SearchBrowseAboutContactDonate
Page Preview
Page 34
Loading...
Download File
Download File
Page Text
________________ ಪಂಚಕ್ಕೋತ ಭಾವಪ್ರಕಾಶಿಕಾ ಮಾಡಿದ ಕವಠನು ಆ ಘೋರ ದುಃಖವನ್ನನುಭವಿಸಿದನೇ ಹೊರತು ತಮ್ಮ ತಪೋಭಂಗವಾಗಲೇ ಇಲ್ಲ. ಆ ಮಹೋಪಸರ್ಗವನ್ನು ಸಹಿಸಿದುದರಿಂದ ಕೇವಲಜ್ಞಾನೋದಯವಾಯಿತೆಂದಭಿಪ್ರಾಯವು. ಯಾರು ಮಹಾಮುನಿಗಳಿಗೆ ಉಪಸರ್ಗವನ್ನು ಮಾಡುವರೋ ಅಂತಹವರಿಗೆ ಇಹಪರ ಲೋಕಗಳಲ್ಲಿ ದುಃಖವು ತಪ್ಪುವುದಿಲ್ಲ. ಮತ್ತು ಅಂತಹಾ ಘೋರೋಪಸರ್ಗದಿಂದಲೂ ಕ್ರೋಧಕಷಾಯವನ್ನು ಹೊಂದದ " ತಮ್ಮ ದಿವ್ಯಪರಿಣಾಮಶುದ್ಧಿಯು ತಮ್ಮಂತಹ ಧೀರರಿಗೆ ಸಾಧ್ಯವೇ ಹೊರತು ಮತ್ಯಾರಿಗೂ ಹುಟ್ಟಲಾರದೆಂದು ಭಾವವು ಧ್ವಸೊರ್ಧ್ವಕೋಶವಿತಾಕೃತಿಮರ್ತ್ಯವುಂಡ - ಪ್ರಾಲಂಬುಚ್ಛದೃಯದವಕ್ರನಿನಿರ್ಯದಗ್ನಿಃ || ಪ್ರೇತವ್ರಜಃ ಪ್ರತಿಭನಂತಮಹೀರಿತೆಯಃ ಸೋಸ್ಯಾಭವತ್ಪತಿಭನಂಭವದುಃಖಹೇತುಃ || 33 | - 33. ತಾ|| ಓ ಶ್ರೀ ಪಾರ್ಶ್ವನಾಥಸ್ವಾಮಿಯೇ ! ಯಾವ ವೈರಿಯಾದ ಕಮಠನು ತಮ್ಮ ಸವಶಾಧಿಯನ್ನು ಭಂಗಪಡಿಸುವುದಕ್ಕೋಸ್ಕರ ನೆಟ್ಟನೆ ನಿಂತಿರುವ ಕೆದರಿದ ತಲೆಕೂದಲುಗಳುಳ್ಳದ್ದಾಗಿಯೂ, ವಿಕಾರವಾದ ಭಯಂಕರ ವಾದ ಆಕಾರವುಳ್ಳದ್ದಾಗಿಯೂ ಮನುಷ್ಯರ ತಲೆಬುರುಡೆಗಳ ಸರವನ್ನು ಹಾಕಿ ಕೊಂಡು ಭಯಂಕರವಾದ ಮುಖದಿಂದ ಹೊರಡುತ್ತಿರುವ ಬೆಂಕಿಯ ಜ್ವಾಲೆ ಯುಳ್ಳದ್ದಾಗಿಯೂ, ಇರುವ ಭೂತಪಿಶಾಚಾದಿಗಳ ಸಮೂಹವನ್ನು ಕಳುಹಿಸಿದನೋ ಆ ಭೂತಪಿಶಾಚಾದಿ ಸಮೂಹವು ಆ ಕಮಠನಿಗೇ ಪ್ರತಿಜನ್ಮ ಗಳಲ್ಲಿಯ ದುಃಖಗಳನ್ನುಂಟುಮಾಡುವುದಕ್ಕೆ ಕಾರಣವಾಯಿತೇ ಹೊರತು, ತಮ್ಮ ಸವಾಧಿ(ಯೋಗ)ಗೆ ಭಂಗವನ್ನು ಮಾಡಲು ಸಮರ್ಥವಾಗಲಿಲ್ಲ. ತಮ್ಮ ಮಹಾತ್ಮವು ಮಾತಿಗೂ ಮನಸ್ಸಿಗೂ ಅಗೋಚರವೆಂದು ಭಾವವು. * ಧನ್ಯಾಸಏವಭುವನಾಧಿಪಯೇತ್ರಿಸಂಧ್ಯ. ಮಾರಾಧಯ೦ತಿನಿಧಿವದ್ವಿಧುತಾನ ಕೃತ್ಯಾಃ | ಭಕೊಲ್ಲಸತ್ಕುಲಕಪಕ್ಷಲದೇಹದೇಶಾಃ ಪಾದಯಂತವನಿಭೂಭುಜನ್ಮಭಾಜಃ | 34 || ಕಲ್ಯಾಣಮಂದಿರಸ್ತೋತ್ರ 34. ತಾ! ಓ, ಲೋಕಾಧಿಪತಿಯಾದ ಸ್ವಾಮಿಯೇ ! ಯಾವ ಭವಾತ್ಮರು ತಮ್ಮಲ್ಲಿ ಪರಮಭಕ್ತಿಯುಳ್ಳವರಾಗಿ, ಬೇರೆ ಸಮಸ್ತ ಕೆಲಸ ಗಳನ್ನು ಬಿಟ್ಟು ಮೂರು ಸಂಧ್ಯಾಕಾಲಗಳಲ್ಲಿಯೂ, ಭಕ್ತಿಯಿಂದ ಮೈ ಕೂದಲೆದ್ದು ಆನಂದಪೂರಿತವಾದ ದೇಹವುಳ್ಳವರಾಗಿ: ಶಾಸೋಕ್ತವಾಗಿ, ತಮ್ಮ ಪಾದಾರವಿಂದಗಳನ್ನು ಪೂಜಿಸುತ್ತಾರೆಯೋ ಅಂತಹವರ ಜನ್ಮವೇ ಸಾರ್ಥಕ. ಅವರೇ ಧನ್ಯರು. ತಮ್ಮನ್ನು ಮರೆತು ಸಂಸಾರ ಸುಖಗಳನ್ನು ಭೋಗಿಸುವ ಜನಗಳ ಜನ್ಮವು ನಿಷ್ಪಲವೆಂದರ್ಥವು. ಅನ್ನ ಸಾರಭನವಾರಿನಿ‌ಮುನೀಶ ಮನ್ನೇನಮೇಶ್ರವಣಗೋಚರತಾಂಗತೋಸಿ | ಆಕರ್ಣಿತೇತುತವಗೋತ್ರ ಪವಿತ್ರಮಂತ್ರ ಕಿಂವಾವಿಪದ್ವಿಷಧರೀಸನಿಧಂಸಮೇತಿ 35. ತಾ ಓ ಕಮಠನಿಂದ ಮಾಡಲ್ಪಟ್ಟ ಘೋರೋಪಸರ್ಗಗಳ ನ್ನೆಲ್ಲಾ ಸಹಿಸಿ ಆತ್ಮಸಮಾಧಿಯಿಂದ ಕೇವಲಜ್ಞಾನವನ್ನು ಪಡೆದಂತಹ, ಚಿತ್ರದ ಸ್ಥಿರತ್ವವುಳ್ಳ ಮುನಿಶ್ವರರೇ! ಅಪಾರವಾದ ನರ ಸುರತಿರ್ಯಜ್ಞರಕ ಗಳೆಂಬ ನಾಲ್ಕು ಪ್ರಕಾರವಾದ ಜನ್ಮಪರಂಪರೆಗಳೆಂಬ ಈ ಸಂಸಾರ ಸಮುದ್ರ ದಲ್ಲಿ ಯಾವ ಭವದಲ್ಲಿಯೂ ನೀವು ನನ್ನ ಕಿವಿಗೆ ಗೋಚರವಾಗಲಿಲ್ಲ. (ತಮ್ಮ ಮಹಿಮೆಯನ್ನು ಕೇಳಲೇ ಇಲ್ಲ.) ಇದುವರೆಗೂ ತಮ್ಮ ದಿವ್ಯನಾಮದಿಂದ ಪವಿತ್ರವಾದ ಮಂತ್ರವನ್ನು ನಾನು ಯಾವ ಜನ್ಮದಲ್ಲಾದರೂ ಕೇಳಿದ್ದ ಪಕ್ಷ ದಲ್ಲಿ ಈ ಜನ್ಮಜರಾಮರಣಸ್ವರೂಪವಾದ ವಿಪತ್ತೆಂಬ ಘೋರ ಸ್ತ್ರೀಸರ್ಪವು ನನ್ನ ಹತ್ತಿರ ಏಕೆ ಬರುತ್ತಿತ್ತು ? ಇದರಿಂದಲೇ ಕಳೆದ ನನ್ನ ಅಪಾರ ಜನ್ಮ ಗಳಲ್ಲಿ ಯಾವ ಜನ್ಮದಲ್ಲಿಯೂ ತಮ್ಮ ಪವಿತ್ರಚರಿತ್ರ ಮತ್ತು ತಮ್ಮ ಸಮಾಧಿ ಸಾಧನೆಮಾಡಿದ ಮಾಹಾತ್ಮಗಳನ್ನು ಕೇಳಲಿಲ್ಲವೆಂದು ನಿಶ್ಚಯಿಸುತ್ತೇನೆ. ಹಾಗೆ ನಾನು ಕೇಳಿದ್ದರೆ ನನಗೆ ಈ ಜನ್ಮಾದಿ ಭವದುಃಖವು ಉಂಟಾಗು ತಿರಲಿಲ್ಲ. ಈಗ ನಾನು ಈ ಭವದುಃಖಗಳನ್ನನುಭವಿಸುವುದೇ ನಾನು ಎಂದೂ ತಮ್ಮನ್ನು ಕೇಳಲಿಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ ಎಂದರ್ಥವು. ೧ಾಜ R
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy