SearchBrowseAboutContactDonate
Page Preview
Page 30
Loading...
Download File
Download File
Page Text
________________ 41 ಅಭಿಪ್ರಾತಿಹಾಂರ್ದಗಳಲ್ಲಿ 40 ಪಂಚಕ್ಕೋತ ಭಾವಪ್ರಕಾಶಿಕಾ ಬಣ್ಣವುಳ್ಳದ್ದಾಗಿ ತಿಳಿಯುತ್ತಾರಲ್ಲವೆ ? ಆ ಕಾಮಾಲೆ ರೋಗವಿಲ್ಲದವನ ಕಣ್ಣಿಗೆ ಆ ಶಂಖವು ಇದ್ದ ಹಾಗೆಯೇ ತೋರುತ್ತದೆ. ಹಾಗೆ ನಿಮ್ಮ ಯಥಾರ್ಥ ಸ್ವರೂಪವನ್ನು ಅರಿತವನ ಕಣ್ಣಿಗೆ ತಾವೂ ವೀತರಾಗಪರಮಾತ್ಮ ಜಿನೇಂದ್ರ | ಸ್ವರೂಪರಾಗಿಯೇ ತೋರುತ್ತೀರಿ. ನಿಮ್ಮ ಸ್ವರೂಪದ ನಿಜಸ್ಥಿತಿಯನ್ನು ಅರಿಯದವರ ಭಾಗದಲ್ಲಿ ಅವರವರಿಗೆ ಇಷ್ಟವಾದ ಬ್ರಹ್ಮ, ವಿಷ್ಣು, ಶಿವಾದಿ ದೇವತಾರೂಪದಿಂದ ಭಾವಿಸಲ್ಪಡುತ್ತೀರೆಂದಭಿಪ್ರಾಯವು, 17 ಮುಂದೆ ಅಷ್ಟಮಹಾಪ್ರಾತಿಹಾರ್ಯಗಳ Bನು ನಾವು ವರ್ಣನವನ್ನು ಮಾಡುತ್ತಾರೆ. ಧರ್ಮೋಪದೇಶಸವಯಸನಿಧಾನುಭಾನಾ ಎನಿಸಿತು. ದಾಸ್ತಾಂಜನೇಭವತಿತೇತರುರಸ್ಮಶೋಕಃ | ಅಭ್ಯುದ್ದ ತೇದಿನಪತಾಸಮಹೀರುಹೊಪಿ ಕಿಂವಾವಿಬೋಧನುಪಯತಿನಜೀವಲೋಕಃ | 19 || 19. ತಾ|| ಓ ಜಿನೇಂದ್ರರೇ ! ಅರ್ಹಂತ ಪದವಿಯನ್ನು ಪಡೆದು ತಾವು ಸಮವಸರಣ ವಿರಾಜಮಾನರಾಗಿ ತಮ್ಮೋಪದೇಶ ಮಾಡುವ ಕಾಲದಲ್ಲಿ ತಮ್ಮ ಸನ್ನಿಧಾನದ (ಹತ್ತಿರ ಇರುವ) ಮಾಹಾತ್ಮದಿಂದ ಮನುಷ್ಯನು ಶೋಕ ಎಲ್ಲದವನಾಗುತ್ತಾನೆಂಬುದಿರಲಿ, ಮರವೂ ಕೂಡ ಅಶೋಕವಾಯಿತು. ಶೋಕ ಎಲ್ಲದ್ದಾಯಿತೇ ಅಂದರೆ ಆಶೋಕವೆಂಬ ಹೆಸರುಳ್ಳದ್ದಾಯಿತೆಂದು ಪರಿಹಾರವು. ಸೂರ್ಯನು ಉದಯಿಸುತ್ತಿರಲಾಗಿ ಮರಗಳು ಮೊದಲುಗೊಂಡು ಸಮಸ್ತವು ಪ್ರಕಾಶಿಸುವಾಗ, ಮನುಷ್ಯನು ಎಚ್ಚರವನ್ನು ಹೊಂದುವುದಿಲ್ಲವೆ ? ಹಾಗೆ ! ತಮ್ಮ ಸಾನ್ನಿಧ್ಯದ ದೆಸೆಯಿಂದ ಮರವೂ ಕೂಡ ಶೋಕವಿಲ್ಲದ್ದೆಂಬ ಅರ್ಥ ವುಳ್ಳ ಅಶೋಕವೆಂಬ ಹೆಸರುಳ್ಳದ್ದಾಗುತ್ತದೆಂದಭಿಪ್ರಾಯವು, ಜನಗಳು | ಅಶೋಕರಾಗುತ್ತಾರೆಂದರೆ ಸಂಸಾರದುಃಖಗಳನ್ನು ಕಳೆದು ಮುಕ್ತರಾಗುತ್ತಾ ರಂದಭಿಪ್ರಾಯವು, ಚಿತ್ರ೦ವಿಭೂಕಥನವಾಂಕುಖವೃಂತಮೇವ ವಿಷ್ಟಕೃತತ್ಯವಿರಳಾಸುರಪುಷ್ಪವೃಷ್ಟಿ | ಚರೇಸುನುನಸಾ೦ಯದಿನಾಮುನೀಶ ಡಿ. ಗಚ್ಛಂತಿನೂನನಥಏವಹಿಬಂಧನಾನಿ SONG | 20 || ಕಲ್ಯಾಣಮಂದಿರಸ್ತೋತ್ರ - 20. ತಾ|| ಓ ಪ್ರಭುವೇ ! ತಮ್ಮ ಸಮವಸರಣದ ಸುತ್ತಲೂ ಮಳೆಯಂತೆ ಸುರಿಯುವ ದಟ್ಟವಾದ ಹೂವಿನ ರಾಶಿಯು ಹೇಗೆ ಕೆಳಮುಖ ವಾದ ತೊಟ್ಟುಳ್ಳದ್ದಾಗಿಯೇ ಬೀಳುತ್ತದೆ ? ಇದು ಆಶ್ಚರ್ಯವೆಂದರೆ ಓ ಮುನೀಶ್ವರರೇ ! ತಮ್ಮ ದೃಷ್ಟಿಗೋಚರವಾದ ಸುಮನಸ್ಸುಗಳ (ಪುಷ್ಟಗಳ) ಬಂಧನಗಳು ಕೆಳಗೇ ಹೋಗುತ್ತವಲ್ಲವೆ ? ಇಲ್ಲಿ ಸುಮನಸಾಂ ಎಂಬ ಶಬ್ದಕ್ಕೆ ಒಳ್ಳೆಯ ಮನಸ್ಸುಳ್ಳವರು ಎಂಬ ಅರ್ಥವನ್ನು ಇಟ್ಟುಕೊಂಡು, ಬಂಧನಾನಿ, ಎಂಬ ಶಬ್ದಕ್ಕೆ ಸಂಸಾರಬಂಧನಗಳೆಂಬ ಅರ್ಥವನ್ನು ಇಟ್ಟುಕೊಂಡರೆ ಒಳ್ಳೆಯ ಮನಸ್ಸುಳ್ಳ ಭವಾತ್ಮರ ಸಂಸಾರಬಂಧಗಳೆಂಬ ಕಟ್ಟುಗಳು ಅಧೋಗತಿಯನ್ನು ಹೊಂದುತ್ತವಲ್ಲವೆ ಎಂದರ್ಥವಾಗುತ್ತದೆ. ಮತ್ತು ಸುಮನಸ್ ಶಬ್ದಕ್ಕೆ ಪಷ್ಟವೆಂದೂ, ಬಂಧನಶಬ್ದಕ್ಕೆ ಅದರ ತೊಟ್ಟೆಂದೂ ಅರ್ಥವಾಗುತ್ತದೆ. ದೇವತೆಗಳಿಂದ ಮಾಡಲ್ಪಟ್ಟ ಪುಷ್ಪವೃಷ್ಟಿಯು ಯಾವಪ್ರಕಾರ ಕೆಳಮುಖವಾದ ಬಂಧನವುಳ್ಳದ್ದಾಗಿ ಬೀಳುತ್ತದೆಯೋ ಹಾಗೆ ತಮ್ಮ ಕಟಾಕ್ಷಪಾತವಾದ ಪ್ರಾಣಿಯ ಸಂಸಾರಬಂಧವೂ ತಪ್ಪಿ ಹೋಗಿ ಆ ಪ್ರಾಣಿಯು ಮೋಕ್ಷವನ್ನೆ ದಾವದಂದಭಬಾರದು : Bions ಖ್ಯಾನೇಗಭೀರಹೃದಯೋದಧಿಸಂಭವಾಯಾ... ಪೀಯಷತಾಂತವಗಿರಸ್ಸಮುದೀರಯಂತಿ ಪೀತ್ಯಾಯತಃ ಪರಮಸದಸಂಗಭಾಜೋ - ಭಾವಜಂತಿತರಸಾಷ್ಯಜರಾಮರತ್ವಂ * | 21 || 21. ತಾ|| ಓ ಜಿನೇಂದ್ರರೇ ! ತಮ್ಮ ಗಂಭೀರವಾದ ಹೃದಯವೆಂಬ ಸಮುದ್ರದಲ್ಲಿ ಹುಟ್ಟಿದ ಸಮಸ್ತ ತತ್ಯಾರ್ಥಗಳ ಉಪದೇಶಸ್ವರೂಪಗಳಾದ ವಾಣಿಯು (ದಿವ್ಯಧ್ವನಿಗಳು) ಅಮೃತಗಳೆಂಬುದು ಯುಕ್ತವೇ ಸರಿ. ಅದು ಹೇಗೆಂದರೆ, ಅಮೃತಪಾನವನ್ನು ಮಾಡಿದರೆ ಎಷ್ಟು ಆನಂದವುಂಟಾಗುತ್ತದೋ ಅಷ್ಟು ಆನಂದವು ತವ ದಿವ್ಯಧ್ವನಿಯನ್ನು ಕೇಳಿದಭವಾತ್ಮರಿಗೆ ಉಂಟಾಗು ತ್ಯಾದುದರಿಂದಲೂ ಮತ್ತು ತಮ್ಮ ದಿವ್ಯಧ್ವನಿಯು ಕೇಳಿದ ಭವ್ಯಾತ್ಮರಿಗೆ ಪುನಃ ಜನ್ಮವಿಲ್ಲದ ಹಾಗೆ ಮೋಕ್ಷವನ್ನೇ ಉಂಟುವರಾಡುತ್ತಾದುದರಿಂದಲ, ಅಮೃತದಂತೆ ಮುಪ್ಪು ಮರಣಗಳನ್ನು ತಪ್ಪಿಸುತ್ತದೆ. ಆದುದರಿಂದಲೇ ತಮ್ಮ ವಾಣಿಯು ಅವತಕ್ಕೆ ಸವಾನಗಳೆಂದು ಭಾವವು.
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy