________________ ಪಂಚಸ್ತೋತ್ರ ಭಾವಪ್ರಕಾಶಿಕಾ ಕುಂದಾವದಾತಚಲಚಾಮರಚಾರುಶೋಭಂ 10 ವಿಭಾಜತೇತನವಪುಃ ಕಂಭೌತಕಾಂತola ಉಚ್ಛಶಾಜ್ಯಶುಚಿನಿರುರ್ತಿರವಾರಿಧಾರ , ಮುಚ್ಚೆಸಟಂಸುರಗಿರೇರಿವಶಾತಕಂಭಂ 42 | 30 || - 30, ತಾ|| ಓ ಜಿನೇಂದ್ರನೇ ! ಮೊಲ್ಲೆ ಹೂವಿನಂತೆ ಬೆಳ್ಳಗಾಗಿಯೂ, ಉಭಯಪಾರ್ಶ್ವಗಳಲ್ಲಿಯೂ, ಬೀಸಲ್ಪಡುವುದಾಗಿಯೂ ಇರುವ ಚಾವರಪ ಬಿಯಿಂದ ಶೋಭಿಸುವ, ಮತ್ತು ಬಂಗಾರದಂತೆ ಹೊಳೆಯುವ ತಮ್ಮ ದಿವ್ಯ ದೇಹವು ಆಗತಾನೆ ಉದಯಿಸುತ್ತಿರುವ ಚಂದ್ರನ ಕಿರಣಗಳಂತೆ ಬೆಳ್ಳಗೆ ಪ್ರಕಾಶಿಸುತ್ತಿರುವ ಶಿಖರದಿಂದ ಕೆಳಮುಖವಾಗಿ ಇಳಿಯುತ್ತಿರುವ ಗಿರಿನದೀ ಪ್ರವಾಹವುಳ್ಳದ್ದಾಗಿಯೂ, ಮತ್ತು ಬಂಗಾರಮಯವಾಗಿಯೂ ಇರುವ ಮಹಾ ಮೇರುಪರ್ವತದಂತೆ ಪ್ರಕಾಶಿಸುತ್ತಿದೆ. ಮೇರುಪರ್ವತವು ಹೇಗೆ ಮೂರು ಲೋಕಗಳನ್ನೂ ವ್ಯಾಪಿಸಿ ಸರ್ವಲೋಕಾಶ್ರಯವಾಗಿಯೂ, ಸರ್ವ ಶ್ರೇಷ್ಠವಾಗಿಯೂ, ಸ್ಥಿರವಾಗಿಯೂ, ಅತ್ಯುನ್ನತವಾಗಿ ಅಚಿಂತ್ಯ ಮಹಿಮೆಯುಳ್ಳ ದ್ದಾಗಿಯೂ ಇರುವುದೋ ಹಾಗೆ ಶ್ರೀ ವೃಷಭಸ್ವಾಮಿಯ ಮಹಿಮೆಯು ವರಾತಿಗೂ ಮನಸ್ಸಿಗೂ ಅಡಗದೆಂದಭಿಪ್ರಾಯವು, - ಛತ್ರತ್ರಯಂತರವಿಭಾತಿಶಶಾಜ್ಯ ಕಾಂತ | ಮುಚ್ಚೆಸ್ಥಿತ೦ಸ್ಥಗಿತಭಾನುಕರಪ್ರತಾಪಂ | ಮುಕ್ತಾಫಲಪ್ರಕರಚಾಲನಿವೃದ್ದ ಶೋಭಂ ಪ್ರಖ್ಯಾ ಪಯಜಗತಃ ಪರಮೇಶ್ವರತ್ವಂ 31, ತಾ|| ಓ ಭಗವಂತನೇ ! ಚಂದ್ರನಂತೆ ಹೊಳೆಯುವಂತಹುದಾ ಗಿಯೂ, ಸೂರ್ಯಕಿರಣ ಸಂತಾಪವನ್ನು ಮುಚ್ಚುವುದಾಗಿಯೂ (ತಡೆಯಲುವು ದಾಗಿಯೂ) ಸುತ್ತಲೂ ಮುತ್ತಿನ ಕುಚ್ಚುಗಳಿಂದ ಪ್ರಕಾಶಿಸುತ್ತಿರುವುದಾಗಿಯೂ ಮೇಲುಭಾಗದಲ್ಲಿರುವ ತಮ್ಮ ಮುಡೆಯು ತಾವೇ ಮೂರು ಲೋಕ ಗಳಿಗೂ ಸ್ವಾವಿಂಯೆಂಬ ಭಾವವನ್ನು ಸೂಚಿಸುವಂತಹುದಾಗಿ ಪ್ರಕಾಶಿಸುತ್ತಿದೆ. ಇದರಿ ಮುಕ್ಕೊಡೆಯಂಬ ಪ್ರಾತಿಹಾರ್ಯವೆನಿಸಿದ ಸಂಪತ್ತಿನ ವರ್ಣನವು. ಭಕ್ಕಾಮರಸೋತು ಗಂಭೀರತಾರರವಪೂರಿತದಿಗ್ವಿಭಾಗ : ಪೈಲೋಕ್ಯಲೋಕಶುಭಸಜ್ಜ ಮಭೂತಿದಕ್ಷಃ | ಸದ್ಧರ್ಮರಾಜಜಯಘೋಷಣಘೋಷಕರ್ಸ್ಸ ಖೇದುಂದುಭಿರ್ಧ್ವನತಿ ತೇಯಶಸಃಪ್ರವಾದೀ || 32 || 32. ತಾ|| ಓ ಭಗವಂತನೇ ! ಸಮವಸರಣ ವಿರಾಜವರಾನರಾದ ತಮ್ಮ ಸೇವಕರಾದ ದೇವರುಗಳಿಂದ ಹೊಡೆಯಲ್ಪಟ್ಟ ದುಂದುಭಿಧ್ವನಿಯರು ಗಂಭೀರವಾಗಿ ಆಕಾಶವನ್ನೆಲ್ಲಾ ತುಂಬಿಕೊಂಡು ದಿಕ್ಕುಗಳ ಕೊನೆಯವರೆಗೂ ವ್ಯಾಪಿಸುವಂತಹುದಾಗಿಯಂ, ಮೂರು ಲೋಕಗಳಲ್ಲಿರುವ ಸಮಸ್ತ ಜೀವ ರಾಶಿಗಳಿಗೂ ಶುಭವನ್ನು (ಸುಖವನ್ನು ಕೊಡುವುದರಲ್ಲಿ ಸಮರ್ಥವಾಗಿಯೂ, ಶ್ರೇಷ್ಠವಾದ ಧರ್ಮಗಳಿಗೆ ರಾಜರಾದಂತಹ ಆದಿ ತೀರ್ಥಂಕರರಾದ ತಮ್ಮ ಕರ್ಮಗಳೆಂಬ ಶತ್ರುಗಳ ಜಯವನ್ನು ಪ್ರಕಟಪಡಿಸುವ ವಾದ ಧ್ವನಿಯಂತೆ ಘೋಷಿಸುವುದಾಗಿಯೂ, ಮತ್ತು ಯಶಸ್ಸನ್ನು ಘಟ್ಟಿಯಾಗಿ ಹೇಳುವು ದಾಗಿಯೂ, ಆಕಾಶದಲ್ಲಿ ಶಬ್ದ ಮಾಡುತ್ತದೆ. ಇದು ದೇವದುಂದುಭಿ ಎಂಬ ಪ್ರಾತಿಹಾರ್ಯವೆನಿಸಿದ ಸಂಪತ್ತಿನ ವರ್ಣನವಾಗಿದೆ. - ಮಂದಾರಸುಂದರನಮೇರುಸುಪಾರಿಜಾತ ಸಂತಾನಕಾದಿಕುಸುಮೋತ್ಕರವೃಷ್ಟಿ ರುದ್ರಾ| ಗಂಧೋದಬಿಂದುಶುಭವಂದನರುತ್ಪಪಾತಾ ದಿವ್ಯಾದಿನಃಸತತಿಶೇವಚ (ಯ) ಸಾಂತತಿರ್ನಾ || 33 || 33. ತಾ|| ಓ ಲೋಕನಾಥನೇ ! ತಾವು ದೇವನಿರ್ಮಿತವಾದ ಸಮ ವಸರಣ ಸಭೆಯಲ್ಲಿ ದಿವ್ಯ ಸಿಂಹಾಸನಾರೂಢರಾಗಿ ಪ್ರಕಾಶಿಸುತ್ತಿರಲು ದೇವತೆ ಗಳು ಮಂದಾರವೆಂದೂ, ಸುಂದರವೆಂದೂ, ನಮೇರುವೆಂದೂ, ಶ್ರೇಷ್ಠ ವಾದ ಪಾರಿಜಾತವೆಂದೂ, ಸಂತಾನಕವೆಂದೂ ಹೆಸರುಳ್ಳ ಕಲ್ಪವೃಕ್ಷಗಳ ಪುಷ್ಪವೃಷ್ಟಿಯು ಪರಿಮಳದೊಡಗೂಡಿದ ನೀರಿನ ಹನಿಗಳೊಡಗೂಡಿ ಲೋಕಕ್ಕೆ ಮಂಗಳ ಸೂಚಕವಾಗಿ ಬೀಸುತ್ತಿರುವ ತಂಗಾಳಿಸಹಿತವಾಗಿ ಕೆಳಗೆ ಬೀಳುತ್ತದೆ. ಅಥವಾ ತಮ್ಮ ದಿವ್ಯವಾಣಿಯೇ ಬೀಳುತ್ತವೆಯೋ ಎಂಬಂತಿದೆ.