SearchBrowseAboutContactDonate
Page Preview
Page 57
Loading...
Download File
Download File
Page Text
________________ | ಶ್ರೀ ಭೂಪಾಲಕವಿಪ್ರಣೀತಾ, - ಜಿನಚತುರ್ವಿಂಶತಿಕಾ ಭೂಪಾಲಸ್ತೋತ್ರಂ ಪಂಚಕ್ಕೋತ ಭಾವಪ್ರಕಾಶಿಕಾ 39. ತಾ|| ಓ ಅರ್ಹತ್ಪರಮೇಶ್ವರನೇ ! ನಾನು ಯಾವ ವರವನ್ನೂ ಕೇಳದಿದ್ದರೂ ನನಗೇನಾದರೊಂದು ವರವನ್ನು ಕೊಡಬೇಕೆಂದು ತಮಗೆ ಇಚ್ಛೆಯುಂಟಾದರೆ ನಾನು ತಡಮಾಡುವುದಿಲ್ಲ. ಆದರೆ ಆ ವರವು ಯಾವ ರಿ:ತಿಯಾಗಿರಬೇಕೆಂದರೆ ನನ್ನ ಬುದ್ದಿಯು ತಮ್ಮಲ್ಲಿಯೇ ಭಕ್ತಿರೂಪವಾಗಿ ಸೇರಿಕೊಂಡಿರಬೇಕು. ಹೇಗೆಂದರೆ, ಲೋಕದಲ್ಲಿ ಪ್ರಾಜ್ಞನಾದ ಯಾವನು ತಾನೇ ತನ್ನಿಂದ ಪೋಷಿಸಲ್ಪಡುವವನಿಗೆ ಶ್ರೇಯಸ್ಸನ್ನುಂಟುಮಾಡುವುದಿಲ್ಲ ? ತನ್ನ ಪೋಷ್ಯವರ್ಗದ ಪೋಷಣೆಯು ಪೋಷಿಸುವ ಪ್ರಭುವಿಗೆ ಆವಶ್ಯಕ ವಂದಭಿಪ್ರಾಯವು. ವಿತರತಿನಿಹಿತಾಯಥಾಕಥಂಚಿ ಜೈ ನವಿನತಾಯನುನೀಷಿತಾನಿಭಕ್ತಿಃ | ತೈಯಿನುತಿವಿಷಯಾ ಪುನರ್ವಿಶೇಷಾ . ದ್ವಿಶತಿಸುಖಾನಿಯಶೋ ಧನಂಜಯಂಚ || 40 || 40. ತಾ ಓ ಜಿನೇಶ್ಚರನೇ ! ತಮ್ಮ ಸ್ವರೂಪಸ್ವಭಾವ ಗುಣ ಮಹಿಮೆಯನ್ನರಿಯದೆ ಮಾಡಿದ ಭಕ್ತಿಯೂ ಕೂಡ ಭಕ್ತನಿಗೆ ಸಮಸ್ತ ಇಷ್ಟಾರ್ಥಗಳನ್ನು ಕೊಡುತ್ತದೆ. ತಮ್ಮಲ್ಲಿ ಸ್ತುತಿವಿಷಯವಾದ ಭಕ್ತಿಯನ್ನು ಮಾಡಿದ ಭಕ್ತನಿಗಾದರೋ ಆ ಭಕ್ತಿಯು ವಿಶೇಷವಾಗಿ ಇಹಪರಲೋಕಸುಖ ಗಳನ್ನೂ, ಯಶಸ್ಸನ್ನೂ, ಧನವನ್ನೂ ಮತ್ತು ಜಯವನ್ನೂ ಕೊಡುತ್ತದೆ. ಈ ಶ್ಲೋಕದಲ್ಲಿ "ಧನಂಜಯ” ಎಂದು ಕವಿಯ ನಾಮವು ಸೂಚಿಸಲ್ಪಟ್ಟಿದೆ. ಈ ಪ್ರಕಾರವಾಗಿ ಶ್ರೀ ಧನಂಜಯ ಮಹಾಕವಿಯು ವೀತರಾಗಪರಮಾತ್ಮ ಸೋತರೂಪವಾದ ವಿಷಾಪಹಾರ ಸ್ತೋತ್ರವನ್ನು ಭವ್ಯಾತ್ಮರ ಆತ್ಮಕಲ್ಯಾಣ ಕೊಸ್ಕರ ವರಾಡಿ ಸಮಸ್ತ ಭವ್ಯಾತ್ಮರಿಗೆ ಶ್ರೇಯಃ (ಜಯ) ಪ್ರಾರ್ಥನಾ ರೂಪವಾಗಿ ಮುದ್ರಿಸಿ ಪೂರ್ತಿಮಾಡಿರುತ್ತಾರೆ. | ಇತಿ ಶ್ರೀ ಧನಂಜಯಕವಿಕೃತಂ | | ವಿಷಾಪಹಾರ ಸ್ತೋತ್ರಂ | ಶ್ರೀಲೀಲಾಯತನಂನಹೀಕುಲಗೃಹಂಕೀರ್ತಿಪ್ರಮೋದಾಸ್ಪದಂ 1. ನಾಗೇವೀರಶಿಕೇತನಂಜಯರಮಾ ಕ್ರೀಡಾನಿಧಾನಂಮಹತ್ || ಸಾರ್ವಮಹೋತ್ಸವೈಕಭವನಂಯಃಪ್ರಾರ್ಥಿತಾರ್ಥಪ್ರದಂ | ಪ್ರಾತಃ ಪಶ್ಯತಿಕಲ್ಪ ಪಾದಪದಳಚ್ಛಾಯಂಜಿನಾಂಘ್ರದ್ವಯ೦ | 1 || - 1. ತಾ|| ಓ ಭವ್ಯಾತ್ಮಗಳಿರಾ ! ಯಾವ ಮನುಷ್ಯನು ಕಲ್ಪವೃಕ್ಷದ ಚಿಗುರಿನಂತೆ ಸುಕುಮಾರನಾಗಿ ಪ್ರಕಾಶಿಸುತ್ತಿರುವುದಾಗಿಯೂ, ಮುಕ್ತಿಲಕ್ಷ್ಮಿಯ ವಿಲಾಸಗೃಹವಾಗಿಯೂ, ಭೂಮಿಗೆ ಕುಲಗೃಹಪ್ರಾಯವಾಗಿಯೂ, (ಸಮಸ್ತ ಪ್ರಾಣಿಗಳೂ ಆಶ್ರಯಿಸುವುದಕ್ಕೆ ಯೋಗ್ಯವಾದ ಸ್ಥಾನವಾಗಿಯೂ) ಮತ್ತು ಕೀರ್ತಿ ಸಂತೋಷಗಳಿಗೆ ಮೂಲಾಧಾರವಾಗಿಯೂ, ಸರಸ್ವತೀದೇವಿಗೆ ಕ್ರೀಡಾ ಗೃಹವಾಗಿಯೂ, ಜಯಲಕ್ಷ್ಮಿಯ ಕ್ರೀಡೆಗೆ ಯೋಗ್ಯವಾದ ಸ್ಥಾನವಾಗಿಯೂ, ಸಮಸ್ತ ಇಷ್ಟಾರ್ಥಗಳನ್ನೂ ಕೊಡುವುದಾಗಿಯೂ, ಇರುವ ಶ್ರೀ ಜಿನೇಂದ್ರ ಪಾದಗಳನ್ನು ಯಾರು ಪ್ರಾತಃಕಾಲದಲ್ಲಿ ದರ್ಶನಮಾಡುತ್ತಾರೋ ಅಂತಹವರು ಸಮಸ್ತ ಶ್ರೇಯಸ್ಸು (ಮಂಗಳ)ಗಳಿಗೂ ಮುಖ್ಯಸ್ಥಾನರಾಗುವರು. ಈ ಶಾಂತಂವಪುಃಶ್ರವಣಹಾರಿವಚಶ್ಚರಿತ್ರಂ | ಮಾವು ಸರ್ವೋಪಕಾರಿತನದೇವತತಃಶುತಜ್ಞಾಃ // ಸಂಸಾರವಾರವನಹಾಸ್ಟಲರುಂದ್ರಸಾಂದ್ರ | ಬ್ಯಾಯಾಮಹೀರುಹಭವಂತನುಪಾಶ್ರಯಂತೇ || 2 || Subs *
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy