SearchBrowseAboutContactDonate
Page Preview
Page 3
Loading...
Download File
Download File
Page Text
________________ BHAKTAMARADI PANCHASTOTRA BHAVAPRAKASHIKA Written in Kannada by Panditaratna A. Shanthiraja Shastry, Mysore. Published by: Panditaratna A. Shanthiraja Shastry Trust, Shanthi No. 369, 42nd Cross, 8th Block, Jayanagar, Bangalore-560 082. Second Edition, March 1989. Pp. (xvi+112) 1000 Copies, Price Rs. 10/ Panditaratna A. Shanthiraja Shastry Trust. ದ್ವಿತೀಯ ಮುದ್ರಣ : ಮಾರ್ಚ್ 1989 100 ಪ್ರತಿಗಳು * ಆಶೀರ್ವಚನ ಭಕ್ಕಾಮರ ಸ್ತೋತ್ರ, ಕಲ್ಯಾಣಮಂದಿರ ಸ್ತೋತ್ರ, ಏಕೀಭಾವ ಸೋತ್ರ, ವಿಷಾಪಹಾರ ಸ್ತೋತ್ರ ಹಾಗೂ ಭೂಪಾಲ ಸ್ತೋತ್ರಗಳನ್ನು ಜೈನ ಧರ್ಮಿಯರಂ ಪೂಜ್ಯಭಾವನೆಯಿಂದ, ಶ್ರದ್ಧಾಭಕ್ತಿಗಳಿಂದ ಪಠನ ಮಾಡುತ್ತಾರೆ. ಶ್ರೀ ವರಾನತುಂಗಾಚಾರ್ಯರು, ಶ್ರೀ ಸಿದ್ದ ಸೇನ ದಿವಾಕರರು, ಶ್ರೀ ವಾದಿರಾಜರು, ಶ್ರೀ ಧನಂಜಯರು, ಶ್ರೀ ಭೂಪಾಲರು ಈ ಸ್ತೋತ್ರ ಗಳನ್ನು ರಚಿಸಿದ್ದು ಪ್ರತಿಯೊಂದು ಶ್ಲೋಕದಲ್ಲಿಯೂ ಶ್ರೀ ಜಿನೇಶ್ವರರ ಅನಂತ ಗುಣಗಳನ್ನು ಸ್ತುತಿಸಿ ಭಕ್ತಿಭಾವದಿಂದ ಆರಾಧಿಸಲಾಗಿದೆ. ! ಭಕ್ತಮರಾದಿ ಸ್ತೋತ್ರಗಳನ್ನು ಹಲವರು ಬಾಯಿಪಾಠ ಮಾಡಿಕೊಂಡು ನಿತ್ಯವೂ ಪರನ ಮಾಡುತ್ತಾರೆ. ಸಂಸ್ಕೃತದಲ್ಲಿ ರಚಿತವಾಗಿರುವ ಈ ಸ್ತೋತ್ರ ಗಳ ಅರ್ಥವನ್ನು ತಿಳಿದರೆ ಮನಸ್ಸು ಮತ್ತಷ್ಟು ಆಕರ್ಷಿತವಾಗುತ್ತದೆ. ಅರ್ಥ ತಿಳಿಯದೆ ಪಠನ ಮಾಡುವುದಕ್ಕೂ, ಅರ್ಥ ತಿಳಿದಂ ಪಠನ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಸಂಸ್ಕೃತ ಶ್ಲೋಕದೊಡನೆ ಪ್ರತಿಯೊಂದು ಶ್ಲೋಕಕ್ಕೂ ಉತ್ತಮ ಭಾವಾರ್ಥವನರಿ ಎರ್ತೂರು ಶ್ರೀ ಶಾಂತಿರಾಜಶಾಸ್ತ್ರಿಗಳವರು ಬರೆದು ಉಪಕಾರ ಮಾಡಿದ್ದಾರೆ. ಸಂಸ್ಕೃತ ಅಧ್ಯಯನವು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಸಂಸ್ಕೃತ ಸೋತ್ರಗಳಿಗೆ ಕನ್ನಡದಲ್ಲಿ ಭಾವಾರ್ಥ ನೀಡುವ ಕಾರ್ಯ ಹೆಚ್ಚು ಹೆಚ್ಚು ನಡೆದರೆ ಸಂಸ್ಕೃತ ಬಾರದವರಿಗೆ ಮಹದುಪಕಾರ ಮಾಡಿದಂತಾಗುತ್ತದೆ. 1913 ರಷ್ಟು ಹಿಂದೆಯೇ ಶ್ರೀ ಶಾಂತಿರಾಜಶಾಸ್ತ್ರಿಗಳವರು ಬಹುಶಃ ಇದನ್ನು ಮನಗಂಡು ಈ ಗ್ರಂಥದ ಐದೂ ಸ್ತೋತ್ರಗಳಿಗೆ ಉತ್ತಮವಾದ ಭಾವಾರ್ಥವನ್ನು ಬರೆದು ಪ್ರಕಟಿಸಿದ್ದಾರೆ. ಅವರ ಜನ್ಮಶತಾಬ್ಬಿಯ ಸಂದರ್ಭ ದಲ್ಲಿ 'ಭಕ್ತಮರಾದಿ ಪಂಚಸ್ತೋತ್ರ, ಭಾವಪ್ರಕಾಶಿಕಾ' ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಕೃತಿಯ ಪುನರ್ ಮುದ್ರಣವಾಗುತ್ತಿರುವುದು ಅಭಿನಂದ ನಾರ್ಹವಾಗಿದೆ. ಕೃತಿಯ ಪುನರ್‌ಮುದ್ರಣದಲ್ಲಿ ನೆರವಾಗುತ್ತಿರುವ ಸಕಲರಿಗೆ ಸನ್ಮಂಗಲವಾಗಲಿ. ಶ್ರವಣಬೆಳಗೊಳ ಕರ್ಮಯೋಗಿ 10-3-1989 : ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬೆಲೆ : ಹತ್ತು ರೂಪಾಯಿಗಳು. ಪ್ರಥಮ ಮುದ್ರಣ : 1913 - ವರ್ಧಮಾನ ಮುದ್ರಣಾಲಯ, ಮೈಸೂರು, ದ್ವಿತೀಯ ಮುದ್ರಣ: 1989 - ಲೋಟಸ್ ಪ್ರಿಂಟರ್ಸ್, ಬೆಂಗಳೂರು,
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy