SearchBrowseAboutContactDonate
Page Preview
Page 56
Loading...
Download File
Download File
Page Text
________________ ಪಂಚಸೋತ ಭಾವಪ್ರಕಾಶಿಕಾ ಜನರುಗಳಿಗೆ ಪತಿಯಾದ ತಮ್ಮನ್ನು ಭವಭೀತನಾದ ನಾನು ರಕ್ಷಕರನ್ನಾಗಿ ಹೊಂದುತ್ತೇನೆ. ತ್ರೈಲೋಕ್ಯದೀಕ್ಷಾಗುರವೇನಮಸ್ತೆ ಯೋವರ್ಧಮಾನೋಪಿನಿನ್ನ ತೋಳೂತ್ | ಪ್ರಾಗ್ಧಂಡಶೈಲಃ ಪುನರದ್ರಿಕಲ್ಪ As ಪಶ್ಚಾ ಮೇರುಕುಲಪರ್ವಭೂತ್ || 36 || * 36. ತಾ|| ಓ ಜಿನೇಶ್ಚರರೆ ! ಯಾವ ಭಗವಂತನು ವೃದ್ಧಿ ಹೊಂದು ತಿರುವವರಾಗಿದ್ದರೂ, ಸ್ವಭಾವದಿಂದಲೇ ಉನ್ನತರಾಗಿ ಆದರೋ ಅಂದರೆ ಇದು ವಿರೋಧಾರ್ಥವು, ವರ್ಧವರಾನರೆಂದು ಕರೆಯಲ್ಪಡುವರಾಗಿಯೂ, ಸ್ವಭಾವದಿಂದಲೇ ಸರ್ವೋತ್ಕೃಷ್ಟರಾದವರೋ ಎಂದು ಸವರಾಧಾನಾರ್ಥವು. ಹೇಗೆಂದರ ಮೇರುಪರ್ವತವು ಮೊದಲು ಒಂದು ಗುಂಡು ಕಲ್ಲಾಗಿದ್ದು ಕ್ರಮೇಣ ವೃದ್ಧಿ ಹೊಂದಿ ಬೆಟ್ಟವೆನಿಸಿ, ಅನಂತರ ಎಲ್ಲಾ ಪರ್ವತಗಳಿಗೂ ರಾಜನಾದ ಕುಲಪರ್ವತವಾದದ್ದಲ್ಲ. ಸ್ವಭಾವದಿಂದ ಮೊದಲೇ ಕುಲಪರ್ವತ ವಾಗಿತ್ತಲ್ಲವೆ ? ಅದರಂತೆ ತಾವೂಕೂಡ ಸ್ವಭಾವದಿಂದಲೇ ವರ್ಧಮಾನರೆನಿಸಿ ಕೊಂಡವರೇ ಹೊರತು ಸ್ವಲ್ಪ ಸ್ವಲ್ಪವಾಗಿ ಜ್ಞಾನಾದಿಗಳ ವೃದ್ಧಿ ಹೊಂದಿ ವರ್ಧವರಾನರೆನಿಸಿಸಲಿಲ್ಲವೆಂದಭಿಪ್ರಾಯವು. ಅಂತಹ ವರಿರುಲೋಕಕ್ಕೂ ಮೋಕ್ಷದೀಕ್ಷೆಯನ್ನು ಕೊಡುವ ಗುರುವೇ ತಮಗೆ ನಮಸ್ಕಾರವು. ಸ್ವಯಂಪ್ರಕಾಶಸ್ಯ ದಿವಾನಿಶಾವಾ - ನಬಾಧ್ಯತಾಯಸ್ಯನಬಾಧಕತ್ವಂ || ನಲಾಘನಂಗೌರವಮೇಕರೂಪಂ ವಂದೇನಿಭುಂಕಾಲಕಲಾವತೀತಂ || 36 0. 37. ತಾ ಓ ಜಿನನಾಥರೇ ! ಸ್ವಯಂಪ್ರಕಾಶಸ್ವರೂಪರಾದ ಯಾವ ಭಗವಂತನಿಗೆ ಹಗಲು, ರಾತ್ರಿಗಳೆಂಬ ಭೇದವಿಲ್ಲವೋ, ಅಂದರೆ ಸಮಸ್ತ ಸಂಬಂಧವನ್ನೂ ತ್ಯಜಿಸಿ ಪರವರಾತ್ಮ ಭಾವವನ್ನು ಹೊಂದಿದ ತಮಗೆ ಹಸಿವು, ಬಾಯಾರಿಕೆ, ಶೋಕ, ಮೋಹ, ಭಯ, ತಂದೀ, ನಿದ್ರಾ, ಆಲಸ್ಯ, ಶಂಕಾ ಮೊದಲಾದ ದೇಹಧರ್ಮಗಳಾದ ದೋಷಗಳು ಯಾವುದೂ ಇಲ್ಲವಾದುದರಿಂದ ವಿಷಾಪಹಾರಸ್ತೋತ್ರ 93 ಹಗಲು ಮತ್ತು ರಾತ್ರಿಗಳೆಂಬೀಕಾಲಗಳಲ್ಲಿ ಲೋಕದ ಜನಗಳು ವರಾಡುವ ಯಾವ ಕೆಲಸವೂ ಇಲ್ಲವೆಂದರ್ಥವು. ಯಾವ ವೀತರಾಗಪರಮಾತ್ಮ ತತ್ವವಾದ ತಮ್ಮ ಕೇವಲಜ್ಞಾನವೆಂಬ ಪ್ರಕಾಶವು (ಲೋಕಾಲೋಕವನ್ನೆಲ್ಲಾ ಬೆಳಗುವು ದಾದ ತಮ್ಮ ಜ್ಞಾನಜ್ಯೋತಿಯು) ಅಗ್ನಿ, ಸೂರ್ಯ, ಚಂದ್ರಾದಿ ಜ್ಯೋತಿಷ್ಟು ಗಳಂತೆ ಯಾವುದನ್ನೂ ನಾಶಮಾಡುವುದಿಲ್ಲ. ತಾನೂಕೂಡ ಯಾವುದರಿಂದಲೂ ನಾಶವನ್ನು ಹೊಂದುವುದಿಲ್ಲ. ಹಾಗೆ ತಮ್ಮ ಜ್ಞಾನವೆಂಬ ಜ್ಯೋತಿಯು ಯಾವುದನ್ನೂ ಬಾಧಿಸುವುದೂ ಇಲ್ಲ. ಇತರ ಪದಾರ್ಥದಿಂದ ಬಾಧಿಸಲ್ಪಡು ವುದೂ ಇಲ್ಲ. ಗುರುತ್ವ ಲಘುತ್ವಗಳಿಲ್ಲದೆ ಯಾವಾಗಲೂ ಏಕರೂಪವಾಗಿರುವ ಮತ್ತು ಕಾಲಕಲಾಪ್ರಯುಕ್ತ ಬಾಲ್ಯ ಯೌವನವಾರ್ಧಕ್ಯಗಳೆಂಬೀದೇಹಪಿಂಡ ಸಂಬಂಧಿಯಾದ ಅವಸ್ಥೆಗಳನ್ನು ಅತಿಕ್ರಮಿಸಿರುವ, ಅಂತಹ ಸರ್ವವ್ಯಾಪಕ ತತ್ವವಾದ ತಮ್ಮನ್ನು ನಮಸ್ಕರಿಸುತ್ತೇನೆ, ಇತಿನ್ನುತಿಂದೇನವಿಧಾಯದೈನ್ಯಾ ದ್ವರಂನಯಾಚೇತ್ಸಮುಪೇಕ್ಷಕೋಸಿ ಛಾಯಾತರುಂಸಂಶ್ರಯತಃಸ್ವತಃಸ್ಕಾ ತ್ಯಶ್ರಾಯಯಾಯಾಚಿತಯಾತ್ಮಲಾಭಃ | 38 | 38. ತಾ|| ಓ ಪರಮಾತ್ಮನೇ ! ಈ ಪ್ರಕಾರ ಸ್ತೋತ್ರವನ್ನು ಮಾಡಿ ಇಹಪರಸುಖದಾಯಕವಾದ ಯಾವವರವನ್ನಾದರೂ ಕೊಡಬೇಕೆಂದು ದೀನ ವೃತ್ತಿಯಿಂದ ತಮ್ಮಲ್ಲಿ ನಾನು ಬೇಡಿಕೊಳ್ಳುವುದಿಲ್ಲ. ವರವನ್ನು ಕೊಡುವಿ ರೆಂದರೆ ತಾವು ವೀತರಾಗರಾಗಿದ್ದೀರಿ. ಆದರೆ ಬಿಸಿಲಿನಲ್ಲಿ ಬಳಲಿದವನು ಮರದ ನರಳಿನಲ್ಲಿ ಕುಳಿತುಕೊಳ್ಳುವುದರಿಂದ ಕೇಶ ಪರಿಹಾರವಾಗುತ್ತದೆ. ಆ ಮರದ ನೆರಳನ್ನು ಬೇಡಿಕೊಂಡರೆ ಯಾವ ಫಲವು ಲಭಿಸುವುದು? ಸುಖವು ತಾನಾಗಿಯೇ ಉcಟಾಗುತ್ತದೆ. ಅದರಂತೆ ಆಶ್ರಿತರ ದುಃಖಪರಿಹಾರವು ತಮ್ಮನ್ನು ಶರಣರ ನ್ನಾಗಿ ತಿಳಿದು ಹೊಂದುವುದರಿಂದಲೇ ಆಗುತ್ತದೆಂದಭಿಪ್ರಾಯವು. ಅಥಾದಿತ್ತಾಯದಿವೋಹರೋಧ ಹೈವಸಕ್ಷಾಂದಿಶಭಕ್ತಿಬುದ್ದಿ೦1 ಕರಿಷ್ಯತೇದೇವತಥಾಕೃಪಾಂನ ಕೊವಾತ್ಮ ಪೋಷ್ಯಸುಮುಖೋನಸೂರಿಃ // 39 ||
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy