SearchBrowseAboutContactDonate
Page Preview
Page 49
Loading...
Download File
Download File
Page Text
________________ f ಪಂಚಸೂತ್ರ ಭಾವಪ್ರಕಾಶಿಕಾ ಸ್ಮರಸ್ಸು ದರೋಭವತ್ಯೆವತೆ ನ್ನು ದೂಳಿತಾತ್ಮಾಯದಿನಾಮಶಂಭುಃ | ಅಶೇತಬ್ಬಂದೋಪಹತೋಪಿವಿಷ್ಟು! ಕಿಂಗೃಹ್ಮತೇ ಯನಭನಾನಜಾಗ | || 10 10. ತಾ|| ಓ ವೀತರಾಗನೇ ! ಭೋಗೋಪಭೋಗಸುಖಗಳನ್ನು ನಿಷಪರಿತ್ಯಾಗ ಮಾಡಿ ಶುಕ್ಲ ಧ್ಯಾನವೆಂಬ ಅಗ್ನಿಯಿಂದ ತಾವೇ ಕಾಮ (ಮೋಹ)ನನ್ನು ನಿಶೇಷವಾಗಿ ದಹಿಸಿದವರು. ಆದುದರಿಂದ ಕಾಮನನ್ನು ಜಯಿಸಿದವರು ತಾವೆಂದು ಹೇಳುವುದು ನ್ಯಾಯವಾಗಿರಲು, ಕಾಮನೆಂಬೊಬ್ಬ ನನ್ನು ಸುಟ್ಟು ಬೂದಿಮಾಡಿ ಆ ಬೂದಿಯನ್ನು ಮೈಗೆ ಲೇಪನವರಾಡಿಕೊಂಡ ಅಮಂಗಳ ರೂಪನಾದವನನ್ನು ಶಂಭು(ಸುಖೋತ್ಪತ್ತಿ ಸ್ಥಾನ)ವೆಂದು ಯಾವ ಜ್ಞಾನಿಯು ಹೇಳುತ್ತಾನೆ ? ಆ ಶಿವನಾದರೋ ಹೆಸರಿಗೆ ಕಾಮದಹನಮಾಡಿ ದವನೆನ್ನಿಸಿಕೊಂಡು, ತನ್ನರ್ಧ ಶರೀರವನ್ನೇ ಸ್ತ್ರೀಯನ್ನಾಗಿ ಧರಿಸಿದ್ದಾನೆ. ಇಂತಹ ಕಾಮುಕನು ಹೇಗೆ ಭಕ್ತರಿಗೆ ಮೋಕ್ಷಸುಖವನ್ನುಂಟುಮಾಡುವ ಶಂಭು (ಶಂ ಸುಖಂ, ಭವತ್ಯಸ್ಮಾದಿತಿ, ಶಂಭುಃ) ಶಬ್ದಕ್ಕೆ ಅರ್ಥವಾಗುವನು ? ಮತ್ತು ನೆಗ್ಗಿಲುಮುಳ್ಳು ಕಾಲಿಗೆ ಚುಚ್ಚಿಕೊಳ್ಳಲು, ಜನಸಮೂಹದಿಂದ ಬಾಧಿಸ ಲ್ಪಟ್ಟಿದ್ದರೂ, ಬೃಂದಾವನ ಸಮಿಾಪ ಸಂಚಾರಿಯಾಗಿದ್ದರೂ, ಯಾವನು ಮಲಗಿದನೋ, ಅಂತಹ ಲಕ್ಷ್ಮೀರಮಣನು ಸರ್ವವ್ಯಾಪಕನೆಂಬರ್ಥವುಳ್ಳ ವಿಷ್ಣು (ವೇ, ವ್ಯಾಪ್ರೋತೀತಿ, ವಿಷ್ಣು) ಶಬ್ದಕ್ಕೆ ಹೇಗೆ ಅರ್ಥವಾಗುವನು ? | ಆದುದರಿಂದ ಶೋಕ, ಮೋಹ, ಭಯ, ನಿದ್ರಾದಿ ದೋಷಗಳಿಲ್ಲದವ ರಾಗಿಯೂ, ಸರ್ವಜ್ಞರಾಗಿಯೂ, ವೀತರಾಗರಾಗಿಯೂ ಇರುವ ತಮ್ಮಲ್ಲಿ ಮಾತ್ರ ಶಂಭು ಶಬ್ದಾರ್ಥವೂ, ವಿಷ್ಣು ಶಬ್ದಾರ್ಥವೂ, ಒಪ್ಪುತ್ತದೆ. ಎಲ್ಲಾ ದೇವರುಗಳಿಗಿಂತಲೂ ವೀತರಾಗ ಜಿನೇಶ್ವರನೇ ಶ್ರೇಷ್ಠನೆಂದಭಿಪ್ರಾಯವು. ಸನೀರಜಾಸ್ಮಾದಪರೋಘವಾನ್ನಾ ತದ್ರೂಷಕೀರ್ತನನತೇಗುಣಿತ್ವಂ | ಜನವD. ಸ್ವತೋಂಬುರಾಶ್ರ್ವಹಿಮಾನದೇವ ಬಂಡಿ ಸೋಕಾಪವಾದೇನಜಲಾಶಯ | ಭLOW 11 || * ಏಪಾಪಹಾರಸ್ತೋತ್ರ 11, ತಾ|| ಓ ವೀತರಾಗಪರವರಾತ್ಮನೇ ! ಇತರ ದೇವರುಗಳು ಕರ್ಮಿ ಗಳಾಗಿಯಾದರೂ ಇರಲಿ ಅಥವಾ ಕರ್ಮರಹಿತರಾಗಿಯಾದರೂ ಇರಲಿ ಅವರ ದೋಷವನ್ನು ಹೇಳುವುದರಿಂದಲೇ ತಮಗೊಂದು ಗುಣತ್ವವುಂಟಾಗುವುದಿಲ್ಲ. ಹೇಗೆಂದರೆ ಲೋಕದಲ್ಲಿ ಕೆರೆ, ಕಟ್ಟೆ, ಸರೋವರ ಮುಂತಾದ ಜಲಾಧಾರ ಪ್ರದೇಶವು ಸ್ವಲ್ಪ ನೀರುಳ್ಳದ್ದೆಂದು ಇದ್ದ ಯಥಾಸ್ಥಿತಿಯನ್ನು ಹೇಳುವುದರಿಂದ ಸಮುದ್ರಕ್ಕೆ ಮಹಿಮೆಯು ಹೆಚ್ಚುವುದಿಲ್ಲ. ಆ ಸಮುದ್ರಕ್ಕೆ ಆ ಮಹಿಮೆಯು ಸ್ವತಸ್ಸಿದ್ದವಲ್ಲವೆ ? ಹಾಗೆಯೇ ತಾವು ಸರ್ವಗುಣಾಕರರೆಂಬುದು ಸ್ವತಸ್ಸಿದ್ದ ವಾಗಿಯೇ ಇದೆ ಎಂದಭಿಪ್ರಾಯವು. ಕರ್ಮಸ್ಥಿತಿಂಜಂತುರನೇಕಭೂಮಿಂ ನಯತ್ನ ಮುಂಸಾಚಪರಸ್ಪರಸ್ಯ | ತ್ವ೦ನೇತೃಭಾವಂಹಿತಯೋರ್ಭನಾಬ್ ನ ಜಿನೇಂದ್ರನಾವಿಕಯೊರಿವಾಖ್ಯಃ || | 12 || 12, ತಾ|| ಓ ಜಿನೇಂದ್ರರೇ ! ಜೀವನು ಅನೇಕ ಪ್ರಕಾರವಾದ ಶುಭಾ ಶುಭ ಕರ್ಮಗಳನ್ನು ಮಾಡುತ್ತಾನೆ, ಆ ನಾನಾ ಪ್ರಕಾರವಾದ ಕರ್ಮಗಳು ಜೀವನಿಗೆ ನಾನಾಪ್ರಕಾರವಾದ ಗತಿಗಳನ್ನುಂಟುಮಾಡುತ್ತವೆ. ಜೀವ ಮತ್ತು ಕರ್ಮಗಳು ಒಂದಕ್ಕೊಂದು ನಾನಾ ಪ್ರಕಾರವಾದ ಅವಸ್ಥೆಗಳನ್ನುಂಟುವರಾಡುತ್ತ ಎಂದರ್ಥವು, ಜೀವನು ನಾನಾ ಬಗೆಯಾದ ಪುಣ್ಯಪಾಪಗಳನ್ನು ಮಾಡುವನು. ಆ ಪುಣ್ಯಪಾಪಗಳು ಜೀವನ ನಾನಾ ಜನ್ಮಗಳಿಗೆ ಕಾರಣವಾಗುತ್ತವೆ. ಹೇಗೆಂದರೆ ಅಂಬಿಗನು ಹರಿಗೋಲನ್ನು (ಹಡಗನ್ನು) ದಡತಲುಪಿಸುತ್ತಾನೆ, ಹರಿಗೋಲು ಅಂಬಿಗನನ್ನು ದಡತಲುಪಿಸುತ್ತದೆ. ಹಾಗೆಯೇ ಈ ಸಂಸಾರವೆಂಬ ಸಮುದ್ರ ದಲ್ಲಿ ಜೀವ ಮತ್ತು ಕರ್ಮಗಳೆರಡೂ ಒಂದಕ್ಕೊಂದು ಒಯ್ಯುತ್ತವೆಂಬುದಾಗಿ ತಾವು ಲೋಕಕ್ಕೆ ಉಪದೇಶಿಸುತ್ತೀರಿ. ಸs). ಸುಖಾಯದುಃಖಾನಿಗುಣಾಯದೊಣಾr ಧರ್ಮಾಯಪಾಪಾನಿಸಮಾಚರಂತಿ1 ತೈಲಾಯಬಾಲಾಸ್ಟಿಕತಾಸಮಹಂ .. 8) ಸಿಟಿ ನಿಪೀಡಯಂತಿಷ್ಟು ಟಿಮುತ್ವದೀಯಾಃ | | 13 ||
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy