SearchBrowseAboutContactDonate
Page Preview
Page 48
Loading...
Download File
Download File
Page Text
________________ 76 67 ಪಂಚಸ್ತೋತ್ರ ಭಾವಪ್ರಕಾಶಿಕಾ ಸಮೀಪವನ್ನು ಹೊಂದುತ್ತಾನೋ ಅಂತಹ ಭಕ್ತನು ಐಹಿಕಾಮುಸ್ಮಿಕ ಸಕಲ ಸುಖಗಳನ್ನು ಪಡೆಯುವನು. ತಮ್ಮಲ್ಲಿ ಯಾವ ಅಭವ್ಯಾತ್ಮನು ಸ್ವಭಾವ | ದಿಂದಲೇ ವಿಮುಖನೋ (ಅನಾದರದಿಂದ ತಮ್ಮ ದರ್ಶನವನ್ನೇ ಮಾಡ ದಿರುವನೊ) ಅಂತಹವನು (ನರಕರ್ಯಂಚಗತಿಗಳಲ್ಲಿ) ಘೋರದುಃಖಗಳನ್ನು ಅನುಭವಿಸುವನಂ, ತಾವು ರಾಗದ್ವೇಷಾದಿ ಸಕಲ ದೋಷರಹಿತ ನಿರ್ಮಲ ವೀತರಾಗ ವರವರಾತ್ಮಸ್ವರಪರಾದುದರಿಂದ ಭಕ್ತನಲ್ಲಿಯೂ, ಅಭಕ್ತ | ನಲ್ಲಿಯೂ, ಯಾವಾಗಲೂ ನಿಷ್ಪಕ್ಷಪಾತರಾಗಿ ಒಂದೇರೀತಿಯರಾಗಿರುವುದರಿಂದ ನಿರ್ಮಲವಾದ ಕನ್ನಡಿಯಂತೆ ಪ್ರಕಾಶಿಸುತ್ತೀರಿ. ಕನ್ನಡಿಯ ಮುಖದಲ್ಲಿ ವಿಕಾರವಿದ್ದರೆ ಪ್ರತಿಬಿಂಬದಲ್ಲಿಯ ವಿಕಾರವನ್ನೇ ತೋರಿಸುವುದು. ಮುಖ ದಲ್ಲಿ ಸೌಂದರ್ಯವಿದ್ದರೆ ಸೌಂದರ್ಯವನ್ನೇ ತೋರಿಸುವುದು. ಸೌಂದರ್ಯ ವಿಕಾರಗಳುಪ್ರತಿಫಲಿಸುವ ಪದಾರ್ಥನಿಷ್ಠವಾದುವುಗಳೇ ಹೊರತು, ದರ್ಪಣ ನಿಷ್ಠವಾದುವುಗಳಲ್ಲ. ಅದರಂತೆ ಸುಖದುಃಖಾನುಭವಗಳು ಭಕ್ತಾಭಕ್ತರ ಪರಿಣಾಮಗಿಷ್ಟವಾದವುಗಳೆಂದು ಭಾವವು. ವಿಷಾಘಾರಸ್ತೋತ್ರಂ ಸ್ವರೂಪರಾದ ಸ್ವಾಮಿಯಲ್ಲಿರುವ ಕೇವಲಜ್ಞಾನವು ಸರ್ವವ್ಯಾಪಕವೆಂದು ಮುಖ್ಯಭಾವವು. ತವಾನವಸ್ವಾಪರಮಾರ್ಥತತ್ತ್ವಂ ತ್ವಯಾನಗೀತಃಪುನರಾಗಮಶ್ಚ | ದೃಷ್ಟಂವಿಹಾಯವ್ವನದೃಷ್ಟಮೈಷಿ ರ್ವಿರುದ್ದ ವೃತ್ತೋಪಿಸಮಂಜಸಸ್ಯಂ | 9. ಶಾ|| ಓ ಜಿನೇಶ್ಚರನೇ ! ತಮ್ಮ ಪರಮಾರ್ಥ ತತ್ತ್ವವು ಅವಧಿ ಯಿಲ್ಲದ್ದಾಗಿದೆ. ಅಂದರೆ ಸ್ಮಾದ, ಸ್ಯಾನ್ನಾಸಿ, ಸಾದನಾಸ್ತಿ, ಸ್ವಾದ ವಕ್ತವ್ಯಂ ಸ್ವಾದವಕ್ತವ್ಯಂ, ಕ್ಯಾನ್ಸಾಸ್ಕೃವಕ್ತವ್ಯಂ, ಸ್ಮಾದನಾ ವಕ್ತವ್ಯಂ ಎಂಬೀ ಸ್ಮಾದ್ವಾದನಯದಿಂದ ಜೀವಾದಿಸಮಸ್ತ ತತ್ತ್ವಗಳೂ, ಅಸ್ತಿತ್ವನಾಸ್ತಿ ತ್ಯಾದಿವಿರುದ್ಧ ಸ್ವಭಾವವುಳ್ಳವುಗಳಂತೆ ತೋರುತ್ತವೆ. ಒಂದೊಂದೇ ಸ್ವಭಾವವುಳ್ಳವುಗಳಾಗಿಲ್ಲ. (ಇದು ಜೀವಾದಿತಗಳ ನಿಜ ಸ್ಥಿತಿಯು) ತಾವು ಮುಕ್ತಿಯನ್ನು ಹೊಂದಿದ ಆತ್ಮನು ಪುನಃ ಈ ಲೋಕಕ್ಕೆ ಬರುತ್ತಾನೆಂದು ಹೇಳಲಿಲ್ಲ. ಪ್ರತ್ಯಕ್ಷವಾಗಿರುವ ಸಮಸ್ತವನ್ನೂ ಪರಿತ್ಯಜಿಸಿ, ಅಪ್ರತ್ಯಕ್ಷವಾದದ್ದನ್ನು ಅಪೇಕ್ಷಿಸಿದಿರಿ, ಇದು ಲೋಕವಿರುದ್ದ ವಾದ ವ್ಯಾಪಾರ ವಾಗಿ ತೋರುತ್ತದೆ. ಇದರ ಅಭಿಪ್ರಾಯವೇನೆಂದರೆ, ಪಂಚೇಂದ್ರಿಯಗಳಿಂದ ಅನುಭವಿಸಲ್ಪಡತಕ್ಕ ಸಮಸ್ತ ಐಹಿಕಾಮುಷ್ಮಕ ಸುಖವನ್ನು ಅಸ್ಥಿರವ ನ್ನಾಗಿಯೂ, ಅಸಾರವನ್ನಾಗಿಯೂ, ಆತ್ಮಕಲ್ಯಾಣಕ್ಕೆ ವಿರೋಧಿಯನ್ನಾಗಿಯೂ, ಕೊನೆಗೆ ದುಃಖರೂಪವನ್ನಾಗಿಯ, ನಿಶ್ಚಯಿಸಿ ತಪೋಮಹಿಮೆಯಿಂದ ಘಾತಿಕರ್ಮಗಳೆಂಬ ಆತ್ಮಶತ್ರುಗಳನ್ನು ಗೆದ್ದು, ಅನಂತಜ್ಞಾನ, ದರ್ಶನ, ವೀರ್ಯ, ಸುಖರೂಪವಾದ, ಮುಕ್ತಿಯನ್ನಪೇಕ್ಷಿಸಿದರೆಂದರ್ಥ. ತಾವು ಲೋಕಾನುಭವ ವಿರುದ್ಧವಾದ ಆಚರಣೆಯುಳ್ಳವರಾಗಿದ್ದರೂ ಆತ್ಮತತ್ವ ಸ್ವರೂಪಕ್ಕೆ ಅನುರೂಪವಾದ ಕ್ರಮವುಳ್ಳವರಾಗಿದ್ದೀರಿ. ಅಂದರೆ ಕರ್ಮ ಬದ್ದರಾದ ಸಂಸಾರಿ ಜೀವಗಳ ರೀತಿಯನ್ನು ತ್ಯಜಿಸಿ, ನಿತ್ಯ ನಿರ್ಭಾಧ ನಿರುಪಮ ಸುಖರೂಪವಾದ ಮೋಕ್ಷಪದವಿಯನ್ನು ಪಡೆದಿರುತ್ತೀರೆಂದು ಭಾವವು. ಇಲ್ಲಿ ವ್ಯಾಜಸ್ತುತಿಯೆಂಬ ಅಲಂಕಾರದಿಂದ ಸ್ತುತಿಯರಾಗಿದೆ, ಆಗಾಧತಾಬ್ಸ್ಸಯತಃಪಯೋಧಿ ರ್ಮೆರೋಶ್ಚ ತುಂಗಾಪ್ರಕೃತಿಪ್ಪಯತ್ರ | 2 | ದ್ಯಾವಾಪೃಥಿವೊ ಪೃಥುತಾತಥೈವ ಲಿಖN ವ್ಯಾಸತ್ವದೀಯಾಭುವನಾಂತರಾಣಿ || 1 || 8 || 8. ತಾ|| ಓ ಜಿನನಾಥರೇ! ಸರ್ವಂದ್ರಕ್ಕೆ ಆಳವೆಂಬ ಗುಣವು ಸ್ವಭಾವ ವಾಗಿದೆ. ಎತ್ತರವಾಗಿರುವುದು ಮೇರುಪರ್ವತಕ್ಕೆ ಸ್ವಭಾವಗುಣವಾಗಿದೆ. ಭೂಮಿ ಮತ್ತು ಆಕಾಶಗಳಿಗೆ ದಪ್ಪವಾಗಿರುವಿಕೆ (ವಿಶಾಲತೆ) ಎಂಬ ಗುಣವು ಸ್ವಭಾವವಾಗಿದೆ. ಈ ಗುಣಗಳು ಆಯಾಯ ವಸ್ತುಗಳಲ್ಲಿ ಸ್ವಭಾವವಾಗಿರು ವಂತೆ ತಮ್ಮ ಗಂಭೀರಭಾವವೂ, ಉನ್ನತತ್ವ (ಎಲ್ಲರಿಗಿಂತಲೂ ಉತ್ಕೃಷ್ಟ ರಾಗಿರುವ) ಗುಣವೂ, ಕೇವಲಜ್ಞಾನಮೂಲಕ ಲೋಕಾಂತರ (ಸ್ವರ್ಗಾದಿ)ಗಳನ್ನು ವ್ಯಾಪಿಸುವ ಗುಣವೂ, ತಮ್ಮ ಸ್ವಭಾವಗುಣಗಳಾಗಿವೆ. ಆದುದರಿಂದ ವರಾತಿಗೂ ಮನಸ್ಸಿಗೂ ಅಗೋಚರವಾದ ತಮ್ಮ ಮಹಾತ್ಮವನ್ನು ಯಾರು ಹೊಗಳಲು ಶಕ್ತರಾದಾರೆಂದಭಿಪ್ರಾಯವು, ಅನಂತಜ್ಞಾನವೇ ಆಕಾರವಾಗಿವುಳ್ಳ ಪರವರಾತ್ಮ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy