________________ 97 ಪಂಚಸ್ತೋತ್ರ ಭಾವಪ್ರಕಾಶಿಕಾ 2. ತಾ|| ಓ ಜಿನರಾಜನೇ ! ತಮ್ಮ ಶರೀರವು ಶಾಂತವಾದದ್ದು. (ಪ್ರಾಣಿಗಳಿಗೆ ಶಾಂತವಾದ ಚಿತ್ರ ಪರಿಣಾಮವನ್ನುಂಟುಮಾಡುವಂತಹುದು). ತಮ್ಮ ದಿವ್ಯವಚನವು ಕಿವಿಗಳನ್ನ ಪಹರಿಸುವಂತಹುದು, (ಕರ್ಣಾನಂದಕರ ವಾದದ್ದು) ತಮ್ಮ ಚರಿತ್ರವು ಸರ್ವಪ್ರಾಣಿಗಳಿಗೂ ಉಪಕಾರವನ್ನು ಮಾಡು ವಂತಹುದು. ಆದುದರಿಂದಲೇ ಶಾಸ್ತ್ರವನ್ನು ತಿಳಿದಂತಹ ಮಹನೀಯರು ತಮ್ಮನ್ನು ಸಂಸಾರವೆಂಬ ನೀರು ನೆರಳಿಲ್ಲದ ಮರಳು ಕಾಡಿನಲ್ಲಿ ವಿಸ್ತಾರವಾದ ಮತ್ತು ದಟ್ಟವಾದ ನೆರಳುಳ್ಳ ಮರವನ್ನಾಗಿ ತಿಳಿದು ಸಂಸಾರ ದುಃಖಗಳನ್ನು ಪರಿಹರಿಸಿಕೊಳ್ಳುವುದಕ್ಕೋಸ್ಕರ ಆಶ್ರಯಿಸುತ್ತಾರೆ. ಸ್ವಾಮಿನ್ನ ದನಿನಿರ್ಗತೋಸ್ಮಿ ಜನನೀಗರ್ಭಾ೦ಧಕೂಪೋದರಾ | ದದ್ಯೋದ್ಘಾಟಿತದೃಷ್ಟಿ ರಸ್ಮಿಫಲವಜ್ಜನ್ಮಾಚಾದ್ಯಸ್ಸು ಟಂ, ತ್ಯಾವದ್ರಾಕ್ಷವಹಂಯದಕ್ಷಯಪದಾನಂದಾಯ ಲೋಕತ್ರಯಾ , ನೇತೇಂದೀವರಕಾನನೇಂದುಮುನ್ನುತಸ್ಯಂದಿಪ್ರಭಾಚಂದ್ರಿಕಂ || 3 || - 3. ತಾ|| ಓ ಸ್ವಾಮಿಯೇ! ಮೂರುಲೋಕದಲ್ಲಿರುವ ಪ್ರಾಣಿಗಳ ಕಣ್ಣು ಗಳೆಂಬ ಕನ್ನೈದಿಲೇ ಪುಷ್ಟಗಳ ಅರಣ್ಯ (ಸಮೂಹ) ಕ್ಕೆ ಚಂದ್ರರಾದಂತಹ ಅಮೃತವನ್ನು ವರ್ಷಿಸುತ್ತಿರುವ ಪ್ರಭೆಯೆಂಬ ಬೆಳದಿಂಗಳುಳ್ಳಂತಹ, ಅಂದರೆ ಅಮೃತದಂತೆ ಸರ್ವಂದ್ರಿಯಾನಂದಕರವಾದ ತಮ್ಮನ್ನು ನಿತ್ಯನಿರ್ಬಾಧವಾಗಿ ನಿರತಿಶಯರಾನಂದ ರೂಪವಾದ ಮೋಕ್ಷಕ್ಕೋಸ್ಕರ ದರ್ಶನವನ್ನು ಮಾಡಿದೆ ನಾದಕಾರಣ ಈಗ ನಾನು ತಾಯಿಯ ಗರ್ಭವೆಂಬ ಕತ್ತಲೆಯ ಬಾವಿಯಿಂದ ಈಚೆಗೆ ಬಂದೆನು. ಈಗ ತೆರೆಯಲ್ಪಟ್ಟ ಕಣ್ಣುಳ್ಳವನಾದೆನು. ಈಗ ಜನ್ಮವು ಸಫಲವಾಯಿತು, ನಿಶ್ಚಯವು, ಅಂದರೆ, ಈ ಚತುರ್ಗತಿಗಳಲ್ಲಿ ಆತ್ಮನು ಮೋಹಾಕ್ರಾಂತನಾಗಿ ಭೋಗರಸ ಪರವಶನಾಗಿ ಎಷ್ಟು ಕಾಲ ಎಷ್ಟು ದುಃಖಕರ ವಾದ ಜನ್ಮಗಳನ್ನೆತ್ತುತ್ತಾನೋ ಅಷ್ಟು ಜನ್ಮಗಳೂ ನಿಷ್ಪಲವೆಂದೂ ಯಾವ ಜನ್ಮದಲ್ಲಿ ಮಹಾ ಪುಣ್ಯವಿಶೇಷದಿಂದ ಶ್ರೀ ಜಿನೇಶ್ವರನ ಪೂಜಾಭಕ್ತಿ, ಸ್ತುತಿ ಗಳಲ್ಲಿ ಪ್ರವರ್ತಿಸುತ್ತಾನೋ ಆ ಜನ್ಮವೇ ಸಫಲವೆಂದೂ, ಅದೇ ಮೋಕ್ಷ ಯೋಗ್ಯವಾದ ಜನ್ಮವೆಂದೂ ತಾತ್ಪರ್ಯವು, ಜ 160 ಭೂಪಾಲಸ್ತೋತ್ರ ನಿಷಿದಶೇಂದ್ರಶೇಖರಶಿಖಾರತ್ನ ಪ್ರದೀಪಾವಳೀ | ಸಾಂದ್ರೀಭೂತಮೃಗೇಂದ್ರವಿಷ್ಟ ರತತೀಮಾಣಿಕ್ಯದೀಪಾವಳಿಃ ... ಕೈಯಂಶ್ರೀಃ ಕೈಚನಿಃಸ್ಪೃಹತ್ವವಿದಮಿತ್ತೂಹಾತಿಗಸ್ತಾದೃಶಃ | ಸರ್ವಜ್ಞಾನದೃಶಶ್ಚರಿತ್ರಮಹಿಮಾಲೋಕೇಶಿಕೋತ್ತರಃ ||4|| 4, ತಾ|| ಸರ್ವಜ್ಞರಾಗಿ ಸರ್ವವನ್ನೂ ಜ್ಞಾನದೃಷ್ಟಿಯಿಂದ ನೋಡು ತಿರುವ ಜಿನೇಂದ್ರರೇ ! ಓ ಜಗತ್ಪತಿಯೇ ! ಸಮಸ್ತ ದೇವೇಂದ್ರರ ರತ್ನ ಕಿರೀಟಗಳ ಶಿಖಾಮಣಿರತ್ನಪ್ರದೀಪಗಳ ಕಾಂತಿಪರಂಪರೆಯಿಂದ ವ್ಯಾಪ್ತವಾದ ಸಿಂಹಾಸನದ ಸುತ್ತಲೂ ಇರುವ ಮಾಣಿಕ್ಯದೀಪಗಳ ಪರಂಪರೆಯುಳ್ಳ ತಮ್ಮ ಈ ಸಂಪತ್ತೆಲ್ಲಿ ? ಈ ವೈರಾಗ್ಯವೆಲ್ಲಿ ?" ಎಂಬ ಈ ಊಹೆಯನ್ನು ಮೀರಿರುವ ತಮ್ಮಂತಹ ಸರ್ವಜ್ಞಾನದರ್ಶನವುಳ್ಳವರ ಚರಿತವರಾಹಾತ್ಮವು ಲೋಕದಲ್ಲಿ ಸರ್ವೋತ್ಕೃಷ್ಟವಾದದ್ದು. ರಾಜ್ಯ೦ಶಾಸನಕಾರಿನಾಕಪತಿಯ೦ತೃಣಾವಜ್ಞಯಾ 17 ಹೇಲಾನಿರ್ದಳಿತಿಲೋಕಮಹಿಮಾಯಣೋಹನಜಿತಃ // ... ಲೋಕಾಲೋಕಮಪಿಶ್ವಬೋಧಮುಕುರಸ್ಕಾಂತಃಕೃತಂಯಯಾ ಸೈಷಾಶ್ಚರ್ಯ ಪರಂಪರಾಜಿನವರಾತ್ರಸಂಭಾವ್ಯತೇ || 5 || 8: 5. ತಾ॥ ಓ ಜಿನಪತಿಯೇ ! ದೇವೇಂದ್ರನೇ ತಮ್ಮ ಆಜ್ಞಾಧಾರಕನಾಗಿ ವುಳ್ಳ (ಸ್ವರ್ಗಾಧಿಪತಿಯರಾದ ದೇವೇಂದ್ರನು ಸ್ವಾಮಿಯರಾದ ತಾವು ಯಾವುದನ್ನಾ ದರೂ ಆಜ್ಞಾಪಿಸಿದರೆ ಸಾಕು ತಾನು ಧನ್ಯನಾಗುತ್ತೇನೆಂದು ನಿರೀಕ್ಷಿಸಿರುವಂತಹ) ರಾಜ್ಯ ಸಂಪತ್ತನ್ನು ಹುಲ್ಲಿಗಿಂತಲೂ ಕಡೆಯನ್ನಾಗಿ ಎಣಿಸಿ ನಿರ್ವಾಣ ದೀಕ್ಷೆ ಯನ್ನಂಗೀಕರಿಸಿ ಮೋಹನೀಯಂ ಕರ್ಮವೆಂಬ ವಂಹಾ ವೀರನಾದ ಆತ್ಮಶತ್ತು, ವನ್ನು ಜಯಿಸಿ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ಪ್ರತಿಫಲಿಸಿ ಕಾಣು. ತಿರುವ ಲೋಕಾಲೋಕಗಳುಳ್ಳ ಕೇವಲಜ್ಞಾನವನ್ನೂ ಪಡೆದಿರಿ. ಈ ಆಶ್ಚರ್ಯಪರಂಪರೆಯು ತಮ್ಮಂತಹ ಜಿನನಾಥರನ್ನು ಬಿಟ್ಟು ಮತ್ಯಾರಲ್ಲಿ ಊಹಿಸಲು ಸಾಧ್ಯ ? ಎಲ್ಲಿಯೂ ಇಲ್ಲವೆಂದರ್ಥವು.. ಊಹಿಳಾಪರಂಪರೆಯಕೆಗಳುಳ್ಳ ಈ