________________ ವಿಜ್ಞಾಪನಾ ಸಭೆ ಸವರಾರಂಭಗಳಲ್ಲಿ ತಮ್ಮ ಸಾದಾ ವೇಷಭೂಷಣದಲ್ಲಿ ಕಾಣಿಸಿಕೊಳ್ಳುವ ಇವರು ಆನೇಕ ಧಾರ್ಮಿಕ ಸಂಸ್ಥೆಗೆ ಉದಾರ ಮನಸ್ಸಿನಿಂದ ಸಹಾಯ ಸಲ್ಲಿಸುತ್ತಾ ಬಂದಿದ್ದಾರೆ. . ಈ ಧರ್ಮಪ್ರೇಮಿಗಳು 30-10-1988 ರಂದು ಜರುಗಿದ ಶತಾಬ್ದ ಕಾರ್ಯಕ್ರಮದ ಜ್ಞಾಪಕಾರ್ಥವಾಗಿ ಈ “ಭಾಮರಾದಿ ಪಂಚಸ್ತೋತ್ರ ಭಾವಪ್ರಕಾಶಿಕಾ' ರವ ಎಂಬ ಗ್ರಂಥದ ದ್ವಿತೀಯ ಮುದ್ರಣದ 600 ಪ್ರತಿಗಳಿಗೆ ಧನಸಹಾಯ ಮಾಡಿರುತ್ತಾರೆ. ಇದಕ್ಕಾಗಿ ಇವರಿಗೆ ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ ಅಭಾರಿಯಾಗಿದೆ. - ಇವರಿಗೆ ಭಗವಂತನು ಇನ್ನೂ ಹೆಚ್ಚಿನ ಆಯುರಾರೋಗ್ಯ, ಸಹಾಯ ವರಾಡುವ ಶಕ್ತಿ ದಯಪಾಲಿಸಲೆಂದು ಹಾರೈಸುವ, ಪಂಡಿತರು ಎ. ಶಾಂತಿರಾಜಶಾಸ್ತಿ ಟ್ರಸ್ಟ್, ಪೂರ್ವದಲ್ಲಿ ಶ್ರೀ ವರಾನತುಂಗಾಚಾರ್ಯರು, ಶ್ರೀಸಿದ್ದ ಸೇನದಿವಾಕರರು, ಶ್ರೀ ವಾದಿರಾಜರು, ಶ್ರೀ ಧನಂಜಯಂಕವಿಯು, ಶ್ರೀ ಭೂಪಾಲರು ಎಂಬ ಈ ಐದು ಮಂದಿ ಕವಿ ಶ್ರೇಷ್ಠರು ಕ್ರಮವಾಗಿ ಭಕ್ತಾಮರಣೋತ್ರ, ಕಲ್ಯಾಣ ಮಂದಿರಸೊತ್ರ, ಏಕೀಭಾವಸ್ತೋತ್ರ, ವಿಷಾಪಹಾರಸ್ತೋತ್ರ, ಭೂಪಾಲ ಸ್ತೋತ್ರ ಎಂಬ ಈ ಐದು ಸ್ತೋತ್ರಗಳನ್ನು ತಮ್ಮ ಆಪತ್ಪರಿಹಾರಾರ್ಥವಾಗಿ ಭವರೋಗವೈದ್ಯನಾದ ಶ್ರೀ ಜಿನೇಶ್ವರನನ್ನು ತಮ್ಮ ಶುದ್ಧಾಂತಃಕರಣದಿಂದ ಸ್ಮರಿಸುತ್ತಾ ಭಕ್ತಿರಸದಲ್ಲಿ ಮಗ್ನರಾಗಿ ರಚಿಸಿರುತ್ತಾರೆ. ಇವರಲ್ಲಿ ಮೊದಲನೇ ವಾನತುಂಗಾಚಾರ್ಯರಿಗೆ ಭೋಜರಾಜನು 48 ಬಂಧನಗಳಿಂದ ಮರು ಮರಾವರ್ತಿ ಉಪಸರ್ಗವನ್ನು ಮಾಡಿಸಿದನು. ಈ ವಿಪತ್ಪರಿಹಾರಕ್ಕಾಗಿ ಯಂತ್ರ ಮಂತ್ರಗಳಿಂದ ಕೂಡಿದ 48 ಶ್ಲೋಕ ಪರಿಮಿತ ವಾದ ಭಕ್ತಾಮರಣೋತ್ರವನ್ನು ಮಾಡಿ, ತಮ್ಮ ಉಪಸರ್ಗವನ್ನು ನಿವಾರಣೆ ಮಾಡಿಕೊಂಡು ರಾಜನಿಂದಲೂ ಪೂಜಿಸಲ್ಪಟ್ಟರು. ಎರಡನೇ ಸಿದ್ದ ಸೇನ ದಿವಾಕರರು ಪಾಂಡುರೋಗ ನಿವಾರಣೆಗಾಗಿ ಕಲ್ಯಾಣಮಂದಿರಸ್ತೋತ್ರವನ್ನು ಮಾಡಿ ಇದರ ಮಾಹಾತ್ಮದಿಂದ ಆಪತ್ಪರಿಹಾರವಾಗಿ ಬಂಗಾರದಂತೆ ಶರೀರ ವುಳ್ಳವರಾಗಿ ರಾಜಪೂಜಿತರಾದರು. ನಾಲ್ಕನೇ ಧನಂಜಯಕವಿಯು ವಿಷ ನಿವಾರಣಾರ್ಥವಾಗಿ ವಿಷಾಪಹಾರಸ್ತೋತ್ರವನ್ನು ರಚಿಸಿದನು. (ಈ ಕವಿಗಳ ವಿಸ್ತಾರವಾದ ಕಥೆಗಳನ್ನು ಪ್ರಕಾಶಪಡಿಸಬೇಕೆಂದು ಉದ್ದೇಶವಿತ್ತು. ಆದರೆ ಕೆಲವು ಕವಿಗಳ ಕಥೆಗಳು ದೊರೆಯದಿದ್ದ ಕಾರಣ ಶ್ರೀ ವರಾನತುಂಗಾಚಾರ್ಯರ ವಿಷಯವು ಸ್ವಲ್ಪ ಮಾತ್ರ ಪ್ರಕಾಶಿಸಲ್ಪಟ್ಟಿದೆ. ಮಿಕ್ಕ ಕಥೆಗಳು ಸಂದರ್ಭಾನು ಗುಣವಾಗಿ ಮುಂದಕ್ಕೆ ಪ್ರಕಾಶಿಸಲ್ಪಡುವುವು). ಈ ಪಂಚಸ್ತೋತ್ರಗಳು ನಮ್ಮ ಜೈನಮತಸ್ಥರಿಗೆಲ್ಲಾ ಬಹಳ ಪೂಜ್ಯ ವಾದವುಗಳಾಗಿವೆ. ಅನೇಕರು ಬಹಳ ಶ್ರದ್ದೆಯಿಂದ ಪ್ರತಿನಿತ್ಯವೂ ಪಠನ ವರಾಡುತ್ತಾರೆ. ಅನೇಕರು ಇದರಿಂದುಂಟಾಗುವ ಫಲವನ್ನು ಪಡೆದಿರುತ್ತಾರೆ. ಭಕ್ತಿರಸದಿಂದ ಭರಿತವಾದ ಈ ಸ್ತೋತ್ರಗಳನ್ನು ನೋಡಿ ಭಿನ್ನಮತೀಯರು