SearchBrowseAboutContactDonate
Page Preview
Page 61
Loading...
Download File
Download File
Page Text
________________ 12 - ಪಂಚಸ್ತೋತ್ರ ಭಾವಪ್ರಕಾಶಿಕಾ ಹೂವು ಬಿಟ್ಟಂತಾಯಿತು. ತಮ್ಮ ಮುಖವೆಂಬ ಚಂದ್ರನನ್ನು ದರ್ಶನವರಾಡಿ ದುದರಿಂದ ಫಲವುಳ್ಳಂತಾಯಿತು. ಅಂದರೆ ಪೂರ್ವಜನ್ಮದಲ್ಲಿ ಮಹಾ ಪುಣ್ಯ ವನ್ನು ಸಂಪಾದಿಸಿರುವ ಆತ್ಮನಿಗೆ ಜಿನೇಂದ್ರರ ದರ್ಶನಾಭಿಲಾಷೆಯೂ, ಪ್ರಯಾಣವೂ, ದರ್ಶನವೂ ದೊರೆಯುತ್ತದೆಯೇ ಹೊರತು ಎಲ್ಲರಿಗೂ ಸಾವರಾನ್ಯವಾಗಿ ದೊರೆಯತಕ್ಕದ್ದಲ್ಲವೆಂದು ವೀತರಾಗ ಪರವರಾತ್ಮನ ದರ್ಶನ ಮಹಿಮೆಯು ತಿಳಿಸಲ್ಪಟ್ಟಿತು. .. ತ್ರಿಭುವನವನಪುಷ್ಟತುಷ್ಟ ಕೋದಂಡದರ್ಪ ಪ್ರಸರದವನವಾಂಭೋಮುಕ್ತಿಸೂಕ್ತಿಪ್ರಸೂತಿಃ || ಸಜಯತಿಜಿನರಾಜಾತಜೀಮತಸಂಘಃ 1c ಶತನಖಶಿಖಿನ್ನತ್ಯಾರಂಭನಿರ್ಬಂಧಬಂಧುಃ | 14 || 14. ತಾ|| ಕಾಡಿನಲ್ಲಿ ಕಾಡುಗಿಚ್ಚು ಹತ್ತಿಕೊಂಡು ಅಭಿವೃದ್ಧಿಯನ್ನು ಹೊಂದುವಂತೆ ಮರುಲೋಕವೆಂಬ ಕಾಡಿನಲ್ಲಿ ವ್ಯಾಪಿಸಿಕೊಂಡು ಸಂತಾಪ ಪಡಿಸುವ ಕಾಮನ ಗರ್ವವೆಂಬ ಕಾಡುಗಿಚ್ಚಿನ ವ್ಯಾಪನೆಯನ್ನು ಆರಿಸುವ ನೀರಿನರೀತಿಯಲ್ಲಿರುವ, ಮೋಕ್ಷಕ್ಕೆ ಕಾರಣವಾದ ಸದ್ಧರ್ಮೋಪದೇಶಕ್ಕೆ ಸ್ಥಾನ ವಾದ, ದೇವೇಂದ್ರನೆಂಬ ನಲಿವಿನ ನರ್ತನಕ್ಕೆ ಕಾರಣವಾದ ಜಿನರಾಜಸವಹ 'ವೆಂಬ ಮೇಘಸಮೂಹವು ಸರ್ವೋತ್ಕೃಷ್ಟವಾಗಿದೆ. ಅಂದರೆ ಮಳೆಗಾಲದ ಮೇಘವು ಜಲವನ್ನು ವರ್ಷಿಸಿ ಯಾವಪ್ರಕಾರ ಬೇಸಿಗೆಯ ಬಿಸಿಲಿನಿಂದ ಸಂತಪಿಸುತ್ತಿರುವ ಭೂಮಿಯ ಸಂತಾಪವನ್ನು ಹೋಗಲಾಡಿಸಿ ಈ ಜೀವ ಲೋಕವನ್ನು ಸಂರಕ್ಷಿಸುತ್ತದೆಯೋ ಹಾಗೆ ಜಿನೇಂದ್ರರು ಧರ್ಮೋಪದೇಶವನ್ನು ವರಾಡಿ ಸರ್ವ ಭವ್ಯಾತ್ಮರ ಸಂಸಾರದುಃಖಗಳನ್ನು ಪರಿಹರಿಸಿ ಮೋಕ್ಷವನ್ನೈದಿ ಸುತ್ತಾರೆಂದು ಭಾವವು. OSOS ಭೂಪಾಲಸ್ವರ್ಗಪಾಲಪ್ರಮುಖನರಸುರಶ್ರೇಣಿನೇತ್ರಾಳಿಮಾಲಾ | ಲೀಲಾಚೈತ್ಯಸ್ಯ ಚೈತ್ಯಾಲಯವವಿಲಜಗಮುದೀಂದೊರ್ಜಿನಸ್ಯ | ಉತ್ತ೦ಸೀಭೂತಸೇನಾಂಜಲಿ ಪುಟನಲಿನೀ ಕುಟ್ಟಲಃಪರೀತ್ಯ | ಶ್ರೀಪಾದಚ್ಚಾಯಯಾವಸ್ಥಿತಭವದವಫು:ಸಂತೋಸ್ಮಿವಮುಕ್ಕಿಂ ಈ | 15 | ಭೂಪಾಲಸ್ತೋತ್ರ 103 15. ತಾ! ಓ ಭಗವಂತನೇ ! ಭೂಮಿಯನ್ನು ಪರಿಪಾಲಿಸುವ ರಾಜರು ಮತ್ತು ಸ್ವರ್ಗವನ್ನು ಪರಿಪಾಲಿಸುವ ದೇವೇಂದ್ರ ಮುಂತಾದ ಮನುಷ್ಯರ ಮತ್ತು ದೇವತೆಗಳ ಕಣ್ಣುಗಳೆಂಬ ಭ್ರಮರಗಳ ಸಾಲಿಗೆ ಸ್ಥಾನ ವೆನಿಸಿದ, ಸಕಲಜಗತ್ತಿಗೆ ಬೆಳದಿಂಗಳನ್ನುಂಟುಮಾಡುವ ಜಿನರಾಜನೆಂಬ ಚಂದ್ರನಿಗೆ ಸ್ನಾನವೆನಿಸಿದ ಚೈತ್ಯಾಲಯವನ್ನು ತಲೆಗೆ ಅಲಂಕಾರಪ್ರಾಯವಾದ ಕಮಲದ ಮೊಗ್ಗಿನಂತಿರುವ ಮುಗಿದ ಕೈಗಳುಳ್ಳವನಾಗಿ ಮೂರು ಪ್ರದಕ್ಷಿಣೆ ಯನ್ನು ಮಾಡಿ ತಮ್ಮ ಶ್ರೀಪಾದದ ನೆರಳಿನಿಂದ ಸಮಸ್ತ ಸಂಸಾರ ಸಂತಾಪ ಗಳನ್ನು ದೂರಕ್ಕೆ ತಳ್ಳಿದವನಾಗಿ ಮೋಕ್ಷವನ್ನೇ ಪಡೆದನೋ ಎಂಬಂತೆ ಸಂತೋಷಿಸುತ್ತೇನೆ. ಅಂದರೆ ಜಿನಚೈತ್ಯಾಲಯಪ್ರದಕ್ಷಿಣ ನಮಸ್ಕಾರಪೂರ್ವಕ ವಾದ ಜಿನಪಾದ ದರ್ಶನಾನಂದವು, ಮೋಕ್ಷಸುಖ ಸಮಾನವೆಂದಭಿಪ್ರಾಯವು. ದೇವತ್ವದಂಘ್ರನಖಮಂಡಲದರ್ವಣೇ | ನೃರ್ತ್ಯನಿಸರ್ಗರುಚಿರೇಚಿರದೃಷ್ಟಿ ನಕ್ಕು | ಶ್ರೀ ಕಿರ್ತಿಕಾಂತಿಧೃತಿಸಂಗವಕಾರಣಾನಿ | ಭವ್ಯೂನಾನಿಲಭತೇಶುಭಮಂಗಲಾನಿ | 16 || > 16. ತಾ ಓ ಜಿನದೇವನೇ! ಜಗಜ್ಯವಾಗಿಯೂ, ಸ್ವಭಾವದಿಂದ ಕಾಂತಿಮಯವಾಗಿಯೂ, ಥಳಥಳಿಸುತ್ತಿರುವ ತಮ್ಮ ಪಾದಗಳಲ್ಲಿರುವ ಉಗುರುಗಳೆಂಬ ಮಂಡಲಾಕಾರವಾದ ಕನ್ನಡಿಯಲ್ಲಿ ಬಹಳಕಾಲ ಮುಖವನ್ನು ನೋಡಿಕೊಂಡ (ಶ್ರೀ ಜಿನೇಂದ್ರಪಾದಕಮಲಗಳನ್ನು ನಮಸ್ಕರಿಸಿದ)ಭವಾತ್ಮನು ಕೀರ್ತಿ ಕಾಂತಿ, ಮತ್ತು ಧೈರ್ಯ ಇವುಗಳ ಪ್ರಾಪ್ತಿಗೆ ಕಾರಣವಾದಂತಹ ಯಾವ ಶುಭಮಂಗಳಗಳನ್ನು ಹೊಂದುವುದಿಲ್ಲ ? ಸಮಸ್ತ ಮಂಗಳಗಳನ್ನೂ ಹೊಂದುತ್ತಾನೆಂದು ಭಾವವು, ದ. ಜಯತಿಸುರನರೇಂದ್ರಶ್ರೀಸುಧಾನಿರ್ರು ರಿಹ್ಯಾ: | ಕುಲಧರಣಿಧರೋಯಂಜೈನಚೈತ್ಯಾಭಿರಾಮಃ || ಪ್ರವಿಪುಲಫಲಧರ್ಮಾನೋಕಹಾಗ್ರಪ್ರನಾಳ | ಪ್ರಸರಶಿಖರಶುಂಭಕ್ಕೇತನಶ್ರೀನಿಕೇತಃ | || 17 || ಈ ಪಿಡಿ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy