SearchBrowseAboutContactDonate
Page Preview
Page 7
Loading...
Download File
Download File
Page Text
________________ ಶ್ರೇಷ್ಟಿಯನ್ನು ಕುಳ್ಳಿರಿಸಿ ಕುಶಲಪ್ರಶ್ನೆಯನ್ನು ವರಾಡಿದ ನಂತರ, ಮಹಾರಾಜನು | ಶ್ರೇಯನ್ನು ಕುರಿತು ನಿನ್ನ ಮಗನಿಗೇನಾದರೂ ವಿದ್ಯಾಭ್ಯಾಸವನ್ನು ವರಾಡಿಸಿ | ದೀಯೋ, ಎಂಬುದಾಗಿ ಕೇಳಿದನು. ಸುದತ್ತನು ಮಹಾರಾಜನೇ ! ಈ ಬಾಲಕನು ಈಗತಾನೆ ವಿದ್ಯಾಭ್ಯಾಸಕ್ಕೆ ಆರಂಭಿಸಿ ನಾಮವರಾಲಾ ಎಂಬ ಗ್ರಂಥದ ಶ್ಲೋಕಗಳನ್ನು ವರಾತ್ರ ಬಾಯಿಪಾಠ ವರಾಡಿರುತ್ತಾನೆ. ಈ ಅಶ್ರುತಪೂರ್ವ ವಾದ ಗ್ರಂಥದ ಹೆಸರನ್ನು ಕೇಳಿ ಭೋಜರಾಜನು ನಾವರಿವಾಲಾ ಎಂಬ ಗ್ರಂಥದ ಹೆಸರನ್ನು ಈವರೆಗೆ ನಾನು ಕೇಳಲಿಲ್ಲ. ಇದನ್ನು ಯಾರು ರಚಿಸಿದರೆಂದು ನಿನಗೇನಾದರೂ ತಿಳಿಯುವುದೋ ಎಂದು ಶ್ರೇಷ್ಠಿಯನ್ನು ಕುರಿತು ಪ್ರಶ್ನೆ ವರಾಡಿದನು. ಶ್ರೇಷ್ಠಿಯಂ ರಾಜನನ್ನು ಕುರಿತು ಮಹಾರಾಜನೆ ! ತಮ್ಮ ನಗರದಲ್ಲಿಯೇ ಸ್ಯಾದ್ಯಾದ ವಿದ್ಯಾಪಾರಂಗತನಾದ ಶ್ರೀ ಧನಂಜಯ ಮಹಾಕವಿಯು ಇರುತ್ತಾನೆ. ಈ ಗ್ರಂಥವು ಆ ಧನಂಜಯ ಕವಿಯಿಂದ ರಚಿಸಲ್ಪಟ್ಟದ್ದಾಗಿದೆ, ಎಂದು ಹೇಳಿದನು. ಈ ವರಾತನ್ನು ಕೇಳಿ ಸಂಸ್ಕೃತ ವಿದ್ಯಾರಸಿಕನಾದ ಭೋಜರಾಜನು ಶ್ರೇಷ್ಠಿಯನ್ನು ಕುರಿತು ಸಂದನೆ | ಇಂತಹ ಮಹಾ ವಿದ್ವಾಂಸನ ಭೇಟಿಯನ್ನು ನನಗೆ ಈವರೆಗೆ ನೀನು ವರಾಡಿಸದೆ ಇರ ಬಹುದೆ, ಎಂದು ಹೇಳಿದನು. 2. ಇಷ್ಟರಲ್ಲಿ ಕಾಳಿದಾಸನು ಧನಂಜಯನ ಪ್ರಶಂಸೆಯನ್ನು ಕೇಳಿ ಅಸಹನೆಯಿಂದ ರಾಜನನ್ನು ಕುರಿತು ಮಹಾರಾಜನ ! ಆ ಧನಂಜಯನು ಸಾವರಾನ್ಯ ವರ್ತಕ ನಾಗಿರುವುದರಿಂದ ಅವನಲ್ಲಿ ಅಂತಹ ವಿದ್ಯೆಯು ಎಲ್ಲಿ ಬಂತು, ಎಂದು ಹೇಳಿದನು. ಆದರೆ ಮಹಾರಾಜನು ವಿದ್ಯಾರಸಿಕನಾದುದರಿಂದ ಈ ಕಾಳಿದಾಸನ ಮಾತನ್ನು ಕೇಳಿಯೂ ಕೇಳದ ಹಾಗೆ ನಟಿಸಿ, ತನ್ನ ಮಂತ್ರಿಯನ್ನು ಕರೆದು ಧನಂಜಯ ಕವಿಯನ್ನು ಕರೆದುಕೊಂಡು ಬರುವಂತೆ ಆಜ್ಞಾಪಿಸಿದನು. ಸ್ವಲ್ಪ ಸಮಯ ದಲ್ಲಿಯೇ ಧನಂಜಯನು ಸಭಾಸ್ಥಾನಕ್ಕೆ ಬಂದು ಸೇರಿದನು. ಈ ಧನಂಜಯ ಕವಿಯು ಆಶೀರ್ವಾದ ರೂಪವಾದ ಒಂದು ಸುಂದರ ಶ್ಲೋಕವನ್ನು ಹೇಳಿ ಎಲ್ಲಾ ಸಭಿಕರನು ಆನಂದ ಪರವಶರನ್ನಾಗಿ ಮಾಡಿದನು. ಮಹಾರಾಜನು ಧನಂಜಯನನ್ನು ಸತ್ಕಾರಪೂರ್ವಕವಾಗಿ ಕುಳ್ಳಿರಿಸಿ ಕುಶಲ ಪ್ರಶ್ನಾನಂತರದಲ್ಲಿ ತಾವು ದೊಡ್ಡ ಪ್ರಖ್ಯಾತ ವಿದ್ವಾಂಸರೆಂದು ಕೇಳಿದ್ದೇನೆ. ಆದರೆ ಈವರೆಗೆ | ತಮ್ಮ ಭೇಟಿಯಲು ನನಗೆ ಸಿಕ್ಕದಿರುವುದು ಆಶ್ಚರ್ಯವಾಗಿದೆ ಎಂದು ಹೇಳಿದನು. ಧನಂಜಯನು ಮುಗುಳುನಗೆಯಿಂದ ಎಲೈ ಕೃಪಾನಾಥನೆ ! ಎಷ್ಟರವರೆಗೆ ಪುಣ್ಯದ ಉದಯವಾಗುವುದಿಲ್ಲವೋ ಅಷ್ಟರವರೆಗೆ ತಮ್ಮ ದರ್ಶನವು ಹೇಗೆ ಲಭಿಸೀತು ? ಈ ದಿವಸ ತಮ್ಮ ಸಾಕ್ಷಾತ್ ದರ್ಶನವನ್ನು ಮಾಡಿ ಧನ್ಯನಾದೆನು, ಎಂದು ಹೇಳಿದನು. ಆ ನಂತರ ಮಹಾರಾಜನು ಧನಂಜಯನನ್ನು ಕುರಿತು, ನೀವು ಇಷ್ಟು ಪ್ರಖ್ಯಾತ ಪಂಡಿತರಾಗಿರುತ್ತೀರಿ, ನೀವು ಇಷ್ಟು ಸಣ್ಣ ನಾಮಮಾಲಾ ಗ್ರಂಥ ವನ್ನು ರಚಿಸಿರುವುದು ನಿಮ್ಮ ವಿದ್ವತ್ವಕ್ಕೆ ದೊಡ್ಡ ಮಾತಲ್ಲ, ಇನ್ನೂ ಯಾವು ದಾದರೂ ದೊಡ್ಡ ಗ್ರಂಥವನ್ನು ರಚಿಸಿರಬಹುದು, ಎಂದು ಹೇಳಿದನು. ಈ ಮಾತನ್ನು ಕೇಳಿ ಕಾಳಿದಾಸನು ಅಸಹನೆಯಿಂದ ರಾಜನನ್ನು ಕುರಿತು ಎಲೆ ಮಹಾರಾಜನೆ ! ಈ ನಾಮಮಾಲಾ ಎಂಬ ಗ್ರಂಥವು ನಮ್ಮದಾಗಿದೆ, ಇದರ ನಿಜವಾದ ಹೆಸರು ನಾವಮಂಜರೀ ಎಂಬುದಾಗಿದೆ. ಇಂತಹ ಗ್ರಂಥವನ್ನು ಬ್ರಾಹ್ಮಣರೇ ಹೊರತು ಈ ಬಡವರ್ತಕನು ರಚಿಸಲು ಹೇಗೆ ಶಕ್ತನಾದಾನು ? ಎಂದು ಹೇಳಿದನು. ಈ ವರಾತನ್ನು ಕೇಳಿ ಧನಂಜಯನು ಅಸಮಾಧಾನದಿಂದ ರಾಜನನ್ನು ಕುರಿತು ಮಹಾರಾಜನ ! ಈ ಮಾತು ಸರ್ವಥಾ ಸುಳ್ಳಾಗಿದೆ, ನಾನೇ ಈ ಗ್ರಂಥವನ್ನು ಬಾಲಕರಿಗೆ ಪಾಠ ಹೇಳುವುದಕ್ಕಾಗಿ ರಚಿಸಿದ್ದಾಗಿರುತ್ತ ದೆಂಬ ವಿಚಾರವು ಎಲ್ಲರಿಗೂ ಗೊತ್ತಿದೆ, ತಾವು ಪುಸ್ತಕವನ್ನು ತರಿಸಿ ನೋಡಿದರೆ ಸವರಾಧಾನವಾಗಬಹುದು, ಈ ಕವಿಗಳು ನನ್ನ ಹೆಸರನ್ನು ಲೋಪಪಡಿಸಿ ನಾವವಂಜರೀ ಎಂಬ ತಮ್ಮ ಹೆಸರನ್ನು ಇಟ್ಟಿರುತ್ತಾರೆ, ಎಂದು ಹೇಳಿದನು. ಇದನ್ನು ಕೇಳಿ ಮಹಾರಾಜನು ಬ್ರಾಹ್ಮಣರನ್ನು ಕುರಿತು, ನೀವು ಬಹಳ ಅನರ್ಥ ವರಾಡಿದಿರಿ, ಇತರರ ಕೃತಿಯನ್ನು ತಮ್ಮದೆಂದು ಹೇಳುವುದು ಚೋರಿ ವರಾಡಿದಂತಾಗುವುದಿಲ್ಲವೇ ! ಎಂದು ಹೇಳಿದನು. ಈ ವರಾತನ್ನು ಕೇಳಿ ಬ್ರಾಹ್ಮಣರ ಕಡೆಯಿಂದ ಕಾಳಿದಾಸನು ರಾಜನನ್ನು ಕುರಿತು, ಮಹಾರಾಜನ ! ಈ ಧನಂಜಯನು ಸ್ವಲ್ಪ ದಿವಸಗಳಿಂದ ವರಾನತುಂಗ ಮುನಿಯ ಸಮೀಪದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದನು. ಇವನಲ್ಲಿ ವಿದ್ವತ್ವದ ಗಂಧವೂ ಇರಲಿಲ್ಲ. ಇಂತಹವನಲ್ಲಿ ಗ್ರಂಥರಚನೆ ಮಾಡುವಷ್ಟು ಪಾಂಡಿತ್ಯವು ಎಲ್ಲಿಬಂತು ? ಇದರ ಪರೀಕ್ಷಾರ್ಥವಾಗಿ ತಾವು ಇವನ ಗುರುವನ್ನೇ ಕರೆಯಿಸಿ ನನ್ನೊಡನೆ ವಾಗ್ವಾದ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy