SearchBrowseAboutContactDonate
Page Preview
Page 22
Loading...
Download File
Download File
Page Text
________________ ನಕ ಭಕ್ತಾಮರಣೋತ್ತರಿ 25. 39. ತಾ|| ಓ ರಕ್ಷಕನೇ ! ಮದಿಸಿದ ಆನೆಯ ಮೇಲೆ ಹಾರಿ ಕುಂಭ ಸ್ಥಲವನ್ನು ಬಗೆದು ರಕ್ತದೊಡಗೂಡಿ ಚೆಲ್ಲಿದ ವಲತ್ತುಗಳಿಂದ ಭೂಮಿಯನ್ನು ಅಲಂಕರಿಸುತ್ತಿರುವ ಮೇಲೆ ಬೀಳುವುದಕ್ಕೆ ಹೆಜ್ಜೆ ಇಟ್ಟಿರುವ (ಇಲ್ಲಿ ಬದ್ಧ ಕ್ರಮಃ ಎಂಬ ಪದಕ್ಕೆ ಕಟ್ಟಲ್ಪಟ್ಟ ಕಾಲುಳ್ಳ ಸಿಂಹವು ಎಂದು ಅರ್ಥವಾಗು ಇದೆ. ಆ ಪಕ್ಷದಲ್ಲಿ ತಾತ್ಪರ್ಯವೇನೆಂದರೆ-ಸಿಂಹವು ಸ್ವಭಾವದಿಂದಲೇ ಕ್ರೂರವು ಅದನ್ನು ಪಂಜರದಲ್ಲಿಯೂ ಕೂಡಿದ್ದರೆ ಎಷ್ಟು ರೋಷವುಳ್ಳದ್ದಾ ಗಿರಬಹುದು ? ಅಂತಹ ಸಿಂಹವೂ ಕೂಡ ತಮ್ಮ ಪಾದಾಶ್ರಿತನನ್ನು ಕೊಲ್ಲುವು ದಿಲ್ಲವೆಂದಭಿಪ್ರಾಯವು) ಸಿಂಹವೂ ಕೂಡ ನಿಮ್ಮ ಪಾದವೆಂಬ ಪರ್ವತವನ್ನು ಆಶ್ರಯಿಸಿದವನನ್ನು ಮತ್ತು ತನ್ನ ಕಾಲಿಗೆ ಸಿಕ್ಕಿದವನನ್ನು ಹಿಡಿದುಕೊಳ್ಳುವು ದಿಲ್ಲ, ನಿಮ್ಮ ಭಕ್ತರ ವಿಷಯದಲ್ಲಿ ಅಂತಹ ಕ್ರೂರಜಂತುವಾದ ಸಿಂಹವೂ ಕೂಡ ಶಾಂತವಾಗುತ್ತದೆಂದಭಿಪ್ರಾಯವು, ಪಂಚಸ್ತೋತ್ರ ಭಾವಪ್ರಕಾಶಿಕಾ ಇತರ ದೇವರುಗಳಿಗೆ (ಹರಿಹರಾದಿ ದೇವರುಗಳಿಗೆ) ಉಂಟಾಗಲಿಲ್ಲ. ಇದು | ಯುಕ್ತವೇ ಸರಿ. ಹೇಗೆಂದರೆ ಸಮಸ್ತ ಕತ್ತಲೆಯನ್ನು ತೊಲಗಿಸುವ ಸೂರ್ಯ ಪ್ರಭೆಯು ಯಾವ ಪ್ರಕಾರವಾದದ್ದೋ ಅಂತಹ ಪ್ರಭೆಯು ತೇಜೋರೂಪ ಗಳಾಗಿದ್ದರೂ ಚಂದ್ರ ತಾರಾದಿಗಳೆಲ್ಲಾ ಒಟ್ಟಿಗೆ ಸೇರಿದ ಗುಂಪಿಗೂ ಕೂಡ | ಸಂಭವಿಸುವುದಿಲ್ಲವಷ್ಟೆ ? ಶೂ ತನ್ಮದಾಲಿನಿಲವಿಲೋಲ ಕಪೋಲಮಲ | ಮತ್ತಭ್ರಮ ನರನಾದನಿನ್ನದ್ದ ಕೋಪಂ | ಐರಾವತಾಭನಿಭಮುದ್ದ ತಮಾಪತಂತಂ | ಆ ದೃಷ್ಟಾಭಯಂಭವತಿನೋಭವದಾಶ್ರಿತಾನಾಂ || 38 || 38. ತಾ ಓ ಜಿನನಾಥನೇ ! ಮದವೇರಿ ಕೆನ್ನೆಗಳಿಂದ ಸುರಿಯುತ್ತಿ ರುವ ಮದಜಲ ಪ್ರವಾಹವುಳ್ಳದ್ದಾಗಿಯೂ, ಆ ಮದಜಲದ ವಾಸನೆ ಗೋಸ್ಕರ ಕೆನ್ನೆಗಳ ಹತ್ತಿರ ಸುತ್ತುತ್ತಿರುವ ದುಂಬಿಗಳ ಝಂಕಾರಧ್ವನಿಯಿಂದ ಹೆಚ್ಚಾದ ಕೋಪವುಳ್ಳದ್ದಾಗಿಯೂ, ಐರಾವತದಂತೆ ಅತ್ಯಂತ ಉನ್ನತವಾದ ಆಕಾರವುಳ್ಳದ್ದಾಗಿಯೂ, ಮಹಾ ಗರ್ವಿತವಾಗಿಯ, ಎದುರಿಗೆ ಬರುತ್ತಿ ರುವ ಆನೆಯನ್ನು ನೋಡಿ ನಿಮ್ಮನ್ನು ಆಶ್ರಯಿಸಿರುವ ಭಕ್ತರಿಗೆ ಭಯ ವುಂಟಾಗುವುದಿಲ್ಲ. ಅಂದರೆ ನಿಮ್ಮ ಪಾದವನ್ನು ಆಶ್ರಯಿಸಿದವನನ್ನು ಆ ಪಾದಭಕ್ತಿ ಮಹಾತ್ಮ ವೇ ಅಂತಹ ವಿಪತ್ತನ್ನು ಕೂಡ ತಪ್ಪಿಸಿ ಕಾಪಾಡುವು ದೆಂದರ್ಥವು. ಅಂತಹ ಘೋರವಾದ ಆನೆಯು ಕೂಡ ಕ್ಷಮಾದಯಾ | ಶಾಂತಾದಿ ಗುಣ ಸಮುದ್ರಪ್ರಾಯರಾದ ತಮ್ಮ ಆಶ್ರಿತನ ವಿಷಯದಲ್ಲಿ ಶಾಂತಿ ಯನ್ನು ಹೊಂದುವುದೆಂದಭಿಪ್ರಾಯವು ಅತಿ ಭಿನ್ನೇಭ ಕುಂಭಗಲದುಜ್ಜಲಶೋಣಿತಾಕ್ತನ ಮುಕ್ತಾಫಲಪ್ರಕರಭೂಷಿತಭೂವಿಭಾಗಃ | ಬದ್ದ ಕ್ರಮಕ್ರಮಗತಂಹರಿಣಾಧೀಪೊಪಿಡಿಯಾ ನಾಕ್ರಾಮತಿಕ್ರಮಯುಗಾಚಲಸಂಶ್ರಿತ೦ತೇ || 39 || ಕಲ್ಪಾಂತಕಾಲ ಪವನೋದ್ದ ತವ ಕಲ್ಪಂ ದಾವಾನಲಂಜ್ವಲಿತವುಲನುತುಲಿಂಗಂ || ವಿಶ್ವಂಜಿ ಮತ್ತು ವಿವಸಮುಖಮಾಪತಂತಂ | ತನ್ನಾಮಕೀರ್ತನಜಲಂಶವುಯತ್ಯಶೇಷಂ _| 40 || 40. ತಾ॥ ಓ ಜಿನೇಂದ್ರನೇ ! ಪ್ರಳಯಕಾಲದ ಗಾಳಿಯಿಂದ ಜ್ವಲಿತ ವಾದ ಬೆಂಕಿಯಂತೆ ನಾಲ್ಕು ಕಡೆಯ ಜ್ವಾಲಾಮಯವಾಗಿಯು, ಮೇಲಕ್ಕೆ ಹಾರುತ್ತಿರುವ ಕಿಡಿಗಳುಳ್ಳದ್ದಾಗಿಯ, ಲೋಕವನ್ನೆಲ್ಲಾ ಭಕ್ಷಿಸಲಿಚ್ಛೆ ಯಿಂದಲೋ ಎಂಬಂತೆ ಎದುರಿಗೆ ಬರುತ್ತಿರುವ ಕಾಡುಗಿಚ್ಚನ್ನೂ ಕೂಡ ತಮ್ಮ ನಾಮ ಸಂಕೀರ್ತನವೆಂಬ ನೀರು ನಿಶ್ಲೇಷವಾಗಿ ಅಡಗಿಸುತ್ತದೆ. ಅಂದರೆ ತಮ್ಮ ಶರಣಾಗತನು ದೃಢಭಕ್ತಿಯಿಂದ ತಮ್ಮ ನಾಮಸಂಕೀರ್ತನವನ್ನು ವರಾಡುತ್ತಾ ಇರಲು ಅಂತಹ ಕಾಡುಗಿಚೊ ಕೂಡ ತಾನೇ ಶಾಂತವಾಗಿ ಹೋಗುತ್ತದೆ. ತಮ್ಮ ಧ್ಯಾನ, ಸೋತ್ರ, ನಾಮಸಂಕೀರ್ತನ ಮಹಾತ್ಮವು ಅಚಿಂತ್ಯವಾದದ್ದೆಂದಭಿಪ್ರಾಯವು. ಎಂದು
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy