SearchBrowseAboutContactDonate
Page Preview
Page 40
Loading...
Download File
Download File
Page Text
________________ 6 60 ಪಂಚಸೋತ ಭಾವಪ್ರಕಾಶಿಕಾ ಮುಳ್ಳುಗಳು ಹೇಗೆ ಬಾಧಿಸುವುವು ? ಅಂದರೆ ಮಹಾರಣ್ಯದಲ್ಲಿ ತಿರುಗುತ್ತಿರು. ವವನ ಕಾಲಿಗೆ ನಾನಾ ವಿಧವಾದ ಕ್ರೂರವಾದ ವಿಷದ ಮುಳ್ಳುಗಳು ಚುಚ್ಚಿ ಕೊಂಡು ಹೇಗೆ ಬಾಧಿಸುವುವೋ, ಮತ್ತು ಸಿಂಹಶಾರ್ದೂಲ ಶರಭಗಜವ್ಯಾಘ್ರ ಸರ್ಪ ಮುಂತಾದ ಕ್ರೂರಮೃಗಗಳೂ ಹೇಗೆ ಬಾಧಿಸುವುವೋ, ಹಾಗೆ ಜೀವನು ಮಹಾರಣ್ಯದಂತೆ `ಭಯಂಕರವಾದ ಚತುರ್ಗತಿಗಳಲ್ಲಿ ತಿರುಗುತ್ತಿರುವವರೆಗೂ ಘೋರವಾದ ರೋಗಾದಿಗಳೇ ಮೊದಲಾದ ದುಃಖಗಳು ಬಾಧಿಸುವುವು. ಶುದ್ದ ಪರವೆರಾತ್ಮರೂಪವನ್ನೈದಿದ ತಮ್ಮ ದರ್ಶನ ಧರ್ಮೋಪದೇಶ ಶ್ರವಣಾದಿ ಗಳಲ್ಲಿ ನಿರತನಾದ ಭಕ್ತನನ್ನು ರೋಗಾದಿ ದುಃಖಗಳು ಬಾಧಿಸಲಶಕ್ತವಾಗಿ ಸ್ವತಃ ಏವನಿವರ್ತಿಸಿ ಹೋಗುವುದೆಂದಭಿಪ್ರಾಯವು, ಪಾಷಾಣಾತ್ಯಾತದಿತರಸವುಃಕೇವಲಂರತ್ನ ಮರ್ತಿ to: ರ್ಮಾನಸ್ತಂಭೋಭವತಿಚಪರಸ್ತಾದೃಶೋರತ್ನವರ್ಗ81 ದೃಷ್ಟಿ ಪ್ರಾಪೋಹರತಿಸಕಸಂವಾನರೋಗನರಾಣಾಂ ಕೀಲಿ ಪ್ರತಾ ಸರ್ಯದಿನಭವತಸ್ತಸ್ಯ ತಚ್ಛಕ್ತಿಹೇತುಃ |9 || 9. ತಾ ಓ ಜಿನರಾಜನೇ ! ತಮ್ಮ ಎದುರಿಗಿರುವ ಮಾನಸ್ತಂಭವು ನಾನಾ ರಮಯವಾಗಿದ್ದರೂ ಕಲ್ಲೆನಿಸಿಕೊಳ್ಳುವುದು. ಅದಕ್ಕಿಂತಲೂ ಬೇರೆ ಯಾದ ಕಲ್ಲುಗಳೂ, ಬೇರೆಯಾದ ರತ್ನಸಮೂಹವೂ, ಕಲ್ಲಿನಸ್ವರೂಪವಾದ ವಸ್ತುಗಳೇ. ಇವೆಲ್ಲವೂ ತನ್ನ ನಿಜರೂಪದಿಂದ ಕಲ್ಲುಗಳಾಗಿದ್ದರೂ, ಆ ಮಾನ ಸ್ತಂಭವು ವರಾತ್ತ ವರಾನಿಗಳ ಮಾನವನ್ನು ಸ್ತಂಭನಮಾಡುವುದು....ಆದಂದ ರಿಂದಲೇ ಇದಕ್ಕೆ ವರಾನಸ್ತಂಭವೆಂದು ಹೆಸರಾಯಿತು. ಮಾನಸ್ತಂಭವು ಇತರ ಕಲ್ಲುಗಳಂತೆ ತಾನೂ ಕಲ್ಲಾಗಿದ್ದರೂ ಮಾನಕಷಾಯವೆಂಬ ರೋಗವನ್ನು ಹೋಗಲಾಡಿಸುವ ಸಾಮರ್ಥ್ಯವು ತಮ್ಮ ಸನ್ನಿಧಾನದಲ್ಲಿರುವುದರಿಂದ ಉಂಟಾ ಯಿತು. ಅಚೇತನವಾದ ಮಾನಸ್ತಂಭಕ್ಕೂ ಆತ್ಮನ ರೋಗವಾದ ವಾನ ಕಷಾಯವನ್ನು ನಿಲ್ಲಿಸುವ ಸಾಮರ್ಥ್ಯವಿರಲು, ತಮ್ಮನ್ನು ಹೃದಯದಲ್ಲೇ ಧರಿಸಿರುವವರಿಗೆ ಸಕಲ ರೋಗಾದಿ ಶರೀರ ದುಃಖಗಳು ಪರಿಹಾರವಾಗುತ್ತದೆಂಬ ವಿಷಯದಲ್ಲಿ ಹೇಳತಕ್ಕದ್ದೇನೆಂದಭಿಪ್ರಾಯವು, a h ot ಗಣ, 09T0ದ ವnna ತಂದೆ ನಾ ಏಕೀಭಾವಸ್ತೋತ್ರ ಹೃದ್ಯ ಪ್ರಾಪ್ಲೊಮರುದಪಿಭವನ್ನೂರ್ತಿಶೈಲೈಸನಾಹೀ ಸದ್ಯಃಪುಂಸಾಂನಿರವಧಿರುಚಾಧೂಳಿಬಂಧಂಧುನತಿ! ಧ್ಯಾನಾಹೂತೋಹೃದಯಕಮಲ೦ಯಸ್ಯ ತು೦ಪ್ರವಿಷ್ಟ 1 ಪ್ರಸ್ಥಾಶಕೃತಿಕ ಇಹಭುವನೇ ದೇವಲೋಕೋಪಕಾರಃ ||10|| 10. ತಾ..ಓ ಜಿನನಾಥರೇ ! ತಮ್ಮ ದಿವ್ಯದೇಹವೆಂಬ ಪರ್ವತ ಸವಿಾಪದಲ್ಲಿ ಬೀಸಿದ ಮನೋಹರವಾದ ಗಾಳಿಯೂ ಕೂಡ ಯಾವ ಪುರುಷ ರನ್ನು ಸೋ೦ಕುತ್ತದೆ, ಅಂತಹ ಮನುಷ್ಯರು ದೇಹವಿರುವ ಪರಿಯಂತ ಅನುಭವಿಸಬೇಕಾದ ಮಹಾರೋಗವನ್ನು ಆ ಕ್ಷಣದಲ್ಲಿಯೇ ಧೂಳಿನಂತೆ ಕೊಡಹು ಇದೆ. ತಮ್ಮ ದೇಹಸ್ಪರ್ಶವುಳ್ಳ ಗಾಳಿಗೂಕೂಡ ಇಂತಹ ಸಾಮರ್ಥ್ಯವಿರು ವಲ್ಲಿ, ತಮ್ಮನ್ನು ಧ್ಯಾನದಿಂದ ಕರೆದು ಯಾವಭಕ್ತನು ತನ್ನ ಹೃದಯಕಮಲ ದಲ್ಲಿ ಸ್ಥಾಪಿಸಿಕೊಳ್ಳುತ್ತಾನೋ, ಓ ದೇವನೇ! ಅಂತಹ ಭಕ್ತರಿಗೆ ಈ ಲೋಕದಲ್ಲಿ ವರಾಡಲಶಕ್ಯವಾದ ಲೋಕೋಪಕಾರ ಯಾವುದು? ಅಂದರೆ ಅಂತಹ ಜಿನಭಕ್ತನು ಸರ್ವಪ್ರಾಣಿಗಳಿಗೂ ಆತ್ಮಕಲ್ಯಾಣಕ್ಕೆ ಯೋಗ್ಯವಾದ ಉಪಕಾರವನ್ನು ಮಾಡಲು ಶಕ್ತನೆಂದರ್ಥವು. ಇಂತಿ ಜಾನಾಸಿಂನನುಭವಭವೇಯಜ್ಞಯಾದೃಕ್ಷ ದುಃಖ ಜಾತಂಯಸ್ಯ ಸ್ಮರಣವುಪಿವೇಶವನ್ನಿಷಿನಷ್ಟಿ | ತ್ವಂಸರ್ವಶಃಸಕೃಪಇತಿಚತ್ವಾನುಸೇತೋಸ್ಮಿಭಕ್ಕಾ ಯತ್ನರ್ತವ್ಯ೦ತದಿಹವಿಷಯೇದೇವಏನಪ್ರಮಾಣಂ ||11|| 11. ತಾ|| ಓ ಸರ್ವಜ್ಞರೇ! ನಾನು ಯಾವಯಾವ ಜನ್ಮಗಳಲ್ಲಿ ಯಾವ ಯಾವ ಘೋರದುಃಖಗಳನ್ನನುಭವಿಸಿದೆನೋ ಅಂತಹ ಭವಭವಾಂತರ ದುಃಖ ಗಳನ್ನೆಲ್ಲಾ ಕೇವಲಜ್ಞಾನಿಯಾದ ತಾವು ತಿಳಿಯುತ್ತೀರಿ. ಮೋಹನೀಯ ಕರ್ಮದಿಂದ ಹತನಾದ ನಾನು ಹೇಳಲರಿಯೆನು. ಆ ದುಃಖಗಳನ್ನು ಸ್ಮರಿಸಿ ದರೂ ಕೂಡ, ನನಗೆ ಶಸ್ತ್ರಪ್ರಹಾರದಂತೆ ದುಃಖಕರವಾಗಿದೆ. ತಾವು ಸರ್ವಾ ತೃಗಳಿಗೂ ರಕ್ಷಕರೆಂದೂ ಪರಮ ದಯಾಳುವೆಂದೂ ಭಕ್ತಿಯಿಂದ ತಮ್ಮನ್ನು ರಕ್ಷಕರನ್ನಾಗಿ ಹೊಂದಿದ್ದೇನೆ (ಶರಣಾಗಿದ್ದೇನೆ). ಈ ಶರಣಾಗತನಾದ ನನ್ನನ್ನು ಹೇಗೆ ರಕ್ಷಿಸಬೇಕೊ ಆ ವಿಷಯದಲ್ಲಿ ಸ್ವಾಮಿಯಾದ ತಾವೇ ತಿಳಿಯಬಲ್ಲಿರಿ.
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy