________________ ರು ಪಂಚಸೋತ ಭಾವಪ್ರಕಾಶಿಕಾ - 13, ತಾ|| ಓ ದೇವನೇ ! ಲೋಕದಲ್ಲಿ ತಮ್ಮ ಭಕ್ತರಲ್ಲದವರು ಸ್ವರ್ಗಾದಿ ಸುಖಗಳನ್ನುದ್ದೇಶಿಸಿ ದುಃಖಗಳನ್ನನುಭವಿಸುತ್ತಾರೆ. ದೋಷ ಗಳನ್ನು ಆಚರಿಸಿ ಗುಣವನ್ನು ಬಯಸುತ್ತಾರೆ. ಧರ್ಮವು ಬರುತ್ತದೆಂದು ತಿಳಿದು ಹಿಂಸಾದಿ ಪಾಪಗಳನ್ನು ಮಾಡುತ್ತಾರೆ. ಈ ಮೂಢಕೃತ್ಯಗಳನ್ನು ಮಾಡುವವರು ಎಣ್ಣೆಯನ್ನು ಅಪೇಕ್ಷಿಸಿ ಗಾಣದಲ್ಲಿ ಮರಳನ್ನು ಆಡಿಸುವ ಅಜ್ಞಾನಿಗಳಂತೆ ಆಗುತ್ತಾರೆ. ಅಂದರೆ ಅರ್ಹಂತರು ಅಪ್ಪಣೆಮಾಡಿರುವ ದಾನಪೂಜಾತಪಸ್ಸುಗಳನ್ನು ಬಿಟ್ಟು ವಿಂಥಾದೇವಗುರು ಶಾಸ್ತ್ರಗಳಲ್ಲಿ ನಂಬಿಕೆ ಯನ್ನಿಟ್ಟು ಮಾಡುವ ದಾನಪೂಜಾತಪಸ್ಸು ವ್ರತ ಮುಂತಾದವುಗಳು ಮರಳಿ ನಿಂದ ಎಣ್ಣೆಯನ್ನು ತೆಗೆಯುವ ಪ್ರಯತ್ನದಂತೆ ನಿಷ್ಪಲಗಳೆಂದಭಿಪ್ರಾಯವು. ವಿಷಾಪಹಾರಂಮಣಿಮಷಧಾನಿ ಮಂತ್ರಂಸನುದ್ದಿಶ್ಯರಸಾಯನಂಚ | Eas c. ಭಾದ್ಯಂತ ಹೋನಮಿತಿಸ್ಮರಂತಿ ಪರ್ಯಾಯನಾಮಾನಿತನೈವತಾನಿ | || 14 || 14, ತಾ11 ಓ ಭವರೋಗವೈದ್ಯನೇ ! ತಮ್ಮ ಮಹಿಮೆಯನ್ನರಿಯದ ಮೂಢಾತ್ಮರು ಮಣಿ ಔಷಧ ಮಂತ್ರ ಮತ್ತು ರಸಾಯನ ಇವುಗಳೆಲ್ಲ ವಿಷವನ್ನು ಪರಿಹರಿಸುವುದರಲ್ಲಿ ಸಮರ್ಥಗಳೆಂದು ತಿಳಿಯುತ್ತಾರೆ. ಸರ್ವಜ್ಞ ರಾಗಿಯೂ, ಸರ್ವಶಕ್ತರಾಗಿಯೂ, ಇರುವ ತಾವು ವಿಷಪರಿಹಾರವಾಡುವ ಸಾಮರ್ಥ್ಯವುಳ್ಳವರೆಂದು ತಿಳಿಯದೆ ಭ್ರಾಂತಿಪಡುತ್ತಾರೆ. ಇದಾಶ್ಚರ್ಯ ! ಮಣಿ, ಮಂತ್ರ, ಔಷಧ, ರಸಾಯನ ಈ ಸಮಸ್ತವೂ ತಮ್ಮ ಪರ್ಯಾಯ ನಾಮಗಳೇ ಆಗಿವೆ. ಭಕ್ತಿಪೂರ್ವಕವಾಗಿ ಭಗವಂತನನ್ನು ಸ್ಮರಿಸುವವನಿಗೆ ಸಕಲ ವಿಪತ್ತುಗಳೂ ಪರಿಹಾರವಾಗುತ್ತವೆಂದಭಿಪ್ರಾಯವು, ಚಿನಕಿಂಚಿತೃತವಾನಸಿತ್ಯಂತ ದೇವಕೃತಶೇತಸಿಯೇನಸರ್ವ೦ ರಂದು ಎಷ ಹಸ್ತೆಕೃತಂತೇನಜಗದ್ವಿಚಿತ್ರ: ತಾಲtರಣcip ಸುಖೇನಜೀವತ್ಯಪಿಚಿತ್ರ ಬಾಹ್ಯ: ಎಂದ | 15 || 6 . A ವಿಷಾಪಹಾರಸ್ತೋತ್ರ 15. ತಾ|| ಓ ವೀತರಾಗನೇ ! ತಾವು ತಮ್ಮ ಚಿತ್ರದಲ್ಲಿ ಯಾವುದನ್ನೂ ಸ್ಮರಿಸಿದವರಲ್ಲ. (ಭಕ್ತರಾದವರು ಯಾವ ಪೂಜಾಸ್ತೋತ್ರ ನಮಸ್ಕಾರಗಳನ್ನು ವರಾಡಿದರೂ ಇವನು ನನ್ನ ಭಕ್ತನಾದ್ದರಿಂದ ಇಂತಹ ಫಲವನ್ನು ಪಡೆಯಲಿ, ಇವನು ನನ್ನನ್ನು ಪೂಜಿಸಲಿಲ್ಲವಾದುದರಿಂದ ದುಃಖ ವನ್ನನುಭವಿಸಲಿ ಎಂಬ ಯಾವ ಭಾವವನ್ನೂ ತಾವು ಚಿತ್ರದಲ್ಲಿ ಮಾಡುವುದಿಲ್ಲ). ಯಾವನು ತಮ್ಮನ್ನು ಚಿತ್ರದಲ್ಲಿಟ್ಟುಕೊಳ್ಳುತ್ತಾನೋ (ಧ್ಯಾನಿಸುತ್ತಾನೋ ) ಅಂತಹವನು ಸಮಸ್ತ ಜಗತ್ತನ್ನೇ ಸುಖವಾಗಿ ತನ್ನ ಕೈಯಲ್ಲಿಟ್ಟುಕೊಳ್ಳುತ್ತಾನೆ. ತಮ್ಮ ಚಿತ್ರಕ್ಕೆ ಹೊರಗಿರತಕ್ಕವನಾದರೂ (ತಾವು ವೀತರಾಗರಾದುದರಿಂದ ಉದಾಸೀನರಾಗಿದ್ದರೂ) ಸಮಸ್ತ ಸುಖಗಳನ್ನೂ ಪಡೆಯುತ್ತಾನೆಂಬುದು ಆಶ್ಚರ್ಯ ! ವೀತರಾಗಭಗವಂತನಲ್ಲಿ ಮಾಡುವ ತನ್ನ ಶುಭ ಪರಿಣಾಮ ದಿಂದಲೇ ಸಮಸ್ತ ಸುಖಗಳನ್ನೂ ಪಡೆಯುತ್ತಾನೆಂದು ಸಮಾಧಾನವು. ಇತರ ದೇವರುಗಳು ಭಕ್ತರಿಗೆ ಪೂಜಾದಿಗಳಿಂದ ಸಂತೋಷಿಸಿ ಫಲವನ್ನು ಕೊಡುವರೆಂದು ಹೇಳುವರು. ವೀತರಾಗದೇವನು ಭಕ್ತರ ವಿಷಯದಲ್ಲಿ ಯಾವಭಾವನೆಯನ್ನೂ ಮಾಡದಿದ್ದರೂ ಅವರವರ ಇಷ್ಟಸಿದ್ದಿಯಾಗುವುದು ಬಹಳ ಆಶ್ಚರ್ಯವಾಗಿದೆಯೆಂದು ವೀತರಾಗಮಹಿಮೆಯು ಸ್ತುತಿಸಲ್ಪಟ್ಟಿತು. ತ್ರಿಕಾಲತತ್ವಂತ್ವನವೈತ್ರಿಲೋಕೀ ಸ್ವಾಮಿಾತಿಸಂಖ್ಯಾ ನಿಯತೇರಾಷಾಂ | ಬೋಧಾಧಿಪತ್ಯಂಪ್ರತಿನಾಭವಿಷ್ಯಂ, ಸೈನೈಪಿಚೇದ್ಯಾಸ್ಪದಮನಪೀದಂ || 16 | 16. ತಾ|| ಓ ಸರ್ವಜ್ಞ ಪರಮಾತ್ಮನೇ ! ತಾವು ಭೂತಭವಿಷ್ಯದ್ಯರ್ತ ಮಾನ ರೂಪವಾದ ಕಾಲತತ್ವವನ್ನು ತಿಳಿದಿರುತ್ತೀರಿ, ಮೂರು ಲೋಕಗಳಿಗೂ ಸ್ವಾಮಿಯಾದವರು ಎಂಬುದಾಗಿ ಕಾಲಕ್ಕೂ, ಲೋಕಗಳಿಗೂ ಮರೆಂಬ ಸಂಖ್ಯೆಯನ್ನು ಪ್ರಮಾಡಿದುದರಿಂದ ಸರ್ವಕಾಲದ ಜ್ಞಾನವೂ ಸರ್ವ ಲೋಕಾಧಿಪತ್ಯವೂ ತಮ್ಮಲ್ಲಿ ಹೊರತು ಮತ್ಯಾವತತ್ವದಲ್ಲಿ ಸಂಭವಿಸುವು ದಿಲ್ಲ. ಆದರೆ ಕಾಲತತ್ವವು ಮೂರುಲೋಕಗಳನ್ನೂ ವ್ಯಾಪಿಸುವಂತಹುದಾದರೂ ಜಡತತ್ವವಾಗಿದೆ. ಹಾಗೆಯೇ ಮೂರುಲೋಕಗಳೂ ಜಡರೂಪಗಳಾಗಿವೆ.