________________ ಪ್ರಕಾಶಕರ ವಿಜ್ಞಾಪನೆ . ಸಮರ್ಪಣೆ ಈ ಗ್ರಂಥದ 500 ಪ್ರತಿಯನ್ನು ಹಿಂದೆ ೧೯೧೩ರಲ್ಲಿ ಶ್ರೀ ಶಾಂತಿರಾಜ ಶಾಸ್ತ್ರಿಗಳವರೇ ಸಮಾಜಬಾಂಧವರ ನಿತ್ಯ ಬಳಕೆಗಾಗಿ ಈ ಪಂಚಸ್ತೋತ್ರ ಗ್ರಂಥ ವನ್ನು ಭಾವಾರ್ಥ ಸಹಿತ ಮುದ್ರಣ ಮಾಡಿಸಿ “ಪಂಚಸ್ತೋತ್ರ ಭಾವ ಪ್ರಕಾಶಿಕಾ” ಎಂಬ ಶಿರೋನಾಮದಲ್ಲಿ ಪ್ರಕಾಶಪಡಿಸಿದ್ದರು, * ಈಗ ಈ ಗ್ರಂಥದ (600 ಪ್ರತಿಗಳು) ದ್ವಿತೀಯ ಮುದ್ರಣಕ್ಕೆ ಬೆಳಗಾವಿಯ ಧರ್ಮಾಭಿಮಾನಿಗಳಾದ ಶ್ರೀ ಜೀವಂಧರ ಸಾತಪ್ಪ ಹಣಮಣ್ಣವರ ರವರು ಮುಂದಾಗಿರುವುದು ಶ್ಲಾಘನೀಯ. ಈ ಮುದ್ರಣದಲ್ಲಿ ಸಾಧ್ಯ ವಾದಷ್ಟೂ ತಪ್ಪು-ಒಪ್ಪುಗಳನ್ನು ಗಮನಿಸಿ ಸರಿಪಡಿಸಲಾಗಿದೆ. ಹಳೆಯ ವರಾದರಿಯ ಅಕ್ಷರಗಳಿಗೆ ಬದಲಾಗಿ ಆಧುನಿಕ ಮಾದರಿಯ ಅಕ್ಷರಗಳನ್ನು ಬಳಸಲಾಗಿದೆ. ಹಾಗೂ ಕೆಲವು ಕ್ಲಿಷ್ಟವಾದ ಪದಗಳ ಬದಲು ಸರಳ ಪದ ಗಳನ್ನು ಬಳಸಿ ಮೂಲಕೃತಿಗೆ ಯಾವ ರೀತಿಯ ಅಪಚಾರವೂ ಆಗದಂತೆ ವಿಷಯಾನುಕ್ರಮ ಒಂದನ್ನು ಸೇರಿಸಿ, ಸ್ವ|| ಎ. ಶಾಂತಿರಾಜಶಾಸ್ತ್ರಿಗಳವರ ವಲ ಮುನ್ನುಡಿಯೊಡನೆ ಭಕ್ತಾಮರಾದಿ ಪಂಚಸ್ಮತ್ರ ಭಾವಪ್ರಕಾಶಿಕಾ ಎಂದು ಗ್ರಂಥದ ಶಿರೋನಾಮದ ವಾರ್ಪಾಟಿನೊಂದಿಗೆ ಈ ಗ್ರಂಥವನ್ನು ಪ್ರಕಾಶಪಡಿಸಲಾಗಿದೆ, ಈ ಮುದ್ರಣಕ್ಕೆ ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಕರ್ಮ ಯೋಗಿ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಸ್ವಾವಿರಾಜಿಯವರು 'ಶುಭಾಶೀ ರ್ವಚನ' ದಯಪಾಲಿಸಿರುತ್ತಾರೆ. ಅವರಿಗೆ ಈ ಟ್ರಸ್ಟ್ ಭಕ್ತಿಪೂರ್ವಕ ವಂದನೆ ಗಳನ್ನು ಸಮರ್ಪಿಸುತ್ತದೆ. ಬಾದಾಮಿ, * ಈ ಗ್ರಂಥದ ಪ್ರತಿಯು ನಮ್ಮಲ್ಲಿಲ್ಲದೆ ಪುನರ್ಮುದ್ರಣಕ್ಕೆ ತೊಂದರೆ ಯರಾಗಿದ್ದಾಗ ಇದರ ಮೂಲ ಪ್ರತಿಯನ್ನೊದಗಿಸಿಕೊಟ್ಟ ತುಮಕೂರಿನ ಶ್ರೀ ಸಿ, ರಾಮಚಂದ್ರಸ್ಮಾದ್ಯಾದಿ ಹಾಗೂ ಮೂಡಬಿದಿರೆಯ ಡಾ|| ಎಂ. ಪಿ. ರವಿ ಕೀರ್ತಿರವರಿಗೂ, ಈ ಗ್ರಂಥವನ್ನು ಅಚ್ಚುಕಟ್ಟಾಗಿ ಮುದ್ರಿಸಿಕೊಟ್ಟ ಬೆಂಗಳೂರಿನ ಲೋಟಸ್ ಪ್ರಿಂಟರ್ಸ್ನ ವರಾಲಿಕರವರಿಗೂ, ಅಂದವಾದ ರಕ್ಷಾಕವಚವನ್ನು ರಚಿಸಿಕೊಟ್ಟ ಬೆಂಗಳೂರಿನ ಶ್ರೀ ಆರ್. ಎಸ್. ಪದ್ಮರಾಜ್ ರವರಿಗೂ ಮತ್ತು ರಕ್ಷಾಕವಚವನ್ನು ಅಂದವಾಗಿ ಮುದ್ರಿಸಿಕೊಟ್ಟ ಬೆಂಗಳೂರಿನ ಬಿ.ಬಿ.ಡಿ. ಪವರ್ ಪ್ರೆಸ್‌ನ ವರಾಲೀಕರಿಗೂ ಟ್ರಸ್ಟ್ ಕೃತಜ್ಞವಾಗಿದೆ. ರವಿವಾರ ದಿನಾಂಕ 20-10-1988 ರಂದು ಬೆಳಗಾವಿಯ ವರಾಣಿಕ ಬಾಗ ಬೋರ್ಡಿಂಗಿನ ಆವರಣದಲ್ಲಿ ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಮತ್ತು ಬಿ. ಬಿ. ಪಾಟೀಲರುಗಳ ಶತಮಾನೋತ್ಸವವನ್ನು ಒಳ್ಳೆಯ ಉತ್ಸಾಹಪೂರ್ಣ ವಾತಾವರಣದಲ್ಲಿ ಆಚರಿಸಲಾಗುತ್ತಿತ್ತು. ಈ ಕಾರ್ಯಕ್ರಮ ವೀಕ್ಷಣೆಗಾಗಿ ಶ್ರೀ ಜೀವಂಧರ ಸಾತಪ್ಪ ಹಣಮಣ್ಣವರ ವೆಲ್ಲಗೆ ಒಳ ಪ್ರವೇಶಿಸುತ್ತಲಿದ್ದರು. ಅವರನ್ನು ಕಂಡ ಶ್ರೀ ಅ, ನಾ, ಚಂದ್ರಕೀರ್ತಿಯವರು ವೇದಿಕೆಯಿಂದಿಳಿದು ಶಾಂತಿರಾಜಶಾಸ್ತ್ರಿಗಳ ಜನ್ಮಶತಮಾನೋತ್ಸವ ನಿಮಿತ್ತ ಅನೇಕ ಪುಸ್ತಕ ಪ್ರಕಟಣೆ ನೆರವೇರಬೇಕಾಗಿದೆ. ಕಾರಣ ತಮ್ಮ ಹಣದ ಸಹಾಯವಾದರೆ ಮಹದುಪಕಾರ ವಾಗುತ್ತದೆ ಎಂದು ಮೆಲುದನಿಯಲ್ಲಿ ಕೇಳುತ್ತಿದ್ದಂತೆಯೇ ಮರುಮಾತನಾಡದೆ ಎರಡು ಸಾವಿರದ ಐದುನೂರು ರೂಪಾಯಿಗಳ ದಾನವನ್ನು ಘೋಷಿಸಿ ಹಣ ವನ್ನು ಸಂದಾಯ ಮಾಡಿದ ವ್ಯಕ್ತಿಯನ್ನು ಸವರಾಜ ಮರೆಯುವಂತಿಲ್ಲ. ಶ್ರೀ ಜೀವಂಧರ ಸಾತಪ್ಪ ಹಣಮಣ್ಣವರು ಬೆಳಗಾವಿಯ ಸಮೀಪದಲ್ಲಿ ರುವ ಅನಗೋಳದಲ್ಲಿ ೧೯೩೭ರಲ್ಲಿ ಜನ್ಮ ತಾಳಿದರು. ಪ್ರಾರಂಭದಿಂದಲೂ ಕೃಷಿಯನ್ನೇ ಅವಲಂಬಿಸಿದ ಇವರು ತಮ್ಮ ತಾರುಣ್ಯದಲ್ಲಿ ಕಂಟ್ರಾಕ್ಟರ್ ವೃತ್ತಿ ಯನ್ನು ಕೈಗೆತ್ತಿಕೊಂಡು ಯಶಸ್ಸು ಪಡೆದರು. ಈಗ ಇವರೊಬ್ಬ ಒಳ್ಳೆಯ ಕಂಟ್ರಾಕ್ಟ್ದಾರ ಎಂದೇ ಹೆಸರು ಗಳಿಸಿದ್ದಾರೆ. ಶ್ರೀಯುತರು ಹಸನ್ಮುಖಿಗಳಾಗಿದ್ದು ಸ್ವಚ್ಛ ಮನಸ್ಸಿನವರಾಗಿದ್ದಾರೆ. ಸದೃಢ ದೇಹಹೊಂದಿದ ಇವರು ಎಲ್ಲರೊಂದಿಗೆ ಒಂದಾಗಿ ಸವರಾಜದ ಕೆಲಸಕ್ಕೂ ಕೈಗೂಡಿಸುತ್ತಲಿರುತ್ತಾರೆ. ಬೆಳಗಾವಿ ಜಿಲ್ಲಾ ತರುಣ ಸಂಘದ ಸಂಸ್ಥಾಪಕ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾ ಬಂದ ಇವರು ೧೯೮೪ರಲ್ಲಿ ಸಂಘದ ಅಧ್ಯಕ್ಷ ಸ್ಥಾನಕ್ಕೇರಿದರು. ಅದರಂತೆ ಅನಗೋಳದಲ್ಲಿರುವ ಸಾಪ್ತಾಹಿಕ ಫಂಡನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ ಶ್ರೇಯಸ್ಸು ಇವರದಾಗಿದೆ. ಸಾಮಾಜಿಕ ಕಾರ್ಯಗಳಿಗೆ ಮಹತ್ವ ಕೊಡುವ ಇವರು ಧಾರ್ಮಿಕ ಕಾರ್ಯ ಗಳಿಗೂ ಅತ್ಯಂತ ಹೆಚ್ಚಿನ ಮಹತ್ವ ಕೊಡುತ್ತಾರೆ. ಯಾವುದೇ ಧಾರ್ಮಿಕ ಬೆಂಗಳೂರು, ಪಂಡಿತರ 10-3-1989 ಸಿ ಸಿ ಎ, ಶಾಂತಿರಾಜಶಾಸ್ತಿ ಟ್ರಸ್ಟ್