________________ ಆಳ. : | 22 || ಪಂಚಕ್ಕೋತ ಭಾವಪ್ರಕಾಶಿಕಾ ಗಳನ್ನು ಗಲಾಟೆಯಿಲ್ಲದಂತೆ ದರ್ಶನವನ್ನು ಮಾಡಿಸುವುದಕ್ಕೋಸ್ಕರ ಒಂದು ಗುಂಪಾಗುತ್ತಲೆ ಮತ್ತೊಂದು ಗುಂಪನ್ನು ಒಳಕ್ಕೆ ಕ್ರಮವಾಗಿ ಕಳುಹಿಸುವ ದರ್ಶನವರಾಡಿಸುವ ದ್ವಾರಪಾಲಕನಾಗಿ ಕೈಯಲ್ಲಿ ದೊಣ್ಣೆಯನ್ನು ಹಿಡಿದು ಸೇವಕನಾಗಿದ್ದನು. ಆ ಇಂದ್ರನ ದ್ವಾರಪಾಲಕತ್ವವನ್ನು ತಮಗೆ ಒಂದು ಪ್ರಾತಿಹಾರ್ಯ ಸಂಪತ್ತನ್ನಾಗಿ ಹೇಳುತ್ತಾರೆ. ಆ ಸೇವಕ ವ್ಯಾಪಾರವು ಇಂದ್ರ ನಲ್ಲಿರುವುದೇ ಹೊರತು ತಮ್ಮದು ಹೇಗಾದೀತು ? ಆ ಇಂದ್ರನು ಮಾಡುವ ಸೇವೆಗೆ ತಾವು ಪಾತ್ರರಾದುದರಿಂದ ಆ ಸೇವೆಯು ತಮ್ಮದಾಯಿತು. ಈ ಭಾವದಿಂದ ತಮ್ಮ ಪ್ರಾತಿಹಾರ್ಯವೆಂಬ ಮಾತು ಇಂದ್ರನು ಮಾಡುವ ಸೇವೆಗೆ ಒಪ್ಪತಕ್ಕದ್ದಾಗಿದೆ. ಲೋಕದಲ್ಲಿ ಸೇವೆಯೆಂಬುದು ಸೇವಕ, ಸೇವ ಇವರಿಬ್ಬ ರನ್ನೂ ಸಂಬಂಧಿಸುತ್ತದೆ, ಆದುದರಿಂದ ಇಂದ್ರಸೇವಕತ್ವವು ತಮ್ಮದೆಂಬ ಮಾತು ಯುಕ್ತವೇ ಸರಿಯೆಂದು ಭಾವವು. ತಲ್ಲ ಕ್ರಿಯಾಪರಂಪಶ್ಯತಿಸಾಧುನಿಸ್ಟ್ ಶ್ರೀಮಾನ್ನ ಕಲ್ಪತೃಪಣಂತ್ವದನ್ಯತಿ || ಯಥಾಪ್ರಕಾಶ ಸ್ಥಿತಮಂಧಕಾರ ಸ್ಥಾಯಿಾಕ್ಷತೇಸೌನತಥಾತಮಸ್ಥಂ || || 21 || 21. ತಾ|| ಓ ಜಿನರಾಜನೇ ! ಲೋಕದಲ್ಲಿ ದರಿದ್ರನು ಶ್ರೀಮಂತನನ್ನು ಚೆನ್ನಾಗಿ ನೋಡುತ್ತಾನೆ. ತಾವು ಹೊರತು ಮತ್ಯಾವ ಐಶ್ವರ್ಯವಂತನೂ ದರಿದ್ರನನ್ನು ಚೆನ್ನಾಗಿ ನೋಡುವುದಿಲ್ಲ. (ಜರಾಮರಣಾದಿ ದುಃಖಸಮುದ್ರ ದಲ್ಲಿ ಮುಳುಗುತ್ತಲಿರುವ ಆತ್ಮವರ್ಗಗಳನ್ನು ವೀತರಾಗ ಸರ್ವಜ್ಞರಾದ ತಾವು ಧವರ್ರಾಮೃತಪಾನವನ್ನು ಮಾಡಿಸಿ ಉದ್ದರಿಸುವಿರೇ ಹೊರತು ಶ್ರೀಮಂತರಾದ ಮತ್ಯಾರೂ ಬಡವರನ್ನು ಕಣ್ಣಿನಿಂದಲೇ ನೋಡುವುದಿಲ್ಲವೆಂದು ಭಾವವು). ಹೇಗೆಂದರೆ ಕತ್ತಲೆಯಲ್ಲಿರುವವನು ಬೆಳಕಿನಲ್ಲಿರುವವನನ್ನು ನೋಡುವಂತೆ ಬೆಳಕಿನಲ್ಲಿರುವವನು ಕತ್ತಲೆಯಲ್ಲಿರುವವನನ್ನು ನೋಡುವುದಿಲ್ಲ. ಶ್ರೀಮಂತನು ಬೆಳಕಿನಲ್ಲಿರುವವನಹಾಗೆ, ದುಃಖಿಯರಾದ ಆತ್ಮನು ಕತ್ತಲೆಯಲ್ಲಿ ರುವವನ ಹಾಗೆ ದೃಷ್ಟಾಂತಾರ್ಥವನ್ನು ತಿಳಿಯಬೇಕು. ರತ್ನತ್ರಯ ಪ್ರಕಾಶ * ವುಳ್ಳ ಆತ್ಮನು ಬೆಳಕಿನಲ್ಲಿರುವವನಹಾಗೆ ಮೋಹನೀಯ ಕರ್ಮಾಕ್ರಾಂತನು ಕತ್ತಲೆಯಲ್ಲಿರುವವನಹಾಗೆಂದು ತಿಳಿಯಬೇಕು. ವಿಷಾಪಹಾರಸ್ತೋತ್ರ ಸ್ವವೃದ್ಧಿ ನಿಶ್ಯಾಸನಿಮೇಷೆಭಾಜಿ = ಪ್ರತ್ಯಕಮಾತ್ಮಾನುಭವೇಪಿಮೂಢಃ ಕಿಂಚಾಖಿಲಜೇಯವಿವರ್ತಿಬೋಧ ಸ್ವರೂಪನಧ್ಯಕ್ಷನನೈತಿಲೋಕಃ 22. ತಾ ಓ ಸರ್ವಜ್ಞಾತ್ಮನೇ ! ತನ್ನ ಬೆಳೆವಣಿಗೆ, ಉಸಿರಾಡಿಸುವಿಕೆ ಮತ್ತು ರಪ್ಪೆಯಾಡಿಸುವಿಕೆ ಮೊದಲಾದ ಆತ್ಮಾನುಭವ ವ್ಯಾಪಾರಗಳನ್ನು ತಿಳಿಯಲರಿಯದ ಈ ಮೂಢಲೋಕ (ಜನ)ವು ಪ್ರತ್ಯಕ್ಷವಾಗಿ ತಿಳಿಯಬೇಕಾದ ಸಮಸ್ತ ಲೋಕಾಲೋಕಗಳನ್ನೂ, ಅನಂತಗುಣಪರ್ಯಾಯಾದಿಗಳನ್ನೂ ತಿಳಿಯಲು ಸಮರ್ಥವಾದ ಸರ್ವಜ್ಞತೆಯುಳ್ಳ ಶುದ್ಧ ಪರಮಾತ್ಮ ತತ್ವವನ್ನು ತಿಳಿಯುತ್ತದೆಯೋ ? ಬಹಿರಾತ್ಮನನ್ನೇ ತಿಳಿಯಲರಿಯದವನು ಶುದ್ಧ ಪರಮಾತ್ಮ ತತ್ವವನ್ನು ಹೇಗೆ ತಿಳಿದಾನಂದಭಿಪ್ರಾಯವು, ತಸ್ಯಾತ್ಮಜಸ್ತಸ್ಯ ಪಿತೇತಿದೇವ ಕ್ಯಾ೦ಯೆನಗಾಯಂತಿ ಕುಲಂ ಪ್ರಕಾಶ್ಯ | ತೇದ್ಯಾ ಪಿನಾಶ್‌ನನಿತ್ಯವಶ್ಯಂ ಪಾಣೀಕೃತಂಹೇವಪುನಸ್ಯಜಂತಿ || 23 || 23. ತಾ॥ ಓ ದೇವನೆ ! ತಾವು ಇಂತಹವರ ಮಗನೆಂತಲೂ ಇಂತಹ ವರ ತಂದೆಯೆಂತಲೂ, ಇಂತಹ ಕುಲದಲ್ಲಿ ಹುಟ್ಟಿದವರೆಂತಲೂ, ತಮ್ಮನ್ನು ತಮ್ಮ ತಾಯಿತಂದೆ ಕುಲ ಗೋತ್ರಾದಿಗಳನ್ನು ಪ್ರಕಾಶಪಡಿಸಿ ಯಾರು ತಿಳಿಯಲು ತಾರೋ ಅಂತಹವರು ಅವಶ್ಯವಾಗಿ ಈಗಲೂ ಕೈಯಲ್ಲಿರುವ ಬಂಗಾರವನ್ನು ಕಲ್ಲನ್ನಾಗಿ ತಿಳಿದುಕೊಂಡು ಬಿಸಾಡುತ್ತಾರೆಂದು ಹೇಳಬಹುದು. ಅಂದರೆ ತಮ್ಮ ನಿತ್ಯನಿರ್ಮಲಾನಂತ ಜ್ಞಾನಾಕಾರವನ್ನರಿಯದ ಮೂಢಾತ್ಮರೆಂದರ್ಥವು. ದತ್ತಲೋ ಕ್ಯಾ೦ಪಟಹೊ ಭಿಭೂತಾ! ಸುರಾಸುರಾಸ್ತಸ್ಯವಹಾನ್ಸಲಾಭಃ | ಮೊಹಸ್ಯಮೋಹಸ್ಯಯಿ ಕೊವಿರೋದು ರ್ಮೂಲಸ್ಯನಾಶೋಬಲವದ್ವಿರೋಧಃ | 24 ||