________________ ಪಂಚಸ್ತೋತ್ರ ಭಾವಪ್ರಕಾಶಿತಾ 24, ತಾ|| ಓ ಜಿವರಾಜನೇ ! ಮೋಹವೆಂಬ ವೀರನು ಮೂರು ಲೋಕವನ್ನೂ ಆಕ್ರಮಿಸಿ ಜಯಭೇರಿಯನ್ನು ಹೊಡಿಸಿಕೊಂಡನು. ಅಂದರೆ ಮೂರು ಲೋಕದಲ್ಲಿರುವ ಸರ್ವಪ್ರಾಣಿಜಾಲವೂ ಮೋಹವಶ್ಯವೆಂಬ ಪ್ರಸಿದ್ದಿಯೇ ಜಯಭೇರಿಯನ್ನು ಹೊಡಿಸಿಕೊಂಡಹಾಗೆಂದು ಭಾವವು. ಆ ಮೋಹದಿಂದ ದೇವರುಗಳು ಅಸುರಕುಮಾರರು ಕೂಡ ತಿರಸ್ಕರಿಸಲ್ಪಟ್ಟರು. ಅಂದರೆ ಅವರೂ ಕೂಡ ಭೋಗಪರವಶರಾದರೆಂದರ್ಥವು. ಆ ಹರಾಜ ನಿಗೆ ಆ ಪ್ರಸಿದ್ದಿಯೇ ಮಹಾಲಾಭವು. ಆದರೆ ಪ್ರಬಲರಾದ ತಮ್ಮಲ್ಲಿ ವಿರೋಧ ಮಾಡಿ ಸವಲನಾಶವನ್ನು ಹೊಂದಿದ ಆ ಮೋಹರಾಜನ ಅಜ್ಞಾನವನ್ನು ಎ ಹೇಳಿದರೂ ತೀರದು. ಬಲವಂತರಲ್ಲಿ ವಿರೋಧಮಾಡುವುದು ಮೂಲ ನಾಶಕ್ಕೆ ಕಾರಣವಲ್ಲವೇ ? ಸ್ವಾಮಿಗೆ ಯಾವ ಅಜ್ಞಾನವೂ ಇಲ್ಲವೆಂದು ಭಾವವು. ಮಾರ್ಗಸ್ಕೃಯ್ಕೆ ಕೊದದೃಶೇವಿಮುಕ್ತ ಶ್ರ ತುರ್ಗ ತೀನಾಂಗಹನಂಪರೇಣ | ಸರ್ವ೦ನಯಾದೃಷ್ಟ ಮಿತಿಸ್ಮಯೇನ ತ್ವಂಮಾಕದಾಚಿದ್ದು ಜನಾಲಲೋಕೇವ | 25 || 25. ಓ ವೀತರಾಗ ಪರಮಾತ್ಮನೇ ! ತಾವು ಮೋಕ್ಷಕ್ಕೆ ಮುಖ್ಯ ಕಾರಣವಾದ ವಾರ್ಗವನ್ನು ನೋಡಿದಿರಿ. ರಾಗಾಕ್ರಾಂತವಾದ ಇತರ ಆತ್ಮ ಗಳು ನರಸುರ ತಿರಿಯಜ್ಜರಕ ಗತಿಗಳೆಂಬ ಮಹಾರಣ್ಯವನ್ನು ನೋಡಿದರು. ಈ ಪ್ರಕಾರ ಇತರರಿಗೆ ಸಾಧಾರಣವಲ್ಲದ ಮೋಕ್ಷವರಾರ್ಗವನ್ನು ತಾವು ನೋಡಿ ದವರಾಗಿದ್ದರೂ ಗರ್ವದಿಂದ ಯಾವಾಗಲೂ ತಮ್ಮ ಭುಜವನ್ನು ನೋಡಿ ಕೊಂಡವರಲ್ಲ, ಅಂದರೆ ಲೋಕದಲ್ಲಿ ಯಾವುದಾದರೊಂದು ಹೊಸ ವಿಷಯಂ ವನ್ನು ನೋಡಿದವನು ಗರ್ವದಿಂದ ತನ್ನ ತೋಳುಗಳನ್ನು ನೋಡಿಕೊಂಡು ಜಗತ್ತಿನಲ್ಲಿ ತನ್ನ ಸಮಾನ ಚತುರರಿಲ್ಲವೆಂದು ಗರ್ವದಿಂದ ಹಿಗ್ಗುವುದುಂಟು, ಹಾಗೆ ತಾವು ಇತರರಿಗೆ ಅಸಾಧ್ಯವಾದ ಮೋಕ್ಷಮಾರ್ಗವನ್ನು ನೋಡಿದವ ರಾಗಿದ್ದರೂ ನಾನು ಇಂತಹ ಮಹಿಮೆಯುಳ್ಳವನೆಂದು ಯಾವಾಗಲೂ ಗರ್ವ ಪಡಲಿಲ್ಲವೆಂದಭಿಪ್ರಾಯವು. ವಿಷಾಪಹಾರಸ್ತೋತ್ರ - ಸ್ವರ್ಭಾನುರರ್ಕಸ್ಯ ಹವಿರ್ಭುಜೋಂಭು: 8 ಕಲ್ಪಾಂತನಾತೊಂಬನಿಧೇರ್ವಿಘಾತ: | ಸಂಸಾರಭೋಗಸ್ಯನಿಯೋಗಭಾವೋ ವಿಪಕ್ಷಪೂರ್ವಾಭ್ಯುದಯಾಸ್ತ್ರದನೆ - | 26 || B 26. ಓ ಜಿನ ಪರಮಪ್ಪಿಯೇ ! ಲೋಕದಲ್ಲಿ ಸೂರ್ಯನಿಗೆ ರಾಹಂ ವಿಘಾತಕನು, ಬೆಂಕಿಗೆ ನೀರು ವಿಘಾತಕವು, ಸಮುದ್ರಕ್ಕೆ ಪ್ರಳಯಕಾಲದ ಗಾಳಿ ವಿಘಾತಕವು, ಸಂಸಾರಸುಖಕ್ಕೆ ಹೆಂಡತಿ ಮಕ್ಕಳು ಹಣ ಮುಂತಾದ ವಸ್ತುಗಳ ನಾಶವು ವಿಘಾತಕವು. ತಾವು ಹೊರತು ಸಮಸ್ತ ಪದಾರ್ಥಗಳೂ ನಾಶವನ್ನು ಹೊಂದುವಂತಹುಗಳಾಗಿವೆ. ನಿತ್ಯ ಸುಖರೂಪವಾದ ಅನಂತಜ್ಞಾನ ದರ್ಶನ ವೀರ್ಯಮಯವರ್ತಿಯಾದ ತಾವೋಬ್ಬರೇ ನಿರ್ವಿಘಾತಸ್ವರೂಪ ರಂದಭಿಪ್ರಾಯವು. ಅಚಾನತಸ್ರಾಂನವತಃಫಲcಯ ಇಜ್ಞಾನ ತೋನ್ಯ೦ನತುದೇವತೇತಿ | ಹರಿಣಿಂಕಾಚಧಿಯಾ ದಧಾನದ ಸ್ವಂತ ಬುಧ್ಯಾವಹತೋನರಿಕ್ತ ಜc | 27 || - 27. ತಾ|| ಓ ಅರ್ಹತ್ಪರಮೇಶ್ವರನೇ ! ನಿತ್ಯನಿರ್ಮಲ ನಿರುಪವಂ ಸಹಜಾನಂದ ಚೈತನ್ಯಮೂರ್ತಿಯಾದ ತಮ್ಮ ಸ್ವರೂಪ ಸ್ವಭಾವ ಗುಣಾದಿ ಗಳನ್ನರಿಯದೆ ನಮಸ್ಕಾರ ಮಾಡುವವನಿಗೆ ಯಾವ ಫಲವುಂಟಾಗುತ್ತದೋ ಆ ಫಲವು ಇತರ ದೇವರುಗಳನ್ನು ದೇವರೆಂದರಿತು ನಮಸ್ಕಾರ ವರಾಡುವವನಿ ಗುಂಟಾಗುವುದಿಲ್ಲ. ಹೇಗೆಂದರೆ ಪಚ್ಚೆ ರತ್ನವನ್ನು ಗಾಜೆಂದು ತಿಳಿದು ಧರಿಸಿ ಕೊಂಡಿರುವ ಮನುಷ್ಯನು, ಗಾಜನ್ನು ಪಚ್ಚೆ ರತ್ನವೆಂದು ತಿಳಿದು ಧರಿಸಿಕೊಂಡಿರು ವವನಿಗಿಂತಲೂ ಶ್ರೇಷ್ಟನಲ್ಲವೆ ? ಹಾಗೆಯೇ ತಮ್ಮನ್ನು ತಿಳಿಯದೆ ನಮಸ್ಕರಿಸು ವವನಿಗುಂಟಾಗುವ ಫಲವು ಮತ್ತೊಂದು ದೇವತೆಯನ್ನು ತಿಳಿದು ನಮಸ್ಕರಿಸು ವವನಿಗುಂಟಾಗುವುದಿಲ್ಲವೆಂದಭಿಪ್ರಾಯವು. ಪ್ರಶಸ್ತವಾಚಶ್ಚತುರಾಃ ಕಷಾಯ್ಕೆ ರ್ದರ ಸೃದೇವವ್ಯವಹಾರವಾಹುಃ | ಗತಸ್ಯ ದೀಪಸ್ಯ ಹಿನಂದಿತತ್ವಂ SO ದೃಷ್ಟಂಕಸಾಲೆ ಚನಂಗಳತ್ವಂ || 28 ||