SearchBrowseAboutContactDonate
Page Preview
Page 39
Loading...
Download File
Download File
Page Text
________________ ಪಂಚಸೋತ ಭಾವಪ್ರಕಾಶಿಕಾ 5. ತಾ | ಭಗವಂತನೇ ! ಲೋಕಕ್ಕೆಲ್ಲಾ ತಾವು ನಿಷ್ಕಾರಣ ಬಂಧು ವೆನಿಸಿದ್ದೀರಿ. ಈ ಸಮಸ್ತ ವಿಷಯವಾದ ಶಕ್ತಿಯ, ತಮ್ಮಲ್ಲಿಯೇ ನಿರ್ಭಾಧ ವಾಗಿದೆ. ತಮ್ಮಲ್ಲಿ ಭಕ್ತಿಯಿಂದ ಪೂರ್ಣವಾದ ನನ್ನ ಚಿತ್ರವೆಂಬ ಹಾಸಿಗೆ | ಯಲ್ಲಿಯೇ ಬಹುಕಾಲದಿಂದ ವಾಸಮಾಡುತ್ತಿರುವ ತಾವು ನನ್ನ ದುಃಖಗಳ ಸಮೂಹವನ್ನು ಹೇಗೆತಾನೇ ಸಹಿಸುವಿರಿ ? ನನ್ನ ಚಿತ್ರದಲ್ಲಿ ತಾವು ಇರುವುದ ರಿಂದಲೇ ನನ್ನ ಕ್ಷೇಶಗಳೆಲ್ಲಾ ನಷ್ಟವಾದುವೆಂದರ್ಥವು. ಜನ್ನಾಟನ್ಯಾಂಕಥನಪಿನಯಾದೇವದೀರ್ಘಂಭ್ರಮಿತ್ಸಾ ಪ್ರಾದೇಯಂತವನಯಕಥಾಸ್ಪಾರಹೀಯಷವಾಪೀ | ತಸ್ಯಾಮಧೇಹಿಮಕರಹಿಮವೂ ಹಶಿತೇನಿತಾಂತಂ ನಿರ್ಮಗ್ರಂವಾಂನಜಹತಿಕಥಂದುಃಖದಾವೋಪತಾಪಾಃ |6|| 6. ತಾ|| ಓ ದೇವರೇ ! ನಾನಾಜನ್ಮಗಳೆಂಬ ಘೋರಾರಣ್ಯದಲ್ಲಿ ಬಹುಕಾಲದಿಂದ ಸುತ್ತಿ ಸುತ್ತಿ ಬಳಲಿ ಬಾಯಾರಿ ಬೆಂಡಾದ ನನಗೆ ತಮ್ಮ ದಿವೋಪದೇಶರೂಪವಾದ ಜಿನವಾಣಿಯೆಂಬ ಅಮೃತದಿಂದ ತುಂಬಲ್ಪಟ್ಟ | ದೊಡ್ಡ ಸರೋವರವನ್ನು ಹೊಂದಿದನು. (ನಾನಾ ಯೋನಿಗಳಲ್ಲಿ ಜನಿಸಿ ಆಧಿವಾಧಿ ಜರಾಮರಣಾದಿಗಳೆಂಬ ನಾನಾ ದುಃಖಗಳನ್ನನುಭವಿಸುವ ಜೀವನಿಗೆ ತೀರ್ಥಂಕರರ ಧರ್ಮೋಪದೇಶವು ಸಕಲ ಸಂಸಾರ ದುಃಖಗಳನ್ನು ಪರಿಹರಿಸಿ ಅನಂತ ಸುಖರೂಪವಾದ ಮುಕ್ತಿಗೆ ಕಾರಣವಾದುದರಿಂದ ಅಮೃತಸರೋವರ ದಂತ ಸಮಸ್ತ ಸಂತಾಪ ಪರಿಹಾರಕವೆಂದರ್ಥವು), ಚಂದ್ರನಂತೆಯೂ, ಹಿಮ ರಾಸಿಯಂತೆಯೂ, ತಣ್ಣಗಿರುವ ಆ ಅಮೃತ ಸರೋವರದ ಮಧ್ಯದಲ್ಲಿ ಚೆನ್ನಾಗಿ ಮುಳುಗಿರುವ ನನ್ನನ್ನು ಪೂರ್ವೋಕ್ತ ಸಂಸಾರ ಸಂಬಂಧಿಯರಾದ ಗರ್ಭವಾಸ ಜನ್ಮಜರಾಮರಣಾದಿ ದುಃಖಗಳೆಂಬ ಕಾಡುಗಿಚ್ಚಿನ ಸಂತಾಪಗಳು ಹೇಗೆತಾನೇ ಬಿಡದಿರುವುವು ? ದ್ವಾದಶಾಂಗ ವೇದರೂಪವಾದ ಜಿನವಾಣಿಯ ಪರಿಶೀಲನೆ ಯಿಂದ ಆತ್ಮಾನಾತ್ಮ ವಿವೇಕವುಂಟಾಗಿ ರತ್ನತ್ರಯ ಸಂಪನ್ನನಾದವನಿಗೆ ಅನಾದಿ ಕರ್ಮಬಂಧದಿಂದುಂಟಾದ ಸಕಲ ಸಂಸಾರಿಕ ದುಃಖ ನಿವೃತ್ತಿಯುಂಟಾಗುವುದೇ ಹೊರತು ಮತ್ಯಾವುದೂ ಮೋಕ್ಷಕಾರಣವಾಗಲಾರದೆಂದಭಿಪ್ರಾಯವು, ಏಕೀಭಾವಸೂತ್ರ ಪಾದನಾಸಾದಪಿಚಪುನತೋಯಾತ್ರಯಾತೇತ್ರಿಲೋಕೀಂ ಹೇಮಾಭಾಸೋಭವತಿಸುರಭಿಶ್ರೀನಿವಾಸಕ್ಕೆ ಸಮ್ಮತಿ | ಸರ್ವಾ೦ಗೇಣಶತಿಭಗರ್ವಯ್ಯ ಶೇ ಷಂವನೋಮೇ ಶ್ರೇಯಃಕಿಂತಯನಹರಹರ್ಯನ್ನ ನಾನುಳ್ಳು ಪೈತಿ ||7|| 7. ತಾ|| ಓ ಭಗವಂತನೇ ! ತಾವು ಸಮವಸರಣ ವಿರಾಜವರಾನರಾಗಿ ಸಂಚರಿಸುತ್ತಿರುವಾಗ ಮೂರುಲೋಕವನ್ನು ಪರಿಶುದ್ದವನ್ನಾಗಿ ಮಾಡುವ ತಮ್ಮ ಪಾದಗಳನ್ನು ಇಟ್ಟಮಾತ್ರಕ್ಕೆ ದೇವತೆಗಳಿಂದ ಸಮರ್ಪಿಸಲ್ಪಟ್ಟ ಕಮಲವು ಬಂಗಾರದ ಕಾಂತಿಯುಳ್ಳದ್ದಾಗಿಯೂ, ಬಹಳ ಪರಿಮಳವುಳ್ಳ ದ್ದಾಗಿಯೂ, ಲಕ್ಷ್ಮೀನಿವಾಸಸ್ಥಾನವೆನಿಸುವುದಾಗಿಯೂ, ಮನೋಹರವಾಗು ಇದೆ. ತಮ್ಮ ಪಾದವೆಂಬ ಒಂದು ಅವಯಂವದ ಸ್ಪರ್ಶಮಾತ್ರದಿಂದಲೇ ಕಮಲವು ಸುವರ್ಣವಾಗಲಾಗಿ ನನ್ನ ಮನಸ್ಸು ಸಂಪೂರ್ಣವಾಗಿ ತಮ್ಮಲ್ಲಿಯೇ ಸೇರಿ ಸರ್ವಭಾಗದಿಂದಲೂ ತಮ್ಮನ್ನೇ ಸ್ಪರ್ಶಿಸುತ್ತಿರುವುದರಿಂದ ಪ್ರತಿದಿನವೂ ಯಾವ ಶ್ರೇಯಸ್ಸು ನನ್ನನ್ನು ಹೊಂದದು? ಅಂದರೆ ಮನಸ್ಸಿನಲ್ಲಿ ಸರ್ವದಾ ತಮ್ಮನ್ನೇ ಧ್ಯಾನಿಸುತ್ತಿರುವ ನನಗೆ ಪ್ರಾಪ್ತವಾಗದ ಶ್ರೇಯಸ್ಸು ಯಾವುದೂ ಇಲ್ಲ, ತಮ್ಮ ಧ್ಯಾನದಿಂದ ನನಗೆ ಸಮಸ್ತ ಶ್ರೇಯಕ್ಕೂ ಸಿದ್ಧಿಸಿತೆಂದಭಿಪ್ರಾಯವು. ಪಶ್ಯಂತಂದ್ವಚನವನ್ನು ತ೦ಭಕ್ತಿಪ್ರಾತಾಪಿಬಂತಂ ಕರ್ಮಾರಣ್ಯಾತ್ಪುರುಷಮಸವಾನಂದಧಾನಪ್ರವಿಷ್ಟ೦1 - ಕ್ಯಾಂದುರ್ವಾರರವುದಹರಂತೃಪ್ರಸಾದೈಕಭೂಮಿಂ ಕರಾಕಾರಾಃಕಥಮಿನರುಜಾಕಂಟಕಾನಿರ್ಲುಠಂತಿ |8|| 8. ತಾ|| ಓ ಜಿನನಾಥರೇ ! ಯಾವ ಭವ್ಯಾತ್ಮನು ತಮ್ಮ ದರ್ಶನ: ವನ್ನು ಮಾಡುವಂಥವನಾಗಿಯ, ತಮ್ಮ ಧರ್ಮೋಪದೇಶವೆಂಬ ಅಮೃತ ವನ್ನು ಭಕ್ತಿಯೆಂಬ ಪಾತ್ರೆಯಿಂದ ಕುಡಿಯುವನಾಗಿಯೂ, ಘೋರಕರ್ಮವೆಂಬ ಅರಣ್ಯವನ್ನು ದಾಟಿ ಅಪರಿಮಿತಾನಂದ ನಿಧಿಯಾದ ಪರಮಾತ್ಮಸ್ವರೂಪರಾದ, ತಡೆಯಲಶಕ್ಯವಾದ ಕಾಮನ ಗರ್ವವನ್ನು ಭಂಗಪಡಿಸಿದವರಾದ, ತಮ್ಮನ್ನು ಹೊಂದಿ ತಮ್ಮ ದಯೆಗೆ ಮುಖ್ಯಸ್ಥಾನಭೂತನಾಗಿಯೂ, ಇರುವನೋ ಅಂತಹ ಭವ್ಯಾತ್ಮನನ್ನು ಮಹಾ ಘೋರ ರೋಗಗಳೆಂಬ ಕ್ಷುದ್ರ ಶತ್ರುಗಳು ಹಾಗೂ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy