________________ ಪಂಚಸೂತ್ರ ಭಾವಪ್ರಕಾಶಿಕಾ ವಿಶ್ವೇಶ್ವರೊಪಿಜನಸಾಲ ಕದುರ್ಗತ ಕಿಂವಾಕ್ಷರಪ್ರಕೃತಿರಸ್ಕಲಿಸಿಮಿಶ | ಅಜ್ಞಾನವತ್ಯಸಿಸದೈವಕಥಂಚಿದೇವ - ಜ್ಞಾನಂತೈಯಿಸ್ಸು ರತಿವಿಶ್ವವಿಕಾಸಹೇತು | 30 || 30. ತಾ|| ಓ ಜಿನನಾಥರೇ ! ತಾವು ಪ್ರಪಂಚಕ್ಕೆ ಸ್ವಾಮಿ (ದೊರೆ) ಯರಾಗಿದ್ದರೂ, ಸರ್ವಜನರನ್ನೂ ಪರಿಪಾಲಿಸುವವರೆಂದು ಪ್ರಸಿದ್ದರಾದರೂ, ದರಿದ್ರರಾಗಿದ್ದೀರಿ, ಜನಪಾಲಕರಾಗಿದ್ದರೂ ದರಿದ್ರರಾಗಿದ್ದೀರೆಂಬ ಮಾತು ವಿರೋಧವಾಗಿ ತೋರುತ್ತದೆ, ಸಮಸ್ತ ವಿಷಯದಲ್ಲಿಯೂ ವೀತರಾಗರೆಂದು ಪರಿಹಾರಾರ್ಥವು. ತಮ್ಮ ಸ್ವರೂಪವನ್ನು ಬಹಳ ಕಷ್ಟದಿಂದ ತಿಳಿಯ | ಬೇಕೆಂದೂ, ಮತ್ತು ತಾವು ಸರ್ವಸಂಗ ಪರಿತ್ಯಾಗಿಯಾದ್ದರಿಂದ ಈ ಲೋಕ | ದಲ್ಲಿ ತಮಗೆ ಸ್ವತ್ತಾಗಿ ಅಭಿವರಾನವಿಷಯವಾದ ವಸ್ತುವು ಯಾವುದೂ ಇಲ್ಲ ವಾದ್ದರಿಂದ ದರಿದ್ರರೆಂತಲೂ, ಪರಿಹಾರಾರ್ಥವು, ತಾವು ಅಕ್ಷರಸ್ವಭಾವ (ವಿದ್ಯಾನಿಧಿ)ದವರಾಗಿದ್ದರೂ ಲಿಪಿ (ಅಕ್ಷರ) ಇಲ್ಲದವರೆಂಬುದಾಗಿ ವಿರುದ್ದಾರ್ಥ ವನ್ನು ತೋರಿಸುತ್ತದೆ. ತಾವು ಸರ್ವವಿದ್ಯೆಗಳ ಮೂಲಸ್ವರೂಪರು (ಪರಮಾತ್ಮ ಸ್ವರೂಪರು) ಅನಂತಜ್ಞಾನ ಸುಖಸ್ವರೂಪರು. ಆಲಿಪಿ! ಅಂದರೆ, ಅಕ್ಷರ ರೂಪವಾದ ವಾಣಿಯಲ್ಲದ ದಿವ್ಯಧ್ವನಿಯುಳ್ಳವರು, ಮತ್ತು ಅಲಿಪಿಃ ಅಂದರೆ, ಕರ್ಮಲೇಪವಿಲ್ಲದವರು, ಹಣೆಯ ಬರಹವಿಲ್ಲದವರು (ಪುನಃ ಜನ್ಮವಿಲ್ಲದವರು) ತಾವು ಅಜ್ಞಾನಿಯಾಗಿದ್ದರೂ ಜ್ಞಾನವುಳ್ಳವರು ಅಂದರೆ, ವಿರೋಧವಾಗಿ ತೋರುತ್ತಿದೆ. ಘಾತಿಕರ್ಮಕ್ಷಯವನ್ನು ಹೊಂದಿರುವುದರಿಂದ ಇಂದ್ರಿಯ ಮೂಲಕ ಉಂಟಾಗುವ ಲೋಕಪ್ರಸಿದ್ಧವಾದ ಸಂಸಾರ ಸಂಬಂಧಿಯಾದ ಜ್ಞಾನದಲ್ಲದೆ ಒಂದೇಕಾಲದಲ್ಲಿ ಸಮಸ್ತ ಲೋಕಾಲೋಕವನ್ನೂ ನೋಡುವ ಪಂಚಮಜ್ಞಾನವೆಂಬ ಕೇವಲಜ್ಞಾನವುಳ್ಳವರೆಂದು ಪರಿಹಾರಾರ್ಥವು. ಇಂದ್ರಿಯದಿಂದ ಹುಟ್ಟುವ ಜ್ಞಾನವು ಮಿತವಾದದ್ದನ್ನು ತಿಳಿಯುವುದು ಈ ಕೇವಲಜ್ಞಾನವಾದರೋ ಅಪರಿಮಿತಪ್ರಪಂಚವನ್ನು ಒಂದೇ ಕಾಲದಲ್ಲಿ ತಿಳಿಯುವಂತಹುದು. ಆದುದರಿಂದ ತಮ್ಮ ಮಹಿಮಯು ಬಹಳ ವಿಚಿತ್ರ ವೆಂದು ಭಾವವು. ಕಲ್ಯಾಣಮಂದಿರಸ್ತೋತ್ರ ಪ್ರಾಗ್ವಾರಸಂಭ್ರತದನಭಾಂಪಿರಚಾಂಸಿರೋಷಾ ದುತ್ತಾಪಿತಾನಿಕನುನಶಖೇನಯಾನಿ | ಛಾಯಾಪಿರೈಸ್ತನನನಾಥಹಶಾಹತಾಶೋ ಗ್ರಸ್ತಮಾಭಿರಯಮೇವಪರಂದುರಾತ್ಮಾ | 31 || 31. ತಾ ಓ ವೀತರಾಗಸ್ವರೂಪನೇ ! ತಮ್ಮ ವೈರಿಯರಾದ ಕಮಠ ನೆಂಬ ದೈತ್ಯನು ತಾವು ಆತ್ಮಧ್ಯಾನದಲ್ಲಿರುವಾಗ ರೋಷದಿಂದ ಆಕಾಶ ಪ್ರದೇಶವನ್ನು ಆಕ್ರಮಿಸಿಕೊಳ್ಳುವಷ್ಟು ಧೂಳುಗಳನ್ನು ಏಳಿಸಿ ಘೋರೋಪ ಸರ್ಗವನ್ನು ಮಾಡಿದನು. ಆ ಕವಚಿಕೊಂಡ ಧೂಳುಗಳು ತಮ್ಮ ನೆರಳನ್ನೂ ಕೂಡ ಆಕ್ರಮಿಸಿಕೊಳ್ಳಲಿಲ್ಲ. ಆ ಮೂಢಾತ್ಮನಾದ ಕಮಠನೇ ಆ ಧೂಳು ಗಳಿಂದ ಆಕ್ರಮಿಸಲ್ಪಟ್ಟನು. ಅವನ ಕೋರಿಕೆಯು ನೆರವೇರದೆ ತನ್ನಿಂದ ಏಳಿಸಲ್ಪಟ್ಟ ಧೂಳುಗಳಿಂದ ತಾನೇ ಮುಚ್ಚಲ್ಪಟ್ಟನು. ಇಲ್ಲಿ ರಜಸ್ ಅಂದರೆ ಪಾಪವೆಂದೂ ಅರ್ಥವಾಗುತ್ತದೆ. ಮಹಾ ಮುನಿಗಳಾದ ತಮಗೆ ಪೂರ್ವಭವವೈರಿಯರಾದ ಆ ದೈತ್ಯನು ಘೋರೋಪಸರ್ಗವನ್ನು ಮಾಡಿ ತಾನೇ ರಜಸ್ಸಿನಿಂದ ಆಕ್ರಮಿಸಲ್ಪಟ್ಟನು. ಅಂದರೆ ಮಹಾ ಪಾಪಿಯಾದನೆಂದಭಿ ಪ್ರಾಯವು ಸುರುಷರಿಗೆ ಉಪದ್ರವವನ್ನು ಕೊಡುವವನು ಮಹಾ ವಿಪತ್ತನ್ನು ಹೊಂದುವನೇ ಹೊರತು ಸತ್ಪುರುಷರಿಗೆ ಯಾವ ಹಾನಿಯನ್ನೂ ಮಾಡಲಾರ ನೆಂದು ವಂುಖಾಭಿಪ್ರಾಯವು, ಯದ ರ್ಜ ದೂರ್ಜಿತಘನ್‌ಘಮದಭ್ರಚೀನ ) ಭ್ರಡಿನುಸಲಮಾಂಸಲಘೋರಧಾರಂ | ದೈತ್ಯನನುಕ್ರಮಥದುಸ್ತರವಾರಿಧಿ ತೇನೈವತಸ್ಯ ಜಿನದುಸ್ತರವಾರಿಕೃತ್ಯಂ 32. ತಾ|| ಓ ಜಿನನಾಥರೇ ! ಯಾವ ಕಮಠನೆಂಬ ದೈತ್ಯನು ತಮ್ಮ ತಪಸ್ಸನ್ನು ಕೆಡಿಸುವುದಕ್ಕೋಸ್ಕರ ಮಾಯೆಯಿಂದ ಗುಡುಗುವಿರಿಂಚುಗಳಿಂದ ಭಯಂಕರವಾಗಿ ಒನಕೆಯಷ್ಟು ದಪ್ಪವಾದ ಧಾರೆಯುಳ್ಳ ಮಳೆಯನ್ನು ಸುರಿಸಿ, ದಾಟುವದಕ್ಕಾಗದ ಪ್ರವಾಹವನ್ನುಂಟುಮಾಡಿದನೋ ಅದು ಅವನಿಗೇ ಕತ್ತಿಯ ಪೆಟ್ಟಿನಂತಾಯಿತು. ಮಹಾಮಹಿಮೆಯುಳ್ಳ ತಮಗೆ ಘೋರೋಪಸರ್ಗ