SearchBrowseAboutContactDonate
Page Preview
Page 28
Loading...
Download File
Download File
Page Text
________________ - ಕಲ್ಯಾಣವಂದಿರಸ್ತೋತ್ರ 37 (ಮಹಾ ಕ್ಷಮೆಯಳ್ಳವನು) ಶತ್ರುಗಳನ್ನು ಕೊಲ್ಲಲಾರ, ನೀವು ಮಹಾ ಶಾಂತ ರಾದ ಕಾಲದಲ್ಲಿ ಕರ್ಮಗಳೆಂಬ ಕಳ್ಳರನ್ನು ನಾಶಮಾಡಿದರೆಂದರೆ ಆಶ್ಚರ್ಯ, ಆದರೆ ಪರ್ಯಾಲೋಚಿಸಿದರೆ ಆಶ್ಚರ್ಯವಲ್ಲ. ಹೇಗೆಂದರೆ ಹಿಮಗಳು ಬಹಳ ತಣ್ಣಗಿದ್ದರೂ ಕರಗೆ ಆವರಿಸಿಕೊಂಡಿರುವ ಮರಗಳುಳ್ಳ ಮಹಾರಣ್ಯಗಳನ್ನು ಬಾಡಿಸುತ್ತವೆ. ಹಾಗೆಯೇ ಶಾಂತಿಗುಣದಿಂದಲೂ, ಕರ್ಮವು ನಾಶವಾಗುವುದು ನ್ಯಾಯವೇ ಸರಿಯೆಂದಭಿಪ್ರಾಯವು, ನಾನು ಪಂಚಸ್ತೋತ್ರ ಭಾವಪ್ರಕಾಶಿಕಾ 12. ತಾ|| ಓ ಸ್ವಾಮಿಯೇ ! ಬಹಳ ಭಾರವುಳ್ಳ ನಿಮ್ಮನ್ನು ಹೃದಯ ದಲ್ಲಿ ಧರಿಸುವಂತಹವರು ಬಹಳ ಲಘುತ್ವದಿಂದ (ಪಾಪಗಳೆಂಬ ಭಾರವನ್ನು ಕಳೆದು) ಜನ್ಮವೆಂಬ ಸಮುದ್ರವನ್ನು ಹೇಗೆ ದಾಟುತ್ತಾರೆ ಇದು ಆಶ್ಚರ್ಯ ವಾಗಿದೆ. ಲೋಕದಲ್ಲಿ ಬಹಳ ಭಾರವನ್ನು ಹೊತ್ತುಕೊಂಡವನು ಬಹಳ ಭಾರ ವುಳ್ಳವನಾಗುತ್ತಾನೆಯೇ ಹೊರತು ಹಗುರವಾಗಲಾರನು, ಬಹಳ ಗೌರವವುಳ್ಳ ನಿಮ್ಮನ್ನು ಹೃದಯದಲ್ಲಿ ಧರಿಸಿದವನು (ಸ್ಮರಿಸಿದವನು) ಬಹಳ ಲಘುವಾಗುತ್ತಾ ನೆಂದರೆ ಕೆಳಗಣಗತಿಯಾದ ನಾರಕತಿರ್ಯಗ್ಧತಿಗಳಿಗೆ ಕಾರಣವಾದ ಪಾಪಗಳನ್ನು ಬಿಟ್ಟು ಸ್ವರ್ಗವೇ ಮುಂತಾದ ಊರ್ಧ್ವ ಧ್ವ್ರಗತಿಗಳನ್ನು ಪಡೆಯಲು ಯೋಗ್ಯತೆಯುಳ್ಳವನಾಗುತ್ತಾನೆಂದರ್ಥವು, ಲೋಕದಲ್ಲಿ ಬಹಳ ಹಗುರವಾದ ಸೋರೆಬುರುಡೆ ಮುಂತಾದ ವಸ್ತುಗಳು ನೀರಿನಲ್ಲಿ ಮೇಲಕ್ಕೆ ಬರುತ್ತವೆ. ಹಾಗೆಯೇ ಜೀವನು ಕರ್ಮಗಳೆಂಬ ಭಾರ ಹೆಚ್ಚಾಗುತ್ತಾಬರಲು ನಾರಕತಿರ್ಯ ಗೃನ್ಮವೆಂಬ ನೀರಿನಲ್ಲಿ ಮುಳುಗುವನು, ನಿಮ್ಮ ಧ್ಯಾನಾದಿ ಬಲದಿಂದ ಆ ಕವರ್‌ ಗಳೆಂಬ ಭಾರವನ್ನು ಕಳೆದು ಸ್ವರ್ಗಮೋಕ್ಷಗಳೆಂಬ ಊರ್ಧ್ವ ಧ್ವ್ರಗತಿಗೆ ಯೋಗ್ಯನಾಗುತ್ತಾನೆಂದಭಿಪ್ರಾಯವು, ಗೌರವ ಎಂಬ ಪದಕ್ಕೆ ಭಾರವೆಂಬ ದೊಂದರ್ಥವು, ಪೂಜ್ಯತೆಯೆಂಬುದೊಂದರ್ಥವು, ಜಗಜ್ಯರಾದ ನಿಮ್ಮನ್ನು ಸರ್ವದಾ ಧ್ಯಾನಿಸುವವನು ಜನ್ಮಸಮುದ್ರವನ್ನು ದಾಟಿ ಮೋಕ್ಷವನ್ನೇ ಪಡೆಯು ತಾನೆಂಬುದರ ಏನಾಶ್ಚರ್ಯ ಮಹಾತ್ಮರ ಮಹಿಮೆಯು ಮನಸ್ಸಿನಿಂದ ಹೀಗೆಯೇ ಸರಿಯೆಂದು ನಿರ್ಣಯಿಸಲಶಕ್ಯವು, ನೀವು ಮಹಾತ್ಮರಾದ್ದರಿಂದ ನಿಮ್ಮನ್ನು ಹೃದಯದಲ್ಲಿ ಧರಿಸಿದವರೂ ಮಹನೀಯರೇ ಆಗುತ್ತಾರೆಂದು ಮುಖ್ಯಭಾವವು. ತ್ಯಾ೦ಯೋಗಿನೋ ಜಿನಸದಾಪರಮಾತ್ಮರೂಪ ಮನ್ವೇಷಯಂತಿಹೃದಯಾಂಬುಜಕೋಶದೇಶ | ನೂತಸ್ಯ ನಿರ್ಮಲರುಚೇರ್ಯದಿನಾಕಿನನ್ನ ದಸ್ಯಸಂಭವಪದಂನನುಕರ್ಣಿಕಾಯಾಃ | 14 || 14, ತಾ|| ಓ ಕರ್ಮ ಶತ್ರುಗಳನ್ನು ಜಯಿಸಿದ ಸ್ವಾಮಿಯೇ ! ಧ್ಯಾನಾ ರೂಢರಾದ ಮುನಿಗಳು ಹೃದಯವೆಂಬ ಕಮಲದ ಮಧ್ಯದಲ್ಲಿ ಪರಮಾತ್ಮ ಸ್ವರೂಪರಾದ ನಿಮ್ಮನ್ನು ಯಾವಾಗಲೂ ಹುಡುಕುತ್ತಲಿದ್ದಾರೆ. (ಕರ್ಮಗ ಲೆಂಬ ಕೊಳೆಗಳನ್ನು ಜ್ಞಾನವೆಂಬ ನೀರಿನಿಂದ ತೊಳೆದು ರತ್ನದಂತೆ ನಿರ್ಮಲ ರಾಗಿ ಪ್ರಕಾಶಿಸುತ್ತಿರುವ ತಮ್ಮ ಪರಿಶುದ್ದ ವರವರಾತ್ಮ ಸ್ವರೂಪವನ್ನು ಸರ್ವದಾ ವಿಚಾರಪೂರ್ವಕವಾಗಿ (ಧ್ಯಾನಿಸುತ್ತಾರೆ) ಪರಿಶುದ್ಧವಾದ ನಿರ್ಮಲ ಕಾಂತಿಯುಳ್ಳ ತಾವರೇ ಬೀಜವು ತಾವರೆಹೂವಿನ ಮಧ್ಯದಲ್ಲಿರುವ ಮಂಡಲಾ ಕಾರವಾದ ದಿಂಡನ್ನು ಬಿಟ್ಟು ಮತ್ತೆಲ್ಲಿ ಹುಟ್ಟುವುದು ? ಹಾಗೆ ತಮ್ಮ ಭಕ್ತರು ಹೃದಯಕಮಲದಲ್ಲಿಯೇ ಹೊರತು ಮತ್ತೆಲ್ಲಿ ತಮ್ಮನ್ನು ಧ್ಯಾನಿಸುವುದು ಕ್ಯಾದೀತು ? ಅಂದರೆ ಧ್ಯಾನದಿಂದ ಮಾತ್ರ ತಮ್ಮನ್ನು ನೋಡಬಹುದೇ ಹೊರತು ಇತರ ಕಣ್ಣಿಗೆ ಗೋಚರರಲ್ಲವೆಂದಭಿಪ್ರಾಯವು, ಧ್ಯಾನಾಜ್ಜಿ ನೇಶಭವತೋಭನಿನಃಕ್ಷಣೇನ ದೇಹಂವಿಹಾಯಪರಮಾತ್ಮದಶಾ೦ವ್ರಜಂತಿ 1.. ತೀವ್ರಾನಲಾದುಪಲಭಾವನಪಾಸ್ಕಲೋಕೇ . ಚಾಮೀಕರತ್ವನಚರಾದಿವಧಾತುಭೇದಾಃ ಕ್ರೋಧಯಾಯದಿನಿಭೋಪ್ರಥಮಂನಿರಸ್ಕೋ ಧ್ವಸ್ತಸ್ತದಾನದಕಥಂಕಿಲಕರ್ಮಚೂರಾಃ | ಪ್ರೊಷತ್ಯಮುತ್ರಯದಿವಾಶಿಶಿಲಾಪಿಲೋಕೇ ನೀಲದ್ರುವಾಣಿವಿಪಿನಾನಿನಕಿ೦ಹಿಮಾನೀ | 13 || 13. ತಾ ಓ ಸ್ವಾಮಿಯೇ ! ತಾವು ಕ್ರೋಧ ಕಾಯುವೆಂಬ ಆತ್ಮ ವೈರಿಯನ್ನು ಮೊದಲು ನಾಶವನ್ನು ಮಾಡಿದಿರಿ. ಅದೇಕಾಲದಲ್ಲಿ ಕರ್ಮಗ ಳೆಂಬ ಕಳ್ಳರನ್ನು ಹೇಗೆ ನಾಶಮಾಡಿದಿರಿ ? ಲೋಕದಲ್ಲಿ ಕೋಪವಿಲ್ಲದವನು
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy