SearchBrowseAboutContactDonate
Page Preview
Page 23
Loading...
Download File
Download File
Page Text
________________ ಪಂಚಸ್ತೋತ್ರ ಭಾವಪ್ರಕಾಶಿಕಾ ರಕ್ಷಣಂಸಮುದಕೊಕಿಲಕಂಠನೀಲಂ ಕ್ರೋಧೋದ್ದ ತಂಫಣಿನಮುತ್ರಣಮಾಪತಂತಂ | ಆಕ್ಯಾಮತಿಕ್ರನಯುಗೇನನಿರಸ್ತಕ ಈ ಸೃನ್ನಾಮನಾಗದಮುನೀಹೃದಿಯಸ್ಯ ಪುಂಸಃ - 1 41 41. ತಾ|| ಓ ಜಿನನಾಥನೇ ! ರೋಷದಿಂದ ಕೆಂಪಾದ ಕಣ್ಣುಗಳುಳ್ಳ ದ್ದಾಗಿಯೂ, ಮದಿಸಿದ ಕೋಗಿಲೆಯ ಕಂಠದಂತೆ ನೀಲವರ್ಣವುಳ್ಳದ್ದಾಗಿಯೂ, ಕೋಪಾವೇಶದಿಂದ ಹಡೆಯನ್ನು ಎತ್ತಿಕೊಂಡು ಎದುರಿಗೆ ಬರುತ್ತಿರುವ ಕೃಷ್ಣ ಸರ್ಪವನ್ನು, ನಿಮ್ಮ ಭಕ್ತನು ಮನಸ್ಸಿನಲ್ಲಿ ನಿಮ್ಮ ನಾಮಸ್ಮರಣೆಯನ್ನು ಮಾಡುತ್ತಾ ಭಯವಿಲ್ಲದವನಾಗಿ ಎರಡು ಕಾಲುಗಳಿಂದಲೂ ತುಳಿದು ಅಡಗಿ ಸುವನು. ಆದುದರಿಂದ ನಿಮ್ಮ ನಾಮಸ್ಮರಣೆಯೇ ಹಾವನ್ನು ಅಡಗಿಸುವ ಗರುಡಮಂತ್ರಸವಾನವೆಂದರ್ಥವು. ವಲ್ಲ ತುರಂಗಗಜಗರ್ಜಿತಭೀಮನಾದ ಮಾಜೇಬಲಂಬಲವತಾಮಪಿಭೂಪತೀನಾಂ | ಉದ್ಯದ್ದಿವಾಕರನುಯಖಶಿಖಾಪವಿದ್ದಂ ತ್ವರ್ತನಾಮ ಇವಾಶುಭಿದಾನುಪೈತಿ - I 42 42. ತಾ|| ಓ ಆದಿಜಿನೇಂದ್ರನೇ ! ಕುಣಿಯುತ್ತಿರುವ ಕುದುರೆಗಳೂ, ಗರ್ಜಿಸುತ್ತಿರುವ ಆನೆಗಳೂ, ಇವುಗಳೊಡಗೂಡಿದ ಮಹಾ ಭಯಂಕರವಾದ ಶಬ್ದ ವುಳ್ಳ ಬಲಿಷ್ಠರಾದ ಶತ್ರುರಾಜರ ಸೈನ್ಯವು, ಉದಿಸಿದ ಸೂರ್ಯನ ಕಿರಣಗಳಿಂದ ಕಗ್ಗತ್ತಲೆಯು ತೊಲಗುವಂತ ತಮ್ಮ ನಾಮಸಂಕೀರ್ತನದಿಂದ ತೊಲಗಿ ಹೋಗುವುದು. ತಮ್ಮಲ್ಲಿ ದೃಢಭಕ್ತಿ ಇರುವವನು ಅಸಾಧ್ಯವಾಗಿ ಭಯಂಕರವಾದ ಶತ್ರುಸೈನ್ಯವನ್ನು ಕೂಡ ಜಯಿಸುವನೆಂದಭಿಪ್ರಾಯವು. ಕುಂತಾಗ್ರಭಿನ್ನ ಗಜಶೋಣಿತನಾರಿವಾಹ ವೇಗಾವತಾರತರಣಾತುರಯೋಧಭೀಮೆ | ಯುದ್ಧಜಯಂಜಿತ ದುರ್ಜಯಜೇಯಪಕ್ಷಾ ಸ್ಮಶಾದಪಂಕಜವನಾಶ್ರಯಿಡೋಲಭಂತೇ | ಭಕ್ತಾಮರಸೊತ್ರ 43. ತಾ|| ಓ ದೇವಾಧಿದೇವನೇ ! ನಿಮ್ಮ ಪಾದಕಮಲವೆಂಬ ವನವನ್ನಾಶ್ರಯಿಸಿದವರು ಭರ್ಜಿ (ಕುಂತಾಯಧ) ಗಳಿಂದ ಇರಿಯಲ್ಪಟ್ಟ ಆನೆ ಗಳ ರಕ್ತ ಪ್ರವಾಹದಲ್ಲಿ ವೇಗದಿಂದ ಇಳಿಯುವುದಕ್ಕಾಗದೇ ವ್ಯಥೆ ಪಡುತ್ತಿರುವ ಭಟರುಗಳಿಂದ ಭಯಂಕರವಾದ ಯುದ್ಧದಲ್ಲಿ ಜಯಿಸಲಶಕ್ಯರಾದ ಶತ್ರು ಗಳನ್ನು ಕೂಡ ಜಯಿಸುತ್ತಾರೆ. ತಮ್ಮ ಪಾದಭಕ್ತಿಯು ಸಕಲ ಅನಿಷ್ಟ ಗಳನ್ನೂ ಪರಿಹರಿಸಿ ಶ್ರೇಯಸ್ಸನ್ನುಂಟುವರಾಡುವುದೆಂದಭಿಪ್ರಾಯವು, ಅಂಭೋನಿಧ್ರಕ್ಷುಭಿತಭೀಷಣನಕ್ರಚಕ್ರ ಪಾಶೀನಪೀಠಭಯದೊಲ್ಬಣಬಾಡಬಾಗ್‌! ರಂಗತರಂಗಶಿಖರಸ್ತಿ ತಯಾನಪಾತ್ರಾ ಸ್ನಾ ಸಂವಿಹಾಯಭವತಃಸ್ಮರಣಾದ್ರದಂತಿ: | 44 || 44. ತಾ|| ಓ ಜಗದಾಧಾರಸ್ವರೂಪನೇ ! ಗಾಳಿಯ ಹೊಡೆತದಿಂದ ತೆರೆವಶಾಲೆಗಳಿದ್ದು ಅಲ್ಲೋಲಕಲ್ಲೋಲವಾದಂತಹ ಭಯಂಕರವಾದ ಮೊಸಳೆ ಗಳ ಸಮೂಹದಿಂದಲೂ, ಪಾಠೀನವೆಂಬ ವಿರಾನಗಳಿಂದಲೂ, ಪೀಠವೆಂಬ ಮತ್ತೊಂದು ಜಾತಿಯ ವಿರಾನಗಳಿಂದಲೂ, ಭಯಂಕರವಾದ ಬಡಬಾಗ್ನಿ ಯುಳ್ಳ ಸಮುದ್ರದಲ್ಲಿ ಬಹಳವಾಗಿ ಅಲ್ಲಾಡುತ್ತಿರುವ ದೊಡ್ಡ ದೊಡ್ಡ ಅಲೆ ಗಳ ರಾಶಿಯ ಮೇಲೆ ಬಹಳ ಚಲಿಸುತ್ತಿರುವ ಹಡಗುಗಳಲ್ಲಿ ಕುಳಿತಿರುವವರು (ಅಕಸ್ಮಾತ್ತಾಗಿ ಹಡಗು ಮುಳುಗುವ ಸ್ಥಿತಿಯಲ್ಲಿರುವವರು) ಪ್ರಾಣಭೀತಿ ಯನ್ನು ಬಿಟ್ಟು ದೃಢಭಕ್ತಿಯಿಂದ ತಮ್ಮನ್ನು ಸ್ಮರಿಸುವಂಥವರಾಗಲು ಆ ಹಡಗು ಮುಳುಗದೆ ತಪ್ಪಿ ದಡವನ್ನು ಸೇರುವರು. ಉದೂತಭೀಷಣಜಲೋದರಭಾರಭುಗ್ಯಾತಿ ಶೋಚಾಂದಶಾನುಪಗತಾಸ್ತುತಜೀವಿತಾಶಾಃ | ತ್ವತ್ಪಾದಪಂಕಜರಚೋಮ್ಮತದಿಗ್ಗದೇಹಾ ಮರ್ತ್ಯಾಭವಂತಿಮಕರಧ್ವಜತುಲ್ಕ ರೂಪಾಃ | 45. ತಾ|| ಓ ಸಕಲಕರ್ಮ ಶತ್ರುಗಳನ್ನು ಗೆದ್ದಂತಹ ಜಿನರಾಜನೇ ! ಪೂರ್ವಜನ್ಮದ ಘೋರಪಾಪದಿಂದುಂಟಾದ ಭಯಂಕರ ಜಲೋದರವೆಂಬ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy