SearchBrowseAboutContactDonate
Page Preview
Page 42
Loading...
Download File
Download File
Page Text
________________ 6 ಪಂಚಸೂತ್ರ ಭಾವಪ್ರಕಾಶಿಕಾ 15. ತಾ|| ಓ ಜಿನಪರವರಾತ್ಮನೇ ! ಅನಂತಜ್ಞಾನ ಸುಖಾದಿ ಎಂಟು ಗುಣಗಳಿಂದ ಪ್ರಕಾಶಿಸುವ ಪರಮಾತ್ಮನೇ ಒಂದು ಅಕ್ಷಯವಾದನಿಧಿಯು, ಈ | ನಿಧಿಯು, ನೋಡುವವರಿಗೆ (ಆತ್ಮಧ್ಯಾನಪರರಾದ ಯತಿಗಳಿಗೆ) ಅತ್ಯಾನಂದಕರ | ವಾದದ್ದು. ಇದು ಕರ್ಮವೆಂಬ ಭೂಮಿಯಿಂದ ಮುಚ್ಚಲ್ಪಟ್ಟು ಭೂವಿ | ಯೋಳಗಿರುವ ನಿಧಿಯಂತೆ ಸರ್ವಸಾಧಾರಣವಾಗಿ ಪಡೆಯಲು ಸಾಧ್ಯವಾಗ| ಲಾರದು. ಅಂತಹ ಪರಮಾತ್ಮನೆಂಬ ನಿಧಿಯನ್ನು ತಮ್ಮಲ್ಲಿ ಪರಮಭಕ್ತಿ | ಯುಳ್ಳವರು ಪ್ರಕೃತಿಸ್ಥಿತಿ ಅನುಭಾಗ ಪ್ರದೇಶಗಳೆಂಬ ನಾಲ್ಕು ಬಂಧ ಪ್ರಕೃತಿ ಸ್ವರೂಪವನ್ನೂ, ಆತ್ಮಸ್ವರೂಪವನ್ನೂ, ಪ್ರಕಾಶಪಡಿಸುವ ಸ್ತೋತ್ರಗಳೆಂಬ ಉತೃಷ್ಟಗುದ್ದಲಿಗಳಿಂದ ಅಗೆಯುವವರು (ತಮ್ಮನ್ನು ಧ್ಯಾನಿಸುವ ಭಕ್ತರು ಕೈಗೆ ತೆಗೆದುಕೊಳ್ಳುವರು) ಸ್ವಾಧೀನಪಡಿಸಿಕೊಳ್ಳುವರು. 1 , ಪ್ರತ್ಯುತ್ಪನ್ಮಾನರುಹಿನುಗಿರೇರಾಯುತಾಚಾವತಾಬ್ದ ಜ ರ್ಯಾದೇವತ್ವತ್ಪದಕಮಲಯೋತಿಸಜ್ಜ ತಾಭಕ್ತಿಗಂಗಾ || ( ಚೇತಸ್ತಸ್ಯಾಂನುನರುಚಿನಶಾದಾಪು ತಂtಾಳಿ ತಾಂಹ ಬಲ್ಲ 14 ಕಲಾ ಷ೦ಯದ್ಭವತಿಕಿಮಿಯಂದೇವಸಂದೇಹಭೂಮಿಃ ನವಜ 323 | 16 || CCA 16, `ತಾ ಓ ಜಿನದೇವನೇ ! ತಮ್ಮ ಪಾದಕಮಲಗಳಲ್ಲಿ ಸಂಬಂಧಿಸಿ ರುವ ಭಕ್ತಿಯೇ ಒಂದು ಗಂಗಾನದಿಯು. ಈ ಭಕ್ತಿಯೆಂಬ ಗಂಗೆಯು ಸ್ಯಾದ್ದಾದ ನ್ಯಾಯವೇಂಬ ಹಿಮವತ್ಪರ್ವತದ ದೆಸೆಯಿಂದಹಟ್ಟಿದ್ದು, ಲೋಕ ಸಿದ್ದವಾದ ಗಂಗಾನದಿಯು 'ಹಿಮವತ್ಪರ್ವತದಲ್ಲಿ ಹುಟ್ಟಿ ಸಮುದ್ರದಲ್ಲಿ ಸೇರು ವಂತೆ ಸ್ಯಾದ್ವಾದ ನ್ಯಾಯವೆಂಬ ಹಿಮವತ್ಪರ್ವತದಲ್ಲಿ ಹುಟ್ಟಿದ ಗಂಗೆಯು ಮುಕ್ತಿಯೆಂಬ ಆನಂದಸಮುದ್ರದಲ್ಲಿ ಸಂಗಮವಾಗುವುದು. ಈ ಪ್ರಕಾರ ವಾದ ತಮ್ಮ ಪಾದಭಕ್ತಿಯೆಂಬ ಗಂಗೆಯಲ್ಲಿ ನನ್ನ ಮನಸ್ಸು ಅತ್ಯಂತ ಶುಚಿಯ ದೆಸೆಯಿಂದ (ಪ್ರೀತಿಯಿಂದ) ಮುಳುಗಿತು. ಸಮಸ್ತ ಪಾಪನಾಶವನ್ನೂ ಹೊಂದಿ ಶುದ್ಧವಾದ ನನ್ನ ಮನಸ್ಸು ಬೆಳ್ಳಗಾಗುವುದೇ ನ್ಯಾಯವಾಗಿದ್ದರೂ ಕಲ್ಮಷವಾಯಿತು ಅಂದರೆ ನಾನಾ ಬಣ್ಣವಾಯಿತೆಂದು ಅರ್ಥತೋರುತ್ತದೆ, ಆಶ್ಚರ್ಯವನ್ನು ಹೊಂದಿತೆಂದು ಮುಖ್ಯಾರ್ಥವು ನಿರ್ಮಲವಾದ ಗಂಗೆಯಲ್ಲಿ ಸ್ನಾನಮಾಡಿದ ವಸ್ತು ಕೊಳೆ ಹೋಗಿ ನಿರ್ಮಲವಾಗಬೇಕೇ ಹೊರತು ಯಾವ ಜಪ, ಏಕೀಭಾವಸ್ತೋತ್ರ ಕಾರಣದಿಂದ ಕಲ್ಮಷವಾಯಿತೆಂಬುವುದೇ ನನಗೆ ಸಂದೇಹಾಸ್ಪದವಾಗಿದೆ. ದೇವನೇ, ಇದಕ್ಕೆ ಕಾರಣವನ್ನು ತಾವೇ ಅಪ್ಪಣೆ ಕೊಡಿಸಬೇಕು. ತಮ್ಮ ಪಾದಭಕ್ತಿಯಿಂದ ನನ್ನ ಮನಸ್ಸು ಪೂರ್ವರೀತಿಯನ್ನು ಬಿಟ್ಟು ಶುದ್ಧವಾಗಿ ವಿಚಿತ್ರ ಪರಿಣಾಮವನ್ನು ಹೊಂದಿತೆಂದರ್ಥವು, ಜಿನಭಕ್ತಿಗೆ ಗಂಗೆಯಂತೆ ಎಲ್ಲಾ ಗುಣಗಳೂ ಒಪ್ಪಿದರೂ ಕೂಡ ಇದರಲ್ಲಿ ಮುಳುಗಿದ ನನ್ನ ಮನಸ್ಸು ಚಿತ್ರವಾದುದರಿಂದ ಈ ಜಿನಭಕ್ತಿಯು ಗಂಗೆ ಹೌದೋ ಅಲ್ಲವೋ ? ಎಂಬು ದಾಗಿ ಸಂದೇಹಪಡಬಹುದಾಗಿದೆ. ಹಾಗೆ ಈ ತಮ್ಮ ಪಾದಭಕ್ತಿಯು ಸಂದೇಹಾಸ್ಪದವಲ್ಲ, ಕಲ್ಮಷವೆಂಬ ಪದಕ್ಕೆ ಚಿತ್ರವೆಂಬುದು ಪ್ರತಿಪದವಾದಂ ದರಿಂದ ನನಗೆ ಪೂರ್ವದಲ್ಲಿದ್ದ ಸಂಸಾರಮೋಹಗಳೆಂಬ ಪಾಪಗಳೆಲ್ಲಾ ಹೋಗಿ ಮನಸ್ಸಿನಲ್ಲಿ ವಿಚಿತ್ರವಾದ ಒಳ್ಳೆಯ ಪರಿಣಾಮ ಹುಟ್ಟಿತೆಂಬ ಅರ್ಥವನ್ನ೦ಗೀ ಕರಿಸಿ ಪೂರ್ವೋಕ್ತ, ಗಂಗಾನದಿಯ ಲಕ್ಷಣಗಳೆಲ್ಲಾ ತಮ್ಮ ಪಾದಭಕ್ತಿಯಲ್ಲಿ ಒಪ್ಪಿದೆಯಾದುದರಿಂದ ಈ ಭಕ್ತಿಯು ಸಂಪೂರ್ಣವಾಗಿ ಗಂಗೆಯೇ ಸರಿಯೆಂದು ತಾತ್ಪರ್ಯವು. ಪ್ರಾದುರ್ಭೂತರಪದಸುಖತ್ವಾಮನುಧ್ಯಾಯಮೇ ತೈಯ್ಯೋವಾಹಂಸಇತಿನುತಿರುತ್ಸದ್ಯ ತೇನಿರ್ವಿಕಲ್ಪಾ | ಮಿಥೈವೇಯಂತದಪಿತನುತೇತೃಪ್ತಿಮಬ್ರೇಷರೂಪಾಂ ದೋಷಾತ್ಮಾನೋ ವ್ಯಭಿಮುತಫಲಾತ್ಮಸಾದಾದ್ಭವಂತಿ || 17 || 17. ತಾ|| ಓ ಸ್ಥಿರವಾದ ಮುಕ್ತಿಸುಖವನ್ನು ಪಡೆದಿರುವ ಸ್ವಾಮಿಯೇ ! ತಮ್ಮನ್ನೇ ಧ್ಯಾನಿಸುತ್ತಿರುವ ನನಗೆ ನಾನು ಬೇರೆ ತಾವು ಬೇರೆಯಂಬ ಭೇದ ಬುದ್ದಿಯೇ ನಷ್ಟವಾಗಿ ನಿರ್ವಿಕಲ್ಪಕ (ಅಭೇದ) ಬುದ್ದಿಯು ಹುಟ್ಟುತ್ತದೆ. ಈ ನಿರ್ವಿಕಲ್ಪಕ ಸಮಾಧಿಯನ್ನು ಚೆನ್ನಾಗಿ ವಿಚಾರಿಸಿ ನೋಡುವಲ್ಲಿ ತಾವು ಕರ್ಮ ಕ್ಷಯವನ್ನು ಹೊಂದಿದ ಪರಿಶುದ್ದ ಪರಮಾತ್ಮಸ್ವರೂಪರು, ನಾನು ಕರ್ಮಿ ಯಾಗಿದ್ದೇನೆ, ತಾವೇ ನಾನೆಂಬುದು ಭಾವನಾಮಾತ್ರದಲ್ಲಿ ಹೊರತು ನಿಜ ವಾದದ್ದಲ್ಲ. ಹೀಗೆ ಸುಳ್ಳುಭಾವನೆಯಾದರೂ ತಮ್ಮ ಅನುಗ್ರಹದಿಂದ ಇಷ್ಟ ಫಲಗಳು ಸಿದ್ಧಿಯಾಗಿಯೇ ಆಗುತ್ತವೆ. 5
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy