________________ 62 ಪಂಚಕ್ಕೋತ ಭಾವಪ್ರಕಾಶಿಕಾ ಆದುದರಿಂದ ಇವೆರಡೂ ಸರ್ವಜ್ಞತೆಗೂ ಸರ್ವಸ್ವಾಮಿಯಾಗುವುದಕ್ಕೂ ಯೋಗ್ಯಗಳಲ್ಲ. ಸಕಲಕರ್ಮಕ್ಷಯವನ್ನು ಮಾಡಿ ಅನಂತಜ್ಞಾನಾದಿ ನಿಜಗುಣಾಷ್ಟ ಕಗಳಿಂದ ವಿರಾಜವರಾನರಾದ ತಾವು ಹೊರತು ಇತರರು ಹೇಗೆ ಸರ್ವಜ್ಞ ರಾದಾರು ಮತ್ತು ಸರ್ವಸ್ವಾಮಿಯಾದಾಂದಭಿಪ್ರಾಯವು. ನಾಕಸ್ಯ ಸತ್ಯುಃಪರಿ ಕರ್ಮರನ್ನು ನಾಗಮ್ಮರೂಪಸ್ಯತವೋಪಕಾರಿ | ತಸ್ಯವಹೇತುಃಸ್ವಸುಖಸ್ಯಭಾನೋ ರುಬ್ಬಿಭ್ರತಕ್ಷತ್ರವಾದರೇಣ. A. 17|| 17. ತಾ|| ಓ ವೀತರಾಗಪರಮಾತ್ಮನೇ ! ಪಂಚಕಲ್ಯಾಣಗಳಲ್ಲಿ ಸೌಧರ್ಮೇಂದ್ರ ಮೊದಲಾದ ಕಲೇಂದ್ರರುಗಳು ತಮಗೆ ಮಾಡುವಂತಹ ಪೂಜಾಲಂಕಾರಾದಿ ವಿಭವಗಳು ಆ ಇಂದ್ರಾದಿಗಳ ಉತ್ತರೋತ್ತರ ಶ್ರೇಯಸ್ಸಿಗೆ (ಪ್ರಬಂಧಕ್ಕೆ) ಕಾರಣವಾಗುವುವೇ ಹೊರತು ನಿರಾಕಾರರಾದ ತವರಿಗೆ ಉಪ ಕಾರವಾಗಿ ಆಗುವುದಿಲ್ಲ, ಹೇಗೆಂದರೆ ಪ್ರೀತಿಯಿಂದ ಸೂರ್ಯನಿಗೆ ಕೊಡೆ ಹಿಡಿದರೆ ಅದರಿಂದ ಸೂರ್ಯನಿಗೇನೂ ಉಪಕಾರವಿಲ್ಲದೆ ಕೊಡೆಯನ್ನು ಹಿಡಿದ ವನಿಗೇ ಉಪಕಾರವಾಗುವಂತೆ ಸ್ವಾಮಿಯನ್ನು ಪೂಜಿಸಿದವರಿಗೆ ಪ್ರಬಂಧ ವಾಗುವುದೇ ಹೊರತು ಅದರಿಂದ ಆ ಭಗವಂತನಿಗೆ ಉಪಕಾರವಿಲ್ಲವೆಂದ ಭಿಪ್ರಾಯವು. ಕೊಪೇಕ್ಷಕ೦ಕ್ಕಸುಖೋಪದೇಶ ಸಚೇಮಿಚ್ಛಾ ಪ್ರತಿಕೂಲವಾದಃ | ಈ ಕ್ಯಾಸೆಕ್ಯವಾಸರ್ವಜಗತ್ಪಯತ್ಯಂತ ನೀ ತನ್ನೋಯಥಾತಥ್ಯ ನವವಿಜಂತೇ a 18|| 18. ತಾ|| ಓ ವೀತರಾಗನೇ ! ಸಮಸ್ತ ವಿಷಯದಲ್ಲಿಯೂ ರಾಗ ವನ್ನು ತೊರೆದಂತಹ ತಾವೆಲ್ಲಿ ? ಸರ್ವಾತ್ಮಗಳಿಗೂ ಶ್ರೇಯಸ್ಸಿನ ಮಾರ್ಗ ವಾದ ಧರ್ಮವನ್ನುಪದೇಶಿಸುವುದೆಂಬುದೆಲ್ಲಿ ? ಆ ಉಪದೇಶವಾದರೋ ಸರ್ವಾತ್ಮಗಳಿಗೂ ಇಷ್ಟವಾದ ಸಂಸಾರಭೋಗವನ್ನು ಬಿಡಬೇಕೆಂದಿರುವುದಾದು ದರಿಂದ ಎಲ್ಲರ ಇಚ್ಚೆಗೂ ವಿರೋಧ ಕ್ರಮವುಳ್ಳದ್ದಾಗಿದೆ. ಲೋಕದಲ್ಲಿ ವಿಷಾಪಹಾರಸ್ತೋತ್ರ - ತಮ್ಮ ತಮ್ಮ ಇಚ್ಛೆಗೆ ಅನುಗುಣವಾಗಿ ಹೇಳಿದರೆ ಪ್ರತಿಪಡುವರೇ ಹೊರತು ತಮ್ಮ ಇಚ್ಚಾ ವಿರುದ್ದವಾಗಿ ಉಪದೇಶಿಸಿದರೆ ಯಾರೂ ಪ್ರೀತಿಸುವುದಿಲ್ಲ. ಹೀಗೆ ಇಚ್ಛಾ ಪ್ರತಿಕೂಲವಾಗಿರುವುದೆಂಬುದೆಲ್ಲಿ ? ಅಂತಹ ವೈರಾಗ್ಯಪ್ರಧಾನ ವಾದ ತಮ್ಮ ಉಪದೇಶದಲ್ಲಿ ಸರ್ವಜಗತ್ತಿಗೂ ಪ್ರೀತಿಯುಂಟಾಗುತ್ತದೆಂಬು ದೆಲ್ಲಿ ? ಅಂದರೆ ಇಂತಹ ವೈರಾಗೋಪದೇಶದಲ್ಲಿ ಈ ಜಗತ್ತೇ ಪ್ರೀತಿಪಡು ಇದೆ, ಇದು ಬಹಳ ಆಶ್ಚರ್ಯ ! ಆದುದರಿಂದ ತಮ್ಮ ಗಂಭೀರಸ್ವಭಾವ ಗುಣಾತಿಶಯವನ್ನು ಕುರಿತು ಹೀಗೆಯೇ ಸರಿಯೆಂದು ವಿವೇಚನೆ ಮಾಡಲಶಕ್ಕೆ ವೆಂದು ಭಾವವು. ತುಂಗಾತ್ಸಲಂಯುತ್ತದಕಿಂಚನಾಚರಿ ಪ್ರಾಚ್ಯಂಸನ್ನದ್ಧಾನ್ಯ ಧನೇಶ್ವರಾದೇಃ | ನಿರಂಭಸೊಪ್ಪುಚ್ಚ ತಮಾದಿವಾದ್ರೆ ರ್ನೈಕಾಪಿನಿರ್ವಾತಿಧುನೀ ಪಯೋಧೇ ಪತ್ತೆ |19|| 19, ತಾ|| ಓ ವೀತರಾಗಪರಮಾತ್ಮನೇ ! ಬಹಳ ದರಿದ್ರನ ದೆಸೆ ಯಿಂದ ಯಾವ ಪ್ರಯೋಜನವು ಹೊಂದಲಾಗುವುದೂ ಆ ಪ್ರಯೋಜನವು ಐಶ್ವರ್ಯ ಪರಿಪೂರ್ಣನಾದ ಕುಬೇರನ ದೆಸೆಯಿಂದಲೂ ಕೂಡ ಪಡೆಯಲ ಸಾಧ್ಯ. ಹೇಗೆಂದರೆ ನೀರಿಲ್ಲದ ಸ್ಥಾನವಾಗಿದ್ದರೂ ಅತ್ಯುನ್ನತವಾದ ಬೆಟ್ಟದಿಂದ ನದಿಯು ಹುಟ್ಟುತ್ತದೆ. ನೀರು ಅಪರಿಮಿತವಾಗಿ ಸಮೃದ್ಧಿಯಾಗಿದ್ದರೂ ಸಮುದ್ರದಿಂದ ಈಚೆಗೆ ಯಾವ ನದಿಯ ಹೊರಡುವುದಿಲ್ಲ. ವೀತರಾಗರಾಗಿ ಸರ್ವೊತ್ಯಪ್ಪ ದೇವರಾದ ತಮ್ಮಿಂದ ಆಗುವ ಆತ್ಮ ಕಲ್ಯಾಣವು ಮತ್ಯಾವ ಐಶ್ವರ್ಯವುಳ್ಳ ದೇವರುಗಳಿಂದಲೂ ಆಗುವುದಿಲ್ಲವೆಂದಭಿಪ್ರಾಯವು. ತ್ರೈಲೋಕ್ಯ ಸೇನಾನಿಯವಾಯದಂಡಂ ದಧೇಯದಿಂದೊವಿನಯನತಸ್ಯ | ತತ್ಸಾತಿಹಾರ್ಯ೦ಭವತಃ ಕುತಂ ತತ್ಕರ್ಮಯೋಗಾದ್ಯ ದಿವಾತವಾಸ್ತು |20|| - 20. ತಾ, ಓ ಅರ್ಹಂತರೇ ! ತಮ್ಮ ಪಂಚಕಲ್ಯಾಣಕಾಲದಲ್ಲಿ ಸೌಧರ್ಮೆಂದ್ರನು ವಿನಯಂಗುಣದೊಡಗೂಡಿ ಮರುಲೋಕದ ಭವ್ಯಪ್ರಾಣಿ