________________ 67 ಪಂಚಕ್ಕೋತ ಭಾವಪ್ರಕಾಶಿಕಾ ಮಿಥ್ಯಾವಾದಂಮಲಮಪನುದನ್ನ ಪ್ರಭಂಗೀತರಂಗೈ ರಾಗಂಭೋಧಿರ್ಭುವನಮುಖಿಲಂದೇವಪರ್ಯತಿಯನ್ನೇ | ತಸ್ಯಾವೃತ್ತಿಂಸಪದಿವಿಬುಧಾಚೇತಸೈವಾಚಲೇನ ವ್ಯಾತನ್ವಂತಃಸುಚರನನ್ನು ತಾಸೇವಯಾತೃ ಪ್ಪುವಂತಿ 18 18. ತಾ|| ಓ ಅರ್ಹಂತ ದೇವನೇ ! ತಮ್ಮ ವಾಣಿಎಂಬುದೇ ಒಂದು ಸಮುದ್ರವು ಆ ಸಮುದ್ರಕ್ಕೆ ಸಪ್ತಭಂಗೀನ್ಯಾಯಗಳೇ ಅಲೆಗಳು. ಈ ಸಪ್ತ ಭಂಗೀನ್ಯಾಯಂಗಳೆಂಬ ತೆರೆವರಾಲೆಗಳಿಂದ ವಿಥ್ಯಾವಾದಗಳೆಂಬ ಕಲ್ಮಲಗಳು ಹೋಗಲಾಡಿಸಲ್ಪಟ್ಟು ಆ ತಮ್ಮ ದಿವ್ಯವಾಣಿ ಎಂಬ ಸಮುದ್ರವು ಸಮಸ್ತ ಲೋಕಗಳನ್ನು ವ್ಯಾಪಿಸುತ್ತದೆ. ಆ ತಮ್ಮ ದಿವ್ಯವಾಣಿ ಎಂಬ ಸಮುದ್ರವನ್ನು ದೇವತೆಗಳು, ವಿದ್ವಾಂಸರು, ಮನಸ್ಸೆಂಬ ಪರ್ವತದಿಂದ ಕಡೆದರು (ಚರ್ಚಿಸಿ ತತ್ವನಿಶ್ಚಯವನ್ನು ಹೊಂದಿದರು). ಅದರಿಂದುಂಟಾದ ಅಮೃತ ಸೇವನೆ ಯಿಂದ ಬಹುಕಾಲ ತೃಪ್ತಿಯನ್ನು ಹೊಂದುತ್ತಾರೆ. ತತ್ಯಶ್ರದ್ದಾನಿಗಳಿಗೆ ಕ್ರಮೇಣ ಮೋಕ್ಷವಾಗುವುದೆಂದಭಿಪ್ರಾಯವು, ಆಹಾರ್ಯಭ್ಯಸ್ಸಹಯತಿಪರಂಯಃ ಸ್ಯಭಾವಾದಹೃದ್ಯಃ ಶಸ್ತ್ರಗ್ರಾಹೀ ಭವತಿಸತತಂವೈರಿಣಾಯಶ್ಚಶಕ್ಯಃ | ಸರ್ವಾಂಗೇಷುತ್ವಮಸಿಸುಭಗಂನಶಕ್ಕಪರೇಷಾಂ ತಂಭೂಷಾವಸನಕುಸುಮೈತಿಕಿಂಚಶಸ್ತೆರುದತಿ | 19 || 19. ತಾ|| ಓ ಜಿನದೇವನೇ ! ಲೋಕದಲ್ಲಿ ಯಾವನು ಸ್ವಭಾವದಿಂದ ಸುಂದರನಲ್ಲವೋ ಅಂಥವನು ಕಾಂತಿ (ಚೆಲುವಿಕೆ)ಯನ್ನುಂಟು ಮಾಡತಕ್ಕ ಸ್ವಭಾವವುಳ್ಳ ಆಭರಣಗಳನ್ನು ಧರಿಸಿಕೊಳ್ಳಬೇಕೆಂದು ಆಸೆಪಡುವನು. ಅವ ಯವಗಳು ಸೌಂದರ್ಯವಾಗಿಲ್ಲದಿದ್ದರಲ್ಲವೇ ಅಂದಕಾಣುವುದಕ್ಕೆ ಒಡವೆಗಳ ನ್ನಿಟ್ಟುಕೊಳ್ಳಬೇಕು. ಮತ್ತು ಯಾವನು ವೈರಿಗಳಿಂದ ಜಯಿಸಲು ಶಕ್ಯನೋ ಅಂತಹವನಿಗೆ ಆತ್ಮಸಂರಕ್ಷಣೆಗೋಸ್ಕರ ಯಾವಾಗಲೂ ಆಯುಧವು ಬೇಕಾಗು | ವುದು. ತಾವಾದರೋ ಸರ್ವಾಂಗಗಳಲ್ಲಿಯೂ, ಸ್ವಭಾವದಿಂದಲೇ ಸೌಂದರ್ಯ | ವುಳ್ಳವರು ಮತ್ತು ಶತ್ರುಗಳಿಂದ ಜಯಿಸಲಶಕ್ಯರಾದವರು. ಆದುದರಿಂದ ( ಏಕೀಭಾವಸ್ತೋತ್ರ ತಮಗೆ ಆಭರಣ ವಸ್ತ್ರ ಪುಷ್ಪಗಳಿಂದೇನು ಪ್ರಯೋಜನ ? ಉತ್ಕೃಷ್ಟವಾದ ಅಸ್ತ್ರಶಸ್ತ್ರಗಳಿಂದೇನು ಪ್ರಯೋಜನ ?' ಸ್ವಾಮಿಯ ಜಾತರೂಪವಾದ ಆಕಾರವೇ ತಮ್ಮ ವೀತರಾಗತ್ವವನ್ನು ಪ್ರಕಟಿಸುತ್ತಿದೆ ಎಂದು ಭಾವವು. ಇಂದ್ರಸೇನಾಂತವಸುಕುರುತಾಂಕಿಂತಯಾಶ್ಲಾಘನಂತೇ ತಸ್ಯೆಯಂಭವಲಯಕರೀಕ್ಷಾ ಫ್ಯತಾಮಾತನೋತಿ | ತ್ವಂನಿಸ್ತಾರೀಜನನಜಲಧೇಸ್ಸಿದ್ಧಿ ಕಾಂತಾಪ ತ್ವಂಲೋಕಾನಾಂಪ್ರಭುರಿತಿತವಶ್ಚಾತ್ಯತೀಸ್ತೋತ್ರಂ | 20 || 20. ತಾ|| ಓ ವೀತರಾಗಪರಮಾತ್ಮನೇ ! ದೇವೇಂದ್ರನು ತಮಗೆ ಚೆನ್ನಾಗಿ ಸೇವೆಯನ್ನು ವರಾಡಲಿ ಅದರಿಂದ ತಮಗೊಂದು ಶ್ಚಾತ್ಯತೆಯುಂಟಾಗು ವುದಿಲ್ಲ, ಆ ಇಂದ್ರನು ಮಾಡುವ ಸೇವೆಯು ಆತನ ಭವಬಂಧವನ್ನು ಹೋಗ ಲಾಡಿಸಿಕೊಳ್ಳುವುದಕ್ಕೆ ಕಾರಣವಾಗಿ ಅವನಿಗೇ, ಶ್ಚಾತ್ಯತೆಯನ್ನು ಂಟುಮಾಡು ಇದೆ. ಯಾರು ವೀತರಾಗಪರಮಾತ್ಮನ ಸೇವೆಯನ್ನು ಮಾಡುತ್ತಾರೋ ಅದು ಅವರ ಪುಣ್ಯಬಂಧಕ್ಕೆ ಕಾರಣವಾಗುತ್ತದೆಯೇ ಹೊರತು ಅದರಿಂದ ಭಗವಂತನಿಗೆ ಶ್ಚಾತ್ಯತೆಯುಂಟಾಗುವುದಿಲ್ಲವೆಂದು ತಾತ್ಪರ್ಯವು, ತಾವಾದರೋ ತಮ್ಮ ಭಕ್ತರನ್ನು ಸಂಸಾರ ಸಮುದ್ರದಿಂದ ದಾಟಿಸತಕ್ಕವರು ಅಂದರೆ ವೀತರಾಗ ಪರಮಾತ್ಮ ಧ್ಯಾನದಿಂದ ಜನ್ಮಕಾರಣವಾದ ರಾಗದ್ವೇಷಗಳು ಕ್ಷಯವನ್ನು ಹೊಂದಿ ಧ್ಯಾನಿಸಿದವರು ವೀತರಾಗ ಪದವಿಯನ್ನು ಪಡೆಯುವರೆಂದಭಿ ಪ್ರಾಯವು, ತಾವು ಮುಕ್ತಿ ಎಂಬ ಕಾಂತೆಗೆ (ಮೋಕ್ಷಸಂಪತ್ತಿಗೆ) ಪತಿಯಾದ ವರು, ವಂತ್ತು ತಾವು ಸರ್ವಲೋಕಗಳಿಗೂ ಪ್ರಭುವಾದಂಥವರು, ಆದುದರಿಂದ ಈ ಪ್ರಕಾರ ತಮ್ಮ ಸ್ತೋತ್ರವು ಶ್ಲಾಘಿಸಲ್ಪಡುತ್ತದೆ. ವೃತ್ತಿರ್ವಾಚಾವಪರಸದೃಶೀನತ್ವವನ್ನೇನತುಲ್ಯತಿ ಸ್ತುತ್ಯುದ್ವಾರಾಃ ಕಥಮಿವತತಯ್ಯ ಮೀನಃ ಕ್ರಮಂತೇ || ನಂಭೂವಸ್ತದಪಿಭಗರ್ವಭಕ್ತಿಪೀಯೂಷ ಪುಷ್ಪಾ ಸ್ನೇಭವ್ಯಾನಾಮಭಿಮತಫಲಾಪಾರಿಜಾತಾಭವಂತಿ ||21||