SearchBrowseAboutContactDonate
Page Preview
Page 62
Loading...
Download File
Download File
Page Text
________________ C4. ಪಂಚಸ್ತೋತ್ರ ಭಾವಪ್ರಕಾಶಿಕಾ 17. ತಾ|| ಓ ಉಭಯಲಕ್ಷಿ ರಮಣನಾದ ಅರ್ಹತ್ಪರಮೇಶ್ವರನೇ ! ಸಮಸ್ತ ಸಂಪತ್ತುಗಳಿಗೂ ವಾಸಸ್ಥಾನವಾಗಿರುವ ತಮ್ಮ ಚೈತ್ಯಾಲಯವು ಕುಲ ಪರ್ವತದಂತೆ ಸರ್ವೋತ್ಕೃಷ್ಟವಾಗಿ ಪ್ರಕಾಶಿಸುತ್ತಿದೆ. ಹಿಮವತ್ಪರ್ವತ ಮುಂತಾದ ಕುಲಪರ್ವತಗಳು ಹೇಗೆ ನದಿಗಳಿಗೆ ಉತ್ಪತ್ತಿ ಸ್ಥಾನಗಳಾಗಿವೆಯೋ ಹಾಗೆ ತಮ್ಮ ಚೈತ್ಯಾಲಯವು ಸಮಸ್ತ ರಾಜರ ಮತ್ತು ಇಂದ್ರಾದಿಗಳ ಸಂಪತ್ತೆಂಬ ಅಮೃತ ನದಿಗೆ ಉತ್ಪತ್ತಿ ಸ್ಥಾನವಾಗಿದೆ. ಕುಲಪರ್ವತವು ಹೇಗೆ ತಂದಿಯಲ್ಲಿ ಬೆಳೆದಿರುವ ಮರದ ಚಿಗುರುಗಳಿಂದ ಕೆಂಪಗೆ ಪ್ರಕಾಶಿಸುತ್ತದೆಯೋ, ಹಾಗೆ ತಮ್ಮ ಚೈತ್ಯಾ ಲಯವೂ ವಿಸ್ತಾರವಾದ ಫಲಗಳುಳ್ಳ ಧರ್ಮವೆಂಬ ಮರದ ತುದಿಯಲ್ಲಿರುವ ಧ್ವಜ (ಬಾವುಟ) ಎಂಬ ಚಿಗುರಿನಿಂದ ಪ್ರಕಾಶಿಸುತ್ತದೆ. ಆದುದರಿಂದ ತಮ್ಮ ಚೈತ್ಯಾಲಯವು ಕುಲಪರ್ವತದಂತೆ ಪ್ರಕಾಶಿಸುತ್ತಲಿದೆ. ಹೀಗೆ ಶ್ರೀಜಿನಚೈತ್ಯಾ ಲಯವು ವರ್ಣಿಸಲ್ಪಟ್ಟಿತು. =u5553 ನಿನವದನರಕಾಂತಾಕುಂತಲಾಕ್ರಾಂತಕಾಂತಿ | ಸುರಿತನಖಮಯಖದ್ಯೋತಿತಾಶಾಂತರಾಳಃ | ದಿವಿಜನುನುಜರಾಜವಾತಪೂಜ್ಯ ಕ್ರಮಾಬೋ | ಜಯತಿವಿಜಿತಕರ್ವಾರಾತಿಜಾಲೋಜಿನೇಂದ್ರಃ || 18 || 18. ತಾ|| ನಮಸ್ಕರಿಸುತ್ತಿರುವ ದೇವಸೀಯರ ತಲೆಕೂದಲಗಳಲ್ಲಿ ವ್ಯಾಪಿಸಿರುವ ಕಾಂತಿಯಿಂದ ಥಳಥಳಿಸುತ್ತಿರುವ ಉಗುರುಗಳ ಕಾಂತಿಗಳಿಂದ ದಿಕ್ಕುಗಳ ಮಧ್ಯಭಾಗವನ್ನು ಬೆಳಗುತ್ತಿರುವವರಾಗಿಯೂ, ದೇವೇಂದ್ರ ಮತ್ತು ನರೇಂದ್ರರಗಳ ಗುಂಪುಗಳಿಂದ ಪೂಜಿಸುವುದಕ್ಕೆ ಯೋಗ್ಯವಾದ ಪಾದಾರವಿಂದ ವಳ್ಳವರಾಗಿಯು, ಸಮಸ್ತ ಕರ್ಮಗಳೆಂಬ ಶತ್ರುಗಳನ್ನು ಜಯಿಸಿದಂತಹವ ರಾಗಿಯ ಇರುವ ಶ್ರೀ ಜಿನೇಂದ್ರರು ಸರ್ವೋತ್ಯಕ್ಷರಾಗಿದ್ದಾರೆ. ಸುಪೊತೇನಸುಮುಖೇನಸುಮಂಗಲಾಯ ! ದ್ರಷ್ಟ ವ್ಯಮಯದಿಮಂಗಳಮೇವವಸ್ತು | ಅನೈನ ಕಿ೦ತದಿಹನಾಥತವೈಭವ | ತ್ರೈಲೋಕ್ಯಮಂಗಳನಿಕೇತನಮಿತಾಕ್ಷಣೀಯಂ || 19 || ಈ ಭೂಪಾಲಸ್ತೋತ್ರ 19. ತಾ ಓ ಜಿನರಾಜನೇ ! ಮಲಗಿ ನಿದ್ರೆಯನ್ನು ಮಾಡಿ ಪ್ರಾತಃ ಕಾಲದಲ್ಲಿ ಎದ್ದು ಸೌಮ್ಯವಾದ ಮುಖವುಳ್ಳವನಾಗಿ ತನಗೆ ಒಳ್ಳೆಯದಾಗುವುದ ಕೊಸ್ಕರ ವpಂಗಳವಸ್ತುವನ್ನು ನೋಡಲೇಬೇಕೆಂಬುದು ಇರುವ ಪಕ್ಷದಲ್ಲಿ ಮೂರು ಲೋಕಗಳಲ್ಲಿರುವ ಸಕಲ ವಂಗಳಗಳಿಗೂ ವಾಸಸ್ಥಾನವಾದ ತಮ್ಮ ಮುಖಕ್ಕಿಂತಲೂ ಮತ್ಯಾವ ವಸ್ತುವು ಮಂಗಳಕರವಾದದ್ದು ? ಅಂದರೆ ವಂನುಷ್ಯನು ಪ್ರಾತಃಕಾಲದಲ್ಲಿ ಎದ್ದು ಸಕಲ ಜಗನ್ಮಂಗಲವಾದ ಜಿನರಾಜ ಮುಖಕಮಲದ ಸಂದರ್ಶನವನ್ನು ಮಾಡುವುದು ಸರ್ವೋತ್ಕೃಷ್ಟವಾದದ್ದೆಂದ ಭಿಪ್ರಾಯವು, ಮಂಗಳಾರ್ಥವಾಗಿ ಶ್ರೀ ಜಿನವಂಖಕಮಲವನ್ನು ಪ್ರತಿನಿತ್ಯವೂ ಪ್ರಾತಃಕಾಲದಲ್ಲಿ ನೋಡತಕ್ಕದ್ದೆಂದು ಶಾಸ್ತ್ರದಲ್ಲಿ ಹೇಳಲ್ಪಟ್ಟವಚನವು ಸ್ತೋತ್ರರೂಪವಾಗಿ, ಇದರಿಂದ ಹೇಳಲ್ಪಟ್ಟಿದೆ. ತ್ವಂಧರ್ಮೊದಯತಾಪಸಾಶ್ರಮಶುಕಸ್ಯಂಕಾವ್ಯಬಂಧಕನು | ದ. ಕ್ರೀಡಾನಂದನಕೊಕಿಲ ಮುಚಿತಃ ಶ್ರೀಮಲ್ಲಿಕಾಷಟ್ಟಿದಃ ||-ವಿದೆ ತ್ವಂಪುನ್ನಾಗಕಥಾರವಿಂದಸರಸೀಹಂಸವುಂಸಃ | ಕೈರ್ಭಪಾಲನಧಾರ್ಯಸೇಗುಣಮಣಿಗ್ರಜಾಲಿಭಿನರ್ಯೌಳಿಭಿಃ || | 20 || - 20. ತಾ|| ಓ ಜಗತ್ಪರಿಪಾಲಕರಾದ ಸ್ವಾಮಿಯೇ ! ತಾವು ಧರ್ಮದ ಉದಯವೆಂಬ ಮುನಿಗಳ ವಾಸಸ್ಥಾನಕ್ಕೆ ಗಿಣಿಯಂತಿರುವಿರಿ. ತಾವು ತಮ್ಮ ವಿಷಯವಾದ ಕಾವ್ಯರಚನೆಯೆಂಬ ಕ್ರಮವುಳ್ಳ ಆಟದಿಂದ ಆನಂದವನ್ನುಂಟು ವರಾಡುವ ಕೋಗಿಲೆಯಂತಿರುವಿರಿ. ತಾವು ಸಕಲಸಂಪತ್ತೆಂಬ ಮಲ್ಲಿಗೆ ಹೂವಿಗೆ ಭ್ರಮರದಂತಿರುವಿರಿ, ತಾವು ಪುರುಷಶ್ರೇಷ್ಠರ ಕಥೆಯೆಂಬ ಕಮಲ ಸರೋವರಕ್ಕೆ ಹಂಸಪಕ್ಷಿಯಂತಿರುವಿರಿ. ತಾವು ಯಾವ ಉತ್ತಮ ಪುರುಷರಿಂದ, ತಮ್ಮ ಗುಣಗಳೆಂಬ ರತ್ನ ಮಾಲಿಕೆಯುಳ್ಳ ಕಿರೀಟಾಲಂಕೃತವಾದ ಶಿರಸ್ಸುಗಳಿಂದ ಧರಿಸಲ್ಪಡುವುದಿಲ್ಲ ? ಅಂದರೆ ಸಮಸ್ತ ನರೇಂದ್ರ ಸುರೇಂದ್ರ ನಾಗೇಂದ್ರಾದಿ ಭಕ್ತಜನರ ಪುಸ್ತಕಗಳಿಂದಲೂ ತಮ್ಮ ಗುಣಮಣಿಮಾಲಿಕೆಯು ಆಭರಣ ಪ್ರಾಯವಾಗಿ ಧರಿಸಲ್ಪಡುತ್ತದೆಂದರ್ಥವು. ಜಿನೇಂದ್ರಗುಣಸ್ತುತಿಯೇ ರತ್ನ ವರಾಲಿಕೆಯಂತೆ ಎಂದು ಭಾವವು, ನ . 1 3
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy