SearchBrowseAboutContactDonate
Page Preview
Page 26
Loading...
Download File
Download File
Page Text
________________ ಪಂಚಸೂತ್ರ ಭಾವಪ್ರಕಾಶಿವ ಯಾವನು ಸಮರ್ಥನಾದಾನು ? ಹಾಗೆ ಸಮಸ್ತ ಅಜ್ಞಾನವೂ ತೊಲಗಿ ಹೋದರೂ ತಮ್ಮ ಗುಣಗಳು ಸಂಖ್ಯೆಗೆ ಅಡಗದೆ ಇರುವುದರಿಂದ ಇಷ್ಟೇ ಸರಿಯೆಂದು ನಿರ್ಣಯಿಸಲು ಸಾಧ್ಯವಿಲ್ಲವೆಂದರ್ಥವು. 83 ಅಭ್ಯುದ ತೋಸ್ಮಿತವನಾಥಜಡಾಶಯೋಪಿ ಪಟ ಕರ್ತು೦ಸವಲಿಸದಸಂಖಗುಣಾಕರಃ | ಬಾಲೋಪಿಕಿಂನನಿಜ ಬಾಹುಯುಗಂನಿತತ್ಯ ವಿಸ್ತೀರ್ಣತಾಂಕಥಯತಿಸ್ವಧಿಯಾಂಬುರಾಶಃ || 5 | 5, ತಾ|| ಓ ರಕ್ಷಕರೇ ! ನಾನು ಮೂಢಾತ್ಮನಾಗಿದ್ದರೂ ಸಹ, ಪ್ರಕಾಶಿಸುತ್ತಿರುವ ಅಸಂಖ್ಯಾತವಾದ ಗುಣಗಳಿಗೆ ಗಣಿಯಂತಿರುವ ತಮ್ಮನ್ನು ಸ್ತೋತ್ರಮಾಡುವುದಕ್ಕೋಸ್ಕರ ಪ್ರಯತ್ನಿಸಿದನು. ಹೀಗೆ ಅಶಕ್ತನೆಂದು ತಿಳಿದೂ ಪ್ರವರ್ತಿಸಬಹುದೇ ? ಅಂದರೆ, ಬಾಲಕನೂ ಕೂಡ ತನ್ನ ಎರಡು ತೋಳುಗಳನ್ನು ನೀಡಿಕೊಂಡು ತನ್ನ ಬುದ್ಧಿಯಿಂದ ಸಮುದ್ರದ ವಿಸ್ತಾರವನ್ನು ಇಷ್ಟಗಲವಾಗಿದೆ ಎಂದು ಹೇಳುವುದಿಲ್ಲವೇನು ? ಹಾಗೆ ನಾನೂ ತಮ್ಮ ಗುಣ ಗಳನ್ನು ನನ್ನ ಬುದ್ದಿಗೆ ತೋರಿದಷ್ಟು ಹೇಳುವುದು ದೋಷವಾಗುವುದಿಲ್ಲ. ಆದಮಾತ್ರಕ್ಕೆ ತಮ್ಮ ಗುಣಗಳಿಗೆ ಪರಿಮಾಣವನ್ನು ಹೇಳಿದಹಾಗಾಗಲಿಲ್ಲ. ಇದರಿಂದ ನನ್ನ ಮೌಡ್ಯವೇ ಪ್ರಕಟಿಸಲ್ಪಟ್ಟಿತು. ಬಾಲಕನು ಸಮುದ್ರದ ಅಳತೆಯನ್ನು ಕೈಗಳನ್ನು ಚಾಚಿ ತೋರಿಸಿದ ಹಾಗೆ ನನ್ನ ಪ್ರಯತ್ನವೂ ಯುಕ್ತವೆಂದಭಿಪ್ರಾಯವು. ಯೇಯೋಗಿನಾಮಪಿನಯಾಂತಿಗುಣಾಸ್ತ್ರವೇಶ ನಕುಂಕಥಂಭವತಿತೇಷುನುನಾವಕಾಶಃ | 25ಾತಾಡದೇವನುಸಾಕ್ಷಿತಕಾರಿತೇಯಂ ಜಲ್ಬಂತಿವಾನಿಜಗಿರಾನನು ಪಕ್ಷಿಣೋಪಿ - 6. ತಾ|| ಓ ಸ್ವಾಮಿಯೇ ! ಯಾವ ತಮ್ಮ ಅಗಣ್ಯವಾದ ಗುಣಗಳು ಯೋಗಿಗಳಿಗೂ ಕೂಡ ಹೇಳಲಶಕ್ಯವೋ ಅಂತಹ ತಮ್ಮ ಗುಣಗಳನ್ನು ಸ್ತೋತ್ರ ಮಾಡಲು ಅತಿಸ್ವಲ್ಪ ಬುದ್ದಿಯುಳ್ಳ ನಾನು ಹೇಗೆ ಯೋಗ್ಯತೆಯನ್ನು ಹೊಂದುವನು ? ಈ ಪ್ರಕಾರ ಅಸಾಧ್ಯಕಾರ್ಯದಲ್ಲಿ ಪ್ರವರ್ತಿಸಿದ ನಾನು ಕಲ್ಯಾಣಮಂದಿರಸೋತ್ರ ಪರ್ಯಾಲೋಚನೆ ಇಲ್ಲದವನೆಂದು ಲೋಕದ ಹೇಳಿಕೆಗೆ ಒಳಗಾಗುತ್ತೇನೆ: ಆದರೂ ನನ್ನ ಸಾಹಸವು ಯುಕ್ತವೇ ಸರಿ. ಹೇಗೆಂದರೆ, ಪಕ್ಷಿಗಳೂ ಕೂಡ ತಮ್ಮ ಚಿಲಿಪಿಲಿಗುಟ್ಟುವಿಕೆಯಿಂದ ಅಸ್ಪುಟವಾಗಿ ಮಾತನಾಡುತ್ತವೆಯಷ್ಟೆ? ಪಕ್ಷಿಯಂತೆ ನಾನೂ ಕೂಡ ಪರ್ಯಾಲೋಚನೆ ಇಲ್ಲದೆ ಯಥಾಶಕ್ತಿ ತಮ್ಮ ಗುಣಗಳನ್ನು ಸ್ತುತಿಸುತ್ತೇನೆಂದಭಿಪ್ರಾಯವು. ಆಸ್ತಾನಚಿಂತ್ಯವಹಿವಾಜಿನಸಂಸ್ತವಸ್ತೆ ನಾಮಪಿಪಾತಿಭವತೋಭವತೋಜಗಂತಿ | ತೀವಾತ ಪೋಪಹತಸಾಂಥಜನಾ ದಾಥೇ ತಾ ಪ್ರೀಕಾತಿಪದ್ಮಸರಸಸ್ಸರಸೋನಿಲೋಪಿ ಲಾರಿ | 2 | 7. ತಾ ಓ ಜಿನೇಂದ್ರನೇ ! ಮನಸ್ಸಿನಿಂದ ಚಿಂತಿಸುವುದಕ್ಕೂ ಕೂಡ ಅಶಕ್ಯವಾದ ಮಹಿಮೆಯುಳ್ಳ ತಮ್ಮ ಸ್ತೋತ್ರವನ್ನು ಮಾಡುವುದು ಹಾಗಿರಲಿ, ತಮ್ಮ ನಾಮಸ್ಮರಣೆಯು ಸಹ ಭವಬಂಧವನ್ನು ತಪ್ಪಿಸಿ, ಪ್ರಾಣಿಗಳನ್ನು ಕಾಪಾಡುತ್ತದೆ. ಹೇಗೆಂದರೆ:-ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ಬಳಲಿದ ಜನಗಳನ್ನು ಕಮಲಗಳಿರುವ ಸರೋವರದ ಗಾಳಿಯೂ ಕೂಡ ಸಂತೋಷ ಪಡಿಸುತ್ತದೆ. ಹಾಗೆ ತಮ್ಮ ನಾಮಸಂಕೀರ್ತನವೂ ಕೂಡ ಭವದುಃಖಗಳನ್ನು ಹೋಗಲಾಡಿಸಿ ಕಾಪಾಡುವುದು. ಆದುದರಿಂದ ಅಶಕ್ತನಾಗಿದ್ದರೂ ಸೋತ್ರ ವನ್ನು ಮಾಡುವೆನೆಂದಭಿಪ್ರಾಯವು, ಬಂಟ ಹೃದ್ದರ್ತಿನಿತ್ವವಿಭೂಶಿಥಿಲೀಭವಂತಿಗೆ ಜಂತೊಂಕಣೇನನಿಬಿಡಾಅಸಿಕರ್ಮಬಂಧಾಃ | ಸದ್ಯೋಭುಜಂಗನಮಯಾಇವಮಧ್ಯಭಾಗns ಮಭ್ಯಾಗತೀವನಶಿಖಂಡಿನಿಚಂದನಸ್ಯ | 8 || 8. ತಾ॥ ಓ ಪ್ರಭುವಾದಂತಹ ಜಿನೇಂದ್ರನೇ ! ತಾವು ಯಾವ ಪ್ರಾಣಿಯ ಹೃದಯದಲ್ಲಿರುತ್ತೀರೋ ಆ ಪ್ರಾಣಿಯ ಕರ್ಮಗಳೆಂಬ ಕಟ್ಟುಗಳು ಎಷ್ಟು ಬಿಗಿಯಾಗಿದ್ದರೂ ಒಂದು ಕ್ಷಣ ಮಾತ್ರದಿಂದ ಸಡಲಿಹೋಗುವುವು. ಹೇಗೆಂದರೆ, ನವಿಲು ವನಮಧ್ಯವನ್ನು ಹೊಂದಿದ ಕೂಡಲೇ ಗಂಧದ ಮರಕ್ಕೆ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy