________________ ಇs9 ಪಂಚಸ್ತೋತ್ರ ಭಾವಪ್ರಕಾಶಿಕಾ - ಸ್ಯಾನಿನ್ನು ದೂರಮವನಮ್ಯಸಮುತ್ಪತಂತೋ ನವದಂತಿ ಶುಚಯಸ್ತುರಚಾನರ್‌ಘಾಃ | ಯೆಸ್ಟ್ ನತಿ೦ವಿದಧತೇಮುನಿಪುಂಗವಾಯ ತೇನಮೂರ್ಧ್ವಗತಯುಃ ಖಲುಕುದ್ದಭಾವಾಃ | 22 | 22. ತಾ, ಓ ಸ್ವಾಮಿಯ ! ತಮ್ಮ ಎರಡು ಪಾರ್ಶಗಳಲ್ಲಿಯ ದೇವತೆಗಳಿಂದ ಬೀಸಲ್ಪಡುವ ಪರಿಶುದ್ದ (ಶುಭ್ರ) ಗಳಾದ ಚಾಮರಗಳ ಸಮೂಹಗಳು ಬೀಸುವಕಾಲದಲ್ಲಿ ಮೇಲಕ್ಕೆ ದೂರವಾಗಿ ಹೋಗಿ ಕೆಳಕ್ಕೆ ಬೀಳುತ್ತವೆ. ಈ ರೀತಿಯನ್ನು ನೋಡಿ ನಾನು ಊಹಿಸುವುದೇನೆಂದರೆ, ಈ ವುನಿಶ್ರೇಷ್ಠರಾದ ಜಿನೇಂದ್ರರಿಗೆ ನಮಸ್ಕಾರವರಾಡಿದ ಪ್ರಾಣಿಗಳು ನಮ್ಮಂತೆಯೇ ಪರಿಶುದ್ದಭಾವ (ನಿರ್ಮಲಪರಿಣಾಮ) ವುಳ್ಳವರಾಗಿ ಊರ್ಧ ಗತಿ (ಸ್ವರ್ಗಮೋಕ್ಷ) ಯನ್ನು ಪಡೆಯುವರೆಂದು ಈ ಚಾಮರಗಳು ಸೂಚಿಸು ತಲಿವೆ, ಇದು ನಿಶ್ಚಯ. ಶ್ಯಾಮಂಗಭೀರಗಿರನುಜ್ಜಲಜೀವರತ್ನ ಸಿಂಹಾಸನಸ್ಥ ಮಿಹಭವ ಶಿಖಂಡಿನಸ್ಸಾಂ ಆಲೋಕಯಂತಿರಭಸೇನನದಂತನುಜೆ ಶ್ಲಾಮೀಕರಾದ್ರಿಶಿರಸೀವನವಾಂಬುವಾಹಂ | 23 || 23. ತಾ|| ಓಜಿನರಾಜನೇ ! ನೀಲವರ್ಣರಾಗಿರುವ ತಾವು ಹೊಳೆಯು ತಿರುವ ರತ್ನ ಖಚಿತವಾದ ಬಂಗಾರದ ಉನ್ನತಸಿಂಹಾಸನದಲ್ಲಿ ವಿರಾಜಮಾನ ರಾಗಿ ಗಂಭೀರವಾದ ದಿವ್ಯಧ್ವನಿ ವರಾಡುತ್ತಿರಲು ಈ ಸಮವಸರಣದಲ್ಲಿರುವ ಭವಾತ್ಮರೆಂಬ ನವಿಲುಗಳು ತಮ್ಮನ್ನು ಮೇರುಪರ್ವತದ ತುದಿಯಲ್ಲಿ ಕುಳಿತು ಗಟ್ಟಿಯಾಗಿ ಗುಡುಗುತ್ತಿರುವ ಮೋಡದರೀತಿಯಲ್ಲಿ ವೇಗದಿಂದ ನೋಡುತ್ತವೆ. ಕರೀಮೋಡವನ್ನು ನೋಡಿ ನವಿಲುಗಳು ಎಷ್ಟು ಸಂತೋಷಿ ಸುತ್ತವೆಯೋ ಆ ಪ್ರಕಾರ ಅತ್ಯುನ್ನತರತ್ನಸಿಂಹಾಸನದಲ್ಲಿ ಕುಳಿತು ದಿವ್ಯ ಧ್ವನಿಯನ್ನು ವರಾಡುತ್ತಿರುವ ತಮ್ಮನ್ನು ದರ್ಶನವಾಡಿ ಭವ್ಯಾತ್ಮರು ಅಷ್ಟೂ ಸಂತೋಷಿಸುತ್ತಾರೆಂದಭಿಪ್ರಾಯವು, ಕಲ್ಯಾಣಮಂದಿರಸ್ತೋತ್ರ ಉದ್ಧ ಚ್ಛತಾತವಶಿದ್ಯುತಿನುಂಡಲೇನ ಇss ಲುಪ್ತಚದಚ್ಛವಿರಶೋಕತರುರ್ದಭೂವ | ನಡ ಸಾಂನಿಧ್ಯ ತೋಪಿಯದಿವಾತವನೀತರಾಗ ನೀರಾಗತಾ೦ವ್ರಜನಿಕೊನಸಚೇತನೋಪಿ | 24 || 24, ತಾ|| ಓ ವೀತರಾಗ ಪರಮಾತ್ಮನೇ ! ಮೇಲಕ್ಕೆ ಏಳುತ್ತಿರುವ ವಂಡಲಾಕಾರವಾದ ತಮ್ಮ ದೇಹದ ನೀಲಕಾಂತಿ ಸಮೂಹದಿಂದ ಮರೆ ಮಾಡಲ್ಪಟ್ಟ ಅಶೋಕವೃಕ್ಷದ ಎಲೆಗಳ ಕೆಂಪುಕಾಂತಿಯು ಹೇಗೆ ತೋರುತ್ತಿದೆ ಅಂದರೆ ಅಚೇತನಗಳಾದ ಮರ ಮುಂತಾದವುಗಳೂ ಕೂಡ ತಮ್ಮ ಸನ್ನಿಧಾನದ ದೆಸೆಯಿಂದ ರಾಗ(ಕೆಂಪು)ವನ್ನು ತೊರೆಯುತ್ತಿವೆಂಬ ಭಾವವನ್ನು ಲೋಕಕ್ಕೆ ಸೂಚನೆ ಕೊಡುತ್ತಿವೆ. ಇನ್ನು ಸಚೇತನರು ರಾಗ(ಪ್ರೀತಿ)ಯನ್ನು ಬಿಡುವುದೇ ನತಿಶಯಂ ? ತಮ್ಮ ಸಮಾಪದಲ್ಲಿ ಯಾರಿದ್ದರೂ ರಾಗರಹಿತನಾಗಿ ಮೋಕ್ಷವನ್ನು ಹೊಂದುತ್ತಾನೆಂದು ಮುಖ್ಯಭಾವವು. ಭೋಭೋಪ್ರಮಾದವುವಧಯಭಜಧ್ವಮೇನ ಮಾಗಡ್ಕ ನಿರ್ವೃತಿಪುರೀಪ್ರತಿಸಾರ್ಥನಾಹಂ | ಏತನ್ನಿವೇದಯತಿದೇವಜಗತ್ರಯಾಯ ಮನೋನದನ್ನ ಭಿನಭಃ ಸುರದುಂದುಭಿಸ್ತೆ | 25 || 25. ತಾ ಓ ಜಿನದೇವನೇ! ಆಕಾಶದಲ್ಲಿ ಎಲ್ಲಾ ಕಡೆಯಲ್ಲಿಯೂ ಧ್ವನಿವರಾಡುತ್ತಿರುವ ದೇವದುಂದುಭಿಛೇರಿ)ಯು ಎಲೈ ಎಲೈ ಭವಾತ್ಮರೇ ಈ ದೇಹ, ಪತ್ನಿ, ಪುತ್ರಾದಿಗಳಿಂದ ಸುಖವುಂಟಾಗುತ್ತದೆಂಬ ಭ್ರಾಂತಿಯನ್ನು ತೊರೆದು ನಿತ್ಯಸುಖರೂಪವಾದ ಮೋಕ್ಷವೆಂಬ ಪಟ್ಟಣದ ಘನ ಸಾಹುಕಾರ ರಾದಂತಹ ಈ ಪಾರ್ಶ್ವನಾಥ ತೀರ್ಥಂಕರರನ್ನು ಸೇವಿಸಿರಿ. ನಿಮಗೂ ಆ ಅನಂತ ಸುಖರೂಪವಾದ ಮುಕ್ತಿಯೆಂಬ ನಿಧಿಯು ದೊರೆಯುವುದು. ಅನ್ಯಾಯವಾಗಿ ಸಂಸಾರಸುಖಾನುಭವವೆಂಬ ಭ್ರಾಂತಿಯಲ್ಲಿ ತೊಳಲಬೇಡಿರಿ. ಎಂಬುದಾಗಿ ಮರುಲೋಕದಲ್ಲಿರುವವರನ್ನು ಕುರಿತು ಹೇಳುವಂತೆ ನನಗೆ ತೋರುತ್ತಿದೆ, ಎಂದು ಸ್ಫೂತ ಕತೃವಾದ ಆಚಾರ್ಯರು ಸ್ತುತಿಸುತ್ತಾರೆ.