________________ ಪಂಚಸ್ತೋತ್ರ ಭಾವಪ್ರಕಾಶಿಕಾ ಮಹಾ ರೋಗದಿಂದ ಬಾಧೆಪಡುತ್ತಿರುವವರಾಗಿಯೂ, ಬಹು ದುಃಖಾವಸ್ತೆ ಯನ್ನು ಹೊಂದಿದವರಾಗಿಯೂ, ಇನ್ನು ಮೇಲೆ ಬದುಕುವುದಿಲ್ಲವೆಂದು ನಿಶ್ಚಯಿಸಿಕೊಂಡಿರುವವರಾಗಿಯೂ ಇರುವ ಮನುಷ್ಯರು ನಿಮ್ಮ ಪಾದಧೂಳಿ ಯೆಂಬ ಅಮೃತವನ್ನು ಮೈಗೆ ಹಚ್ಚಿಕೊಳ್ಳಲು ಮನ್ಮಥಸಮಾನ ರೂಪು ಉಳ್ಳವರಾಗುತ್ತಾರೆ. ಅಪಾದಕಂಠಮುರುಶೃಂಖಲನೇಷ್ಟಿತಾಂಗಾ ಗಾಢಂಬೃಹನ್ನಿಗಡಕೊಟಿನಿಷ್ಪಷ್ಟಜಂಘಾಃ | ತನ್ಮಾನಮಂತ್ರಮುನಿಶಂತನುಜಾ ರಂತ ಸ್ಪಸ್ಮಯಂತಿಗತಬಂಧಭಯಾಭವಂತಿ no || 46 || 1 '46. ತಾ|| ಓ ಸರ್ವ ಆಪತ್ಪರಿಹಾರಕ ಪ್ರಭುವೇ ! ಯಾವ ಮನುಷ್ಯರು ಕಾಲಿನಿಂದ ಕುತ್ತಿಗೆಯವರೆಗೂ ದಪ್ಪ ಸರಪಣಿಗಳಿಂದ (ಬೇಡಿಗಳಿಂದ) ಸುತ್ತ ಲ್ಪಟ್ಟ ದೇಹವುಳ್ಳವರಾಗಿಯೂ, ಗಟ್ಟಿಯಾಗಿ ಆ ಸಂಕೋಲೆಯ ತುದಿಗ ಳಿಂದ ಘಾಯವಾಗಿರುವ ತೊಡೆಗಳುಳ್ಳವರಾಗಿಯೂ ಕೇಶಪಡುತ್ತಿರುವ ಮನುಷ್ಯರು ತಮ್ಮ ನಾಮಸ್ಮರಣೆಯನ್ನು ವರಾಡಿದ ಕ್ಷಣದಲ್ಲಿಯೇ ತನಗೆ ತಾನೇ | ಆ ಬಂದೀಖಾನೆ ಸಂಕೋಲೆಗಳು ಬಿಟ್ಟು ಹೋಗಿ ಆ ಬಂಧನ ಭೀತಿಯನ್ನು ಬಿಟ್ಟು ಸುಖಿಗಳಾಗುತ್ತಾರೆ. ತಮ್ಮ ನಾಮಸ್ಮರಣವು ಸಮಸ್ಯೆ ವಿಪತ್ತು ಗಳನ್ನು ಪರಿಹರಿಸಿ, ಸಮಸ್ತ ಇಷ್ಟಾರ್ಥಗಳನ್ನು ಕೊಟ್ಟು ಕಾಪಾಡುತ್ತದೆಂದಭಿ ಪ್ರಾಯವು ಮತ್ತದ್ವಿಪೇಂದ್ರಮ್ಮಗರಾಜದನಾನಲಾಹಿ - ಸಂಗ್ರಾಮವಾರಿಧಿನಹೊದರಬಂಧನೋತ್ಸಂ| ತಸ್ಯಾಶುನಾಶಮುಸಯಾತಿಭಯಂಭಿಯೇನು ಯಸ್ತಾವಕಂಸ್ಕವನಿಮುಂನತಿಮಾನಧೀತೆ | 47 || 47. ತಾ|| ಓ ಭವಬಂಧವಿಮೋಚಕನಾದ ಜಿನರಾಜನೇ ! ಯಾವ ವಿವೇಕಿಯಾದ ಭವಾತ್ಮನು ತಮ್ಮ ಮಾಹಾತ್ಮಪ್ರಕಾಶವಾದ ಈ ಭಕ್ತಾಮರ ಸ್ತೋತ್ರವನ್ನು ಜ್ಞಾನ, ಭಕ್ತಿ, ಶ್ರದ್ಧಾಪೂರ್ವಕವಾಗಿ ಓದುತ್ತಾನೋ, ಅಂತಹ ಮನುಷ್ಯನಿಗೆ ಮದಿಸಿದ ಆನೆ, ಸಿಂಹ, ಸರ್ಪ, ಕಾಡುಗಿಚ್ಚು, ಯುದ್ಧ, ಸಮುದ್ರ, ಭಕ್ತಾವರಸ್ತೋತ್ರ ಮಹೋದರರೋಗ, ಬಂದೀಖಾನೆ ಇವುಗಳಿಂದುಂಟಾದ ಭಯವು ತಮ್ಮಿಂದ ಹೆದರಿಯೋ ಎಂಬಂತೆ ಬಹಳ ಬೇಗನೆ ನಾಶವಾಗುವುದು. ತಮ್ಮ ಧ್ಯಾನ ನಾಮಸಂಕೀರ್ತನಾದಿ ಮಾಹಾತ್ಮವು (ಮಹಿಮಯು) ಸಮಸ್ತ ಭವಭಯ ಗಳನ್ನೂ ಪರಿಹರಿಸುವುದೆಂದಭಿಪ್ರಾಯವು. ಸ್ತೋತ್ರಸಜಂತವಜಿನೇಂದ್ರಗುರ್ನಿಬದ್ಧಾಂ ಭಾವಯಾನಿನಿಧವರ್ಣವಿಚಿತ್ರಪುಷ್ಪಾಂ | ಧಜನೆಯು ಇಹಕಂಠಗತಾವಜಸ್ತಂ : ತಂಮಾನತುಂಗನವಶಾಸನುಪೈ ತಿಲಕ್ಷ್ಮೀಃ // 48 || 48. ತಾ|| ಓ ಸ್ವಾಮಿಯೇ ! ತಮ್ಮ ಅನಂತಜ್ಞಾನಾನಂತ ದರ್ಶನ ಅನಂತವೀರ್ಯ ಅನಂತಸುಖಾದಿ ಗುಣಗಳೆಂಬ ನೂಲು (ನಾರು) ಗಳಿಂದ ಪ್ರಕಾಶಿ ಸುತ್ತಿರುವ ನಾನಾ ಅಕ್ಷರಗಳೆಂಬ ವಿಚಿತ್ರವಾದ ಹೂವುಗಳುಳ್ಳ, ನನ್ನಿಂದ ಭಕ್ತಿಯಿಂದ ಕಟ್ಟಲ್ಪಟ್ಟ ಈ ಭಕ್ತಾಮರಣೋತ್ರವೆಂಬ ಮಾಲಿಕೆಯನ್ನು ಯಾವ ಭವಾತ್ಮನು ಸರ್ವಕಾಲದಲ್ಲಿಯ ಕುತ್ತಿಗೆಯಲ್ಲಿ ಧರಿಸುತ್ತಾನೋ ( ಉಚ್ಚರಿಸುತ್ತಾನೋ ) ಅಂತಹಮಾನದಿಂದ ಉತೃಷ್ಟನಾದ ಪುರುಷನನ್ನು (ಮಾನತುಂಗಾಚಾರ್ಯರನ್ನು) ಲಕ್ಷಿ ಯು (ಇಹಪರ ಲೋಕಸಂಪತ್ತು) ತಾನೇ ಪರವಶವಾಗಿ ಹೊಂದುತ್ತಾಳೆ. ಈ ಸ್ತೋತ್ರವು ಹೂವಿನಂತೆ ಬಹಳ ಸುಕುಮಾರವಾದ ಅಕ್ಷರಗಳಿಂದ ಸೇರಿಸಲ್ಪಟ್ಟಿದ್ದಾಗಿಯೂ, ಅರ್ಥಚಾತುರ್ಯ ವುಳ್ಳದ್ದಾಗಿಯೂ, ಹೂವಿನ ಮಾಲೆಯಂತೆ ಅತ್ಯಂತ ಮನೋಹರವಾಗಿಯೂ, ಬಹಳ ಉತ್ಕೃಷ್ಟವಾಗಿಯೂ ಇರುವುದೆಂಬ ಅತಿಶಯವನ್ನು ಆಚಾರ್ಯರು ಸೂಚಿಸಿರುತ್ತಾರೆ. . 6 ಇತಿ ಶ್ರೀಮಾನತುಂಗಾಚಾರ್ಯ ವಿರಚಿತ ನ ಭಕ್ತಾಮರ ಸ್ತೋತ್ರಂ