SearchBrowseAboutContactDonate
Page Preview
Page 45
Loading...
Download File
Download File
Page Text
________________ ಏಕೀಭಾವಸ್ತೋತ್ರ ವಾದಿರಾಜಮನುಶಾಬ್ಬಿ ಕಲೋಕೋ ಪಂಚಸ್ತೋತ್ರ ಭಾವಪ್ರಕಾಶಿಕಾ ದ 24, ತಾ|| ಓ ವೀತರಾಗಪರಮಾತ್ಮನೇ ! ಯಾವಮನುಷ್ಯನು ಅನಂತ ಜ್ಞಾನ, ಅನಂತ ದರ್ಶನ, ಅನಂತ ವೀರ್ಯ, ಅನಂತ ಸುಖ ಇವುಗಳೇ ಸ್ವರೂಪವಾಗಿವುಳ್ಳ ತಮ್ಮನ್ನು ಮನಸ್ಸಿನಲ್ಲಿಟ್ಟು ಶಾಸ್ತ್ರದಲ್ಲಿ ಹೇಳಿರುವ ವಿಧಿಪ್ರಕಾರವಾಗಿ ಭಕ್ತಿಯಿಂದ ಸ್ತೋತ್ರಮಾಡುತ್ತಾನೋ, ಅಂತಹ ಮನುಷ್ಯನು ಆ ಭಕ್ತಿಪೂರ್ವಕವಾದ ಸ್ತೋತ್ರಮಾಡಿದ ಮಾತ್ರದಿಂದಲೇ ಸಮಸ್ತವಾದ ಇಹಪರಲೋಕಗಳ ಭೋಗಗಳನ್ನೆಲ್ಲಾ ಅನುಭವಿಸಿ ಪೂರ್ತಿ ವರಾಡಿ ಶಾಸ್ತ್ರದಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿರುವ ಪಂಚಕಲ್ಯಾಣಗಳಿಗೂ ಪಾತ್ರನಾಗುತ್ತಾನೆ. ಜಿನಭಕ್ತಿ ಸ್ತೋತ್ರ ಪೂಜಾದಿಗಳಿಂದ ಸಕಲ ಶ್ರೇಯಸ್ಕೂ ಸಿದ್ಧಿಸುತ್ತದೇಂದಭಿಪ್ರಾಯವು. - ಭಕ್ತಿಪ್ರಜ್ವಮಹೇಂದ್ರಪೂಜಿತಪದತ್ಯತೀರ್ತನೇನಕ್ಷವಾಃ ಸೂಕ್ಷಜ್ಞಾನದೃಶೂಪಿಸಂಯಮಚ್ಛತಃಕೇಹಂತ 18 4 ಮಂದಾವಯಂ | ಅಸ್ವಾಭಿಸ್ತವನಚ್ಚಲೇನತುಪರಸ್ತ್ರಯಾದರಸ್ತನ್ಯ ತೇ ಸ್ವಾತ್ಮಾಧೀನಸುಬೈಷಿಣಾಂಸಖಲುನಃ ಕಲ್ಯಾಣಕಲ್ಪದ್ರುಮಃ - |25|| - 25. ತಾ|| ಭಕ್ತಿಯಿಂದ ಬಗ್ಗಿರುವ ದೇವೇಂದ್ರರುಗಳಿಂದ ಪೂಜಿ ಸಲ್ಪಟ್ಟ ಪಾದಾರವಿಂದವಳ್ಳ ಸ್ವಾಮಿಯೇ ! ತಮ್ಮನ್ನು ಸ್ತೋತ್ರಮಾಡುವ ವಿಷಯದಲ್ಲಿ ಸೂಕ್ಷಜ್ಞಾನದೃಷ್ಟಿಯುಳ್ಳ, ಸಂಯಮಧರರು (ಯತಿಗಳು) ಕೂಡಾ ಅಸಮರ್ಥರಾಗಿರುವಲ್ಲಿ ಮೂಢರಾದ ನಾವು ಎಷ್ಟುಮಾತ್ರದವರು ? ನಾವು ಸ್ವಲ್ಪವೂ ಅನರ್ಹರೆಂದು ಭಾವವು. ಹೀಗೆ ತಿಳಿದರೂ ಏತಕ್ಕೆ ಸ್ತೋತ್ರ ವರಾಡುತ್ತೀರೆಂದರೆ, ನಾವು ತಮ್ಮ ಸ್ತೋತ್ರವನ್ನು ವರಾಡುವ ನೆಪದಿಂದ ತಮ್ಮಲ್ಲಿ ಭಕ್ತಿಯನ್ನು ವ್ಯಕ್ತಪಡಿಸುತ್ತೇವೆ. ಆ ಭಕ್ತಿಪ್ರಕಟನೆಯು ಪರಾಧೀನ ವಾದ ಸಂಸಾರಸುಖಗಳನ್ನು ಬಿಡಿಸಿ ಆತ್ಮಾಧೀನವಾದ ನಿತ್ಯಸುಖರೂಪವಾದ ಮೋಕ್ಷವನ್ನಪೇಕ್ಷಿಸುವ ನಮ್ಮಂಥವರಿಗೆ ಆತ್ಮಕಲ್ಯಾಣವನ್ನು ಕೊಡುವ ಕಲ್ಪ * ವೃಕ್ಷವಲ್ಲವೇ ? ಇದರಿಂದ ಭಕ್ತಿಯ ಅತಿಶಯವು ತೋರುತ್ತದೆ. ವಾದಿರಾಜಮನುಕಾವ್ಯಕೃತಸ್ನೇ ವಾದಿರಾಜನುನುಭವ್ಯ ಸಹಾಯಃ | 26 || 26. ತಾ|| ಸಮಸ್ತ ವ್ಯಾಕರಣಶಾಸ್ತ್ರ ಪಂಡಿತರೂ ಈ ಏಕೀಭಾವ ಸ್ತೋತ್ರವನ್ನು ವರಾಡಿದ ವಾದಿರಾಜರಿಗಿಂತಲೂ ಕೀಳಾದವರು. ಸಮಸ್ತ ತರ್ಕಶಾಸ್ತ್ರ ಪಂಡಿತರೂ ವಾದಿರಾಜರಿಗಿಂತ ಕೀಳಾದವರು. ಉತ್ಕಷ್ಟಕಾವ್ಯ ಗಳನ್ನು ಮಾಡುವ ಕವಿಗಳೂ ವಾದಿರಾಜರಿಗಿಂತ ಕೀಳಾದವರು. ಮತ್ತು ಭವ್ಯಾತ್ಮರಿಗೆ ಸಹಾಯವನ್ನು ಮಾಡತಕ್ಕವರೂ ಕೂಡ ವಾದಿರಾಜರಿಗಿಂತಲೂ ಕೀಳಾದವರೇ ಹೊರತು, ಯಾರೂ ಇವರಿಗೆ ಸಮಾನರಿಲ್ಲ. “ಓ ಪಂಡಿತಮ್ಮನ ರಾದ ವಿದ್ವಾಂಸರುಗಳಿರಾ ! ಸಕಲ ವಿದ್ಯಾಪಂಡಿತರಾದ ವಾದಿರಾಜರಿಂದ ವಿರಚಿತವಾದ ಈ ಸ್ತೋತ್ರದಲ್ಲಿ ನೀವುಗಳು ವಾತ್ಸರ್ಯದಿಂದ ದೋಷವನ್ನೇ ಹುಡುಕಬೇಡಿರಿ” ಎಂದು ಲೋಕಕ್ಕೆ ತಿಳಿಸುವುದಕ್ಕೋಸ್ಕರ ಆತ್ಮಶ್ಲಾಘಿಯಂತೆ ತೋರುತ್ತಿರುವ ಈ ಕವಿಶ್ಚಾ ಘರೂಪವಾದ ಶ್ಲೋಕವು ರಚಿಸಲ್ಪಟ್ಟಿದೆಯ ಹೊರತು ಆತ್ಮಪ್ರಶಂಸೆಯಲ್ಲ. ಇದು ವಸ್ತುಸ್ಥಿತಿಯೆಂದು ಭವ್ಯಾತ್ಮರು ಭಾವಿಸಲಿ. ನಿವಸ | ಇತಿ ನಾದಿರಾಜ ಕೃತಂ | ಏಕೀಭಾವಸ್ತೋತ್ರಂ . 173) ಯವನ ಪರಿವಾರ ನ -ಈ - SSN
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy