SearchBrowseAboutContactDonate
Page Preview
Page 59
Loading...
Download File
Download File
Page Text
________________ ಪಂಚಕ್ಕೋತ ಭಾವಪ್ರಕಾಶಿಕಾ ದಾನ೦ಜ್ಞಾನಧನಾಯದತ್ತ ಮಸಕೃತ್ಪಾತ್ರಾಯಸದ ತ್ರಯೇ ಚೀರ್ಣಾಸುರತಸಾಂಸಿತೇನಸುಚಿರಂ ಪೂಜಾಶ್ಚ ಬಹ್ವಕೃತಾಃ | ಶೀಲಾನಾಂನಿಚಯಃ ಸಹಾಮಲಗುಹೈಃಸರ್ವಸ್ಪವಾಸಾದಿತೋ | ದೃಷ್ಟಂಜಿನಯೋನದೃಷ್ಟಿ ಸುಭಗಶ್ರದ್ದಾ ಪರೇಣಕ್ಷಣಂ | 6 || * 6, ತಾ|| ಓ ಜಿನೇಶ್ವರರೇ ! ಯಾವ ಭವಾತ್ಮನು ತಮ್ಮನ್ನು ಸ್ವಲ್ಪ ಕಾಲವಾದರೂ ಶ್ರದ್ದಾತಿಶಯದಿಂದ ದರ್ಶನ ವರಾಡುವನೋ ಅಂತಹ ಆತ್ಮನು ಸಮ್ಮಜ್ಞಾನ ದರ್ಶನ ಚಾರಿತ್ರಸಂಪನ್ನರಾದ ಮಹಾಮುನಿಗಳಿಗೆ ಆಹಾರ ದಾನವನ್ನು ಮಾಡಿದ ಮಹಾಪುಣ್ಯಕ್ಕೆ ಪಾತ್ರನಾದನೆಂದೂ, ಬಹುಕಾಲ ಉಗೊಗ್ರ ತಪಸ್ಸನ್ನು ಮಾಡಿದನೆಂದೂ, ತಮಗೆ ಬಹು ಪೂಜೆಯನ್ನು ಮೂಡಿದನೆಂದೂ, ದಯಾದಿ ಸಮಸ್ತ ಗುಣಗಳೊಡಗೂಡಿ ಉತ್ತಮ ಆಚಾರ ಸಂಪನ್ನನೆಂದೂ ತಿಳಿಯಬೇಕು. ಶ್ರದ್ಧಾಪೂರ್ವಕವಾದ ತಮ್ಮ ದರ್ಶನದಿಂದ ದಾನ, ಪೂಜಾ, ತಪಸ್ಸಿನ ಫಲವು ದೊರಕುತ್ತದೆಂದಭಿಪ್ರಾಯವು,ಂt ಪ್ರಜ್ಞಾ ಪಾರಮಿತಸ್ಸಏವಭಗರ್ವಾಪಾರಂಸಏವಶ್ರುತ 1 ) ಸಂಧಾಬೇರ್ಗುಣರತ್ನಭೂಷಣ ಇತಿಶ್ಲಾಘಸ್ಪಏವಧ್ರುವಂ | ನೀಯಂತೇಜಿನಯೇನಕರ್ಣ ಹೃದಯಾಲಂಕಾರಶಾಂತ್ಕದ್ದು ಹಾ! " ಸಂಸಾರಾಹಿವಿಷಾಪಹಾರಮಣಯ ಲೋಕ್ಯಚೂಡಾಮಣೇ // 7 // >> 7. ತಾ|| ಓ ಮೂರುಲೋಕಕ್ಕೂ ಕಿರೀಟಾಗ್ರರತ್ನದಂತಿರುವ ಜಿನನಾಥರೇ! ಸಂಸಾರವೆಂಬ ಸರ್ಪದವಿಷವನ್ನು ಪರಿಹರಿಸುವ ಮಣಿಯಂತಿರುವ ತಮ್ಮ ಗುಣಗಳನ್ನು ಯಾರು ಕಿವಿಯಿಂದ ಕೇಳಿ ಮನಸ್ಸಿನಲ್ಲಿ ಧರಿಸಿ ಧ್ಯಾನಿಸುವನಾಗಿ ಆನಂದ ಪಡುತ್ತಾನೋ ಅವನೇ ಜ್ಞಾನದ ಪಾರವನ್ನು ಹೊಂದಿದವನೆಂದೂ, ಶಾಸ್ತ್ರವೆಂಬಸಮುದ್ರದ ತೀರವನ್ನು ಹೊಂದಿದವನೆಂದೂ ಮತ್ತು ತಮ್ಮ ಗುಣ ಗಳೆಂಬ ರತ್ನಾಭರಣವುಳ್ಳವನೆಂದೂ ಶ್ಲಾಘಿಸುವುದಕ್ಕೆ ಯೋಗ್ಯನಾದವನು, ಇದು ನಿಶ್ಚಯ. ತಮ್ಮ ಗುಣಶ್ರವಣದಲ್ಲಿ ಶ್ರದ್ಧೆಯುಳ್ಳವನು ಲೋಕಶ್ಲಾಘ ನಂದಭಿಪ್ರಾಯವು. ಈ ಭೂಪಾಲಸ್ತೋತ್ರ ಜಯತಿದಿವಿಜಬೃಂದಾಂದೋಳಿರಿಂದುರೋಚಿ 15 ರ್ನಿಚಯರುಚಿಭಿರುಚೈಶ್ವಾನರೈರ್ವಿದ್ಯಮಾನಃ | ಪA ಜಿನಪತಿರನುರಜನ್ಮುಕ್ತಿಸಾಮ್ರಾಜ್ಯಲಕ್ಷ್ಮೀ / ಯುವತಿನವಕಟಾಕ್ಷೇಪಲೀಲಾಂದಧಾನೈಃ // 8 // 8. ತಾ|| ಚಂದ್ರಕಿರಣಗಳ ರಾಶಿಯಂತೆ ನಿರ್ಮಲವಾಗಿ ಥಳಥಳಿಸು ತಿರುವ ಮತ್ತು ಮೋಕ್ಷಸಾಮ್ರಾಜ್ಯಲಕ್ಷ್ಮಿಯೆಂಬ ಯವನಶಾಲಿಯಾದ ಸ್ತ್ರೀಯ ಹೊಸದಾದ ಪ್ರೇಮರಸವನ್ನು ಸುರಿಸುತ್ತಿರುವ ಕಡೆಗಣ್ಣ ನೋಟವೋ ಎಂಬಂತಿರುವ ದೇವತೆಗಳ ಗpಂಪಿನಿಂದ ಬೀಸಲ್ಪಡುತ್ತಿರುವ ಉನ್ನತಗಳಾದ ಚಾಮರಗಳಿಂದ ಯಾವ ಜಿನಪತಿಯು ಬೀಸಲ್ಪಡುತ್ತಾನೋ ಅಂತಹ ಅಂತರಂಗ ಬಹಿರಂಗ ಲಕ್ಷ್ಮೀಪತಿಯರಾದ ಶ್ರೀ ಜಿನಪತಿಯು ಸರ್ವೋತ್ಯಷ್ಟರಾಗಿದ್ದಾರೆ. ಇದರಿಂದ ಜಿನಪತಿಗೆ ಸರ್ವದೇವಾಧಿಕ್ಯವು ಹೇಳಲ್ಪಟ್ಟಿತು. ದೇವಃಶ್ವೇತಾತಪತ್ರತ್ರಯಚದುರಿರುಹಾಶೋಕಭಾಶ್ಚ ಕೃಭಾಷಾ / / ಪುಷ್ಘಾಸಾರಸಿಂಹಾಸನಸುರಪಟರಟ್ಟಿಭಿಃಪ್ರಾತಿಹಾರ್ಯ್ಕತಿ ಸಾಶ್ಚರ್ಯೋಬ್ರರ್ಾಜಮಾನಸ್ಸುರನನುಜಸಭಾಂಭೋಜಿನೀ ಭಾನುವಾಲೀ | ಪಾಯಾನ್ನತಿಪಾದಪೀಠೀಕೃತಸಕಲಜಗತ್ಪಾಲಾಳಿರ್ಜಿನೇಂದ್ರಃ // 9 // 9. 2 ತಾ|| ಮರು ಬಿಳಿಕೊಡೆಗಳಿಂದಲೂ, ದಿವ್ಯಚಾಮರಗ ಳಿಂದಲೂ, ಅಶೋಕವೃಕ್ಷದಿಂದಲೂ, ಭಾಮಂಡಲದಿಂದಲೂ ಏಕಕಾಲದಲ್ಲಿ ಸರ್ವಭಾಷಾಸ್ವರೂಪವಾಗಿ ಹೊರಡುತ್ತಿರುವ ದಿವ್ಯಧ್ವನಿಯಿಂದಲೂ, ದೇವತೆ ಗಳಿಂದ ವರ್ಷಿಸಲ್ಪಡುತ್ತಿರುವ ಪುಷ್ಪವೃಷ್ಟಿಯಿಂದಲೂ, ಸಿಂಹಾಸನದಿಂದಲೂ, ದೇವತೆಗಳ ಭೇರೀವಾದ್ಯಗಳಿಂದಲೂ (ಎಂಟಂಪಾತಿಹಾರ್ಯಗಳಿಂದ) ಪ್ರಕಾಶಿಸುತ್ತಿರುವ, ದೇವತೆಗಳಿಂದಲೂ ಮನುಷ್ಯರಿಂದಲೂ ತುಂಬಿರುವ ಸಮ ವಸರಣ ಸಭೆಯೆಂಬ ಕಮಲದ ಬಳ್ಳಿಗೆ ಸೂರ್ಯನಂತಿರುವ ಮತ್ತು ಸಮಸ್ತ ಲೋಕಪಾಲಕರ ಕಿರೀಟಗಳನ್ನು ಪಾದಪೀಠಗಳನ್ನಾಗಿ ವರಾಡಿರುವಂತಹ ಶ್ರೀ ಜಿನೇಂದ್ರರು ನಮ್ಮನ್ನು ರಕ್ಷಿಸಲಿ.
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy