________________ ಪಂಚಸ್ಮತ್ರ ಭಾವಪ್ರಕಾಶಿಕಾ 28. ತಾ|| ಓ ವೀತದ್ದಾಗನೇ 1 ಶ್ರೇಷ್ಠವಾದ ಮಾತಿನಚತುರರು ರಾಗ, ದ್ವೇಷ, ಕ್ರೋಧ, ಲೋಭ, ಮಾನ, ಮಾಯಾರೂಪಗಳಾದ ಕಷಾಯಗಳಿಂದ ದಹಿಸಲ್ಪಟ್ಟ (ಕಲುಷಿತಮನಸ್ಸುಳ್ಳ) ದೇವತಾಂತರಗಳನ್ನೂ ಕೂಡ ದೇವರೆಂದು ಹೇಳುತ್ತಾರೆ. “ದೀವ್ಯತೀತಿದೇವಃ” ಎಂಬ ವ್ಯುತ್ಪತ್ತಿಯಿಂದ ದೇವ ಎಂಬ ಶಬ್ದಕ್ಕೆ ಪ್ರಕಾಶಿಸುವವನು ಎಂದರ್ಥವಾಗುತ್ತದೆ, ಯಾವವನ್ನು ಸುಟ್ಟು ಹೋಗುತ್ತದೋ ಅದು ಪ್ರಕಾಶಿಸುವದಿಲ್ಲವಷ್ಟೆ ? ಹೇಗೆಂದರೆ, ಲೋಕದಲ್ಲಿ ಎಣ್ಣೆ ಬತ್ತಿಗಳೆರಡೂ ಉರಿದು ಆರಿ ಹೋದದೀಪವು ಪ್ರಕಾಶಿಸುವದಿಲ್ಲ, ಆ ದೀಪದಪಾತ್ರವಾದರೂ ದಹಿಸಲ್ಪಡದೇ ಇರುವುದರಿಂದ ಮಂಗಳರೂಪ ವಾಗಿಯೇ ಕಾಣುತ್ತದೆ. ದೀಪದಪಾತ್ರೆಯಲ್ಲಿ ಎಣ್ಣೆ ತೀರಿಹೋಗಲು ದಹಿಸಲ್ಪಟ್ಟ ಬತ್ತಿಯಂ ಕರಗೆ ಕಾಣುವುದೇ ಹೊರತು, ಪ್ರಕಾಶಿಸುವದಿಲ್ಲ. ಹಾಗೆಯೇ ಎಣ್ಣೆಯಂತಿರುವ ರಾಗಾದಿಗಳಿಂದ ಬತ್ತಿಯಂತೆ ದಹಿಸಲ್ಪಟ್ಟ ಮನಸ್ಸುಳ್ಳ ಆತ್ಮನು ದೇವಶಬ್ದಕ್ಕೆ ಅರ್ಥವಾಗುವುದಿಲ್ಲವೆಂದಭಿಪ್ರಾಯವು, ವಿಷಾಪಹಾರಸ್ತೋತ್ರ ದುಃಸ್ವರವುಳ್ಳವನಾದರೂ ಜ್ವರದಿಂದ ಬಿಡಲ್ಪಟ್ಟ ಮೇಲೆ ಒಳ್ಳೇ ಸ್ವರ ದೊಡನೆ ಕೂಡುತ್ತಾನಲ್ಲವೆ ? ಹಾಗೆಯೇ ವ್ಯವಹಾರ ನಯದಿಂದ ತಮ್ಮ ಸಿದ್ಧಾಂತದಲ್ಲಿ ಮೊದಲು ವಿರೋಧವನ್ನು ಶಂಕಿಸುವವನು ನಿಶ್ಚಯ ನಯದಿಂದ ಸವರಾಧಾನವನ್ನು ಹೊಂದುವನೆಂದು ಭಾವವು. ನಕ್ಕಾಪಿವಾಂಛಾವವೃತೇಚನಾಕ್ಕೆ ಕಾಲೇಕ್ವಚಿತ್ತೋಪಿತಥಾನಿಯೋಗಃ | ಪಂಜು ನ ಪೂರಯಾದ್ಯಂಬುಧಿಮಿತ್ಯುದಂಶುಃ | ಸ್ವಯಂಹಿಶೀತದು ತಿರಭುದೇತಿ || 30 || - - 30. ತಾ॥ ಓ ವೀತರಾಗಪರಮಾತ್ಮನೇ ! ತಮಗೆ ಯಾವುದರಲ್ಲಿಯ ಇಚ್ಚೆಯಿಲ್ಲವಾದುದರಿಂದ ತಮ್ಮ ವಾಣಿಯು ಯಾವ ಇಚ್ಛಾ ವಿಷಯದಲ್ಲಿಯೂ ಪ್ರವರ್ತಿಸುವುದಿಲ್ಲ. ಹಾಗೆಯೇ ಯಾವ ಕಾಲದಲ್ಲಿ, ಯಾವ ವಿಷಯ ದಲ್ಲಿಯೂ ತಮ್ಮ ಆಪ್ಪಣೆಯು ಉಂಟಾಗುವುದಿಲ್ಲ. ಅಂದರೆ ಈ ಭಕ್ತನರಿ ಪುಣ್ಯಕೆಲಸವನ ವರಾಡಿದುದರಿಂದ ನಾನು ಇವನ ಇಷ್ಟಾರ್ಥವನ್ನು ಪೂರ್ತಿ ಮಾಡುತ್ತೇನೆಂದು ಮನಸ್ಸಿನಲ್ಲಿ ಮಾಡಿಕೊಂಡು ಫಲವನ್ನು ಕೊಡುವುದಿಲ್ಲ. ಕಿರಣಗಳಿಂದ ಆಕಾಶವನ್ನೂ ಭೂಮಿಯನ್ನೂ ಬೆಳಗುವವನಾಗಿ ಉದಯಿಸುವ ಚಂದ್ರನು ಸಮುದ್ರವನ್ನು ಹೆಚ್ಚಿಸುತ್ತೇನೆ (ಉಕ್ಕುವಂತೆ ಮಾಡುತ್ತೇನೆ) ಎಂಬುದಾಗಿ ಮನಸ್ಸಿನಲ್ಲಿ ವಾಡಿಕೊಂಡು ಉದಯಿಸುವುದಿಲ್ಲವಷ್ಟೆ ? ಚಂದ್ರೋದಯವಾದೊಡನೆ ಸಮುದ್ರ ಹೆಚ್ಚುವುದು ವಸ್ತುಸ್ವಭಾವವು, ಅದ ರಂತೆ ದಾನಪೂಜಾತಪಸ್ಸು ವ್ರತಮುಂತಾದ ಧರ್ಮಾಚರಣೆಯಿಂದುಂಟಾಗುವ ಸುಕೃತವೇ ತಮ್ಮ ಭಕ್ತರಿಗೆ ನರೇಂದ್ರ ಸುರೇಂದ್ರ ನಾಗೇಂದ್ರಾದಿ ಪದವಿಯನ್ನು ಕೊಡುತ್ತದೆಂದಭಿಪ್ರಾಯವು. ಗುಣಾಗಭೀರಾಃ ಪರಮಾಃ ಪ್ರಸನ್ನಾ ಬಹುಪಕಾರಾಬಹವಸ್ತ್ರವೇತಿ | ದೃಷ್ಟೊಯಮಂತಃಸ್ತವನೇನತೇಷಾಂ ಗುಹೋಗುಣಾನಾಂಕಿನತಃಪರೋಸ್ತಿ | 31 | - - ನಾನಾರ್ಥವಕಾರ್ಥವಾದದುಕ್ತಂ ಹಿತವಚಸ್ತೀನಿಶಮಯ್ಯನಕ್ಕು: ಧS 95 ನಿರ್ದೋಷತಾಂಕೇನ ವಿಭಾವಯಂತಿ - ಜ್ವರೇಣಮುಕ್ತ ಸುಗಮಃಸ್ವರೇಣ 5 ಕಸದ ರೇಣ | 29 || 29, ತಾ|| ಓ ಅನೇಕಾಂತವಾದ ಸ್ಥಾಪಕರೆ ! ತಾವು ಈ ಜಗತ್ತನ್ನು ಆಪೇಕ್ಷಿಕ (ವ್ಯವಹಾರ) ನಯದಿಂದ ಅಂದರೆ ಗುಣಪರ್ಯಾಯ ದೇಶಕಾಲಾದಿಗಳನ್ನ ಪೇಕ್ಷಿಸಿ ನಾನಾತ್ವವುಳ್ಳದ್ದಾಗಿಯೂ, ಶುದ್ದ ನಯದಿಂದ ಸಮಸ್ತ ವಸ್ತು ವನ್ನೂ ಏಕತ್ವವುಳ್ಳದ್ದಾಗಿಯ ಯಾವ ಅನೇಕಾಂತ ತತ್ರೋಪದೇಶವನ್ನು ಮಾಡಿದಿರೋ ಆ ಉಪದೇಶವನ್ನು ಕೇಳಿದೊಡನೆ ಒಂದು ವಸ್ತುವಿನಲ್ಲಿ ನಾನಾ ತ್ವವೂ ಏಕತ್ವವೂ ಒಂದೇ ಕಾಲದಲ್ಲಿ ಹೇಗೆ ಸಂಭವಿಸುವುದೆಂದು ಪೂರ್ವಾಪರ ವಿರೋಧವು ತೋರಿದರೂ ಸ್ಮಾದಪ್ರಿಸ್ಕಾನ್ನಾಸೀತ್ಯಾದಿಸಪ್ತಭಂಗಿ ನ್ಯಾಯ ಗರ್ಭಿತವಾದ ತಮ್ಮ ಹಿತವಚನವನ್ನು ವಿಚಾರವಾಡಿ ನೋಡಲು ಯಾರು ತಾನೇ ನಿರ್ದೋಷವನ್ನಾಗಿ ತಿಳಿಯುವುದಿಲ್ಲ? ಎಲ್ಲರೂ ತಿಳಿಯುತ್ತಾರೆಂದರ್ಥವು ಹೇಗೆಂದರೆ :- ಲೋಕದಲ್ಲಿ ಮನುಷ್ಯನು ಜ್ವರದಿಂದ ಪೀಡಿತನಾಗಿರುವಾಗ