________________ 3 ಪಂಚಕ್ಕೋತ ಭಾವಪ್ರಕಾಶಿಕಾ ಸುತ್ತಿಕೊಂಡಿದ್ದ ಹಾವುಗಳು ಆ ಕ್ಷಣದಲ್ಲಿಯೇ ಬಿಟ್ಟು ಹೋಗುವುವು. ಹಾಗೆ ತಮ್ಮ ಸ್ಮರಣೆಯಿಂದ ಪಾಪಗಳರಿ ಬಿಟ್ಟು ಹೋಗುವುವೆಂದರ್ಥವು, ಮುಚಂತಏವಮನುಜಾಃ ಸಹಸಾಜಿನೇಂದ್ರ Pಿರುಪದ್ರವಶತೆಯಿವೀಕ್ಷಿಸಿ | ಗೋಸ್ವಾಮಿನಿಷ್ಟುರಿತತೇಜಸಿದೃಷ್ಟ ಮಾತ್ರ ಚೋರೈರಿನಾಶುಪಶವಪ್ರಪಲಾಯಮಾನೈತಿ.. 9. ತಾ|| ಓ ಜಿನೇಂದ್ರನೇ ! ತಮ್ಮನ್ನು ಯಾವ ಮನುಷ್ಯರು ದರ್ಶನ ವರಾಡುತ್ತಾರೋ ಅಂತಹ ಮನುಷ್ಯರು ಘೋರವಾದ ಅನೇಕ ಉಪದ್ರವ ಗಳಿಂದ ಶೀಘ್ರವಾಗಿ ಬಿಡುಗಡೆಹೊಂದುತ್ತಾರೆ. ಹೇಗೆಂದರೆ, ದನಗಳನ್ನು ಕಾಯುವವನು ಮತ್ತು ಸೂರ್ಯನ ಪ್ರಕಾಶಿಸುತ್ತಿರುವ ತೇಜಸ್ಸುಳ್ಳವನಾಗಿ ಕಣ್ಣಿಗೆ ಗೋಚರಿಸಿದ ಕೂಡಲೇ ಓಡಿಹೋಗುವ ಕಳ್ಳರಿಂದ ಬಿಡಲ್ಪಟ್ಟ ದನ ಗಳಂತೆ ತಮ್ಮನ್ನು ದರ್ಶನಮಾಡಿದೊಡನೆ ಸಮಸ್ತ ಪಾಪಗಳು ಪರಿಹಾರವಾಗಿ ಹೋಗುವುವೆಂದಭಿಪ್ರಾಯವು, ತ್ವಂತಾರಕೊಜಿನಕಥಂಭನಿನಾಂತಏವ ಸ್ವಾಮುದ್ದಹಂತಿಹೃದಯೇನಯದುರಂತಃ | ಯದ್ಯಾದೃತಿಸ್ತರತಿಯಚ್ಚಲಮೇಷನೂನ ಮಂತರ್ಗತಮರುತಸ್ಸಕಿಲಾನುಭಾವಃ | 10 || 10. ತಾ|| ಓ ಜಿನೇಶ್ಚರನೇ ! ನರಸುರತಿರ್ಯ ರಕಗಳೆಂಬ ಚತುರ್ಗತಿ ಸಂಸಾರರೂಪವಾದ ಸಮುದ್ರದಲ್ಲಿ ಆಯಾಯ ಪೂರ್ವಕರ್ವಾನು ಸಾರವಾಗಿ ಪರಿಭ್ರಮಿಸುತ್ತಿರುವ ಪ್ರಾಣಿಗಳನ್ನು ಈ ಸಂಸಾರ ಸಮುದ್ರದಿಂದ ತಾವು ದಾಟಿಸತಕ್ಕವರೆಂದು ಹೇಳುತ್ತಾರಷ್ಟೆ ? ಈ ಮಾತನ್ನು ಹೇಗೆ ಒಪ್ಪ ಬಹುದು ? ಏಕೆಂದರೆ, ಆ ದಾಟುವಂಥವರೇ ತಮ್ಮನ್ನು ಅವರ ಹೃದಯದಲ್ಲಿ ಧರಿಸಿಕೊಂಡು ದಾಟುತ್ತಾರೆ. ಲೋಕದಲ್ಲಿ ನೀರನ್ನು ದಾಟಲಸಮರ್ಥನಾದವ ನನ್ನು ದಾಟಿಸುವಂತಹವನು ಎತ್ತಿಕೊಂಡು ದಾಟುವುದು ಪ್ರಸಿದ್ದವಾಗಿದೆ. 1 ಕಲ್ಯಾಣಮಂದಿರಸ್ತೋತ್ರ ಹಾಗಿಲ್ಲದೆ ಸಂಸಾರಸಾಗರವನ್ನು ದಾಟುವವರು ತಮ್ಮನ್ನೇ ಹೃದಯದಲ್ಲಿಟ್ಟು ಕೊಂಡು ದಾಟುತ್ತಾರಾದುದರಿಂದ ತಾವು ದಾಟಿಸುತ್ತೀರೆಂಬುದು ಹೇಗೆ ಯುಕ್ತ ವಾದೀತೆಂದಭಿಪ್ರಾಯವು : ಹೇಗೆಂದರೆ ನೀರಿನಲ್ಲಿ ಬಿದ್ದ ಚರ್ಮದ ಚೀಲವು ಅದರೊಳಗೆ ತುಂಬಿಕೊಂಡಿರುವ ಗಾಳಿಯ ಬಲದಿಂದಲ್ಲವೆ ? ತೇಲುತ್ತದೆ? ಅದರಂತೆ ಸರ್ವಜ್ಞರಾಗಿ ಸರ್ವಶಕ್ತಿಯುಳ್ಳ ತಾವು ಹೃದಯದಲ್ಲಿರುವ ಕಾರಣ ಅವರು ದಾಟುತ್ತಾರೆ, ಇದು ಆಶ್ಚರ್ಯವಲ್ಲವೆಂದು ಭಾವವು, ತೇಲುವ ವಸ್ತುವು ಒಳಗೆ ಸೇರಿಕೊಂಡಿರುವ ಗಾಳಿಯ ಬಲದಿಂದ ತೇಲುವಂತೆ ತಮ್ಮನ್ನು ಹೃದಯದಲ್ಲಿ ಧರಿ(ಸ್ಮರಿಸುವ ಬಲದಿಂದಲೇ ತಮ್ಮ ಭಕ್ತರು ಭವಸಾಗರವನ್ನು ದಾಟುವರೆಂದಭಿಪ್ರಾಯವು, ಯಸ್ಮಿನ್ ಹರಪ್ರಕೃತಯೋಪಿಹತಪ್ರಭಾನಾಮ ಸೋಪಿಯಾರತಿಪತಿಃಕ್ಷತಃ ಕಣೇನ | ನಿಧಾಪಿತಾಹುತಭುಜಃಪಯಸಾಥಯೇನ ಪೀತಂನಕಿಂತದಪಿದುರ್ಧರಬಾಡಬೇನ 11, ತಾ|| ಭಗವಂತನೇ ? ಯಾವನು ಶಿವನೇ ಮೊದಲಾದ ದೇವರು ಗಳನ್ನು ಜಯಿಸಿದನೋ ಅಂತಹ ಸಮಸ್ತ ದೇವಾದಿಗಳನ್ನೂ ವಶರನ್ನಾಗಿ ಮಾಡಿದಂಥ ವೀರಮನ್ಮಥನನ್ನು ಕೂಡ ಕ್ಷಣಮಾತ್ರದಿಂದ ತಾವು ಜಯಿಸಿದಿರಿ. (ಆತ್ಮಾನಾತ್ಮತತ್ವಜ್ಞಾನಪೂರ್ವಕ ವೈರಾಗ್ಯದಿಂದ ಕಾಮ ಕ್ರೋಧಾದಿ ಆತ್ಮ ಶತ್ರುಗಳನ್ನು ನಾಶಮಾಡಿ ಜಿನರೆಂಬ ಪದವಿಯನ್ನು ಹೊಂದಿದಿರಿ.) ಆದರೆ ಇದು ಆಶ್ಚರ್ಯವಲ್ಲ, ಹೇಗೆಂದರೆ ಲೋಕದಲ್ಲಿ ಬೆಂಕಿಯನ್ನು ಆರಿಸು ವಂತಹುದು ನೀರೆಂದು ಪ್ರಸಿದ್ದವಷ್ಟೆ ? ಅಂತಹ ನೀರನ್ನೂ ಕೂಡ ಹೀರಿ ಶೋಷಿಸುವಂತಹುದು ಬಡಬಾಗ್ನಿಯೆಂದು ಪ್ರಸಿದ್ಧವಾಗಿದೆ. ಅನಿರ್ವಚನೀಯ ವಾದ ಜ್ಞಾನವೈರಾಗ್ಯ ಮಹಿಮಯುಳ್ಳ ತಾವು ಹರಿಹರಾದಿಗಳಿಗಿಂತಲೂ ಅಧಿಕರೆಂದು ಭಾವವು ಸ್ವಾಮಿನ್ನ ನಂತಗರಿಮಾಣಮಪಿಪ್ರಪನ್ನಾ ಸಾಂಚಿಂತನ ಕಥನುಹೊಹೃದಯೇದಧಾನಾ | ಜನೋದಧಿಂಲಘುತರಂತ್ಯ ತಿಲಾಘವೇನ ಚಿಂತೊನಹಂತಮಹತಾಂಯದಿವಾಪ್ರಭಾವಃ | 12 |