸಿಕೊಂಡರು. -- ಬಿದ ಈ ಮಾತನ್ನು ಕೇಳಿ ಮಾನತುಂಗಾಚಾರ್ಯರು ದೂತರನ್ನು ಕುರಿತು ದೂತರುಗಳೇ ! ನಮಗೆ ರಾಜನ ಆಸ್ಥಾನಕ್ಕೆ ಬಂದು ಏನನ್ನು ಪಡೆಯಬೇಕಾ ಗಿದೆ ? ನಾವು ಯಾರಲ್ಲಿಯೂ ಯಾವ ಪ್ರಕಾರವಾದ ಯಾಚನೆಯನ್ನೂ ವರಾಡು ವುದಿಲ್ಲ, ಮತಕ್ಕೆ ರಾಜನು ನಮ್ಮನ್ನು ಅಪೇಕ್ಷಿಸುವನು ? ಎಂದು ಹೇಳಿ ದರುರಿ ದೂತರು ಹೋಗಿ. ಈ ಮಾತನ್ನು ರಾಜನಿಗೆ ತಿಳಿಸಿದರು. ಇದರ ಮೇಲೆ ರಾಜನು ಪ್ರನ ಸೇವಕರನ್ನು ಪೂರ್ವದಂತೆ ಹೇಳಿ ಕಳುಹಿಸಿದನು.' ಎರಡನೆಯ ಬಾರಿಯ ಮುನಿಗಳು ಮೊದಲಿನಂತೆ ಹೇಳಿ ದೂತರನ್ನು ಹಿಂತಿರುಗಿ ಕಳುಹಿಸಿದರು. ಈ ಪ್ರಕಾರ ಮೂರು ನಾಲ್ಕು ಬಾರಿ ಸೇವಕರನ್ನು ಕಳುಹಿಸಿದರೂ ಮುನಿಗಳು ಬರಲಿಲ್ಲ. ಐದನೆಯಾವರ್ತಿ ಮಹಾರಾಜನು ಕೋಪವುಳ್ಳವನಾಗಿ ಸೇವಕರನ್ನು ಕುರಿತು ಆ ಮಾನತುಂಗಾಚಾರ್ಯರು ನಮ್ಮ ಮಾತಿನಪ್ರಕಾರ ಬಾರದಿದ್ದರೆ ಹಿಡಿದು ಬಲಾತ್ಕಾರವಾಗಿ ತರಬೇಕು ಎಂದು ಆಜ್ಞಾಪಿಸಿದನು. ಅನೇಕಾವರ್ತಿ ಹೋಗಿದ್ದ ದೂತರು ಈ ಆಜ್ಞೆಯನ್ನೇ ಹಾರೈಸುತ್ತಿ ದರು. ಕೂಡಲೇ ಆ ಸೇವಕರು ಹೋಗಿ ಮುನಿಗಳನ್ನು ಬಲಾತ್ಕಾರದಿಂದ ಹಿಡಿದು ತಂದು ಸಭೆಯಲ್ಲಿ ನಿಲ್ಲಿಸಿದರು. ಆಗ ಉಪಸರ್ಗವಾಯಿತೆಂದು ತಿಳಿದು ಮುನಿಗಳು ಮೌನಧಾರಣೆಯನ್ನು ವರಾಡಿದರು. ರಾಜನು ಈ ಮುನಿಗಳೇ ನಾದರು ಹೇಳಬಹುದೆಂಬುದಾಗಿ ಕುತೂಹಲವುಳ್ಳವನಾಗಿದ್ದನು, ಆದರೆ ಇವರ ಮುಖದಿಂದ ಒಂದು ಅಕ್ಷರವಾದರೂ ಹೊರಡಲಿಲ್ಲ. ಅಷ್ಟರಲ್ಲಿ ಕಾಳಿದಾಸನೇ ಮೊದಲಾದ ಅನ್ಯವಿದ್ವಾಂಸರು ರಾಜನನ್ನು ಕುರಿತು ಈ ಮುನಿಯು ಕರ್ನಾಟಕ ದೇಶದಿಂದ ಹೊರಟು ಇಲ್ಲಿಗೆ ಬಂದಿದ್ದಾನೆ, ಇವನು ಮಹಾ ಮೂರ್ಖನು, ರಾಜಸಭೆಯನ್ನು ನೋಡಿ ಭಯಭೀತನಾಗಿ ಯಾವು ದನ್ನೂ ಹೇಳುವುದಿಲ್ಲ, ಎಂದು ಪರಿಹಾಸ್ಯ ವರಾಡಿದರು. ಇದರನಂತರ ಅನೇಕರು ಮುನಿಗಳನ್ನು ಕುರಿತು ತಾವು ಸಾಧುಗಳಾಗಿ ದ್ದೀರಿ ಈಗ ಏನಾದರು ತಾವು ಧರ್ಮೋಪದೇಶವನ್ನು ಹೇಳಬೇಕು, ರಾಜನು ವಿದ್ಯಾರಸಿಕನಾಗಿದ್ದಾನೆ, ಕೇಳಿ ಬಹಳ ಸಂತುಷ್ಟನಾಗುವನು, ಎಂದು ಪ್ರಾರ್ಥಿಸಿ ಕೊಂಡರು. ಆದರೆ ಮುನಿಗಳು ಪಂಚಪರಮೇಷ್ಠಿಗಳ ಧ್ಯಾನದಲ್ಲಿ ಮಗ್ನರಾಗಿ ದ್ದರು. ಎಲ್ಲರೂ ಹೇಳಿ ಹೇಳಿ ಸೋತುಹೋದರು. ಆದರೆ ಇವರ ಪ್ರಾರ್ಥ ನೆಯು ಏನೂ ಫಲಕಾರಿಯಾಗಲಿಲ್ಲ. ಇದರ ಮೇಲೆ ರಾಜನು ಕೊಧಿತನಾಗಿ ನಲ್ವತ್ತೆಂಟು ಆವರಣ(ಸುತ್ತು)ಗಳ ಮಧ್ಯದಲ್ಲಿರುವ ಬಂಧೀಗೃಹದಲ್ಲಿ ಮುನಿ ಗಳಿಗೆ ಬೇಡಿ ಹಾಕಿಸಿ ಇರಿಸಿದನು. ಮತ್ತು ಪ್ರತಿಯೊಂದು ಆವರಣದ ದ್ವಾರಕ್ಕೂ ಭದ್ರವಾದ ಬೀಗವನ್ನು ಹಾಕಿಸಿ ಒಬ್ಬೊಬ್ಬ ಪಹರೆದಾರರನ್ನು ಕಾವಲಿರಿ ಸಿದನು, ಶ್ರೀ ವರಾನತುಂಗಾಚಾರ್ಯರು ಹೀಗೆ ಮೂರು ದಿವಸ ಪರ್ಯಂತ ಬಂಧನದಲ್ಲಿದ್ದು ನಾಲ್ಕನೆಯ ದಿವಸ ಯಂತ್ರ, ಮಂತ್ರ ಋಗರ್ಭಿತವಾದ ಆದಿನಾಥಸ್ತೋತ್ರ (ಛಾಮರಣೋತ್ರ)ವನ್ನು ರಚಿಸಿ ಪರಿಸಿದ ಹಾಗೆಲ್ಲಾ