SearchBrowseAboutContactDonate
Page Preview
Page 32
Loading...
Download File
Download File
Page Text
________________ ಪಂಚಸೂತ್ರ ಭಾವಪ್ರಕಾಶಿಕಾ * ಕಲ್ಯಾಣಮಂದಿರಸ್ತೋತ್ರ 28. ತಾ|| ಓ ಕರ್ಮಶತ್ರುಗಳನ್ನು ಗೆದ್ದಂತಹ ಸ್ವಾಮಿಯೇ ! ದೇವತೆಗಳು ತಮಗೆ ನಮಸ್ಕಾರಮಾಡುವ ಕಾಲದಲ್ಲಿ ಅವರ ರತ್ನಮಯವಾದ ಕಿರೀಟಗಳಲ್ಲಿದ್ದ ಹೂವಿನ ಸರಗಳು ಆ ಕಿರೀಟಗಳನ್ನು ಬಿಟ್ಟು ತಮ್ಮ ಪಾದಗಳ ನ್ಯಾಶ್ರಯಿಸುತ್ತವೆ, ಆದರೆ ತಮ್ಮ ಸರ್ವಾವಯಗಳನ್ನು ಬಿಟ್ಟು ಹೂವುಗಳು ತಮ್ಮ ಪಾದಗಳನ್ನೇ ಆಶ್ರಯಿಸುವುದಕ್ಕೆ ಕಾರಣವೇನೆಂದರೆ ಸುವನಸ್ಸುಗಳೂ, ಜ್ಞಾನಿಗಳೂ ತಮ್ಮ ಪಾದಗಳನ್ನು ಬಿಟ್ಟು ಮತ್ತೆಲ್ಲಿಯೂ, ಪ್ರಕಾಶಿಸುವುದಿಲ್ಲ. ಶ್ರೀ ಜಿನೇಶ್ವರರು ಸರ್ವದೇವತೆಗಳಿಂದಲೂ ಪೂಜಿಸಲ್ಪಡುವ ಮಹಿಮೆಯುಳ್ಳವ ರೆಂದು ಭಾವವು. ಉದ್ಯೋತಿತೇಷುಭವತಾಭುವನೇಷುನಾಥ ತಾರಾ ತೊವಿಧುರಯಂನಿಹತಾಂಧಕಾರಃ | ಮುಕ್ತಾಕಲಾಸಕಲಿತೋರುಸಿತಾತಪತ್ರದ - ವ್ಯಾಜಾಧಾಧ್ಯತತನುಧುವಮಭ್ಯುಪೇತಃ.. 10 26 || - 26, ತಾ| ಓ ರಕ್ಷಕರೇ ! ತಮ್ಮಿಂದ ಈ ಸಮಸ್ತಲೋಕಗಳೂ ಪ್ರಕಾಶಿಸಲ್ಪಡುತ್ತಿರಲು ಸಮಸ್ತ ಕತ್ತಲೆಯನ್ನೂ ತೊಲಗಿಸುವಂತಹ ಈ ಚಂದ್ರನ ನಕ್ಷತ್ರಗಳೊಡನೆ ಕೂಡಿದವನಾಗಿ ಮುತ್ತಿನ ಕುಚ್ಚುಗಳಿಂದ ವ್ಯಾಪ್ತವಾಗಿರುವ ಶ್ವೇತಛತ್ರವೆಂಬ ನೆಪಮಾಡಿಕೊಂಡು (ಮುಡ) ಶರೀರ ವನ್ನು ಧರಿಸಿ ತಮ್ಮ ಸವಿಾಪವನ್ನು ಹೊಂದಿದ್ದಾನೆ. ಇದು ನಿಶ್ಚಯ. ಆದರೆ, ಚಂದ್ರನಿಂದಲೂ ಹೋಗಲಾಡಿಸಲಾರದ ಸಮಸ್ತ ಲೋಕ (ಜನ) ಗಳ ಅಜ್ಞಾನಾಂಧಕಾರಗಳನ್ನು ಹೋಗಲಾಡಿಸಿ ಶುಭ್ರ(ಪರಿಶುದ್ದ)ಗಳನ್ನಾಗಿ ವರಾಡಿದಿರೆಂಬ ವೈಭವವನ್ನು ಮುಕ್ಕೊಡೆಯ ತಿಳಿಸುತ್ತದೆಂದಭಿಪ್ರಾಯವು. ಸ್ಟೇನಪ್ರಪೂರಿತಜಗತ್ರಯಸಿಂಡಿತೇನ ಕಾಂತಿಪ್ರತಾಪಯಶಸಾವಿವಸಂಚಯನ 1 ಮಾಣಿಕ್ಯ ಹೇಮರಜತಪ್ರತಿನಿರ್ಮಿತೇನಲ್ಲ ಸಾಲತ್ರಯೇಣಭಗವನ್ನ ಭಿತೊವಿಭಾಸಿ , B 27 || 27. ತಾ ಓ ಜಿನರಾಜನೇ ! ತಮ್ಮ ಕಾಂತಿಯ, ಪ್ರತಾಪವೂ, ಯಶಸೂ ಈ ಮೂರೂ ಗುಂಪಾಗಿ ಸೇರಿ ಮೂರುಲೋಕಗಳನ್ನೂ ತುಂಬ ಉಂಡೆಯಂತೆ ಗುಂಡಾಗಿ ಸುತ್ತಿಕೊಂಡಂತೆ, ವರಾಣಿಕ್ಯ, ಬಂಗಾರ, ಬೆಳ್ಳಿಗಳಿಂದ ನಿರ್ಮಿತವಾದ ಸಾಲತ್ರಯ (ಮೂರುಕೋಟಿ) ದಿಂದ ಪ್ರಕಾಶಿಸುತ್ತೀರಿ. ತಮ್ಮ ಕಾಂತಿಯು ವರಾಣಿಕ್ಕಕೋಟೆಯ ರೂಪವಾಗಿಯೂ, ಪ್ರತಾಪವು ಬಂಗಾರದ ಕೋಟೆಯು ರೂಪ ವಾಗಿಯ, ಯಶಸ್ಸು ಬೆಳ್ಳಿಕೋಟೆಯ ರೂಪ ವಾಗಿಯ, ಸಮವಸರಣದಲ್ಲಿ ಪ್ರಕಾಶಿಸುತ್ತದೆಂದಭಿಪ್ರಾಯವು. ಮಾತು ದಿವ್ಯಪ್ರಜೋಜಿನನಮತ್ರಿದಶಾಧಿಪಾನಾ ಮುಜ್ಯರತ್ನ ರಚಿತಾನಪಿನಾಳಿಬಂರ್ಧಾ| ಪಾಶ್ರಯಂತಿಭವತೋಯದಿವಾಪರತ್ರ - ತತ್ಸಂಗನಸುಮನಸೋನರಮಂತಏವ ತ್ವಂನಾಥಜನ್ಮಜಲಧೋರ್ನಿಪರಾಜುಖೋಪಿ 0ಯತ್ತಾರಯಸ್ಯ ಸುವುತನಿಜ ಸ್ಪಷ್ಟಲmಾನ್ 1 . ಯುಕ್ತಂಹಿಪಾರ್ಥಿವನಿಪಸ್ಯ ಸತಸ್ತನೈವ ಚಿತ್ರಂನಿಭೋಯದಸಿಕರ್ಮವಿಪಾಕಶೂನ್ಯತಿ | 29 || 29. ತಾ ಓ ರಕ್ಷಕರೆ ! ನೀರಿನಲ್ಲಿ ಕೆಳಮುಖವಾಗಿ ಮಗುಚಿಕೊಂಡು ಮುಳುಗದ (ನೀರುತುಂಬದ) ಮಣ್ಣಿನಘಟ(ಹರಿವಿ)ದ ಮೇಲಿರುವ ಪ್ರಾಣಿಗಳು ನೀರಿನಲ್ಲಿ ಮುಳುಗುವುದಿಲ್ಲವಷ್ಟೆ ? ಅದರಂತೆ ಸಂಸಾರವೆಂಬ ಸಮುದ್ರಕ್ಕೆ ಸಂಪೂರ್ಣವಾಗಿ ವಿಮುಖರಾಗಿರುವ (ಸಂಸಾರ ಬಾರದಂತೆ ಪ್ರತಿಭಟಿಸಿರುವ) ತಮ್ಮನ್ನಾಶ್ರಯಿಸಿದ (ಬೆನ್ನನ್ನು ಹತ್ತಿದ ಪ್ರಾಣಿಗಳನ್ನು ತಾವು ಸಂಸಾರ ಸಮುದ್ರದಿಂದ ದಾಟಿಸುವುದು ಯುಕ್ತವೇ ಸರಿ. ಆದರೆ ಮಣ್ಣಿನ ಘಟವನ್ನು ಆವಿಗೆಯಲ್ಲಿಡದೆ ಹಸಿಯಾಗಿದ್ದರೆ ಪ್ರಾಣಿಗಳನ್ನು ವಹಿಸಲಾರದು, ಆವಿಗೆಯಲ್ಲಿ ಸುಟ್ಟದ್ದಾಗಿಯೇ ಇರಬೇಕು. ತಾವಾದರೋ ಕರ್ಮವಿಪಾಕವಿಲ್ಲದವರಾಗಿದ್ದು ಕೊಂಡು ದಾಟಿಸುವುದು ಆಶ್ಚರ್ಯವು ! ಅಂದರೆ ಕರ್ಮವಿಪಾಕವಿಲ್ಲದವ ರಾದುದರಿಂದ ಸುಡದ (ಹಸಿ) ಹರಿವಿಯಂತಿರುವ ತಾವು ಜಲಧಿಯನ್ನು ದಾಟಿಸುವುದು ಆಶ್ಚರ್ಯವೆಂದು ವಿರೋಧಾರ್ಥವು, ಅಶುಭವಾದ ಸಮಸ್ತ ಘಾತಿಕರ್ಮಗಳನ್ನು ನಾಶಮಾಡಿ ಶುದ್ಧಾತ್ಮರಾದ ತಮ್ಮನ್ನಾಶ್ರಯಿಸುವವರು (ಧ್ಯಾನಿಸುವವರು) ಸಂಸಾರಬಂಧದಿಂದ ವಿಮುಕ್ತರಾಗುವರೆಂದು ಸಮಾಧಾನವು.
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy