SearchBrowseAboutContactDonate
Page Preview
Page 55
Loading...
Download File
Download File
Page Text
________________ 1 ಪಂಚಸ್ತೋತ್ರ ಭಾವಪ್ರಕಾಶಿಕಾ 31, ತಾ|| ಓ ಗುಣರತ್ನಾಕರನ ! ತಮ್ಮ ಅನಂತ ಜ್ಞಾನಾದಿಗುಣಗಳು ಗಂಭೀರವಾದವುಗಳು (ತಿಳಿಯಲಶಕ್ಕಗಳು) ಸರ್ವೋತ್ಕೃಷ್ಟಗಳು, ಶಾಂತ ವಾದವುಗಳು, ನಾನಾಪ್ರಕಾರಗಳು, ಅನೇಕಗಳು, ಹೀಗೆ ಸ್ತುತಿಸುವುದೇ ತಮ್ಮ ಗುಣಸ್ತುತಿಯಲ್ಲಿ ಕೊನೆಯ ಭಾಗವಾಗಿ ಕಾಣುತ್ತದೆ. ಇದಕ್ಕಿಂತಲೂ ತಮ್ಮ ಗುಣಗಳ ಹೊಗಳುವಿಕೆಯು ಬೇರೆಯಾವುದೂ ಇಲ್ಲವಷ್ಟೆ ? ಸ್ತುತ್ಯಾ ಪರಂನಾಭಿಮತಂಹಿಭಕ್ಕಾಗಿ ಸ್ಮತ್ಯಾ ಪ್ರಣತ್ಯಾಚತತೋಭಜಾನಿ | 05, ಸ್ಮರಾಮಿದೇವಂಪ್ರಣಮಾಮಿನಿತ್ಯಂ ಕೇನಾಪ್ಪುಪಾಯೇನ ಫಲಂಹಿಸಾಧ್ಯಂns | 32 || 32. ತಾ|| ಓ ಜಿನಪರವೇಶ್ವರರೇ ! ತಮ್ಮ ಸೂತ್ರದಿಂದಲೂ ಭಕ್ತಿಯಿಂದಲೂ, ಸದಾ ಸ್ಮರಣೆಯಿಂದಲೂ, ನಮಸ್ಕಾರದಿಂದಲೂ ಬೇರೆ ಯಾವ ಇಷ್ಟಫಲವನ್ನೂ ನಾನು ಪಡೆಯುವುದಿಲ್ಲ. ಲೋಕದಲ್ಲಿ ಸಾಧನವಿಲ್ಲದೆ ಫಲವು ಸಿದ್ದಿ ಸಂವುಲಿಲ್ಲವಾದುದರಿಂದ ಆ ತಮ್ಮ ಸ್ತೋತ್ರಾದಿಗಳನೇ ಸಾಧನ ವನ್ನಾಗಿಟ್ಟುಕೊಂಡು ಅತೀಂದ್ರಿಯ ಸುಖರೂಪವಾದ ಫಲವನ್ನು ಪಡೆಯು ವೆನು. ತತಸ್ತ್ರಿಲೋಕೀನಗರಾಧಿದೇವಂ ನಿತ್ಯಂಪರಂಜೋತಿರನಂತಶಕ್ತಿಂ | ಅಪುಣ್ಯಪಾಪಂಪರಪುಣ್ಯ ಹೇತುಂ ನಮಾಮ್ಯಹಂವಂದ್ವವಂದಿತಾರಂ 11, 1 33 | 33. ತಾ|| ಓ ವೀತರಾಗದೇವನೇ ! ಹಿಂದೆ ಹೇಳಿದಂತೆ ತಮ್ಮ ಸ್ತೋತ್ರಾದಿಗಳೇ ಸಾಧನವಾಗಿರುವುದರಿಂದ ಮೂರುಲೋಕವೆಂಬ ಪಟ್ಟಣಕ್ಕೆ ಅಧಿಪತಿಯಾಗಿಯೂ ನಿತ್ಯರಾಗಿ, ಪರಂಜ್ಯೋತಿಸ್ವರೂಪರಾಗಿಯೂ, ಅನಂತಶಕ್ತಿಯುಳ್ಳವರಾಗಿಯೂ, ಪಣ್ಯಪಾಪಗಳೆರಡೂ ಇಲ್ಲದವರಾಗಿಯೂ, ಸೇವೆವರಾಡುವ ಭವಾತ್ಮರಪುಣ್ಯಕ್ಕೆ ಕಾರಣಭೂತರಾಗಿಯೂ, ಸಮಸ್ತರಿಂದಲೂ ನಮಸ್ಕರಿಸಲ್ಪಡತಕ್ಕವರಾಗಿಯ, ಯಾರಿಗೂ ನಮಸ್ಕಾರವನ್ನು ವರಾಡದವ ವಿಷಾಪಹಾರಸ್ತೋತ್ರ ರಾಗಿಯೂ, ಇರುವ ತಮ್ಮನ್ನು ನಾನು ನಮಸ್ಕರಿಸುತ್ತೇನೆ. ಇಷ್ಟುಗುಣ ವುಳ್ಳವರೇ ನಿಜವಾದ ದೇವರೆಂದಭಿಪ್ರಾಯವು. ಅಶಬ್ದ ಮಸ್ಪರ್ಶವರೂಪಗಂಧಂ ? ತ್ಯಾಂನೀರಸಂತದ್ವಿಷಯಾನಬೋಧಂ 1ಗು ಸರ್ವಸ್ಯಮಾತಾರನನೇಯಮಸ್ಯೆ * ಜಿನೇಂದ್ರನುಷ್ಕಾರ್ಯವನುಸ್ಮರಾಮಿ || 34 || ( 34, ತಾ|| ಓ ಜಿನೇಂದ್ರರೇ ! ಈ ಪ್ರತ್ಯಕ್ಷ ಸಿದ್ದವಾದಂತಹ ಪೃಥಿವೀ ಜಲ ತೇಜಸ್ಸು ವಾಯು ಆಕಾಶ ರೂಪಗಳಾದ ಜಡವಸ್ತುಗಳಂತ ಶಬ್ದ ಸ್ಪರ್ಶ ರೂಪಗಂಧರಸಗಳcಬ ಪಂಚೇಂದ್ರಿಯಗಳಿಂದ ತಿಳಿಯಲ್ಪಡುವ ಗುಣಗಳಿಲ್ಲದವ ರಾಗಿಯೂ, ಕೇವಲಜ್ಞಾನವೇ ಆಕಾರವಾಗಿವುಳ್ಳವರಾಗಿಯೂ, ಸರ್ವಜ್ಞ ರಾಗಿಯ, ಮಢರಿಂದ ತಿಳಿಯಲಶಕ್ಯವಾದ ಪರತತ್ವಸ್ವರೂಪರಾಗಿಯೂ ಇರುವ ತಮ್ಮನ್ನು ಸ್ಮರಿಸುವದಕ್ಕಶಕ್ಕಸ್ವರೂಪರಾಗಿದ್ದರೂ ಹೆಜ್ಜೆ ಹೆಜ್ಜೆಗೂ ಸ್ಮರಿಸುತ್ತೇನೆ. ವೀತರಾಗಪರಮಾತ್ಮನ ಪರಿಶುದ್ದ ಸ್ವರೂಪವು ಜಗದ್ವಿಲಕ್ಷಣ ಎಂದಭಿಪ್ರಾಯವು. ಅಗಾಧಮನೈರ್ಮನಸಾಷ್ಕಲಂಫ್ಯಂ ನಿಷಿಂಚನಂಪ್ರಾರ್ಥಿತನರ್ಥವದ್ಧಿಃ | ವಿಶ್ವಸ್ಯ ಪಾರಂತಮದೃಷ್ಟ ಪಾರಂ ಪತಿಂಜಿನಾನಾ೦ಶರಣಂವಜಾಮಿ 35. ತಾ|| ಸ್ವಾಮಿಯೇ ! ಅಪರಿಚ್ಛಿನ್ನ ಜ್ಞಾನಾನಂದಸ್ವರೂಪ ಪರಿ ಶುದ್ದ ಪರಮಾತ್ಮನೆನಿಸಿ ಅನಂತಜ್ಞಾನಾಡಿ ಪರಿಪೂರ್ಣಪರತತ್ವವಾದುದರಿಂದ ಕೊನೆಗಾಣಲಶಕ್ಯರಾದ ಕರ್ಮಬದ್ದರಾದ ಸಂಸಾರಿ ಆತ್ಮಗಳಿಂದ ಮನಸ್ಸಿ ನಿಂದಲೂ ದಾಟಲಸಾಧ್ಯವಾದ, ದೇಹದೇಹಾನುಬಂಧಿಗಳಾದ ಸಮಸ್ತವನ್ನೂ ಪರಿತ್ಯಜಿಸಿದ ವೈರಾಗ್ಯನಿಧಿಯಾದ, ತತ್ಯಾರ್ಥವನ್ನು ತಿಳಿದವರಿಂದ ಪ್ರಾರ್ಥಿ ಸಲ್ಪಡತಕ್ಕ, ಮೋಕ್ಷಾಪೇಕ್ಷಿಗಳಾಗಿ ಹೇಯೋಪಾದೇಯ ವಿವೇಕಜ್ಞಾನವುಳ್ಳವ ರಿಂದ ತಿಳಿಯಲ್ಪಡತಕ್ಕ ಅರ್ಥಗಳಲ್ಲಿ ಕೊನೆಯ ಅರ್ಥವಾದ, ಲೋಕಾಗ್ರದಲ್ಲಿ ಸ್ಥಿತಿಯುಳ್ಳ, ಯಾರಿಂದಲೂ ತಿಳಿಯಲಾಗದ ಎಲ್ಲೆಯುಳ್ಳ, ಏಕದೇಶ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy